ಒಟ್ಟು 216 ಕಡೆಗಳಲ್ಲಿ , 49 ದಾಸರು , 184 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸುಮ್ಮನೆ ವೈಷ್ಣವನೆಂದಿರಿ -ಪರ - |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಬ್ರಹ್ಮ ಸುಜ್ಞಾನವನರಿಯದ ಮನುಜನ ಪ.ಮುಖವ ತೊಳೆದು ನಾಮವಿಟ್ಟವನಲ್ಲದೆ |ಮಿಕ್ಕ ಶಾಸ್ತ್ರಂಗಳ ನೋಡಿದನೆ ? ||ಸುಖ ಶೃಂಗಾರಕೆ ಮಾಲೆ ಧರಿಸಿದನಲ್ಲದೆ |ಭಕುತಿಯ ರಸದೊಳು ಮುಳುಗಿದನೇನಯ್ಯ 1ಊರ ಮಾತುಗಳೆಲ್ಲನಾಡಿದನಲ್ಲದೆ |ನಾರಾಯಣ ಕೃಷ್ಣ ಶರಣೆಂದನೆ ? |ನಾರಿಯರಿಗೆ ಮೆಚ್ಚಿ ಮರುಳಾದನಲ್ಲದೆ |ಗುರುಹಿರಿಯರಿಗೆಲ್ಲ ಎರಗಿದನೇನಯ್ಯ 2ಗಂಗೆಯಲಿ ಮಣ್ಣು ತೊಳವವನಲ್ಲದೆ |ಹಿಂಗದೆ ಸ್ನಾನವ ಮಾಡಿದನೆ ? |ರಂಗ ಶ್ರೀ ಪುರಂದರವಿಠಲನ ದಾಸರ |ಸಂಗಡ ಕೂಡಾಡಿ ತಿರುಗಿದನೇನಯ್ಯ 3
--------------
ಪುರಂದರದಾಸರು
ಹರಿಭಕುತಿಯುಳ್ಳವರ ಶರೀರವೆ ಕುರುಕ್ಷೇತ್ರ - ಇವರು |ನರರೆಂದು ಬಗೆವವರೆ ನರವಾಸಿಗಳು ಪ.ಸದಮಲನ ಧ್ಯಾನಿಸುವ ಹೃದಯ ಕಾಶೀಪುರವು |ಮಧುವೈರಿಗೊಲಿದ ಮನ ಮಣಿಕರ್ಣಿಕೆ ||ಪದುಮನಾಭನ ಪಾಡಿ ಪೊಗಳುವಾತನ ದಿವ್ಯ |ವದನವು ಅಯೋಧ್ಯೆ ಪುರವಾಗಿ ಇಹುದು 1ನರಹರಿಯ ನೀಕ್ಷಿಸುವ ನಯನ ದ್ವಾರಾವತಿಯು |ಹರಿಯ ನಿರ್ಮಾಲ್ಯ ವಾಸಿಪ ಮೂಗು ಮಥುರೆ ||ಕರುಣಾಕರನ ಕಥೆಯ ಕೇಳ್ವ ಕಿವಿ ಕೇದಾರ |ಸಿರಿಧರೆಗೆ ಎರಗುವಾ ಶಿರವೆ ಬದರಿ 2ಚಕ್ರಧರಗೆ ಪೋಪಚರಣ ಮಾಯಾವತಿ ತ್ರಿ - |ವಿಕ್ರಮನ ಪೂಜಿಸುವ ಕರಿವೆ ಕಂಚಿ ||ಅಕ್ರೂರಗೊಲಿದಸಿರಿ ಪುರಂದರವಿಠಲನಸತ್ಕøಪೆಯು ಉಳ್ಳವರ ಅಂಗಸಾಯುಜ್ಯವು 3
--------------
ಪುರಂದರದಾಸರು
ಹಿಗ್ಗುವೆಯೇಕೊ - ಏ ಮನುಜಾಹಿಗ್ಗುವೆಯೇಕೊ ಅಹಿಗ್ಗುವ ತಗ್ಗುವ ಮುಗ್ಗುವ ಕುಗ್ಗುವಅಗ್ನಿಯೊಳಗೆ ದಗ್ಧವಾಗುವ ದೇಹಕೆ ಅಪಸತಿ ಪುರುಷರು ತಮ್ಮ ರತಿಕ್ರೀಡೆಗಳ ಮಾಡೆಪತವಾದಿಂದ್ರಿಯ ಪ್ರತಿಮೆಯ ದೇಹಕೆ 1ತೋರುವುದೊಂಬತ್ತು ದಾರಿಯ ಮಲವಾದನೀರಿಲ್ಲದಿದ್ದರೆ ನಾರುವ ದೇಹಕೆ 2ಆಗದ ಭೋಗದ ಆಗು ಮಾಡುತಲಿಪ್ಪರೋಗಬಂದರೆ ಬಿದ್ದು ಹೋಗುವ ದೇಹಕೆ 3ನರರ ಸೇವೆಯಮಾಡಿ ನರಕ ಭಾಜನನಾಗಿಮರಳಿ ಮರಳಿ ಹುಟ್ಟಿ ನರಳುವ ದೇಹಕೆ 4ಪುರಂದರವಿಠಲನಚರಣ ಕಮಲಕೆಎರಗದೆ ಇರುತಿಪ್ಪ ಗುರುವಿನ ದೇಹಕೆ 5
--------------
ಪುರಂದರದಾಸರು
ಹೊಲೆಯ ಹೊರಗಹನೆ ಊರೊಳಗಿಲ್ಲವೆಸಲೆ ಶಾಸ್ತ್ರವನು ತಿಳಿದು ಬಲ್ಲವರು ನೋಡಿ ಪ.ಭಾಳದಲಿ ಭಸಿತ ಭಂಡಾರವಿಡದವ ಹೊಲೆಯಕೇಳಿ ಸಲೆ ಶಾಸ್ತ್ರವನು ತಿಳಿಯದವ ಹೊಲೆಯಆಳಾಗಿ ಅರಸರಿಗೆ ಕೈಮುಗಿಯದವ ಹೊಲೆಯಸೂಳೆಯರ ಕೊಡುವಾತನೇ ಶುಧ್ಧ ಹೊಲೆಯ 1ಇದ್ದ ಧನ ದಾನ - ಧರ್ಮವ ಮಾಡದವ ಹೊಲೆಯಕದ್ದು ತನ್ನೊಡಲ ಹೊರೆವಾತನೇ ಹೊಲೆಯಬದ್ಧವಹ ನಡೆ - ನುಡಿಗಳಿಲ್ಲದಿದ್ದವ ಹೊಲೆಯಮದ್ಧಿಕ್ಕಿ ಕೊಲುವವನೆ ಮರಳು ಹೊಲೆಯ 2ಆಶೆಯನು ತೋರಿ ಭಾಷೆಗೆ ತಪ್ಪುವವ ಹೊಲೆಯಲೇಸು ಉಪಕಾರಗಳನರಿಯದವ ಹೊಲೆಯಮೋಸದಲಿ ಪ್ರಾಣಕ್ಕೆ ಮುನಿಯುವವನೇ ಹೊಲೆಯಹುಸಿಮಾತನಾಡುವವನೇ ಸಹಜ ಹೊಲೆಯ3ಕೊಂಡ ಋಣವನು ತಿರುಗಿ ಕೊಡಲರಿಯದವ ಹೊಲೆiÀುಭಂಡ ಮಾತುಳಾಡುವವನೆ ಹೊಲೆಯಗಂಡ - ಹೆಂಡಿರ ನಡುವೆ ಭೇದಗೈವವ ಹೊಲೆಯಹೆಂಡರಿಚ್ಚೆಗೆ ನಡೆವ ಹೇಡಿ ಹೊಲೆಯ 4ಪರಧನಕೆ ಪರಸತಿಗೆ ಅಳುಪಿದವನೇ ಹೊಲೆಯಗುರು ಹಿರಿಯರನು ಕಂಡು ಎರಗದಿದ್ದವ ಹೊಲೆಯಅರಿತು ಆಚಾರವನು ಮಾಡದಿದ್ದವ ಹೊಲೆಯಪುರಂದರವಿಠಲನನು ನೆನೆಯದವ ಹೊಲೆಯ 5
--------------
ಪುರಂದರದಾಸರು