ಒಟ್ಟು 11460 ಕಡೆಗಳಲ್ಲಿ , 130 ದಾಸರು , 4806 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನಚರಣಾರವಿಂದವ ಪ ಪರಮ ಪುರುಷನಿನ್ನ ಚರಣ ಪಂಕಜವನ್ನು ನಿರುತ ನಂಬಿದೆ ಎನ್ನದುರಿತ ಪರ್ವತವನ್ನು ಸುರಪ ವಜ್ರದಿ ಗಿರಿಗಳನು ಖಂಡಿಸಿದವೋಲ್ ತರಿದು ರಕ್ಷಿಸೋ ಮುರಹರನೆ ಸ್ಮರಣೆಯಿತ್ತು 1 ಮಕ್ಕಳಾಟಿಕೆಯಿಂದ ಕೆಲವು ದಿವಸಸಂದು ಕಾಲ ಬರಲುಸ್ತ್ರೀಯರಿಗೆ ಕ ಣ್ಣಿಕ್ಕಿ ಮುದದಿ ದಿನಗಳೆದು ಮರೆತೆನೀಗಳು ಸೀತಾ ರಮಣ ಸ್ಮರಣೆಯಿತ್ತು 2 ವಿಧಿ ಬರೆದ ಲಿಖಿತವೆಲ್ಲ ಸಂತು ದರ್ಜನರೊಡನಾಟದೊಳಗೆ ಕಾಲ ವಿಂತು ಸವೆದು ಜರೆ ಮುಸುಕಿತೆನೆಗೆ ಲಕ್ಷ್ಮೀ ಕಾಂತ ನಿನ್ನಯ ನಾಮ ಸ್ಮರಣೆಯಂತ್ಯದೊಳಗಿತ್ತು 3
--------------
ಕವಿ ಪರಮದೇವದಾಸರು
ನಿನ್ನದೇ ಸಕಲ ಸೌಭಾಗ್ಯ ಸಾಧನವು ಹರಿಯೆ ಪ ನಿನ್ನದೆಂಬಭಿಮಾನ ಲವಲೇಶ ಸಲ್ಲದಯ್ಯಾ ಅ.ಪ. ನಿನ್ನ ಪ್ರೇರಣೆ ಹೊರತು ತೃಣವೊಂದು ಚಲಿಸದು ನಿನ್ನಿಚ್ಛೆಗನುಸಾರ ಸಕಲ ಜಗವು ನಿನ್ನ ಚಿತ್ತಕೆ ಬಾರದಿಹುದೇನು ನಡೆಯುವುದೋ ನಿನ್ನ ನಂಬಿದವರನು ನೀನಾಗೆ ಸಲಹುವೆಯೊ 1 ಸರ್ವತಂತ್ರ ಸ್ವತಂತ್ರ ಸರ್ವಾಂತರಾತ್ಮಕನೆ ಸರ್ವಜಗದಾಧಾರ ಸರ್ವೇಶನೆ ಅಘ ದೂರ ಸರ್ವಕಾಲದಲೆನ್ನ ಗರ್ವರಹಿತನ ಮಾಡೊ 2 ಸತ್ಯಚಿತ್ತನೆ ನಿನ್ನ ಚಿತ್ತವೆನ್ನಯ ಭಾಗ್ಯ ಕರ್ತೃತ್ವದಭಿಮಾನ ಕಳೆದು ಕಾಯೊ ಮತ್ತೇನು ಬೇಡುವೆನು ಪರತಂತ್ರ ನಾನಯ್ಯ ಮುಕ್ತಿದಾಯಕ ಶ್ರೀಶ ಶ್ರೀ ಕರಿಗಿರೀಶ 3
--------------
ವರಾವಾಣಿರಾಮರಾಯದಾಸರು
ನಿನ್ನನಗಲಿ ಪೋಗಲಾರೆವೋ ನೀರಜಾಕ್ಷ ನಿನ್ನ ಸೇರಿ ಸುಖಿಸ ಬಂದೆವೊ ಪ ಮನ್ನಿಸದೆ ಮಮತೆಯಿಂದ ಭಿನ್ನ ನುಡಿಗಳಾಡಿ ನಮಗೆ ಹಣ್ಣು ತೋರಿ ಕಾಳಕೂಟವನ್ನು ಕೊಡುವರೇನೊ ಕೃಷ್ಣ ಅ ಐದುವದಕೆ ಶಕ್ಯವಲ್ಲದ ಅಪ್ರಮೇಯ ಆದಿಪುರುಷ ಅಮರಸನ್ನುತ ಶ್ರೀದ ನಮ್ಮ ಕೈಯ ಬಿಡದೆ ಆದರಿಸಬೇಕು ಪರವ- ರಾದರೇನು ನಿನ್ನ ಶರಣರಾದ ಮೇಲೆ ಬಿಡುವುದುಂಟೆ1 ಬಂಧುವರ್ಗವನ್ನು ಬಿಡುವುದು ಸ್ತ್ರೀಯರಿಗೆ ನಿಂದ್ಯವೆಂದು ಶಾಸ್ತ್ರ ಪೇಳ್ವುದು ಎಂದೆಗೆಂದಿಗೆಮಗೆ ನೀನೆ ಬಂಧುವೆಂದು ಬಂದಿಹೆವೊ ಇಂದು ಹೋಗಿರೆಂಬೆ ನೀನು2 ಶಮದಮಾದಿ ಗುಣಗಳಿಂದಲಿ ಸಜ್ಜನರು ಮೂರ್ತಿ ಮನದಲಿ ಮಮತೆಯಿಂದ ಪೂಜಿಸುತ್ತ ಗಮಿಸುವರೊ ನಿನ್ನ ಪುರಕೆ ನಮಗೆ ಮಾತ್ರ ಪತಿಸುತಾದ್ಯರಮಿತ ಸುಖವ ಕೊಡುವರೇನೊ 3 ಮೋಕ್ಷ ಇಚ್ಛೆಯಿಂದ ನಿನ್ನನು ಭಜಿಪ ಜನರಾ ಪಕ್ಷ ವಹಿಸಿದಂತೆ ನಮ್ಮನು ರಕ್ಷಿಸದೆ ಬಿಡುವರೇ ಕಟಾಕ್ಷದಿಂದ ಈಕ್ಷಿಸದೆ ಲಕ್ಷ್ಮೀದೇವಿ ನಿಮಗೆ ಬಹಳಾಪೇಕ್ಷೆಯಿಂದ ಮೋಹಿಸಿದಳೆ 4 ಅನಘ ನಿನ್ನ ನೋಡಿ ಮೋಹಿಸಿ ಅಂತರಾತ್ಮ ತನುವು ಮನವು ನಿನಗೆ ಅರ್ಪಿಸಿ ಜನನ ಮರಣದಿಂದ ಜನರು ದಣಿವರೇನೂ ಕಾಂತ ನಮ್ಮ ಮನಸಿನಂತೆ ಒಲಿದು ಸಲಹೊ ವನಜನಾಭ ವಿಜಯವಿಠ್ಠಲ 5
--------------
ವಿಜಯದಾಸ
ನಿನ್ನನಲ್ಲದೆ ಯಾರ ಸನ್ನುತಿಸಿ ಫಲವೇನೋ ಪನ್ನಗಾದ್ರಿನಿವಾಸ ಶ್ರೀವೆಂಕಟೇಶ ಪ ಮನ್ನಣೆಯು ಬೇಡಯ್ಯ ಎನ್ನ ತಪ್ಪುಗಳನ್ನು ಮನ್ನಿಸೆಂದೊರಲುವೆನು ಶ್ರೀವೆಂಕಟೇಶ ಅ.ಪ ತಪ್ಪುಹಾದಿಯ ಹಿಡಿದು ಬೆಪ್ಪನಾಗಿರುವೆನ್ನ ಒಪ್ಪಿ ಪರಿಪಾಲಿಸುವ ಅಪ್ಪ ನೀನೋ ತಪ್ಪೊಪ್ಪುಗಳನೆಲ್ಲಾ ಒಪ್ಪಿಸಿದೆ ನಿನಗೆ ತಿಮ್ಮಪ್ಪ ಮಾಂಗಿರಿವಾಸ ಕೈಹಿಡಿದು ಕಾಯೋ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಿನ್ನನೀ ತಿಳಿದು ನೋಡು | ಯನ್ನ ಮನವೇ ಪ ನಿನ್ನ ನೀ ತಿಳಿದು ನೋಡು | ಎನ್ನ ಹಿತವು ದಾವುದೆಂದು | ಮುನ್ನಿನವ ಗುಣ ಜರಿದು | ಇನ್ನಾರೆ ನೀ ಮನವೇ 1 ಒಳ್ಳೆವರಾ ಕಂಡು ಬಾಗಿ | ಬಡಿವಾರ ನೀಗಿ | ಸೊಲ್ಲವ ನಾಲಿಸು ಅವರಾ | ನಿಲ್ಲದೇ ನೀ ಮನವೇ 2 ತಂದೆ ಮಹಿಪತಿ ದಯಾ | ದಿಂದ ಪಡೆಯೋ ವಿಜಯಾ | ಮಂದ ನಾಗದಿರು ಬಂದಾ | ಛಂದ ವಿಂದು ಮನವೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿನ್ನನು ನಂಬಿದೆ ಶಾರದೆ ನೀನು ಪ್ರಸನ್ನಳಾಗಬಾರದೆ ಪನಿನ್ನನು ಬಿಟ್ಟg ಎನ್ನಯ ದುಃಖಗಳನ್ನು ಕಳೆಯುವರಿನ್ನಾರಿರುವರು ಅ.ಪಹೇಳಿಕೊಳ್ಳುವೆ ತಾಯೇ ದುಃಖವಕೇಳು ಮಹಾಮಾಯೆಹಾಳು 'ಷಯಗಳ ಜಾಲದಿ ಸಿಕ್ಕಿಹಗೋಳನು ನಾನೀಗ ತಾಳಲಾರೆನು ಹಾಯ್ 1ಆಟದ ವಸ್ತುಗಳ ಕೊಟ್ಟು ಚೆಲ್ಲಾಟವಾಡುವೆಯಾಸಾಟಿ ಇಲ್ಲದೀಆಟವ ಸಾಕು ಸಾಕುಕಾಟವಕಳೆನೀಂ ಭೇಟಿಯ ಕೊಟ್ಟು 2ಹರಿಹರಿಯೆನ್ನದೆ ಈ ನಾಲಿಗೆಯನರಗಳು ಸೊಕ್ಕಿಹವುನಿರುತವು ಹರಿನಾಮ ಭರವೆಡೆಬಿಡದಂತೆಹರಸಿ ಕಾಯೆ ಚಿಚ್ಛರೀರದ ತಾಯೆ3
--------------
ಹೊಸಕೆರೆ ಚಿದಂಬರಯ್ಯನವರು
ನಿನ್ನನೆ ತಿಳಿದು ನೀ ನೋಡು ಕಂಡ್ಯಾನೀ ನನ್ನ ತಿಳಿಯೆ ನೀ ಶಿವನು ಕಂಡ್ಯಾ ಪ ಆದಿ ಮಧ್ಯಂತರ ಅನಾದಿ ಕಂಡ್ಯಾನಾದ ಬಿಂದು ಕಳಾತೀತ ಕಂಡ್ಯಾಭೇದಾಭೇದಕೆ ಅಭೇದ ಕಂಡ್ಯಾ ನೀವಾದ ಸುವಾದ ವರ್ಜಿತನು ಕಂಡ್ಯ 1 ಮೂರು ಗುಣಕೆ ನೀ ಮೂಲ ಕಂಡ್ಯನೀನಾರು ಅರಿಗಳಿಗತ್ತತ್ತ ಕಂಡ್ಯತೋರುವುದಕೆ ನೀ ತೋರ್ಕೆ ಕಂಡ್ಯನೀ ಮಾರನಟ್ಟುಳಿಗೆ ಮಹೇಶ ಕಂಡ್ಯ 2 ಮಂಗಳ ತರಕೆ ಮಂಗಳನು ಕಂಡ್ಯ ನೀಮಂಗಳ ಮೂರುತಿ ಮಹಾತ್ಮ ಕಂಡ್ಯಮಂಗಳ ವಸ್ತುಮಾಪತಿಯು ಕಂಡ್ಯ ನೀಮಂಗಳನಿಗೆ ಮಾಯೆ ಮಾತು ಕಂಡ್ಯ 3 ಸಿಂಧು ಕಂಡ್ಯ4 ಪಾದ ಸೇರು ಕಂಡ್ಯಗುರು ಕಟಾಕ್ಷವ ನೀನು ಪಡೆಯೋ ಕಂಡ್ಯಗುರುವೆಂದು ಎಲ್ಲವನರಿಯೋ ಕಂಡ್ಯಗುರು ಚಿದಾನಂದ ನೀನೆನ್ನು ಕಂಡ್ಯಾ 5
--------------
ಚಿದಾನಂದ ಅವಧೂತರು
ನಿನ್ನನೆ ನಂಬಿದೆ ಅನ್ಯರೊಬ್ಬರ ಕಾಣೆ | ಮಧ್ವರಾಯಾ ಪ ನಿಮ್ಮ ಸಿದ್ಧಾಂತದಿ ಮನವ ನಿಲ್ಲಿಸಯ್ಯ | ಮಧ್ವರಾಯಾ ಅಪ ಪತಿತ ಸಂಕರ ಪುಟ್ಟಿ ಮತವೆಲ್ಲ ಕೆಡಿಸಲು || ಮಧ್ವರಾಯಾ || ಗತಿಯ ಕಲ್ಪಿಸಿ ಸಜ್ಜನರ ತತಿಗಳ ಕಾಯಿ || ಮಧ್ವರಾಯಾ 1 ತಂದೆ ತಾಯಿ ಬಂಧು ಬಳಗವೆಲ್ಲವು ನೀನೆ | ಮಧ್ವರಾಯಾ | ಎಂದೆಂದಿಗು ನಿಮ್ಮ ಪೋದಿರುವಂತೆ ಮಾಡೈ | ಮಧ್ವರಾಯಾ 2 ಬಾಲಕೃಷ್ಣನ ಸೇವೆ ಮೇಲಾಗಿ ಮಾಡುವ | ಮಧ್ವರಾಯಾ | ಮೂಲ ಮೂವತ್ತೇಳು ಮೇಲು ಗ್ರಂಥಗಳಿತ್ತೆ | ಮಧ್ವರಾಯಾ 3 ಶ್ರೀನಿಧಿ ಕೃಷ್ಣನೆ ಜಗಕೆಲ್ಲ ದೊರೆಯೆಂಬ | ಮಧ್ವರಾಯಾ | ಹೆಸರು ಪೊತ್ತೆ | ಮಧ್ವರಾಯಾ 4 ಅಜಪದಕೆ ಬಂದು ಅಖಿಲರ ಪಾಲಿಪ | ಮಧ್ವರಾಯಾ |ವಿಜಯಸಾರಥಿ ಕೃಷ್ಣ ವಿಜಯವಿಠ್ಠಲಪ್ರಿಯ | ಮಧ್ವರಾಯಾ 5
--------------
ವಿಜಯದಾಸ
ನಿನ್ನನೆ ನಂಬಿದೆ ನೀರಜನಯನ ನಿನ್ನ್ಹೊರತು ಎನಗನ್ಯ ಗತಿಯಿಲ್ಲ ಹರಿಯೆ ಪ ನಿನ್ನ ಪಾದವೆ ಎನಗೆ ಮಾತಾಪಿತೃಯೆಂಬೆ ನಿನ್ನ ಪಾದವೆ ಎನಗೆ ಬಂಧುಬಳಗವೆಂಬೆ ನಿನ್ನ ಪಾದವೆ ಎನಗೆ ಸಕಲಸಂಪದವೆಂಬೆ ನಿನ್ನ ಪಾದವೆ ಎನಗೆ ನಿಖಿಲಬಲವೆಂಬೆ 1 ನಿನ್ನ ಕರುಣವೆ ಎನಗೆ ಭವತರಿವ ಶಸ್ತ್ರೆಂಬೆ ನಿನ್ನ ಕರುಣವೆ ಎನಗೆ ಸ್ಥಿರಸುಖವುಯೆಂಬೆ ನಿನ್ನ ಕರುಣವೆ ಎನಗೆ ರಕ್ಷಿಸುವ ದೊರೆಯೆಂಬೆ ನಿನ್ನ ಕರುಣವೆ ಎನಗೆ ಪರಮ ತೃಪ್ತ್ಯೆಂಬೆ 2 ನಿನ್ನ ನಾಮವೆ ಎನಗೆ ಅಮೃತವೆಂಬೆ ನಿನ್ನ ನಾಮವೆ ಎನ್ನ ಭವರೋಗಕ್ಕ್ವೈದ್ಯೆಂಬೆ ನಿನ್ನನಾಮ ಸ್ಥಿರಕೊಟ್ಟು ಪ್ರೇಮದಿಂ ಸಲಹು ಶ್ರೀರಾಮ ನೀನೆ ಎನಗೆ ಪರದೈವಯೆಂಬೆ 3
--------------
ರಾಮದಾಸರು
ನಿನ್ನನೆ ನಮೊ ಎಂಬೆವ ಇಂದಿರಾ ದೇವಿನಿನ್ನನೆ ನಮೊ ಎಂಬೆವ ಬಿನ್ನಹ ಲಾಲಿಸುಪನ್ನಗ ಶಯನನ ಘನ್ನ ಪಟ್ಟದ ರಾಣಿ ಪ. ಇಂದಿರೆ ನಿನ್ನ ಕಾಲಿಗೆ ವಂದಿಸಿ ಜಾಲಗಾರುತಿಯರ ಸೋಲಿಸಬೇಕೆಂದು 1 ಇಂದಿರೆ ನಿನ್ನ ಹೆಜ್ಜೆ ಹೆಜ್ಜೆಗೆ ನಮಿಸಿಅರ್ಜುನನ ಮಡದಿಯರ ಲಜ್ಜೆಗೈಸೆವೆಂದು2 ನಿತ್ಯ ಮುಕ್ತಳೆ, ನಿನ್ನ ಅತ್ಯಂತ ಬಲಗೊಂಬೆ ಉನ್ಮತ್ತೆಯರ ಗರವು ಒತ್ತಿಬಂದೆವೆಂದು 3 ವ್ಯಾಲಾಶಯನನ ರಾಣಿ ಬಹಳೆವಂದಿಸಿಗೈಯ್ಯಾಳಿಯರ ಮುಯ್ಯಾ ನಿವಾಳಿಸಬೇಕೆಂದು 4 ಪ್ರಾಣೇಶ ನರಸಿಯ ಕಾಣುತ ವಂದಿಸಿಜಾಣಿಯರ ಮನೆಗ್ಹೋಗಿ ಆಣಿ ಬಿಡಿಸೇವೆಂದು5 ಜರದ ಕುಪ್ಪುಸಸೀರೆ ಸರಿಗೆ ದೋರೆಯನಿಟ್ಟುಕರಗಳ ಮುಗಿದೆವ ವರಗಳ ಪಾಲಿಸು6 ಥೋರ ಮುತ್ತಿನ ದಿವ್ಯಹಾರ ಭಾರವನಿಟ್ಟುನಾರಿಯರ ಗೆಲಿಸುವ ಭಾರವ ರಾಮೇಶಗೆ ವಹಿಸೆಂದು7
--------------
ಗಲಗಲಿಅವ್ವನವರು
ನಿನ್ನನೆ ನೀ ಕಾಣಣ್ಣನಿನ್ನ ಕಾಣುವುದರಿಯಣ್ಣನಿನ್ನಯ ದೇಹದೊಳಣ್ಣನಿನಗೆ ಹೇಳುವೆನಣ್ಣ ಪ ಕಣ್ಣನೆ ಮುಚ್ಚಣ್ಣ ಕಪ್ಪನು ಲಕ್ಷಿಸೋ ಅಣ್ಣಹೊನ್ನು ಕಳೆಗಳಣ್ಣ ಹುಟ್ಟುವುದು ಮುಂದಣ 1 ಕಪ್ಪದು ಅಡಗಲಿ ಅಣ್ಣ ಕಪ್ಪಿನ ಸ್ಥಳ ಹಿಡಿಯಣ್ಣಕುಪ್ಪಳಿಸುವುದು ಬೆಳಗಣ್ಣ ಕಾಡು ಕಿಚ್ಚಿನಂತಣ್ಣ 2 ದೃಷ್ಟಿಯಲಿ ದ್ರಷ್ಟಿವಣ್ಣ ದೃಷ್ಟಿಯ ನೆಲೆಯಾಗಲಣ್ಣಶಿಷ್ಟ ಚಿದಾನಂದನಣ್ಣ ಸಾಕ್ಷಾತ್ ನೀನಹೆಯಣ್ಣ3
--------------
ಚಿದಾನಂದ ಅವಧೂತರು
ನಿನ್ನನೇ ನಂಬಿದೆನಯ್ಯಾ ಪ ನಿನ್ನನೇ ನಂಬಿದೆನಯ್ಯಾ | ಎನ್ನ ಬಿಡದಿರು ಕೈಯ್ಯಾ | ಬೀರೆಲೋದಯಾ 1 ತರಳ ತಾಯಿಯಲ್ಲದೆ | ನೆರೆಹೊರೆಯ ಬಲ್ಲದೇ | ಮರಳು ಮಂದನೆನ್ನದೆ | ಅರಹು ಕೂಡಿಸೋ ತಂದೆ 2 ಹೋದೆಣಿಕೆಯ ಬಿಟ್ಟು | ಪಾದಸ್ಮರಣೆ ಕೊಟ್ಟು | ಸಾಧುಸಂಗದಲಿಟ್ಟು | ಬೋಧಾಮೃತವನಿಟ್ಟು 3 ಜ್ಞಾನ ಭಕುತಿ ಇಲ್ಲಾ ಮೌನ ಸಾಧನವಿಲ್ಲಾ | ಏನೇನು ಸಾಧನವಿಲ್ಲಾ | ನೀನು ಪೇಕ್ಷಿಸುದಲ್ಲಾ4 ಗುರು ಮಹಿಪತಿ ಸ್ವಾಮೀ | ಶರಣರ ರಕ್ಷಕ ನೇಮಿ | ಸುರಮುನಿಜನ ಪ್ರೇಮಿ | ಹೊರಿಯೋ ಸಾಸಿರ ನಾಮಿ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿನ್ನನೇ ನಂಬಿಹೆನೋ ಶ್ರೀನಿವಾಸಾಪನ್ನಗ ನಗಧೀಶ ಉದಯಾದ್ರಿ ವಾಸಾ ಪ ನಿತ್ಯ ನೂತನ ಮಹಿಮ ಎತ್ತ ನೋಡಿದರತ್ತ ಮುಕ್ತ ಜನ ಸೇವ್ಯಾ |ಕೀರ್ತಿ ಭವ್ಯ ವಿಶಾಲ ವರ್ತಿಪುದು ಸದಾಕಾಲಆರ್ತವರಿಗಪವರ್ಗ ಮೋಕ್ಷಮಾರ್ಗಾ 1 ಸೇವ್ಯ ಸೇವಕ ಭಾವ ದಿವ್ಯ ಸುಜ್ಞಾನವನುಪ್ರೀತಿಯಿಂದೆನಗಿತ್ತು ಕಾಯಬೇಕೋ |ಪ್ರೇರ್ಯ ಪ್ರೇರಕ ನೀನೇ ಕಾರ್ಯ ಕಾರಣ ಕರ್ತೃಭಾರ್ಯರಿಂದೊಡಗೂಡಿ ವೀರ್ಯಪ್ರದನಾಗೋ 2 ಸೃಷ್ಠಿ ಸ್ಥತಿ ಸಂಹಾರ ಅಷ್ಟಕರ್ತೃಸ್ವಾಮಿನಷ್ಟ ಗೈಸಜ್ಞಾನ | ಇಷ್ಟ ಮೂರ್ತೇದಿಟ್ಟ ಗುರು ಗೋವಿಂದ | ವಿಠಲನೆ ಮದ್ ಹೃದಯಅಷ್ಟ ಕಮಲದಿ ತೋರೋ | ಶಿಷ್ಟಜನಪಾಲಾ 3
--------------
ಗುರುಗೋವಿಂದವಿಠಲರು
ನಿನ್ನನೇನು ಮರೆಹೊಕ್ಕೆನು ಪ ನಿನ್ನನೇ ನಾ ಬೇಡ್ವೆನುಅ.ಪ ದುರಿತ ಶರಧಿ ನಿತ್ಯಾನಂದನೆ 1 ಕೃತ್ತಿಕೆಯೊಳುದಿಸಿದನೆ ಪರಮ ಪ-ವಿತ್ರನೇ ಸುರವಂದ್ಯನೆ ಉತ್ತಮೋತ್ತಮ ದೇವಸೇನೆಯ ಚಿತ್ತಹಾರಿಯೆ ಶರಜನೇ 2 ಮಾರ ತ್ರೈಜಗದೊಡೆಯನೆ | ಘೋರ ಶಾಪದಿ ಗಾರುಗೆಟ್ಟಿಹ ನಾರಿರನ್ನೆಯ ಕಾಯ್ದನೆ 3 ಮುಷ್ಟಿಕಾರಿಯ ಮಿತ್ರನೆ ಪರ- ಮೇಷ್ಟಿ ವಂದ್ಯನೆ ಪೂಜ್ಯನೆ | ದುಷ್ಟ ಪದ್ಮನ ಕುಟ್ಟಿ ಸುರಪತಿ ಇಷ್ಟವನು ಕರುಣಿಸಿದನೆ 4 ಭಾವಜಾರಿಯ ಪುತ್ರನೆ ಸದಾ ಭಾವಜನ ಪ್ರತಿರೂಪನೆ | ಭಾವ ಭಕ್ತಿಯೊಳ್ ಭಜಿಪ ದಾಸರ ಕಾವ ಪಾವಂಜೇಶನೆ 5
--------------
ಬೆಳ್ಳೆ ದಾಸಪ್ಪಯ್ಯ
ನಿನ್ನನ್ನೆ ನಂಬಿದೆನೊ ಪನ್ನಂಗಶಾಯಿ ಎನ್ನ ನೀ ಕಾಯಬೇಕೊ ಪ ದೀನದಯಾಳು ದೇವ ನೀನೆ ಕಾಯದೆ ಬಿಟ್ಟ ರಿನ್ನಾರು ಕಾಯ್ವರು ಎನ್ನನೀ ಜಗದೊಳುಅ.ಪ ಉನ್ನತ ಹೃದಯನೆ ಮುನ್ನ ನಾ ಮಾಡಿದ ಗನ್ನಗತಕತನವನ್ನು ದಯದಿ ಕ್ಷಮಿಸು ಇನ್ನೀಭವದಿ ಎನಗೆ ನಿನ್ನಯ ಸನ್ನುತಿ ಯನ್ನು ಪಾಲಿಸಿ ಸತತ ಬನ್ನಬಡಿಸದೆ ಕಾಯೊ 1 ಶರಣಾಗತರಕ್ಷಣಾನಾಥಜನಬಂಧುವೇ ಕರುಣದಿ ನಿಮ್ಮಂಥ ದೇವರನುಕಾಣೆ ದುರಿತದೂರನೆ ಎನ್ನ ದುರಿತದುರ್ಗಣವನ್ನು ಪರಿಹರಿಸಿ ಸಲಹಯ್ಯ ಶರಣುಜನರ ಪ್ರೀಯ 2 ಕೈಯ ಪಿಡಿದು ಪೊರೆಯೊ ಬಿಡದೆನಮ್ಮಯ್ಯ ಜಗ ದಯ್ಯ ಶ್ರೀರಾಮ ವಿಜಯವಿಠಲರಾಯ ಕೈಯ ಮುಗಿದು ಮರೆಹೊಕ್ಕು ಬೇಡುವೆಯ್ಯ ಜೀಯ ದಯದಿ ಕಾಯೊ ಪಂಢರಿರಾಯ 3
--------------
ರಾಮದಾಸರು