ಒಟ್ಟು 720 ಕಡೆಗಳಲ್ಲಿ , 93 ದಾಸರು , 581 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂಬಿದೆ ನಿಂನನು ಅಂಬುಜಲೋಚನ ಅಂಬುಜೋದ್ಭವ ಪಿತ ಅಂಬುಜ ರಮಣಾ ಪ ಹಲವು ಯೋನಿಗೆ ಬಿದ್ದು ಬಲೆ ದಾಟಿ ಬಂದೇ ಬಳಲುತ್ತ ಪರಿಪರಿ ದುಃಖಗಳಿಂದ ಬಲ್ಲವಿಲ್ಲ ಸಹಿಸಲು ಭವರೋಗ ವೈದ್ಯನೇ ವಲಿದೆನ್ನ ಪಾಲಿಸೋ ಸಾನುರಾಗದಲೀ 1 ಏನು ಮಾಡಲಿ ನಿಂನ ಚರಣ ಸೇರಲಿಕೇ ಹೀನ ಪಥವ ಪಿಡಿದು ಕಡು ನೊಂದೆನಯ್ಯ ಗಾನ ಲೋಲನೆ ಭಜಿಪ ಭಾಗ್ಯವ ಕೊಡಬೇಕು ನೀನೇ ಗತಿಯೆಂದು ಯಾದವ ಪತಿಯೇ 2 ಕತ್ತಲೆಯಾವರಿಸಿತು ದೇಶವೆಲ್ಲವ ಬತ್ತಲೆಯಾಗಿ ನಿಂತರು ಮೂಢಜನರು ಮೃತ್ಯು ತುತ್ತಿಗೆಯಂನ ಕೊಡದೆ ಕತ್ತಲೆ ನೀಗಿಆತ್ಮ ಜ್ಞಾನವ ನೀಡೋ ಚನ್ನಕೇಶವನೇ3
--------------
ಕರ್ಕಿ ಕೇಶವದಾಸ
ನಂಬಿದೆನು ಚರಣಗಳ ಪಾಲಿಸೈ ಹರಿಯೇ ನಂಬಿದೆನು ಶ್ರೀ ಚನ್ನಕೇಶವನೆ ದೊರಿಯೇ ಪ ಸರಳೆ ದ್ರೌಪದಿಯಂತೆ ಕರಿರಾಜ ಧೃವರಂತೆ ದುರುಳ ಕನಕಾಸುರನ ನಿಜತನುಜನಂತೇ ಖಗರಾಜ ಕಪಿಯಂತೆ ವರತತ್ತ್ವ ಭೋಧಿಸಿದ ಯತಿಗಣಗಳಂತೇ 1 ಗೌತುಮನ ಸತಿಯಂತೆ ಯಾದವರ ಪಡೆಯಂತೆ ಭೂತಳದಿ ಪೆಸರಾದ ಹರಿದಾಸರಂತೇ ಕೋತಿ ಜಾಂಬವನಂತೆ ಅಮರೇಶ ಸುತನಂತೆ ಆತುರದಿ ನಂಬಿರುವ ಶ್ರೀ ಲಕ್ಷ್ಮೀಯಂತೆ 2 ನಾನಿತ್ತ ಪೂಜೆಯಿಂ ನಾಗೈದ ಭಜನೆಯಿಂ ನಾನಿಂದು ಮಾಡಿದಾ ಹರಿಸ್ಮರಣೆಯಿಂದ ನೀನೊಲಿದೆಯಿಂತೆಂದು ದೃಢವಾಗಿ ನಂಬಿದೆನು ಹೀನನನು ಸಲಹಯ್ಯ ಸ್ವಾಮಿ ಕೇಶವನೇ 3
--------------
ಕರ್ಕಿ ಕೇಶವದಾಸ
ನಂಬೂ ವಿಷ್ಣು ಪಾದಧ್ಯಾನಾ ನರನೆ ಪಾಮರನೆ ಇನ್ನು ಕುಂಭಿಣಿ ಪಾತಕಗಳೆಂಬವು ಬಾಧಿಸಾವು ಜನ್ಮ ಜನ್ಮದಿ ಪ ಅಜಾಮಿಳಾ ವ್ಯಾಸಾಂಬರೀಷ ಶಂಭುಶಂಕರ ರಾಣಿಗ್ಹೇಳಿದ ಶ್ರೀರಾಮಮಂತ್ರವನೇ ಕೂಡಾ 1 ಕಾಯಿದದ್ದು ನೋಡು ಸುಧೆನುಣಿಬಡಿಸಿದ ನೋಡು ಭಾಗ್ಯವು ಕೊಟ್ಟದ್ದು ನೋಡು ಅರಿಮುಖಲಿ ಚಕ್ರವೆತ್ತಿದಗೆ ಇತ್ತ ಐಶ್ವರ್ಯವು ನೋಡು 2 ಮೂಲ `ಹೊನ್ನೆವಿಠ್ಠಲ’ ಭಗವಂತಾನಾ ನಂಬಿದವ ಕಲದ----ಅಕಾಲ ಸುಖ ಸಂಭ್ರಮ ಪಡೆದು ಕಡೆಗೆ ಕಾಣೋ ನೋಡಾ 3
--------------
ಹೆನ್ನೆರಂಗದಾಸರು
ನಮಿಸುವೆನು ಭಕ್ತಿಯಲಿ ಚನ್ನಕೇಶವನೇ ಮೂರ್ತಿ ಅಜಸುರಾರ್ಚಿತನೇ ಪ ಕರಿರಾಜ ಖಲನಕ್ರ ಭಾಧೆಯಿಂ ಮರೆಹೊಗಲು ಕರಿಯನ್ನು ಸಲಹಿ ನಕ್ರಕೆ ಮೋಕ್ಷವವಿತ್ತೇ ಕರು ನೃಪತಿಯನುಜ ದ್ರೌಪದಿ ಮಾನ ಕಳೆಯುತಿರೆ ಶರಣೆಂದ ಮಾನಿನಿಗೆ ಅಕ್ಷಯವನಿತ್ತೇ 1 ಮಂದರವ ಪೊತ್ತೆ ನೀ ಸುರರಿಗಮೃತವ ನಿತ್ತೆ ಚಂದದಿಂದಜಮಿಳಗೆ ಅಂತ್ಯದಲಿ ವಲಿದೇ 2 ದಾಸಗೊಲಿಯುವಿಯಂತೆ ಭಕ್ತಜನರಿಗೆ ನಿತ್ಯ ಭಾಸವಾಗುವಿಯಂತೆ ವಿಶ್ವರೂಪದಲ್ಲಿ
--------------
ಕರ್ಕಿ ಕೇಶವದಾಸ
ನಮಿಸುವೆನು ಭುವನೇಂದ್ರ ಗುರುರಾಯರ ಅಮಿತ ಮಹಿಮಗೆ ಅಹೋರಾತ್ರಿಯಲಿ ಬಿಡದೆ ಪ ಸಿದ್ಧಾರ್ಧಿ ನಾಮ ಸಂವತ್ಸರದ ವೈಶಾಖ ಶುದ್ಧೇತರ ಪಕ್ಷ ಸಪ್ತಮಿಯಲಿ ವಿದ್ವತ್ಸಭಾ ಮಧ್ಯದಲಿ ರಾಮವ್ಯಾಸರ ಪದದ್ವಯವನೈದಿದ ಮಹಾಮಹಿಮರನ ಕಂಡು 1 ರಾಜವಳ್ಳಿ ಎಂಬ ಪುರದಿ ಕರುಣದಿ ಪಾರಿ ವ್ರಾಜಕಾಚಾರ್ಯ ವರವತಂಸ ಪಾದ ರಾಜೀವಯುಗಳ ಧೇನಿಸುತಿಪ್ಪರಿಗೆ ಕಲ್ಪ ಭೂಜದಂದದಿ ಬೇಡಿದಿಷ್ಟಾರ್ಥ ಕೊಡುವರಿಗೆ 2 ಶ್ರೀ ತುಂಗ ಭದ್ರಾ ತರಂಗಿಣೀ ತೀರದಲಿ ಪಾದ ಮೂಲದಲ್ಲಿ ಪ್ರೀತಿ ಪೂರ್ವಕವಾಗಿ ವಾಸವಾದರು ಜಗ ನ್ನಾಥ ವಿಠಲನ ಕಾರುಣ್ಯಪಾತ್ರರ ಕಂಡು 3
--------------
ಜಗನ್ನಾಥದಾಸರು
ನಮಿಸುವೆನು ವಿಶ್ವಪ್ರಿಯರ ಪ ಕೃಷ್ಣನ ದಯದಿ ದ್ವಾದಶಾಬ್ದಗಳಲ್ಯುಪೋಷಣ ಭೂಪನು ರತ್ನ ಮಂಟಪವನ್ನೆ ನಿಮಗರ್ಪಿಸಿದನು 1 ನಿಮ್ಮೊಳಗೋದಿ ಪಂಡಿತವರ್ಯ- ನೆನಿಸುತ ವೀರ ವಿಷ್ಣುಭಕ್ತನಾದನು 2 ನಿಮಗೆಣೆ ನಾ ಕಾಣೆನು ರಾಜರಾಜರು ಪೊಂದದಿರುತಿಹ ನಾಕಿನಾಥನ ಪದವನೇರುವ ಗುರುವರ್ಯರನೆ ನಮಿಪೆ 3
--------------
ವಿಶ್ವೇಂದ್ರತೀರ್ಥ
ನಮಿಸುವೆನು ವ್ಯಾಸಾರ್ಯ | ಸುಮನಸರಿಗತಿ ಪ್ರೀಯ ವಿಮಲಕೀರ್ತಿ ಸುಶಯ್ಯ ಯತಿವರಾರ್ಯ ಪ ಅಮಮ ನಿಮ್ಮಯ ಕೀರ್ತಿ ಪೊಗಳಲಳವೇ ಎನಗೆಸುಮನಸ ಮುನಿಯನುಗ್ರಹೀತಾ - ಖ್ಯಾತಾ ಅ.ಪ. ಕನಕ ಕಶ್ಯಿಪು ಸುತನೆ | ಧನಕನಕ ತೃಣಗಣನೆಅಣು ಘನನ ಶ್ರೀ ಚರಣ | ವನಜ ಭ್ರಮರಾ |ಮನುಜಮೃಗ ವೇಷ | ಶ್ರೀ ನರಹರಿಯ ಮೂರ್ತಿಯನುಘನವಾದ ಸ್ತಂಭದೊಳು | ಕರೆದು ತೋರಿಸಿದೇ 1 ಮತ್ತೆ ನೀ ತ್ರೇತೆಯಲಿ | ಹತ್ತು ತಲೆ ರಾವಣನಭ್ರಾತೃವಾಗವತರಿಸಿ | ಕೀರ್ತಿಯಲಿ ಮೆರೆದೇ |ಭೃತ್ಯ ಭಾವದಿ ನಮಿಸಿ | ಸತ್ಯಾತ್ಮ ಶ್ರೀಹರಿಯವಿಸ್ತರದ ಕೀರ್ತಿಯಲಿ | ಲಂಕ ಪತ್ತನವಾಳ್ದ 2 ನರಪ ಪ್ರತೀಪನಾ | ಪರಸೂನು ವೆಂದೆನಿಸಿ ಕುರುಪತಿಯ ಋಣಸೇವೆ | ಸರಿಯಾಗಿ ಸಲಿಸೀ |ಮರುತಾತ್ಮ ಭೀಮನಿಂ | ವರವನೇ ಪಡೆಯುತ್ತವರ ಕಲೀಯಲಿಯತಿ | ವರನೆನಿಸಿ ಮೆರೆದೇ 3 ಬ್ರಹ್ಮಣ್ಯಯತಿ ಕರಜ | ಬ್ರಹ್ಮ ಬ್ರಾಹ್ಮಣ ಪ್ರೀಯಬ್ರಹ್ಮಣ್ಯ ಪ್ರೀಯ ಸು | ಬ್ರಹ್ಮಣ್ಯನಾವೇಶನೇ |ಬ್ರಹ್ಮಾಸ್ಮಿ ಎಂದೆನಿಪ | ಬ್ರಹ್ಮದ್ವೇಷಿಯ ನಿಕರಬ್ರಹ್ಮಾಂಡದಲಿ ತರಿದೇ | ಬ್ರಾಹ್ಮಣರ ಪೊರೆದೇ 4 ಭಾಗವತ ಪ್ರೀಯ 5
--------------
ಗುರುಗೋವಿಂದವಿಠಲರು
ನಮೋ ನಮೋ ರಾಮ | ರಘೂತ್ತಮ ಪ ನಮೋ ನಮೋ ಶಿವ | ಮನಾಭಿರಾಮಾ ನಮೋ ನಮೋ ಭವವಿನಾಶ ನಾಮಾ ಅ.ಪ ಸತ್ಯಕಾಮ ರವಿವಂಶಲಲಾಮ ಸತ್ಯಪೂರ್ಣ ಭುವನೇಶ್ವರ ರಾಮ ಭೃತ್ಯಪಾಲ ಮಾಂಗಿರಿ ರಾಮ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಮ್ಮ ಕುಲದೈವೀತ ಬೊಮ್ಮನ ಪಡೆದಾತ ಸಾಮಗಾಯನ ಪ್ರೀತ ಸ್ವಾಮಿನೀತ ಧ್ರುವ ವೇದ ಉದ್ಧರನೀತ ಮೇದಿನಿಯ ಪೊತ್ತಾತ ಸಾಧುಜನ ವಂದಿತ ಸದ್ವಸ್ತುನೀತ 1 ಧಾರುಣಿಯ ಗೆದ್ದಾತ ತರಳಗೊಲಿದಹನೀತ ದಾತ ಕರುಣಿ ಈತ 2 ಮೂರು ಪಾದಳಿದಾತ ಪರಶುಧರನಹುದೀತ ಸುರಜನರ ಪೂಜಿತ ಸರ್ವೋತ್ಮನೀತ 3 ಪವನಸುತಗೊಲಿದಾತ ಮಾವನ ಮಡುಹಿದಾತ ಭುವನತ್ರಯಲೀತ ದೇವನೀತ 4 ಬೆತ್ತಲೆಯು ಸುಳಿದಾತ ಉತ್ತಮ ಹಯವನೇರಿದಾತ ಭಕ್ತರಿಗೆ ಹೊರೆವಾತ ಶಕ್ತನೀತ 5 ಅಣುರೇಣುದೊಳೀತ ಅನುಕೂಲವಾದಾತ ಆನಂದೋ ಬ್ರಹ್ಮ ಅನಂತನೀತ 6 ಮಹಾಮಹಿಮನಹುದೀತ ಬಾಹ್ಯಾಂತ್ರಪೂರಿತ ಮಹಿಪತಿಯ ಸಾಕ್ಷಾತ ವಸ್ತುನೀತ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನರ ಹರಿನಾಮವ ನೀ ನೆನೆದರೆ| ಧರಿಯೊಳು ಸಾಲದೇ ಇಹಪರ ದೋರದೆ| ಬರದೇ ಸಾಯಾಸ ಬಡುವರೇ ಪ ಆದಿ ಯುಗಂಗಳಲಿ ತಾಪಸರು| ಸಾದರ ಬಹುದಿನದಿಂದಾ| ಸಾಧಿಸುವಗತಿ ಕೊಡುವ ನೊಂದೆ ಕ್ಷಣದಿ| ಶ್ರೀಧರ ತಾ ದಯದಿಂದಾ1 ಸಂತರ ಸಂಗದಿ ಶ್ರವಣವ ಮಾಡಿ| ಆಂತರ್ಭಾವನೆ ಬಲಿಸೀ| ಭ್ರಾಂತ ನೀನಾಗದೆ ಅನ್ಯ ಸಾಧನದಲಿ| ಸಂತತ ಕೀರ್ತನೆ ಬೆರೆಸೀ2 ಸಾವಿರಕೊಂದೆ ಈ ನುಡಿ ನಿಜವೆಂದು| ಸಾವಧವನಾದವ ಮನುಜಾ| ಭಾವಿಸು ಗುರುಮಹಿಪತಿ ಪ್ರಭು|ನುಡಿಸಿದ| ಆವನಂಬವನೇ ದನುಜಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಲಿದಾಡು ಬಾರೊ ಗರುಡತುರಂಗಾ ಪ ದುರುಳ ಭಸ್ಮಾಸುರ ಉರಿಹಸ್ತ ಪಡೆದಂದು ತರುಣಿರೂಪದೆ ನಲಿದು ಹರನ ಪೊರೆದೆಯಲ್ತೆ 1 ಲೋಲ ಲೋಚನೆಯರ ಆಲಯಗಳ ಪೊಕ್ಕು ಹಾಲು ಬೆಣ್ಣೆಯ ಮೆದ್ದ ಗೋಪಾಲ ವಿಠಲನೇ 2 (ಭವ ಬಂಧವು ನಾಮಪ್ರಿಯ ಪರಂಧಾಮನೇ) 3 ಆವ ಬಂಧವನ್ನೂ ಬಿಡಿಸಿ ನವನೀತವೀವನೇ ಕಾವರಿಲ್ಲವೋಯೆನ್ನ ಮಾವಿನ ಕೆರೆರಂಗಾ 4 ಕಾಮಿತಂಗಳ ದೇವ ಶಾಮಲಾಂಗನೆ ನಿನ್ನ ನಾಮವ ನೆರೆಸಾರು ರಾಮದಾಸಾರ್ಚಿತ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನವನೀರದಾಭಗಾತ್ರ ಅವನೀಸುತಾಕಾಂತ ಪ. ಅಣೋರಣೀಯನೆನಿಸಿ ಅನಂತರೂಪ ಧÀರಿಸಿ ಪ್ರಣವ ಸ್ವರೂಪಿ ಮೆರೆವೈ1 ಅನಾಥನಾಥ ನೀನೇ ಸನಂದನಾದಿನುತನೇ ವನಜಾಸನನಂ ಪಡೆದವನೇ 2 ಮದಾಂಧರಾಗಿ ಕೆಡುವ ಪದಚ್ಯುತರ ಪೊರೆವ ವ ಧನ್ಯ ನೀನೆಲೆದೇವ 3 ಬಾರಯ್ಯ ಭಕ್ತಭರಣ ತೋರೀಗ ನಿನ್ನ ಚರಣ ಬಾರೆನ್ನ ಶೇಷಗಿರಿರಮಣ4
--------------
ನಂಜನಗೂಡು ತಿರುಮಲಾಂಬಾ
ನಳಿನನಾಭ ಸುಂದರ ಸುಗುಣಾಕರ ಕಮಲೇಶ ಜಗದೀಶ ಪ ಚಲಿಸಬಲ್ಲರೇ ನಿನ್ನ ಬಲವಿಲ್ಲದಿರಲು ಸಕಲ ಸುರನರರು ಅ.ಪ ಬ್ರಹ್ಮಾದಿಗಳು ನಿನ್ನ ಸಮ್ಮತಿಯಲಿ ಈ ಬ್ರಹ್ಮಾಂಡದಲಿ ತಮ್ಮ ಕರ್ಮರಚಿಸಿ ನಿನ್ನ ಮರ್ಮವನರಿಯಲು ತಮ್ಮ ಕಾಲವ ಕಳೆಯುವರು 1 ಅಜ್ಞಾನದೂರನೆ ಸುಜ್ಞಾನ ಮೂರುತಿ ಯಜ್ಞನಾಮಕ ಪರಮಾತ್ಮ ನಿನ್ನ ಜಿಜ್ಞಾಸದಿಂ ಸುಪ್ರಜ್ಞೆಯ ಪೊಂದದ ಅಜ್ಞಾನಿ ಇದನರಿಯುವನೇ 2 ಸರ್ವತ್ರ ವ್ಯಾಪ್ತನೆ ಸರ್ವಾಗಮಾರ್ಥನೆ ಸರ್ವ ಪ್ರೇರಕ ಸರ್ವೇಶ ಗರ್ವ ತೊರೆದು ನೀನೋರ್ವ ಸ್ವತಂತ್ರನೆಂ ದರಿವ ಜನಕೆ ಸುಪ್ರಸನ್ನ 3
--------------
ವಿದ್ಯಾಪ್ರಸನ್ನತೀರ್ಥರು
ನಾಗಶಯನನು ನಿನಗಾಗಿಯೆ ಬಂದಿಹೆÉ ಬಾಗಿಲ ತೆಗೆಯೆ ಭಾಮೆ ನೀ ಬಾಗಿಲ ತೆಗೆಯೆ ಭಾಮೆ ಪ. ಕೂಗುವ ನೀನ್ಯಾರೊ ಈಗ ಹೊತ್ತಲ್ಲ ಕೂಗಬೇಡ ಪೋಗೋ ನೀ ಕೂಗಬೇಡ ಪೋಗೋಅ.ಪ. ನಿಗಮ ಚೋರನ ಗೆದ್ದ ನೀರಜಾಕ್ಷನೆ ಭಾಮೆ ನಾ ನೀರಜಾಕ್ಷನೆ ಭಾಮೆ ನಾರುವ ಮೈಯನ್ನು ಎನ್ನಲ್ಲಿ ತೋರದೆ ಸಾರು ಸಾರು ನೀ ದೂರ ರಂಗ ಸಾರು ಸಾರು ನೀ ದೂರ 1 ಮಂದರ ಗಿರಿಯನು ಬೆನ್ನಲಿ ಪೊತ್ತ ಇಂದಿರೆಯರಸನೆ ಭಾಮೆ ನಾ- ನಿಂದಿರೆಯರಸನೆ ಭಾಮೆ ಇಂದು ನಿನಗೆ ತಕ್ಕ ಭಾರಗಳಿಲ್ಲವು ಸಿಂಧುವಿನೊಳು ನೀ ಪೋಗೈ ಕೃಷ್ಣ ಸಿಂಧುವಿನೊಳು ನೀ ಪೋಗೈ 2 ಧರಣಿಗೆ ಸುಖವನು ತೋರಿದ ಸೂಕರ ಪರಮಪುರುಷನೆ ಭಾಮೆ ನಾ ಪರಮ ಪುರುಷನೆ ಭಾಮೆ ವರಾಹರೂಪದ ನಿನ್ನ ಗುರುಗುರು ಶಬ್ದವ ಅರಿವಳಲ್ಲವೊ ನೀ ಪೋಗೈ ರಂಗ ಅರಿವಳಲ್ಲವೊ ನೀ ಪೋಗೈ 3 ಬಾಲನ ತಾಪವ ಕೋಪದಿ ತರಿದ ನಾರಸಿಂಹನೆ ಭಾಮೆ ನಾ ನಾರÀಸಿಂಹನೆ ಭಾಮೆ ಜ್ವಾಲೆಯ ವದನ ಕ್ರೂರ ಕಾರ್ಯಂಗಳ ಕೇಳಿ ಅಂಜುವಳಲ್ಲ ಪೋಗೈ ರಂಗ ಕೇಳಿ ಅಂಜುವಳಲ್ಲ ಪೋಗೈ 4 ವಾಸವನನುಜನೆ ವಾಮನರೂಪನೆ ನಾಶರಹಿತನೆ ಭಾಮೆ ನಾ ನಾಶರಹಿತನೆ ಭಾಮೆ ಕೂಸಿನ ರೂಪದಿ ಮೋಸವ ಮಾಡಿದಗೆ ದಾಸಿ[ಯೊ]ಬ್ಬಳು ಬೇಕೇ ರಂಗ ದಾಸಿ[ಯೊ]ಬ್ಬಳು ಬೇಕೇ 5 ತಾತನ ಮಾತಿಗೆ ತಾಯಿಯನಳಿದ ಖ್ಯಾತ ಭಾರ್ಗವನೆ ಭಾಮೆ ನಾ ಖ್ಯಾತ ಭಾರ್ಗವನೆ ಭಾಮೆ ಮಾತೆಯನಳಿದ ಘಾತಕ ನಿನಗೆ ದೂತಿಯೊಬ್ಬಳು ಬೇಕೇ ರಂಗ ದೂತಿಯೊಬ್ಬಳು ಬೇಕೇ 6 ದಶರಥನಂದನ ದಶಮುಖಭಂಜನ ಪಶುಪತಿವಂದ್ಯನೆ ಭಾಮೆ ನಾ ಪಶುಪತಿ ವಂದ್ಯನೆ ಭಾಮೆ ಹಸನಾದ ಏಕಪತ್ನೀವ್ರತದವಗೆ ಸುದತಿಯೊಬ್ಬಳು ಬೇಕೇ ರಂಗ ಸುದತಿಯೊಬ್ಬಳು ಬೇಕೇ 7 ಹದಿನಾರು ಸಾಸಿರ ನೂರೆಂಟು ಸುದತೇರ ಬದಿಯಲಿಟ್ಟವನೆ ಭಾಮೆ ನಾ ಬದಿಯಲಿಟ್ಟವನೆ ಭಾಮೆ ಹದನಕ್ಕೆ ಬಾರದ ಮಾರ್ಗಂಗಳ್ಯಾತಕ್ಕೆ ವದನ ಮುಚ್ಚಿಕೊಂಡು ಪೋಗೈ 8 ಬೌದ್ಧರಕುಲದಲ್ಲಿ ಹುಟ್ಟಿ ಅವರಂತೆ ಮುಗ್ಧರ ಮಾಡಿದೆ ಭಾಮೆ ನಾ ಮುಗ್ಧರ ಮಾಡಿದೆ ಭಾಮೆ ಶುದ್ಧಗುಣಗಳೆಲ್ಲ ಇದ್ದಲ್ಲಿಗೆಪೇಳೆ ವೃದ್ಧಳು ನಾನಲ್ಲ ಪೋಗೈ ರಂಗ ವೃದ್ಧಳು ನಾನಲ್ಲ ಪೋಗೈ 9 ವರ ತುರಗವನೇರಿ ಧರೆಯೆಲ್ಲ ಚರಿಸಿದ ದೊರೆವರ ನಾನೆ ಭಾಮೆ ಚರಿಸಿದ ದೊರೆವರ ನಾನೆ ತÀುರಗದ ಚಾಕರಿಯೊ[ಳಗಿರುವವನಿಗೆ] ತರುಣಿಯ ಭೋಗವು ಬೇಕೇ ರಂಗ ತರುಣಿಯ ಭೋಗವು ಬೇಕೇ 10 ಸರುವ ಪ್ರಾಣಿಗಳ ಉದರದೊಳಿಂಬಿಟ್ಟು ಶರಧಿಯೊಳ್ಮಲಗಿದವ ಭಾಮೆ ನಾ ಶರಧಿಯೊಳ್ಮಲಗಿದವ ಭಾಮೆ ದೊರೆ ಹಯವದನ ಚರಣಕ್ಕೆರಗುತ ತೆರೆದಳು ಬಾಗಿಲ ಭಾಮೆ ಆಗ ತೆರೆದಳು ಬಾಗಿಲ ಭಾಮೆ 11
--------------
ವಾದಿರಾಜ
ನಾನಿನ್ನ ತೆಗಳಿದೆನೇ ರಂಗಯ್ಯ ನಾನಿನ್ನ ಮಹಿಮೆಯ ಹೊಗಳಿದೆನಲ್ಲವೆ ಪ ನೀನೇತಕೆನ್ನೊಳು ದಯತೋರದಿರುವೆ ನಾನಿನ್ನ ಚರಣವ ದೃಢದಿ ನಂಬಿರುವೆ ಅ.ಪ ಮೀನಾಗಿ ನಾಲ್ಕುಮಕ್ಕಳ ಹೊತ್ತು ತಂದೆ ನೀನೇ ಕಮಠನಾಗಿ ನಗವೆತ್ತಿ ನಿಂದೆ ದಾನವ ಸಂಹಾರಕಾಗಿ ಸೂಕರನಾದೆ ನೀನೇ ನರಹರಿಯೆಂದು ನುತಿಸಿದೆನಲ್ಲದೆ 1 ಭೂಮಿಯನಳೆದವನೆಂದೆ ನೀನೇ ಭೂಮಿಪರನು ಕೊಂದೆ ಎಂದೆ ಭೂಮಿಜೆಯರಸ ರಾವಣವೈರಿಯೆಂದೆ ಕಾಮಪಾಲನು ಹಲಧರನೆಂದೆನಲ್ಲದೆ 2 ತರುಣಿದ್ರೌಪದಿಗಾಗಿ ಕುರುಕುಲವಿರಿದೆ ತುರಗವನೇರಿ ದುಷ್ಟರನೆಲ್ಲ ತರಿದೆ ಶರಣ ಜನರಿಗಾಗಿ ಹರಿಹರ ನೀನಾದೆ ವರದ ಮಾಂಗಿರಿರಂಗ ನೀನೆಂದೆನಲ್ಲದೆ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್