ಒಟ್ಟು 34031 ಕಡೆಗಳಲ್ಲಿ , 136 ದಾಸರು , 11034 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸಿ ಪಿಡಿಯಾ ಕೈಯ್ಯಾ | ಗುರುರಂಗವೊಲಿದರಾಯ ಪ ನಂಬಿದೆ ನಿನ್ನ ಚರಣ | ಬೆಂಬಿಡದೆ ಕಾಯೋ ಸತತ ಸ್ತಂಭದಲಿ ನೆಲಸಿದಂಥ | ಕುಂಭಿಣಿಪ | ದಾಸವರ್ಯ 1 ದೀನರ್ಗೆ ದಿವಿಜಧೇನು | ನೀನೆಂದು ಕ್ಷೋಣಿ ತಳದಿ ಜ್ಞಾನಿಗಳು ಪೇಳಿದಂಥ ವಾಣಿಯನು ಸತ್ಯಮಾಡೊ 2 ನಿನ್ನ ಸ್ಥಳವು ಪುಣ್ಯಕ್ಷೇತ್ರ | ನಿನ್ನಲ್ಲಿ ಸಕಲ ತೀರ್ಥ ನಿನ್ನ ಕವನ ಮಧ್ವಶಾಸ್ತ್ರ | ನಿನ್ನವನು ನಿಜಕೃತಾರ್ಥ3 ಹರಿದಾಡುವಂಥ ಮನಸು | ಹರಿಯಲ್ಲಿ ಸ್ಥಿರವಗೊಳಿಸೊ ಹರಿನಾಮ ಸುಧೆಯ ಕುಡಿಸೊ | ಹರಿವರನ ಮತವ ಪಿಡಿಸೊ 4 ಮತಿಭ್ರಷ್ಟನಾಗಿ ನಿನ್ನ ಕೃತಿಗಳನು ಪಾಡದ್ಹೋಗಿ ಕ್ಷಿತಿ ಭಾರನಾದೆ ಮುಂದೆ ಗತಿ ತೋರಿ ಸಲಹೊ ತಂದೆ 5 ಹೆತ್ತವರು ಸುತನ ದೋಷ | ಕೃತ್ಯಗಳ ಕ್ಷಮಿಸದಿಹರೆ ಚಿತ್ತೈಸು ಎನ್ನ ಮಾತ | ಉತ್ತಮರ ಸಂಗವಿತ್ತು 6 ತಳೆದೇಳು ಜನುಮಗಳಲಿ | ಇಳೆಯೊಳಗೆ ಚರಿಪ ಸಮಯ ಸುಳಿದಾಡು ಮತ್ತೊಮ್ಮೆ ಘೋರ ಕಲಿಬಾಧೆ ತಪ್ಪಿಸಯ್ಯ 7 ಮಾನವಿಯ ಸ್ಥಾನದಲ್ಲಿ | ನೀನಿರಲು ನಿನ್ನ ಮರೆದು ಮೋದ 8 ಕಂದರ್ಪಜನಕ ಶಾಮಸುಂದರ ಮೂರ್ತಿಹೃದಯ ಮಂದಿರದಿ ತೋರೋದಾತ ವಂದಿಸುಎ ನಿನ್ನ ಪದಕೆ 9
--------------
ಶಾಮಸುಂದರ ವಿಠಲ
ಕರುಣಿಸಿಯಭಯವನು ಕೊಟ್ಟು ಕಾಯುವೆನಿರತಂ ಕರಕಮಲವದಯಮಾಡೈ ಅರಿಸಿನ ಹಚ್ಚುವೆನು ಮುದದಿ ಅರಸ ನಿನಗೆ ನಾಂ 1 ಪಂಕಜರಿಪು ನಿಭವಕ್ತ್ರನೆ ಪಂಕಜ ಸೂರ್ಯನೆ ಕುಂಕುಮ ಹಚ್ಚುವೆ ನಿನಗೆ ಕೊಡು ನಡು ಪಣೆಯಂ 2 ಭವ ತ್ಕಂಧರವ ನೀಡು ಪರಿಮಳ ಗಂಧವ ಹಚ್ಚುವೆನು ನಾನು ಕಮಲದಳಾಕ್ಷ 3 ನಿರತವು ಮನ್ಮಾನಸ ಪಂ ಕರುಹದಿ ಸೇವಿಸುವೆ ನಿನ್ನ ಕರುಣಾನಿಧಿಯೆ ಸರವನು ಕಂಧರದಿ ಧರಿಸುವೆ ಜಗನ್ನಾಥಾ 4 ನಾಮಾಡಿದ ತಪ್ಪುಗಳಂ ನೀ ಮನದಲಿ ತರದೆ ಕ್ಷಮಿಸುವದು ಪ್ರಾಣೇಶಾ ಪ್ರೇಮದಿ ವೀಳ್ಯವ ಶ್ರೀಗುರು ರಾಮವಿಠಲ ಕೊಡುವೆ ನಿನಗೆ ರಮ್ಯಚರಿತ್ರ 5
--------------
ಗುರುರಾಮವಿಠಲ
ಕರುಣಿಸು ಕಮಲಾಸನ ಮಾತಯೆ ನೀಂ ಕರಧೃತ ವರ ಕಮಲೆ ಪ ಶರಣವ ಪÉÇಂದಿಹೆ ಕರುಣದೊಳೀಕ್ಷಿಸು ವರದೆ ವರಲಕ್ಷ್ಮಿ ಅ.ಪ. ಕುಸುಮ ಧೂಪಾವಳಿಯಿಂದಲಿ ಸುಂದರಿ ಪೂಜಿಪೆನು ಬಂಧುರಗಾತ್ರಿಯೆ ಅಂದದೊಳೆನ್ನಯ ಮಂದಿರದೊಳಗಿಹುದು 1 ಶ್ರಾವಣ ಮಾಸದಿ ಭಾವಕಿ ನಿನ್ನನು ಭಾವದಿ ಭಾವಿಸುತ ತಾವಕ ಪಾದವ ಪ್ರೇಮದಿ ಪೂಜಿಪೆ ದೇವಿಯೆ ಒಲಿಯುವುದು 2 ಚಂದನಭೂಷಿತೆ ಸುಂದರ ಗಾತ್ರೆಯ ಮಂದಹಾಸಮೊಲಿಯೆ ಚಂದದ ಕಿಂಕಿಣಿಯಂದದರವದೊಳ್ ಬಂದು ದಯಂಗೆಯ್ಯೆ3 ಹರಿಮಾನಸ ಮೋಹದ ಪ್ರಾಣೇಶ್ವರಿ ಹರಸುತ ವರಗಳಿಂದ ವರಧೇನುನಗರ ವರಜನ ಪೋಷಿಣಿ ಕರುಣಾಕರೆ ವರದೆ4
--------------
ಬೇಟೆರಾಯ ದೀಕ್ಷಿತರು
ಕರುಣಿಸು ಕಮಲೇಶ ಸರ್ವೇಶ ಕರುಣಿಸು ಕಮಲೇಶ ಪ. ಶರಣಾಗತ ರಕ್ಷಕ ವೆಂಕಟೇಶ ನಿರುತದಿ ಪ್ರಾರ್ಥಿಪೆ ಲಕ್ಷ್ಮೀಶ ಅ.ಪ. ವೇದ ಶಾಸ್ತ್ರ ಪುರಾಣವನರಿಯೆ ಆದಿ ಮೂರುತಿ ಪ್ರಹ್ಲಾದವರದನೆ ಆದರದಲಿ ನಿನ್ನ ಸ್ತುತಿಸುವೆ ದೇವ ಮೋದದಿಂದಲಿ ಕಾಯೋ ಪಾದಸೇವಕರಾ 1 ಜಪವ ನಾನರಿಯೆ ತಪವ ನಾನರಿಯೆ ಉಪವಾಸ ವ್ರತಮೊದಲರಿಯೆ ದೇವಾ ಅಪರಿಮಿತ ಪಾಪ ಗಳಿಶಿಹೆನೋ ಸುಪವಿತ್ರನನು ಮಾಡೊ ಅಪಾರ ಮಹಿಮಾ 2 ನಿನ್ನ ನಂಬಿಹೆನೊ ಅನ್ಯರನರಿಯೆನೊ ಎನ್ನಪರಾಧವ ಮನ್ನಿಸೊ ದೊರೆಯೆ ಚೆನ್ನಿಗ ಶ್ರೀ ಶ್ರೀನಿವಾಸನ ಸ್ತುತಿಪೆನೊ ಇನ್ನು ಸಂಶಯವ್ಯಾಕೊ ಪನ್ನಗಾದ್ರಿವಾಸ 3
--------------
ಸರಸ್ವತಿ ಬಾಯಿ
ಕರುಣಿಸು ಕರುಣಿಸು ಕರುಣಿ ಶ್ರೀ ರಂಗಯ್ಯಾ ಹರಣ ಪೋದರು ನಿಮ್ಮ ಸ್ಮರಣೆ ಮರೆಯದಂತೆ ಪ ಮರವೆ ಮಾಯದಿ ಸಿಲುಕಿ ಮರುಳ ಮಾನವರಿಗೆ ಶಿರವ ಬಾಗದಂತೆ 1 ಘನದು:ಖಮಯವಾದ ಜನನಮರಣವೆಂಬ ಕುಣಿಯೊಳಗೆ ಸಿಕ್ಕಿ ಜನಿಸಿಬಾರದಂತೆ 2 ದುರಿತ ದಾರಿದ್ರ್ಯದಿಂದ ಪರಿಪಕ್ವನೆನಿಸೆನ್ನ ವರದ ಶ್ರೀರಾಮ ನಿಮ್ಮ ಚರಣ ಸೇವೆಯ ಘನತೆ 3
--------------
ರಾಮದಾಸರು
ಕರುಣಿಸು ಕರುಣಿಸು ಪರಮ ಪುರುಷ ರಂಗ ಪ ಕರಿಯ ಮೊರೆ ಕೇಳಿ ಹರಿತಂದಂತೆನ್ನಾ ಅ.ಪ ನೀರೊಳು ಮುಳುಗುತ ಗಿರಿಯ ಬೆನ್ನಲಿ ಪೊತ್ತ ಕೋರೆಯ ತೋರುತ ನರಹರಿಯಾದರು ಬಿಡೆನೊ 1 ನೀನೆ ತರಿದುಂಡರು ನಾ ನಿನ್ನ ಬಿಡುವೆನೆ ಮೌನಿ ಕುವರನಾಗಿ ಜನಿಸಿದರು ಬಿಡೆನೊ 2 ಪುರವ ಕಳೆದು ವನಕೆ ತೆರಳಿದರು ಬಿಡೆನೊ ಉರಗನ ಮಡುವಿನೊಳು ಸರಿದರು ನಾ ಬಿಡೆನೊ 3 ದಿಗಂಬರ ನೀನಾಗಿ ಹಗರಣವ ಮಾಡಲು ಮಗುಳೆ ತೇಜಿಯನೇರಿ ಪೋಗಲು ನಾ ಬಿಡೆನೊ 4 ಗರುಡನ ಹೆಗಲೇರಿ ತಿರುಗಿದರು ಬಿಡೆನೊ ಸಿರಿ ರಂಗೇಶವಿಠಲನೀ ಕರೆಕರೆಗೊಳಿಸÀದೆ 5
--------------
ರಂಗೇಶವಿಠಲದಾಸರು
ಕರುಣಿಸು ಜಯೇಶವಿಠಲ ವರ ಅಂಕಿತವಿದನು ಇತ್ತೆ ಪ ತರಳ ನಿನ್ನವನೆಂದು ಗುರುವಾತ ಸ್ಥಿತನಾಗಿ ಭರದಿ ಪಾಲಿಸಿದೆ ಇವನ ಹರಿ ನೀನಿದ್ದೆಡೆಗೆ ಕರೆಸಿ ಅ.ಪ ಇರಿಸು ವರ್ಣಾಶ್ರಮ ವರಧರ್ಮ ಕರ್ಮಗಳಲಿ ಮರೆಸಿ ಕಾಮ್ಯಕರ್ಮಗಳೆಲ್ಲವನು ಸ್ಮರಿಸದಂತೆ ಮಾಡು ಪರಸತಿಯರೊಲುಮೆ ಮರೆಯದಂತಿರಲಿ ಪರತತ್ವವನು 1 ಸತಿ ಸುತ ಪರಿವಾರದಿ ಕೃತಕೃತ್ಯನಾಗಿ ಮಾಡಿಸಿ ಪತಿತರ ಸಹವಾಸ ಹಿತವೆಂದರುಪದೆ ಸ- ದ್ಗತಿಯೀವ ಮಾರ್ಗ ತಿಳಿಸಿ 2 ನಿರುತ ತತ್ವ ನಿಶ್ಚಯದಲ್ಲಿ ಜ್ಞಾನ ಗುರುಹಿರಿಯರಲ್ಲಿ ಭಕ್ತಿ ದುರ್ವಿಷಯದಲಿ ವಿರಕ್ತಿನಿತ್ತು ವರ ವಿಜಯ ರಾಮಚಂದ್ರವಿಠಲ ಸುರರೊಡೆಯ ಬರೆದು ನಾಮಾಮೃತವ ನುಡಿಸಿ 3 (ಜಯೇಶವಿಠಲರಿಗೆ ಅಂಕಿತ ನೀಡಿದ ಸಂದರ್ಭ) ದುರಿತ ವಿ ದೂರ ಕರುಣಾಕರ ಸುಂದರ ಗಂಭೀರ 1 ದೀನೋದ್ಧಾರ ವಿರ್ಪಿವಿಹಾರ ದಾನವಹರ ಸುರಕಾವ್ಯ ವಿಚಾರ 2 ಸೀತಾನಾಥ ವಾನರಯೂಥ ವಾರಾತ್ಮಜ ನುತ ಶ್ರೀ ಲಕ್ಷ್ಮೀಕಾಂತ 3
--------------
ವಿಜಯ ರಾಮಚಂದ್ರವಿಠಲ
ಕರುಣಿಸು ದೇವ ಶರಣ ಸಂಜೀವ ಮರೆಯದಿರೆನ್ನನು ಮನೆಯೊಳಗಿರುವ ಪ. ಸಿರಿನಲ್ಲ ನೀ ಬೆಂಬಲ ವಲ್ಲದೆ ಬೇರೆ ದಾತರಿಲ್ಲವೆಂಬುದು ಸಿದ್ಧ 1 ಆದರು ಲೌಕಿಕವಾದ ಲಾಭಗಳನ್ನು ನೀ ದಯಮಾಡುವ ಹಾದಿಯನರಿಯೆನು ವ್ಯರ್ಥಹಂಕೃತಿಯಿಂದ ಧೂರ್ತನಾದೆನು ಕೃಷ್ಣ ಕರ್ತ ನೀ ಕರುಣದಿ ಕರಸಿಕೊ ಬೇಗ 2 ಚಂದನ ವಿಗ್ರಹ ಚೆಲುವ ಶೋಭಿತ ಗ್ರಹ ಹೊಂದದಿರಾಗ್ರಹ ಹರಿಸು ಸರ್ವಾಗ್ರಹ 3 ನೋಡದೆ ನಿನ್ನನು ನಡುವಿಲಿ ನೆನೆದೆನು ಬೇಡಿಕೊಂಬೆನು ಶ್ರೀಶ ಮೂಡಲಭೂಧರೇಶ 4
--------------
ತುಪಾಕಿ ವೆಂಕಟರಮಣಾಚಾರ್ಯ
ಕರುಣಿಸು ದೇವದೇವ ಸೆರಗೊಡ್ಡಿ ಬೇಡುವೆನಭವ ಪರಿಹರಿಸು ಎನ್ನ ಕರುಣಾಳು ಲಕ್ಷ್ಮಿಯ ಜೀವ ಪ ಅಂಬುಧಿಶಾಯಿಯೆ ನಿನ್ನ ಭಜಿಪೆ ಪಾವನ್ನ ಅಂಬುಜಸಂಭವಪಿತನೆ ಕಂಬುಕಂಧರಪ್ರಿಯಸಖನೆ ಅಂಬುಧಿಯಸಂಜಾತೆರಮಣ ಬೆಂಬಲಿಸಿ ಕಾಯೊ ಬಡವನ್ನ 1 ಸುಂದರಕಾಯ ಇಂದಿರೆಯ ಪ್ರಾಣಪ್ರಿಯ ಬಂಧನದ ಬಡತನ ಕಳಿಯೊ ವಂದಿಸಿ ಮರೆಹೊಕ್ಕೆ ಜೀಯ 2 ಈಸೀಸಿ ಸಂಸಾರನಿಧಿಯ ಬೇಸತ್ತು ಬಿಡುವೆನೊ ಬಾಯ ಘಾಸಿ ಮಾಡದೆ ಸಲಹಯ್ಯ 3
--------------
ರಾಮದಾಸರು
ಕರುಣಿಸು ಪ್ರಭುತಂದೆ ತರಳಂಗೆ ದಯವ ಪ ಹರಿ ನೀನೆ ಅವತರಿಸೀಪರಿಭವಶರಧಿಯ ಪರಿಹಾರಗೊಳಿಸುವ ಪರಮಪಾವನರೂಪ 1 ಅರಿವಿಟ್ಟು ಭಜಿಸುವೆ ಮರೆಯದೆ ಮಗನ್ವಚನ ಕರುಣದಿ ಆಲಿಸಿ ವರದಹಸ್ತವ ಶಿರಕೆ 2 ಹಿಂಸೆಬಿಡಿಸು ಮಹ ಸಂಸಾರದುರಿಯನ್ನು ಧ್ವಂಸಗೈಯುವ ಶರಣರಾಂಶದ ಪ್ರಸನ್ನತೆ 3 ದುರಿತ ದೂರೀಕರಿಸಿ ಪರಮಾನಂದದಲಿರುವ ಸಿರಿ 4 ಮರೆಯ ನಿನ್ನಡಿಯಿನ್ನು ಸರುವೇಶ ಮೊರೆಕೇಳಿ ಗುರುವಾಗಿ ಶ್ರೀರಾಮ ಸ್ಥಿರಮೋಕ್ಷ ಸಂಪದವ 5
--------------
ರಾಮದಾಸರು
ಕರುಣಿಸು ಬೇಗ ಸಿರಿವರ ಕರುಣಿಸು ಬೇಗ ಪ. ಲಕ್ಷ್ಮಾಶ್ರಯ ವಕ್ಷಸ್ಥಳ ಪಕ್ಷೇಂದ್ರ ವಿಹಾರಿ ಅಕ್ಷಾರಿ ಪ್ರಿಯ ಪೂರ್ಣ ಕಟಾಕ್ಷದಿ ನೋಡುತಲಿ 1 ಕಂಠೇಧೃತ ಕೌಸ್ತುಭ, ವೈಕುಂಠಾಲಯವಾಸಿ ಶುಂಠಾಶಯ ಧೂವನ ನರ ಕಂಠೀರವ ಕಮಠಾ 2 ದೂರೀಕೃತ ಘೋರಾಮಯ ಧೀರಾಖಳ ಸಾರಾ ನಾರಾಯಣ ನರಕಾರ್ಣವ ತಾರಣ ರಘುವೀರ 3 ಭಕ್ತಾವನಶಕ್ತಾಮೃತ ರಕ್ತಾಧರ ಶ್ರೀದ ಪಾದ 4 ವಾಗೀಶ ವೃತಾನುಗ ಸಕಲಾಗಮನುತ ಚರಣ ಭೋಗೀಶ ಧರಾಲಯ ದಯವಾಗು ಸದಾಶರಣ 5
--------------
ತುಪಾಕಿ ವೆಂಕಟರಮಣಾಚಾರ್ಯ
ಕರುಣಿಸು ಭಾರತೀರಮಣ ಕರುಣಿಸು ಪ ಪರಮದಯಾದಿಂದ ಹರಿಯನ್ನ ತೋರಿಸು ದುರುಳರೊಳಡಗಿದೆ ನಿಲಿಸೊ ಜ್ಞಾನಿಗಳಲ್ಲಿ ಅ.ಪ ತ್ರೇತಾಯುಗದಲ್ಲವತರಿಸಿ | ಕಪಿ ವ್ರಾತ ಶಿರೋಮಣಿ ಎನಿಸಿ | ಪಕ್ಷ - ಚೂತ ಫಲಗಳನ್ನು ಸಲಿಸಿ | ಭೂಮಿ - ಜಾತೆಯ ಪಾದಕ್ಕೆ ನಮಿಸೀ | ಅಹ ಘಾತಿಸಿ ಖಳರನ್ನು ಸೀತಾಪತಿ | ಮನೋ ರಥವನು ಸಲಿಸಿದ ಮಾತರಿಶ್ವನೆ ನೀ 1 ಕುಂತಿಯ ಉದರದಿ ಜನಿಸಿ | ಬಹು ಸಿರಿ - ಕಾಂತನ ಪಾದಕ್ಕೆ ನಮಿಸಿ | ಮಡದಿ ಚಿಂತೆಯನು ದೂರಗೈಸಿ | ಅಹ ಸಂತಾಪಗೊಳುತಿಪ್ಪ ದಂತಿಪುರಾಧಿಪನ ತಂತುಗೆಡಹಿತ ಬಲವಂತ ಶಿರೋರನ್ನ 2 ಕಲಿಯುಗದಲುದ್ಭವಿಸಿ | ಬಹು ಲೀಲೆಯೊಳನ್ಯರ ಜಯಿಸಿ | ಸತ್ಯ ಶೀಲರನ್ನುದ್ಧರಿಸಿ | ಸಿರಿ ಲೋಲನೆ ಪರದೈವವೆನಿಸಿ | ಆಹ ಬಾಲ ರವಿ ತೇಜ ವಿಜಯ ರಾಮಚಂದಿರವಿ - ಠಲನ್ನ ಪೂಜಿಸುವಂಥ ಆಲವ ಬೋರ್ಧಾಯನೆ 3
--------------
ವಿಜಯ ರಾಮಚಂದ್ರವಿಠಲ
ಕರುಣಿಸು ರಘುನಂದನ ರಾಮಾ ನಿರುತವು ನಿನ್ನನೆ ಸ್ಮರಿಸುವ ಭಾಗ್ಯವ ಪ ಪರಮಮಂಗಳನಾಮಾ ದುರಿತಭಂಜನ ನಾಮ ಗಿರಿಜೆಪಾಡುವ ನಾಮಾ | ಜಾನಕೀರಾಮ ಅ.ಪ ರಾಮನೆನೆ ಪಾಪವು ಲಯವಹುದಂತೆ ರಾಮಾಯೆನೆ ಭಯಗಳು ಪರಿಹರವಂತೆ 1 ರಾಮನೆನೆ ಮಾಯೆಯು ಹರವಂತೆ ರಾಮನ ನುತಿಸೆ ಮನ ಪರವಶವಂತೆ2 ಜಯರಾಮ ಜಯರಾಮ ಎನುತಿರುವಂತೆ] ದಯಮಾಡೊ ಮಾಂಗಿರಿರಂಗ ನೀನಂತೆ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕರುಣಿಸು ವರಗೌರಿ ಭರದಿಂದ ವರವನ್ನೂ ಶರಣಾಪ್ತ ಬೇಡುವೆ ನಿನ್ನಾ ಪ. ಪಾರ್ವತೀ ತಾಯೇ ಪಾಮರರಿಗೆ ಪರಮಪಾವನ್ನೆ ಪರಿಪಾಲಿಸುತ್ತ ವರವಿತ್ತು ನೀ ಕಾಪಾಡೆ 1 ಪತಿಪಾದ ಸೇವಾ ಸತತದೊಳಿತ್ತು ಸತಿಗೆ ಮಾಗಲ್ಯ ನಿರತವೀಯೆ ತಾಯೆ ಸಕಲಕೆ ಶ್ರೀ ಗೌರಿ2 ಪಾದ ಸೋಸಿಲಿ ಭಜಿಪೆ ವರವೀಯೆ ತಾಯೆ ಶಂಕರಿ ಕಾಯೆ ದೇಹಿಮೆ 3
--------------
ಸರಸ್ವತಿ ಬಾಯಿ
ಕರುಣಿಸು ಶ್ರೀ ರಾಮಾ ಪ ವಾರಿರುಹನಯನ ಜೀಮೂತ ಶ್ಯಾಮಾ | ಪೂರಿತ ಮನೋಕಾಮಾ 1 ದೀನೋದ್ದರಣಾ ಸದ್ಗುಣ ಧಾಮಾ | ಶ್ರೀನಿಧೀ ಸಾರ್ವಭೌಮಾ2 ಗುರುಮಹಿಪತಿ ಸುತ ಪ್ರಭು ಸರ್ವಾತ್ಮಾ | ಸುರಮುನಿ ವಿಶ್ರಾಮಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು