ಸೀಸಪದ್ಯ
ಧರಣಿ ಮೊರೆಯನು ಕೇಳಿ ಸರಸಿಜಾಸನ ಸಕಲ
ಸುರರ ಸಹಿತದಿ ಶರಧಿಶಯನಗÀರುಹೆ
ವಸುದೇವ ದೇವಕಿ ಸುತನೆನಸಿ ಅಜನಯ್ಯ
ವಸುಮತಿಯಲವತರಿಸಿ ಲೀಲೆಯಿಂದ
ದುರುಳ ದೈತ್ಯರ ಸದೆದು
ಪರಿಪಾಲಿಸಿದ ಸಾಧು ಸುಜನರನ್ನು
ನಿಜಭಕ್ತ ಪಾಂಡವರ ನೆಂಟನೆಂದೆನಿಸಿ ಭೂ
ಭುಜ ಸುಯೋಧನ ಮುಖ್ಯ ದುರುಳರನ್ನು
ಸದೆಬಡಿಸಿದಾ ಬಳಿಕ ಮದದಿ ಕೊಬ್ಬಿದ
ಯದು ಬಳಗವನು ವಿಪ್ರಶಾಪದಿಂದ ಕೊಲಿಸಿ
ಪದುಮಸಂಭವಜನಕ ಕರಿಗಿರೀಶನು ತನ್ನ
ಸದನಕ್ಕೈದಿದ ಸರ್ವವ್ಯಾಪ್ತ ಸರ್ವೇಶ