ಒಟ್ಟು 1104 ಕಡೆಗಳಲ್ಲಿ , 106 ದಾಸರು , 899 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಮಿತಾರ್ಥದಾಯಿ ಸೀತಾರಾಮರಾಜ ರಾಜ ಸ್ವಾಮಿಯೆನ್ನ ಕಾಯೊ ಖಳನಿರ್ನಾಮ ಭಕ್ತಕಲ್ಪಭೂಜ ಪ. ಸಾಕೇತಪುರದಿ ವಾಸಪ್ರಾಕೃತ ಲೀಲಾ ವಿಲಾಸ ಸ್ವೀಕೃತ ರಕ್ಷಾವಿಭೂಷ ಯಾಕೆನ್ನೊಳುಪೇಕ್ಷೆ ಶ್ರೀಶಾ ಬೀಕೃತಿಗಳ ದೂರೀಕರಿಸುವ ಕರು ಣಾಕರ ಭಕ್ತ ಪರಾಕ ಪರಾತ್ಪರ 1 ಪಾತಕಿ ಜನೋದ್ಧಾರೈಕ ಹೇತುವ ತೋರುವೆನೆಂದು ಸೇತು ನಿರ್ಮಿಸಿದ ರಘುನಾಥ ನೀನೆ ದೀನ ಬಂಧು ವಾತಜಾತನಿಗೊಲಿದು ಸಂಪ್ರೀತಿಯೊಳಂಬುಜ ಜಾತನಪದವಿಯನಾತಗೆ ಸಲಿಸಿದ 2 ಪಾಮರ ಪಾವನದಿವ್ಯ ನಾಮದೇವ ಸಾರ್ವಭೌಮ ಸೀಮಾಹಿತಸದ್ಗುಣೈಕ ಧಾಮಾ ಸೀತಾಪೂರ್ಣಕಾಮಾ ತಾಮರಸಾಸನವಂದ್ಯ ಶೇಷಗಿರಿ ಧಾಮ ದಯಾಂಬುಧಿ ದಶರಥ ರಾಮಾ 3
--------------
ತುಪಾಕಿ ವೆಂಕಟರಮಣಾಚಾರ್ಯ
ಕಾಯವಿದು ನಿತ್ಯವೆಂದು ನೆಚ್ಚಬೇಡ ಮಾಯಾಕಾರ್ಯನಾಗಿ ಮೆರೆವುದಿದು ತಿಳಿದುನೋಡಾಕಾಯವಳಿವ ಮುನ್ನ ಹರಿಯ ಕೃಪೆಯ ಜೋಡ ತೋಡುನಾಯಬಾಯತುತ್ತ ನಂಬಿ ಬೆರೆಯ ಬೇಡ ಪಮಾತಾಪಿತೃರೇತಸ್ಸಿಂದ ಪತನವಾಗಿ ಪಂಚಭೂತಕಾರ್ಯದಿಂದ ಸ್ಥೂಲಾಕಾರವಾಗಿರೇತಸ್ಸು ರಕ್ತಗಳಾರು ಕೋಶವಾಗಿ ಕರ್ಮಜಾತಕಾಯ ಹೀಗೆ ತೋರುತಿಪ್ಪುದಾಗಿ 1ಹುಟ್ಟಿ ಬೆಳೆದು ನಲಿದು ಮುಪ್ಪಿನಿಂದ ಕ್ಷೈಸಿ ಕಡೆಗೆನಷ್ಡವಾಗಿ ಹೋಗಿ ಮಣ್ಣಿನೊಳಗೆ ಬೆರಸಿಇಷ್ಟೂ ಪರಿಯೊಳಾರು ವಿಕಾರವ ತೋರಿಸಿ ವಂದಿಷ್ಟೂ ಫಲವಿಲ್ಲದಂತೆ ುದಕೆ ಭ್ರಮಿಸಿ 2ಕಾಲಕರ್ಮ ಪಂಚಭೂತ ಮಿಳಿತವಾಗಿ ಇದಕೆಮೂಲವಾದ ಕರ್ಮವೆ ಪ್ರಧಾನವಾಗಿಢಾಳಿಸುವಾತ್ಮನ ತೇಜಾಧಾರವಾಗಿ ಕರ್ಮತೇಲಲಾಗಿ ದೀಪದಂತೆ ಪೋಪುದಾಗಿ 3ಬತ್ತಿಯನ್ನು ಎಣ್ಣೆಮುಗಿವ ಸಮಯಕಾಗಿ ಎಣ್ಣೆಯೂಮತ್ತೆ ತಂದು ತುಂಬೆ ದೀಪ ಪೋಗದಾಗಿಇತ್ತೆರದ ಕರ್ಮದಿಂದ ಚಕ್ರವಾಗಿ ಜನ್ಮಮೃತ್ಯುಗಳೀ ದೇಹಕ್ಕವಧಿುಲ್ಲವಾಗಿ 4ತೈಲಮಿಶ್ರವರ್ತಿಯಗ್ನಿ ಸಮ್ಮೇಳದಿಂದಾ ದೀಪಬಾಳಿಬೆಳಗುವುದು ತೈಲದಾಧಾರದಿಂದಾತೈಲಮುಗಿಯೆ ದೀಪ ಕೆಟ್ಟು ಹೋಹ ಛಂದದಂತೆಕೇಳು ದೇಹವೀಪರಿಯೊಳಿಹುದರಿಂದಾ 5ಹುಟ್ಟಿದಲ್ಲಿ ಸೂತಕವು ಹೊಂದಿದಲ್ಲಿ ಸೂತಕವುಮುಟ್ಟಿವಸ್ತುಗಳುಚ್ಚಿಷ್ಟಂಗಳಹವೂನಟ್ಟನಡುವೆ ಬಂದದೆಂದು ಶಿಷ್ಟರಿದ ಮನ್ನಿಸರುನಷ್ಟವಾಗಿ ಕಡೆಗೆ ತಾನು ಹೋಹ ದೇಹವೂ 6ತಾನು ಬಂದ ಬಗೆಯು ತನಗೆ ತಿಳಿಯದಿದ್ದರೂ ನಿನ್ನಸೂನು ಬಂದ ಬಗೆಯ ನೋಡಿ ತಿಳಿದುಕೊಂಡಾರುಹೀನನಾದ ಕಾಯವಭಿಮಾನಿಸದಿರು ಮುಂದೆಶ್ರೀನಾಥನ ಪದವ ಭಜಿಸಿ ಸುಖದಿಂದಿರುತಿರು 7ಮನವೆ ಮಿಥ್ಯದೇಹದಭಿಮಾನವೇತಕೆ ಬಹುಜನುಮ ಜನುಮದಲ್ಲಿ ದುಃಖದಗೆ ನೂಕೆಕೊನೆಗೂ ಹೀಗೆ ಬಂಧವನ್ನು ಕೊಡುವದಕ್ಕೆ ಮಚ್ಚಿಜಿನುಗುವಿರಿಕೆಯೇನು ಇನ್ನೂ ಬಿಡದೆ ಬಯಕೆ 8ಘೋರರೂಪಾಪಾರಸಂಸಾರಾಂಬುಧಿಯನ್ನೂಮೀರಲೇರು ವೆಂಕಟೇಶನಾಮನಾವೆಯನ್ನುಧೀರಗುರು ವಾಸುದೇವರಂಘ್ರಿಯನ್ನು ಬೇಗಸಾರುವ ವಿವೇಕತನವಂದು ಚೆನ್ನೂ 9ಕಂ|| ಜೀವನು ವಿರತಿಯ ಸಾಧಿಪಭಾವಧಿ ಮನದೊಡನೆ ಕಾಯವ ನೆಚ್ಚದಿರೆನ್ನುತಕೈವಲ್ಯದ ಪಥವ ಪೇಳಲುಜೀವನೊಳಾಡಿದುದು ಕಾಯವಚ್ಚರಿಯೆನ್ನಲೂ
--------------
ತಿಮ್ಮಪ್ಪದಾಸರು
ಕಾಯೊ ಕರುಣಾಳು ಅಂಬುದಛಾಯ ಬಿನ್ನಹ ಕೇಳು ತಾಯೊಳು ಶಿಶು ಗುಡಪಾಯಸಗೋಸುಗ ಬಾಯತೋರ್ಪುದು ನ್ಯಾಯವೇ ಪೇಳು ಪ. ಭೂತಿದೇವಿಯ ರಮಣಾ ನೃಪ ಸಂಪ್ರೀತಿ ಪೂರ್ತಿ ಕರಣಾ ಚಾತೂರ್ಯ ಕರಣಾ ದಿವಿಜಾರಾತಿ ಶಿರೋಹರಣಾ ಮಾತು ಮಾತಿಗೆ ವಿಖ್ಯಾತಿಗೊಳಿಪ ತೆರ ನೀ ತಿಳಿಯೇಯ ಖಗಕೇತನ ಶುಭದಾ 1 ಮಧುಮಯ ಮೃದುಭಾಷಾ ಮಧುಹರ ಮಧುಕರ ಮುಖಭೂಷಾ ಅಧರೀಕೃತ ತೋಷಾ ದಾನವ ಮದಜಲನಿಧಿಶೋಷಾ ಮಧುರಾ ಪಟ್ಟಣ- ಕಧಿಪನೆಂದೆಸೆವ ಬುಧರಿಪು ಕಂಸನ ಸದೆದ ಪರೇಶಾ 2 ಶ್ರೀಪತಿ ಸರ್ವೇಶಾ ದುರಿತಮಹಾಪದ್ಗಣನಾಶಾ ತಾಪೋನ್ಮಥನೇಶಾ ಪಾಲಿಸು ಭೂಪ ಶೇಷಗಿರೀಶಾ ನೂಪುರ ಕಿಂಕಿಣಿಕ್ವಣಿತ ಚರಣ ಲ- ಕ್ಷ್ಮೀ ಪರಿರಂಭಿತ ಪರಮಾನಂದದ 3
--------------
ತುಪಾಕಿ ವೆಂಕಟರಮಣಾಚಾರ್ಯ
ಕಾಯೋ ಕರುಣಾನಿಧೆ | ಶ್ರೀ ಹರಿ | ಖಗವರ ಗಮನಾ ಪ ಘೋರ ಸಂಸಾರದ ತಾಪದಿ ನೊಂದೆ | ಭವ ಭಯ ಅಘಕುಲ ಶಮನಾ 1 ಜ್ಞಾನ ಧ್ಯಾನದ ನಿಜ ಸಾಧನವರಿಯೆ | ನೀನೆ ಗತಿಯೆನುತ ಮಾಡುವೆ ನಮನಾ2 ಗುರು ಮಹೀಪತಿ ಪ್ರಭು ಅನಾಥ ಬಂಧು | ಚರಣದ ಭಜನೆಯ ಲಿರಿಸೆನ್ನ ಮನ |3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಾರಣವು ತಿಳಿಯದೊ ಕರುಣ ನಿಧಿಯೇ ಪ ಪರಿ ಮೌನವಾಗಿಪ್ಪ ಅ.ಪ. ಅನ್ಯರಿಗೆ ತಲೆವಾಗಿ ಬಾಯ್ತೆರೆದು ಬೇಡುವಂಥಾ ಸಮಯ ಬಂದೊದಗಿರಲಾಗಿ ನೋಡುವುದುಚಿತವೇ ಅನಿಮಿತ್ತ ಬಂಧೊಈ ವಿಧದ ದುಷ್ಕರ್ಮ ತಂದೊದಗಿಸುವುದಕೆ ಅನ್ಯ ಜೀವರೇ ಕಾಯಾ ಹೇ ಜೀಯಾ 1 ತಾಪ ಸಾರ ಉದ್ದಂಡ ಪಾಂಡವ ಪ್ರೀಯಾ ಹೇ ಜೀಯಾ 2 ಭಂಗ ಪಾದ ಅದುಮದ ಭೃಂಗನೆನಿಸುವೊ ಧವಳ ಗಂಗೆಯ ದಾಸಾ ತಂದೆವರದಗೋಪಾಲವಿಠಲನ ದಾಸಾ3
--------------
ತಂದೆವರದಗೋಪಾಲವಿಠಲರು
ಕಾಲ ಶಾಪದಿಂದಡಗಿತೈ ಧರ್ಮ ಪರಿವಾರ ಪ ತಾಪಪಡಿಸುವ ಪರಿಯ ಶ್ರೀಪತಿಯೆ ಬಲ್ಲ ಅ.ಪ ಇಷ್ಟ ಸುಖ ಪಡೆಯುವರ ಪುಣ್ಯ ಫಲವು || ಇಷ್ಟಿದರನರಿಯದವ ನರನೊ ಪಾಮರನೊ 1 ಸ್ಥಿರಚರ ಪ್ರಾಣಿಯೊಳು ಪರಿಕಿಸಲು ಮೇಲಾದ | ನರಜನ್ಮದೊಳು ಬಂದು ಸುಖದುಃಖದ || ಚಾರದಿಂ ನಡೆಯುವವನವ ನರೋತ್ತಮನು 2 ಪುಣ್ಯಫಲದೊಳು ಸದಾನಂದ ಸುಖ ಪಡೆವ 3
--------------
ಸದಾನಂದರು
ಕಾವಿಯ ಕಲ್ಲಿನ ತಿಲುಕವಿಡಕ್ಕ ಕಾವಿಯ ಕಲ್ಲಿನ ತಿಲುಕ ಪ. ಕಾವಿಯ ಕಲ್ಲಿನ ತಿಲುಕವನಿಟ್ಟರೆ ಕಾಯುವ ಶ್ರೀಹರಿ ಸತತ ಕಾಣಕ್ಕ ಅ.ಪ. ಕಾವಿಯ ತಿಲುಕವು ಕಲುಷವ ಕಳೆವುದು ಕಾವಿಯ ತಿಲುಕವು ಕಲಿಬಾಧೆ ಕಳೆವುದು ಕಾವಿಯ ತಿಲುಕವು ಕೋಪತಾಪಗಳನ್ನು ಜೀವನ ಬಳಿಯಲ್ಲಿ ಬರಲೀಸದಕ್ಕ 1 ಕಾವಿಯ ತಿಲುಕವು ಕವಿತೆಯ ಮಾಳ್ಪರಿಗೆ ಭಾವಶುದ್ಧಿಯನಿತ್ತು ಭಕ್ತಿ ಹೆಚ್ಚಿಸುವುದು ಕಾವಿಯ ಮಹಿಮೆಯ ಪಾವನ ಗುರು ಮಧ್ವರಾಯರೆ ಬಲ್ಲರಕ್ಕ 2 ಕಾವಿಯ ತಿಲುಕವು ಗುರುಭಕ್ತಿ ಕೊಡುವುದು ಕಾವಿಯ ತಿಲುಕವು ವೈವಿಧ್ಯ ಕಳೆವುದು ಕಾವಿಯ ತಿಲುಕವು ಕಳೆಯ ಹೆಚ್ಚಿಸುವುದು ಶ್ರೀ ವರನನು ಮನದಿ ತೊರುವುದಕ್ಕ 3 ಕಾವಿಯ ತತ್ವ ದಾಸರೆ ಬಲ್ಲರು ಕಾವಿಯೆ ಭೂಷಣ ದಾಸ ಶಿರಸಿಗೆ ಕಾವಿ ಇಲ್ಲದ ವ್ಯಾಸ ದಾಸಕೂಟವು ಇಲ್ಲ ಕಾವಿಯೆ ಸಂಸಾರ ನಾವೆಯಕ್ಕ 4 ಕಾವಿಯ ಮಹಿಮೆ ತಂದೆ ಮುದ್ದುಮೋಹನ ಗುರು ಭಾವಿಸಿ ಪೇಳಲು ಅರಿತು ಧರಿಸಿಹೆನು ಪಾವನ ಗೋಪಾಲಕೃಷ್ಣವಿಠ್ಠಲ ವ್ಯಾಸ ಕಾವಿಯ ಧರಿಸಿ ಮುನಿಯಾದ ಬದರಿಯಲಿ 5
--------------
ಅಂಬಾಬಾಯಿ
ಕುಣಿ ಕುಣಿಯೆಲೋ ಹರಿಗಾನದಲಿ ಪ ಅಣಕಿಸುವರೆಂದು ಮನ ಜರಿಯದೆಲೆ ಅ.ಪ ಅನುಗಾಲವು ಮನಕೊರೆಯುವ ಅನುತಾಪಗಳ ಕೊನೆಗಾಣಿಸಲು 1 ಸ್ಥಿರವಲ್ಲವು ನರಜನ್ಮವು ಸರಿಸಮಯವೆಂದು ಅರಿಯುತ್ತ ಮುದದಿ 2 ಒಣ ಭೋಗವ ಉಣಲೋಸುಗ ಹಣಗಳಿಸೆ ಬಲು ದಣಿವುದಕಿಂತ 3 ಗಾನ ಲೋಲನ ನಾಮ ಮಧುರಸ ಸಾನುರಾಗದಿಂದ ವಾಸಮಾಡುತಲಿ 4 ಪನ್ನಗಾರಿವಾಹನ ಹರಿಯು ಪ್ರ ಸನ್ನನಾಗಲೆಂದು ಸನ್ನುತಿಸುವ ಸದಾ 5
--------------
ವಿದ್ಯಾಪ್ರಸನ್ನತೀರ್ಥರು
ಕುಶಲಿಯಾಗಿರೈ ಯಶವಪೊಂದಿರೈ ಪ. ಕುಶಿಕತನುಜ ಯಾಗಪಾಲಕನೊಲವ ಪಡೆಯಿರೈ ಅ.ಪ. ಕಾಂತಾಪುತ್ರರಿಂ ಅನಂತ ಭಾಗ್ಯಮಂ ಶಾಂತಚಿತ್ತಮಾಂತುಧರೆಯೊಳನಂತ ಕಾಲಮುಂ 1 ವಂಶದೀಪನುಂ ಪ್ರಶಂಸನೀಯನುಂ ಕಂಸದಮನ ಭಕ್ತನುಂ ಎನಿಸಿ ಸಂತತಂ2 ಶೇಷಗಿರಿವರಂ ಪೋಷಿಸಲ್ಕೆ ತಾಂ ದೇಶಭಕ್ತರಾಗಿ ಬಾಳಿ ವಾಸಿಪಂಥದಿಂ 3
--------------
ನಂಜನಗೂಡು ತಿರುಮಲಾಂಬಾ
ಕೃತ್ತಿವಾಸನ ಪ್ರಿಯ ಪುತ್ರನೆ ಗುಹ ಸ- ರ್ವೋತ್ತಮ ಚಿದ್ರೂಪ ಪ ಚಿತ್ತಜ ಪ್ರತಿರೂಪಾ ಪ್ರತಾಪಾಅ.ಪ ದೀನತನದಿ ಕಡುಬೇನೆಯ ಪಡುತಲಿಹೀನಮನುಜನೆನ್ನಾ | ದಾನಿಯಾಗಿಹ ಕರುಣಾನಿಧಿ ಕೈಪಿಡಿ ಧ್ಯಾನಿಪೆ ನಾ ನಿನ್ನ ಪ್ರಸನ್ನ 1 ಸುತ್ತಮುತ್ತಿರುವ ವಿಪತ್ತುಗಳಾ ಭಯ ಮೆತ್ತಿಕೊಂಡಿದೆ ತಾನೇ ಸತ್ವಶಾಲಿಯೇ ನೀ ಕಿತ್ತೊಗೆಯದಿರೆ ಅ- ನ್ಯತ್ರ ಗತಿಯ ಕಾಣೆ ನಿನ್ನಾಣೆ 2 ಪಾಶ ಅಂಕುಶಧರ | ನಾ ಸಹೋದರ ಪಾವಂ- ಜೇಶ ಮಹಾನುಭಾವ | ದಾಸರಿಗೊದಗುವ ತ್ರಾಸವ ಕಳೆ ಸ- ರ್ವೇಶನೆ ಮಹದೇವಾ | ದೇವರ ದೇವಾ 3
--------------
ಬೆಳ್ಳೆ ದಾಸಪ್ಪಯ್ಯ
ಕೃಪಣ ಶ್ರೀಪಾದಾರ್ಚನೆಯನಿತ್ತು ಪ ಅಪಾರ ಜನುಮದ ಪಾಪೌಘ ಬೆನ್ನಟ್ಟಿ ತಾಪಗೊಳಿಸುತ್ತಿದೆ ಈ ಪರಿಭವದೊಳು ಅ.ಪ. ಪತಿತ ನಾನಾದರೂ ಪತಿತ ಪಾವನ ನೀನು ಪಶುಪತಿ ಪಾಪಹರ ಗತಿಹೀನರಿಗೆ ನೀನೆ ಗತಿದರ್ಶಕನೆಂದು ತುತಿಸುತ್ತಿಹುದು ವೇದತತಿ ಸಮ್ಮತವಾಗಿ 1 ಭವಭವದಲಿ ಬಂದು ಬವಣೆಗಳಲಿ ಬೆಂದು ಬಳಲಿದೆ ಭಕ್ತ ಬಂಧು ಭವಹರ ನೀನೆಂಬುದನು ಭವಿಗಳಿಂ ನಿತ್ಯ ಶ್ರವಣದಿ ಕೇಳಿ ನಿನ್ನವರವನೆನಿಸಿದೆ 2 ಗೌರಿ ಮನೋಹರ ಗೌರಾಂಗ ಭಕ್ತರು ದ್ಧಾರಿಯೆ ಶೂಲಧರ ಸಾರಿದೆ ನಿನ್ನಂಘ್ರಿವಾರಿಜಯುಗಳವ ಕಾರುಣ್ಯದಲಿ ನೋಡು ಅಭಯವ ನೀಡು 3 ಮುಪ್ಪುರಹರ ಮುಕ್ಕಣ್ಣ ಗಂಗಾಧರ ಮೃತ್ಯು ಮೃತ್ಯುವೆ ಶಂಕರಾ ಸರ್ಪಭೂಷಣ ಅಪಮೃತ್ಯು ನಿವಾರಣ ಕಪ್ಪುಗೊರಳ ಕೃತ್ತಿವಾಸ ಸುರೇಶ 4 ಅಜ ಸಂತನಧ್ವರ ಭಜನೆಯ ಕೆಡಿಸಿದ ವಿಜಯ ವಿಗ್ರಹ ಶರೀರ ಸುಜನರ ಹೃದಯಾಂಬುಜದಲ್ಲಿ ಮಿನುಗುವ ರಜದೂರ ಶ್ರೀಕಾಂತ ನಿಜಭಕ್ತ ಗುರುವರ 5
--------------
ಲಕ್ಷ್ಮೀನಾರಯಣರಾಯರು
ಕೃಪೆಯ ತೋರಬಾರದೇನೋ | ಗೋಪಾಲರಾಯ ಪ ತಾಪತ್ರಯ ಬಲು ದೀಪನವಾಗಿದೆನೀ ಪರಿಹರಿಸದೆ ಮತ್ತೋರ್ವರನರಿಯೆ ಅ.ಪ. ಸೂನು ಶ್ರೀನಿವಾಸಾ |ಸಾರುತ ತವಪದ ಸೇವಿಸಿ ಭಕುತಿಲಿ |ದೂರೋಡಿಸಿದನು ಜವನವರಾ 1 ಗಿರಿಜಾತೆಯ ಪ್ರಿಯ ಕುವರಾ | ನೃಪವರದಶರಥ ಸುತ ಭರತಗೆ ಅವರಾ |ಮಾರುತಿ ಮತವನು ಅರುಹುತ ನೀ ಸಂಸಾರಕೆ | ತಾರಕ ನೆನಿಸಿದ ಧೀರಾ 2 ಭೋಗಿ ಶೀಲಾ | ನೀನಘದೂರ ಕಳೆಯೊ ಮೋಹಜಾಲಾ |ಭೋಗಿಶಯನ ಗುರು ಗೋವಿಂದ ವಿಠಲನಬಾಗಿ ಭಜಿಸುವಂಥ ಭಾಗ್ಯವ ನೀಯೋ 3
--------------
ಗುರುಗೋವಿಂದವಿಠಲರು
ಕೃಷ್ಣನ್ನ ಬಲೂತ್ಕøಷ್ಟನ್ನ ವಿಶಿಷ್ಟನ್ನ ಸ್ತುತಿಸಿ ತುಷ್ಟನ್ನ ಪ ಗೋಪಳ್ಳಿಯೊಳಗಂದು ನಿಂದನ್ನಬಲುಗೋಪಿಯರ ಕೂಡ ನಂದನಾಗೋಪಿ ಚಂದನದಿಂದ ಬಂದನ್ನಾನಮ್ಮಗೋಪಾಲ ವಿಷ್ಣು ಗೋವಿಂದನ್ನ 1 ಅಪಾರ ಮಹಿಮ ನೆನೆಸುವನ್ನಾಭüಕುತ ಗಾಪತ್ತಬರಲು ಮಾಣಿಸುವನ್ನಾತಾಪಸಿಗಳಿಗೆ ಕಾಣಿಸುವನ್ನಾದಶರೂಪವ ಧರಿಸಿ ಜನಿಸುವನಾ 2 ರಜತಪೀಠ ಪುರವಾಸನ್ನಮಹರಜನೀಚರರ ವಿನಾಶನ್ನತ್ರಿಜಗದೊಳಗೆ ಪ್ರಕಾಶನ್ನನಮ್ಮವಿಜಯವಿಠ್ಠಲ ಮಾನಿಸನ್ನ 3
--------------
ವಿಜಯದಾಸ
ಕೃಷ್ಣಮೂರುತಿ ಎನ್ನ ರಕ್ಷಿಸೈ ಕಾರುಣ್ಯನಿಧೆ ಸಿರಿ ಕೃಷ್ಣಮೂರುತಿ ಎನ್ನ ರಕ್ಷಿಸೈ ಪ ನಾಗೇಂದ್ರಶಯನನೆ ನಾಗೇಂದ್ರ ಮರ್ದನನೆ ನಾಗೇಂದ್ರಗೊಲಿದವನ್ಹಾಗೆ ನಾನಲ್ಲವೇನೊ 1 ತಾಪಸಸತಿ ಶಿಲಾರೂಪವ ಪೊಂದಿರಲು ಶಾಪ ಬಿಡಿಸಿ ಅವಳ ಕಾಪಾಡಲಿಲ್ಲವೇನೊ 2 ಆ ನೀಚನಿಂದ ಯಜ್ಞಸೇನೆಗೆ ಬಂದ ಮಾನ ಹಾನಿ ತಪ್ಪಿಸಿ ಅಭಿಮಾನಿಸಿ ರಕ್ಷಿಸಿದ 3 ಇಂದಿರೆಯರಸನೆ ವಂದಿಸಿ ಬೇಡುವೆನೊ ಎಂದಿಗು ಎನ್ನ ಹೃದಯಮಂದಿರ ಬಿಡದಿರೊ 4 ವರನಾಮಗಿರಿ ಸಿರಿನರಹರಿಮೂರುತಿಯ ಚರಣಸೇವಕನೆಂದು ಕರುಣ ಎನ್ನೊಳಗಿಟ್ಟು 5
--------------
ವಿದ್ಯಾರತ್ನಾಕರತೀರ್ಥರು
ಕೆಟ್ಟ ಕೇಡನೇನ ಹೇಳಲಿ ಎನ್ನ-ದೃಷ್ಟದಿ ಪಡೆದಿದ್ದ ಫಲವಷ್ಟೇ ಅಮ್ಮ ಪ ಸತಿಯ ಸಂಗ ಕೆಟ್ಟೆ ಸಕಲ ವರ್ತನೆಗೆಟ್ಟೆಸುತರು ಬೇಕೆಂಬ ಸಂತಸಗೆಟ್ಟೆಮತಿಯ ವಿಚಾರಗೆಟ್ಟೆ ಮನದ ವಾಸನೆಗೆಟ್ಟೆಖತಿಯು ಎಂಬುದ ಕೆಟ್ಟೆ ಕಾಮಗೆ ಮೊದಲು ಕೆಟ್ಟೆ 1 ಮನೆವಾರ ನೇಮಗೆಟ್ಟೆ ಮನೆ ತಾಪತ್ರಯ ಕೆಟ್ಟೆಘನಭೋಗ್ಯ ಭಾಗ್ಯ ಕೆಟ್ಟೆ ಸರ್ವವ ಕೆಟ್ಟೆತನು ತಾನೆಂಬುದು ಕೆಟ್ಟೆ ತಳ್ಳಿ ತಗಾದೆ ಕೆಟ್ಟೆಜನರ ಕೂಡಿ ಕೆಟ್ಟೆ ಜಡ ಜೀವ ಕೆಟ್ಟೆ2 ವಿಧಿ ನಿಷೇಧ ಕೆಟ್ಟೆಫಲದ ತೋರಿಕೆಗೆಟ್ಟೆ ಪರರ ನಿಂದ್ಯ ಕೆಟ್ಟೆ3 ಭಂಗ ಕೆಟ್ಟೆಅಹಿತತ್ವವನು ಕೆಟ್ಟೆ ಅಂಗಡಿಯನು ಕೆಟ್ಟೆಮಹಿಮೆ ಎಂಬುದ ಕೆಟ್ಟೆ ಮಹಾ ಸುಖ ದುಃಖ ಕೆಟ್ಟೆ 4 ನಿತ್ಯ ಪ್ರಧಾನ ಕೆಟ್ಟೆಜೀಯ ಚಿದಾನಂದನಾಗಿ ಜನ್ಮಗೆಟ್ಟೆ 5
--------------
ಚಿದಾನಂದ ಅವಧೂತರು