ಒಟ್ಟು 54621 ಕಡೆಗಳಲ್ಲಿ , 139 ದಾಸರು , 12331 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡೆವು ಗುರುದಿವ್ಯ ಶ್ರೀ ಸುಚರಣ ಮಂಡಲದೊಳಾಯಿತು ಸುಭೂಷಣ ಧ್ರುವ ಇದೆ ನಿಜ ಪುಣ್ಯ ಪೂರ್ವಾರ್ಜಿತ ಇದರಿಟ್ಟು ಬಂತೆನಗಾಯಿತು ಒದಗಿ ಕೈಗೂಡಿತು ತ್ವರಿತ ಹೃದಯಲೆನ್ನಾಯಿತು ಉದಿತ 1 ಕಣ್ಣಾರೆ ಕಂಡೆವು ನಿಜ ಧನ ಜನುಮವೆನ್ನಾಯಿತು ಪಾವನ ಎನ್ನೊಳು ದೋರಿತಾನಂದ ಘನ ಧನ್ಯ ಧನ್ಯವಾಯಿತು ಜೀವನ 2 ಲೇಸು ಲೇಸಾಯಿತಯ್ಯ ನೋಡಿ ಭಾವಿಸಿದ ಸದ್ಗುರು ದಯಮಾಡಿ ವಾಸನೆ ಪೂರಿಸಿತು ಇಲ್ಲೆ ನೋಡಿ ದಾಸಮಹಿಪತಿ ನಿಜಗೂಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಂಡೆವೆ ಕೌತುಕಕಪಟದ ಬಾಲೆಯ ಕಂಡೆವೆ ಕೌತುಕವ ಪರಹೆಂಡಿರು ಸಹಿತಾಗಿಗಂಡನ ಬೆರೆಯೋದು ಪ. ಪಟ್ಟದರಸಿಗೆ ಸಿಟ್ಟು ತುಂಬಿಸಿ ಭಾಳ ಕುಟ್ಟಿ ಮೈದುನರ ಸವರಿಸಿಕುಟ್ಟಿ ಮೈದುನರ ಸವರಿಸಿ ದ್ರೌಪತಿಇಂಥವಳು ಹುಟ್ಟಬೇಕಿನ್ನು ಜಗದೊಳು 1 ಗಂಡನ ಬಳಗವ ಚಂಡನಾಡಿಸಿ ಬಿಟ್ಟೆಪುಂಡಗಾರ್ತಿಯೆ ಜಗದೊಳುಪುಂಡಗಾರ್ತಿಯೆ ಜಗದೊಳು ನಿನಕೀರ್ತಿ ಕೊಂಡಾಡುತಾರೆ ದ್ರೌಪದಿ2 ನೂರು ಮಂದಿಯ ಕೊಂದು ಊರು ಕೇರಿಯಪಡೆದುಯಾರ್ಯಾರನ್ನೆಲ್ಲ ಅಡವಿಗೆ ದ್ರೌಪದಿಯಾರ್ಯಾರನ್ನೆಲ್ಲ ಅಡವಿಗೆ ಅಟ್ಟಿದೆಮಹಾರಾಯಳೆ ನಿನಗೆ ಭಯ ಉಂಟೆ3 ಜಾಣಿಯೆಂಬೊ ನುಡಿಯಿಂದ ವಾಣಿ ಜನಿಸಿಸುಶ್ರೇಣಿ ತಾತನ್ನು ದ್ರೌಪತಿಸುಶ್ರೇಣಿ ತಾತನ್ನು ಮದುವ್ಯಾದಿ ಇದಕಿನ್ನುಜಾಣಿಯರು ನಗರೆ ಜಗದೊಳು4 ಎಂತೆಂಥ ಪತಿಗಳ ಎಂತೆಂತು ಮಾಡಿದೆಕೊಂಚರೆ ಭೀತಿ ನಿನಗಿಲ್ಲಕೊಂಚರೆ ಭೀತಿ ನಿನಗಿಲ್ಲ ಧರ್ಮನ ಶಾಂತ ಗುಣದಿಂದ ಉಳಿದಿದಿ ದ್ರೌಪತಿ5 ಒಂದೊಂದು ನಿನ್ನ ಗುಣವು ಚಂದಾಗಿ ವರ್ಣಿಸಲುಎಂದಿಗೆ ವಶವ ಎಲೆನಾರಿಎಂದಿಗೆ ವಶವ ಎಲೆನಾರಿ ಐವರಿಗೆ ಕುಂದು ಬಂದೀತು ಬಿಡುಕಂಡೆ ದ್ರೌಪತಿ 6 ಇಷ್ಟಮಿತ್ರರೊಳು ಉಟ್ಟ ಸೀರೆಯಸೆಳೆದುಒಟ್ಟಿದನಾಗ ಸಭೆಯೊಳು ಒಟ್ಟಿದನಾಗ ಸಭೆಯೊಳು ರಮಿಯರಸು ಧಿಟ್ಟಿ ನಿನಮಾನ ಉಳಿಸಿದ ದ್ರೌಪತಿ7
--------------
ಗಲಗಲಿಅವ್ವನವರು
ಕಡೆಹಾಯಿಸು ಕೊನೆಗೆ ಪ ಶರಧಿಯ ದಾಟಿಯಸುರನ ಪಟ್ಟಣದಿ ಅರಸಿ ಉಂಗುರವನಿತ್ತು ಮಣಿಯ ಕೊಂ- ದೊರಸಿದೆ ದನುಜರನು 1 ರಾವಣನಿಗೆ ಬುದ್ಧಿಯ ಪೇಳಿ ಪುರವ ದೇವಿಯ ಮಾಣಿಕ್ಯವ ತಂದಾ ರಾಮ ದೇವಗೆ ನೀ ಕೊಟ್ಟೆ 2 ಭೂಮಿಯೊಳಗೆ ತಿರುಪತಿಯಲಿ ನೆಲಸಿದೆ ಸ್ವಾಮಿ ಹನುಮರಾಯ ಸಾಮಜರಾಜವರದನೆನಿಸುವ ಗುರು- ರಾಮವಿಠಲ ಪ್ರೀಯ 3
--------------
ಗುರುರಾಮವಿಠಲ
ಕಂಡ್ಯಾ ಕಂಡ್ಯಾ ಕಂಡ್ಯಾ ಕಂಡ್ಯಾ ಕಂಡ್ಯಾ ಕೂಸಿನ್ನಚಂಡನಾಡುತಾಲೆ ಬಾಲೆರ್ಹಿಂಡು ಕೂಡಿ ಬಂದನಂತೆ ಪ ದಂಡದಿಂದ ಚಿನ್ನಿ ಬಾಲೇರ್ಹಿಂದಿನೋಳು ಚಿಮ್ಮಿದನಂತೆಕಂಡಕಂಡ ನಾರಿಯರೆಲ್ಲ ಪುಂಡ ಕೃಷ್ಣರೆಂಬರಂತೆ 1 ದುಂಡು ಮುಖದೊಳಿಟ್ಟು ವೇಣುದಂಡವನೂದಲು ಕೃಷ್ಣಹಿಂಡು ನವಿಲು ಪಕ್ಷಿಗಳು ಮಂಡಲ ಕಟ್ಟಿದವಂತೆ 2 ದೃಷ್ಟಿಯಾದೀತೆಂದು ಕೂಸಿಗೆ ಎಷ್ಟು ಹೇಳಿದೆ ಮನೆಬಿಟ್ಟು ಪೋಗಬ್ಯಾಡೆಂದರೆ ಕೃಷ್ಣ ಘಳಿಗೆ ನಿಲ್ಲವಲ್ಲ 3 ಇಂದಿರೇಶ ಎನ್ನ ಮನೆ ಮುಂದಲಾಡೆಂದ್ಹೇಳಿದರೆನಂದ ವೃಜದಿ ಪೊಕ್ಕು ಬಹಳ ದುಂದು ಮಾಡುವನು ಕೃಷ್ಣ 4
--------------
ಇಂದಿರೇಶರು
ಕಣಿಯ ಹೇಳಲು ಬಂದೆ ನಾರಾಯಣನಲ್ಲದೆ ಇಲ್ಲವೆಂದು - ಮಿಕ್ಕಬಣಗು ದೈವದ ಗೊಡವೆ ಬೇಡ ನರಕ ತಪ್ಪದು ಪ ಎಕ್ಕನಾತಿಯರು ಕಾಟಿ ಜಕ್ಕಿ ಜಲಕನ್ಯೆಯರುಸೊಕ್ಕಿನಿಂದ ಸೊಂಟಮುರುಕ ಬೈರೇ ದೇವರುಮಿಕ್ಕ ಮಾರಿ ಮಸಣಿ ಚೌಡಿ ಮೈಲಾರಿ ಮೊದಲಾದಠಕ್ಕು ದೈವದ ಗೊಡವೆ ಬೇಡ ನರಕ ತಪ್ಪದು 1 ಸುತ್ತಣವರ ಮಾತ ಕೇಳಿ ಗುತ್ತಿಯ ಎಲ್ಲಮ್ಮಗೊಲಿದುಬತ್ತಲೆಯೆ ದೇವರೆದುರು ಬರುವುದು ನೋಡಿರೊಮತ್ತೆ ಬೇವಿನುಡುಗೆಯ ಅರ್ತಿಯಿಂದುಟುಗೊಂಡುಮುಕ್ತಿ ಕಾಂಬೆವೆಂಬ ಮೌಢ್ಯ ಬೇಡಿರÉೂ 2 ತೂಳದವರ ಮಾತ ಕೇಳಿ ಖೂಳರೆಲ್ಲ ಕೂಡಿಕೊಂಡುಹಾಳು ಮಾಡಿ ಕೈಯಲಿದ್ದ ಹೊನ್ನು ಹಣಗಳಬಾಳುತಿಪ್ಪ ಕೋಣ ಕುರಿಯ ಏಳಬೀಳ ಕೊರಳ ಕೊಯ್ದುಬೀಳ ಬೇಡಿ ನರಕಕೆಂದು ಹೇಳ ಬಂದೆನೊ3 ಹೊಳ್ಳದ ಬಿಚ್ಚೇರು ಸಹಿತ ಸುಳ್ಳರೆಲ್ಲ ಕೂಡಿಕೊಂಡುಬೆಳ್ಳನ ಬೆಳತನಕ ನೀರ ತಡಿಯಲಿ ಕುಳಿತುಗುಳ್ಳೆ ಗೊರಜೆ ಕೂಡಿ ತಿಂದು ಕಳ್ಳು ಕೊಡನ ಬರಿದು ಮಾಡುವಂಥಪೊಳ್ಳು ದೈವದ ಗೊಡವೆ ಬೇಡ ನರಕ ತಪ್ಪದು4 ಪಾದ ಬಿಡದೆ ಭಜಿಸಿರೊಜಡದೈವಗಳ ಇಂಥ ಪೂಜೆ ಬೇಡ ಕಾಣಿರೋ 5
--------------
ಕನಕದಾಸ
ಕಣ್ಣ ಮುಂದಿರುವ ವಿಷಯಾದಿ ಸುಖಕೆ ಪ ಮೊರೆವೆ ನರಕುರಿಯೆ ಅದನರಿತಿಹೆಯ ಮನವೆ 1 ಸನ್ನುತದ ನಿಜಸುಖದೊಳಿರಬಹುದು ಮನವೆ 2 ನರಕದೊಳ್ ಬಾಯ್‍ಕಳೆದರೊದಗುವುದೆ ಸುಖವು 3 ತಿರುತಿರುಗಿ ಬಳಲುತಿರೆ ಸುಖವಾಗಬಹುದೊ 4 ದ್ಗುರುವಾಗುತಿಹನಲ್ಲೊ ಅರಿತುಕೊ ಮನವೆ5 ಧ್ಯಾನಿಸುವ ಪುಣ್ಯಾತ್ಮರಿಗೆ ಗೋಚರಿಸಬಹುದು | ತಾನಾಗಿ ಶರಣರೊಳು ಕರುಣವಿಡಬಹುದು6 ಶರಧಿಯೊಳಗೋಲಾಡುತಿರು ನಿರುತ ಮನವೆ 7
--------------
ಸದಾನಂದರು
ಕಣ್ಣ ಹಬ್ಬವಾಯಿತು ಎನಗಿಂದು ಧನ್ಯಧನ್ಯಗೈಸಿದ ದೀನಬಂಧು ಧ್ರುವ ತುಂಬಿತುಳುಕುತಲ್ಯದ ಬ್ರಹ್ಮಾನಂದ ಹಂಬಲಿಟ್ಟು ನೋಡನುಭವದಿಂದ ಗುಂಭಗುರತವಾಗದೇ ನಿಜಾನಂದ ನಂಬಿ ನಡಿಯಲಿಕ್ಕಿದೆ ಬಲು ಚಂದ 1 ಕಣ್ಣು ಮುಟ್ಟಿನೋಡಲು ಖೂನಗೊಟ್ಟು ಪುಣ್ಯ ಹೊಳೆಯುತಲ್ಯದೆ ಎದುರಿಟ್ಟು ಎನ್ನ ಮ್ಯಾಲೆ ಸದ್ಗುರು ದಯವಿಟ್ಟು ಚಿನ್ನುಮಯದೋರಿದ ನಿಜಗುಟ್ಟು 2 ಹೇಳಲಿನ್ನೇನದನುಭವಸುಖಾ ಥಳಥಳಗುಡುತದೆ ಕೌತುಕಾ ಕೇಳಿಕೋ ಬೇಕಿದುವೆ ಗುರುಮುಖಾ ಹೇಳಿಕುಡುವ ಮಹಿಪತಿಗುರು ಥೋಕಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಣ್ಣಾರೆ ಕಂಡೆವಯ್ಯಾ ಕಣ್ಣಾರೆ ನಾ ಧ್ರುವ ಕಣ್ಣಾರೆ ಕಂಡೆ ಹರಿಯ ಎನ್ನ ಪ್ರಾಣಧೊರಿಯ ಧನ್ಯಗೈಸಿದ ಪರಿಯ ಏನೆಂದ್ಹೇಳಲಯ್ಯ 1 ಸ್ವಾನುಭವದ ಖೂನ ಜನಕ್ಹೇಳಲೇನು 2 ಆಡೇನಂದರ ಅಮಾತು ನಾಡಿಗೇನು ತಿಳದೀತು ಪಡೆದವಗೆ ದೋರಿತು ಬಿಡದ್ಹಾಂಗಾದೀತು 3 ಗುರುಕರುಣ ಕಟಾಕ್ಷ ಗುರುತಾಗ್ಯದ್ಯನ್ನಪೇಕ್ಷಾ ಇರುಳ್ಹಗಲೆ ದೋರುವದಧ್ಯಕ್ಷ 4 ಎನಗದೆ ಬ್ರಹ್ಮಾನಂದ ಭಾನುಕೋಟಿ ತೇಜನಿಂದ ದೀನಮಹಿಪತಿ ಬಂದ ಅನುಭವ ಆನಂದ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಣ್ಣಾರೆ ಕಂಡೆವಿಂದು ಪುಣ್ಯತೇಜೋರಾಶಿಯ ಬಣ್ಣಬಣ್ಣದಲಿ ಭಾಸುವ ಪ್ರಭೆಯ ಧ್ರುವ ಹೇಳಲಿಕ್ಕೆ ಬಾರದು ಹೊಳೆವ ಪ್ರಕಾಶವು ಥಳಥಳಿಸುತಿಹುದು ಒಳಹೊರಗೆ ಝಳಿಝಳಿಸುತಿಹದು ಮೊಳೆಮಿಂಚಿನ ಪರಿ ಸುಳವ್ಹುದೋರಿತು ಕಳೆವರದೊಳಗೆ 1 ಒದಗಿಬಂತಿದಿರಿಟ್ಟು ಮೊದಲಿನ ಪುಣ್ಯದ ಫಲ ಸಾಧಿಸಿ ಕಂಡೆ ಸುಖಸದೋದಿತವ ಹಾದಿ ಸಿಲ್ಕಿತು ನೋಡಿ ಆದಿ ಅನಾದಿಯ ಭೇದಿಸಿತು ಮನಸು ನಿಜಬೋಧವ 2 ಭಾವ ಬಲಿದು ನೋಡಿ ದೇವಾಧಿದೇವನ ಸುವಿದ್ಯ ಸುರಸವ ಸವಿಸವಿದು ಪಾವನ್ನವಾಯಿತು ಮಹಿಪತಿ ಜೀವನವುಕಾವಕರುಣ ಗುರುದಯದಿಂದ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಣ್ಣಾರೆ ನೋಡೆನ್ನ ಕರುಣಾ ಕಟಾಕ್ಷದೀ ಇಂದಿರಾರ ಮಣಾ ಅರವಿಂದನೇತ್ರದಲಿ ಪ ದಶರಥನಿಗೆ ದಿವ್ಯಪ್ರಾಣನೇತ್ರಾ ಶಶಿಮುಖಿ ಸೀತೆಯ ಬಿಡದೆ ನೋಡುವ ನೇತ್ರಾ ಶಶಿ ರವಿ ಕಾಂತಿಗೆ ಸಮನಾದ ನೇತ್ರದೀ 1 ದಶರಥನಿಗೆ ದಿವ್ಯಪ್ರಾಣನೇತ್ರಾ ಶಶಿಮುಖಿಯರನೆಲ್ಲಾ ಒಲಿಸಿದ ನೇತ್ರ[ವರ ಸತಿ] ರುಕ್ಮಿಣಿದೇವಿಯ ಪ್ರಾಣನೇತ್ರಗಳಿಂದ 2 ಅಸುರರು ಮೋಹಿಸಿ ಭ್ರಮಿಸಿದ ನೇತ್ರ ಶ್ರೀನಿವಾಸನೆ ನಿಮ್ಮ ಕರುಣ ನೇತ್ರಗಳಿಂದಾ 3
--------------
ಯದುಗಿರಿಯಮ್ಮ
ಕಣ್ಣಿಗೆ ಕಾಣದೆ ಏಕಿರುವೇ ರಂಗ ಕಣ್ಣಲಿ ನೋಡದೆ ಬಣ್ಣಿಸಲಳವೇ ಪ ಬಣ್ಣವು ಬಿಳುಪೋ | ಬೆಣ್ಣೆಯ ಕದಪೋ ಚಿಣ್ಣನೊ ತರುಣನೋ | ಹಣ್ಣುಮುದುಕನೋ ಅ.ಪ ನರನಾಗಿರುವೆಯೋ | ಹರಿಯಾಗಿರುವೆಯೋ ನರಹರಿಯೆಂಬರು | ದಿಟವೋ ಸಟೆಯೋ ಗಿರಿಯಂತಿರುವೆಯೋ | ಧರೆಯಂತಿರುವೆಯೋ ಗಿರಿಧರನೆಂಬರು ದಿಟವೋ ಸಟೆಯೋ 1 ಸ್ಮರನಂತಿಹೆಯೋ | ಗುರುವಂತಿಹೆಯೋ ಸ್ಮರಗುರುವೆಂಬರು ದಿಟವೋ ಸಟೆಯೋ ಕರಣನಾಗಿರುವೆಯೋ ಕಾರಣನಹೆಯೋ ಕರಣಕಾರಣ ನೀನೆಂಬುದು ದಿಟವೋ ಸಟೆಯೋ 2 ವೇದವಾಗಿರುವೆಯೋ ನಾದವಾಗಿರುವೆಯೋ ವೇದನಾದಗಳೊಂದೇ ಎಂಬುದು ಸಟೆಯೋ ಕಾದಿಹೆನಯ್ಯ ಮೋದವನೀಯೋ ಸಾದರದಿಂದ ಬಂದೆನ್ನನು ಕಾಯೋ 3 ಸಲಿಗೆಯ ತೋರು ಮಾಂಗಿರಿರಂಗ ಸಲೆ ನಲಿವೆನೋರಂಗ ಗರುಡತುರಂಗ ಛಲವ ಬಿಡೋ ರಂಗ ನಿಲು ನಗುತಲಿ ರಂಗ ಸಲೆ ಬಣ್ಣಿಪೆನಾ ಚೆಲುವನು ರಂಗ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕಣ್ಣಿಗೆ-ಕಟ್ಟಿದಂತಿದೆ ಪ ಬಣ್ಣದ ಕೊಳಲ ಭಾವಿಸಿ ನೋಡಬಾರದೆಅ.ಪ. ಕೂಡಿಹ ಸೋಗೆಗರಿಯ ಕಡುಸೊಂಪುಸೊಗಸುವಡೆದ ಸುಳಿಗುರುಳಿನ ಗುಂಪುಆಡುವ ಮುರುಹು ಮಾಗಾಯ್ಗಳ ಪೆಂಪುಕೂಡಿ ಕುಣಿವ ಕುಡಿಹುಬ್ಬಿನಲಂಪು 1 ಕೊಳಲೆಡೆÉಗೆಡೆಗೆ ತೋರುವ ಕೆಂಬೆರಳುಕೊನಬು ವಡೆದ ಕೊಂಕಿದ ಗೆರೆಗೊರಳುಥಳಥಳಿಸುವ ತೇಲುವ ಕಣ್ಣರಳುತನುಗಂಪನು ಸೂಸುವ ಸುಯ್ಯೆಲರು 2 ಸಿರಿ ಗಂಧದ ತಿಗುರುಕೊರಳ ದಂಡೆಯ ತುಳಸಿಯ ಹೊಸ ಚಿಗುರುಕೊನೆ ಮುಸುಕಲು ಪೊನ್ನುಗುರಿನ ಪೊದರು 3 ಮುಳಿದು ಯಶೋದೆ ಕಟ್ಟಿದ ಪೊಡೆದಾರಮುದ್ದು ಪೊಳೆಯನೇವಳದುಡಿದಾರಬಳಸಿದ್ಹವಳಸರದ ಶೃಂಗಾರಬಣ್ಣದುಡಿಯ ಬಿಗಿದುಟ್ಟ ವೈಯಾರ 4 ಒಂದಡಿ ನೆಲದೊಳು ನಿಂದಿಹ ನಿಲುವು, ಮ-ತ್ತೊಂದಡಿ ಸಾರ್ಚಿಪ ಬಲು ಗೆಲುವುಮುಂದೆ ಪಶುಗಳ ಮನ್ನಿಪನಿಲವು ತಂದೆ ಶ್ರೀಕೃಷ್ಣನಂದಿಗೆ ಪಾದದೊಲವು5
--------------
ವ್ಯಾಸರಾಯರು
ಕಣ್ಣಿನಾಕರಿರಟ್ಟ ಸುಟ್ಟುಬೂದಿಯ ಮಾಡಿ ನಿನ್ನ ಈಕ್ಷಿಪ ಶುಭ್ರ ದೃಷ್ಟಿಯ ನೀಡೊ ಪ ಪುಣ್ಯಪುರುಷನೆ ಬಿಂಬಪೂರ್ಣ ಮಂಗಳ ಶೌರಿ ಧನ್ಯ ಮಾಡೆನ್ನ ಮುನ್ನ ನಿಲ್ಲಲಿ ಸÉಳಿಯೊ ಅ.ಪ ವಿಷಯಸುಖ ದುರ್ಗುಣದ ಪಂಕದಲಿ ಮನನೆನೆದು ವಿಷಕ್ರಿಮಿಯಂತಿಹದೊ ಇದಕೆ ಮದ್ದು ಸನ್ನುತ ಹರಿಯೆ ವಿರಜ ಮಾಡೊ ಮನವ 1 ಭಾವಸೂತ್ರಗಳಿಂದ ವಿಧಿಭವರೆ ಮೊದಲಾದ ಜೀವರನು ಆಡಿಸುವ ಶ್ರೀಶ ಎನ್ನ ಪಾವನ್ನ ಗುಣನಿಧಿಯೆ ಶ್ರೀ ವೇಣುಗೋಪಾಲ ದೇವ ಅಜಮಿಳಪಾಲ ಪೂತ ಭಾವದಿ ನಿಲಿಸೊ 2 ಕಾತುರವಪಡುತಿಹೆನೊ ಅಸುರಕರ್ಮದಿ ಸಿಕ್ಕಿ ಪಾತಕಿಗಳ ಸಹವಾಸ ಬಿಡಿಸಿ ಕಾಯೊ ಆತುಮಕೆ ಅತಿಮಿತ್ರ ಜಯೇಶವಿಠಲ ನಿನ್ನೊಲುಮೆಪಾತ್ರರಲಿ ಇಟ್ಟೆನ್ನ ಕಾಪಾಡು 3
--------------
ಜಯೇಶವಿಠಲ
ಕಣ್ಣಿಲಿ ನೋಡಿದೆನೆ ಕಾಮಿನಿಮಣಿ ಪ ಕಣ್ಣಿಲಿ ನೋಡಿದೆ ಘನ್ನ ಪುಸ್ತಕ ನವವರ್ಣಭಾಷಿತ ಹರಿವನ್ನಿತೆ ಸೌಭಾಗ್ಯ ಅ.ಪ. ಹೇಮ ಸರಿಗಿ ಕಠ್ಠಾಣಿಯ 1 ಅಕ್ಷರವೆಂಬುವ ನಕ್ಷತ್ರಮಾಲೆಯುವಕ್ಷದೊಳರ್ಥಿಲಿ ಅಂಬುಜಾಕ್ಷಿಯೇ ಲಕ್ಷ್ಮೀ 2 ವಿಷಯನಳಿದು ಕೃಷ್ಣನೊಶಳಾಗುತ ಲಕ್ಷ್ಮೀವಿಭಸಾರ್ಚನ ಮುಖ ಬಿಸುಜಾಕ್ಷಿ ತೋರ್ವಳು 3 ಗೋಪಿ ಶಿಶುವ ಪೂಜಿಪಳು 4 ಶ್ರೀಶನ ಗುಣಗಳ ಭಾಷಿಸಿ ವದನದಿಪೋಷಜನಕೆ ಇಂದಿರೇಶನ ತೋರ್ಪಳು 5
--------------
ಇಂದಿರೇಶರು
ಕಣ್ಣಿಲಿ ನೋಡಿರೋ ಸಾಕ್ಷ ಘನಗುರು ಪ್ರತ್ಯಕ್ಷ ಧ್ರುವ ಕಣ್ಣಿನೊಳದೆ ನಿಜ ವಸ್ತದ ಖೂನ ಪುಣ್ಯವಂತನೆ ಬಲ್ಲನುಸಂಧಾನ ಧನ್ಯಗೈಸುವದನುಭವದ ಖೂನ ತನ್ನೊಳಗದೆ ಗುರು ಆತ್ಮಙÁ್ಞನ 1 ಕಣ್ಣಿನ ಹಿಂದಾಡುತಲದೆ ಮನ ಕಣ್ಣಿಗೆ ಕಣ್ಣು ನೋಡಲುನ್ಮನ ಕಣ್ಣಿನೊಳಾಡುತಲದೆ ಚಿದ್ಛನ ಅಣುರೇಣುಕ ತಾ ಇದೆ ಪರಿಪೂರ್ಣ 2 ಕಣ್ಣಿನೊಳಾಡುವ ಭಾಸ್ಕರ ಕರುಣ ಭಿನ್ನವಿಲ್ಲದೆ ಚೆನ್ನಾಗ್ಯನುದಿನ ಚಿನ್ನ ಮಹಿಪತಿಗೆ ನೋಡೇವ ಧ್ಯಾನ ಧನ್ಯಗೈಸುವ ತಾ ದೀನೋದ್ಧರಣ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು