ಒಟ್ಟು 3655 ಕಡೆಗಳಲ್ಲಿ , 116 ದಾಸರು , 2523 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶರಣೆಂಭೆ ತನುಮನದಿಂದ ಗಣರಾಯಾ ನರಮೃಗ ಕಾಯಾ ಸುರಾಸುರರ ಕೈಯ್ಯ ಸೇವೆ ಕೊಳುವ ಚರಣವನು ಮೊರೆಯ ಹೊಕ್ಕೆನು ಕೇಳಿ ಕೀರುತಿಯಾ ಕೊಂಡಾಡುವಂತೆ ಪದ ಪದ್ಯದಿ ನಿನ್ನ ಚರಿಯಾ ಶುಭ ಮುಖ ಕೊಡುಮತಿಯನಾ ಎಂದೆಂದು ನೊಡಲು ಅಪರಾಧಿನಾ ಮೊದಲು ಕುಂದನಾರಿ - ಸದೇ ನೋಡೆನ್ನ ಮ್ಯಾಲಿನ್ನಾ ಅಗಜ ನಂದನ ಗುರು ಮಹೀಪತಿ ಸುತ ಸ್ವಾಮಿ ಭಕುತ ರಕ್ಷಕ ಮುನಿಜನ ಪ್ರೇಮೀ
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶರೀರ ಜರಿಯಬೇಡಾ | ಬೆರಿಯಬೇಡಾ | ಸ್ಥಿರವಿದ್ದ ಕೈಯಲಿ ಗುರು ಶರಣವ ಹೊಕ್ಕು | ತಾರಿಸೋ ಭವದಿಂದ ನೀ ಮರಳು ಜೀವವೇ ಪ ಲೋಕದೊಳು ವಾರಿಜೋದ್ಭವ ನಿನ್ನ ಜನ್ಮ ಕೊಟ್ಟು | ನೂಕಲಾಗ ತಾಯಿ ಗರ್ಭದೊಳಾವರಿಸಿ ತಾನು ಧರಿಸಿ | ರೇಖೆ ರೂಪ ಲಾವಣ್ಯ ಅವಯವಂಗಳಿಂದ | ಸಾಕಾರವಾಗಿ ಸುಂದರೆನಿಸಿ ವರನೆನಿಸಿ | ಬೇಕಾದ ವಿದ್ಯವನು ಸರ್ವ ಸಂಪಾದಿಸಲು | ತಾ ಕಾರ್ಯವಾಗಿ ಅಭ್ಯಾಸದಿಂದಾ ಧ್ಯಾಸದಿಂದಾ | ವಾಕ್ಪಟುದಲಿ ಸಮರ್ಥನೆಂಬನಾಮ ಪಡೆದು | ಪ್ರಖ್ಯಾತವಾದೆ ಈ ಕಾಯದಿಂದ 1 ಸ್ನಾನವನು ಮಾಡಿ ತ್ರಿಕಾಲ ಸಂಧ್ಯಾನ ವಿಧಿಯನು | ಮೌನ ಜಪಗಳವನು ತಪಗಳನು | ಸ್ವಾನುಭಾವ ಸೂರ್ಯಾಡಲಾಗಿ ನೇಮವನುಷ್ಠಾನ ಮೊದಲಾದ | ಧ್ಯಾನ ಧಾರಣವನು ಕಾರವನು | ಜ್ಞಾನ ಭಕ್ತಿ ವೈರಾಗ್ಯ ಶಮದಮ ಕರುಣನು ದಿನಮಾಳ್ಪಾ | ಕರ್ಮ ನೈಮಿತ್ಯವಾದಾ ನಿತ್ಯವಾದಾ | ತಾನು ತನ್ನ ಉದ್ಧರಿಸಿಕೊಳಲಿಕ್ಕೆ ಭಾವದಿಂದಾ | ಮಾನುಭಾವg ದಯ ಪಡೆವುದರಿಂದಾ 2 ತಾನು ಕುಣಿಯಲಾರದೆ ಅಂಕಣವು ಡೊಂಕು ಎಂದು | ಹೀನೋಯಿಸಿ ನುಡಿವ ನಟ ವೇಷಿಯಂತೆ | ನೀನು ನೀಟ ನಡಿಯದ್ಹೋಗಿ ದೇಹ ಕಶ್ಮಲವೆಂದು | ಜ್ಞಾನ ರಹಿತನಾಗಿ ಹಳಿವುದು ಉಚಿತ ಇದು ಪ್ರಾಚೀತ | ಈ ನಾಲ್ಕೆರಡು ವೈರಿಗಳ ದಂಡಿಸದೇ ಬರಿದೇ | ಹೀನ ವೈರಾಗ್ಯವಾ ಶಣಸಬೇಡಾ ದಣಿಸಬೇಡಾ | ಕಾನನದ ಹುತ್ತಮ್ಯಾಲ ಬಡಿದರೇನು ವರಗಿರುವಾ | ಆ ನಾಗದರ್ಪಗುಂದದು ಕಂಡಾ 3 ಪರಿಪರಿ ಮುಮ್ಮುಳಿ ವಳಗಾಗಿ ಜೀವಿಸುವ | ತೆರನಂತೋಯಂದು ಚಿಂತಿಸಬಹುದು ಸುರಿಸಬಹುದು | ನೂರು ಭಂಡಿಗಳ ತÀುಂಬಿ ಬಂದರೇನು ತಾ | ಧರೆಯೊಳು ಸೂಲ ತಾ ಹಾವುದೊಂದೇ ನೋವುದೊಂದೇ | ಬರೆದ ಬರಹವೇ ಪಣಿಯಾಲಿದ್ದಪರಿ ತಪ್ಪದೈ | ವರ ಕೂಡಿ ಕೊಟ್ಟಡವಿ ಮಾಡುವದೇನು ನೋಡುದೇನು | ಪರಿ | ಪಡಿ ನೀನು 4 ಸಾಕ್ಷರಾವೆಂಬ ಮೂರಕ್ಷರವ ಬರೆದು ತಾ | ರಾಕ್ಷಸಾವೆಂಬುದೇ ಅರ್ಥವಹುದು ಅನರ್ಥ ವಹುದು | ಪರಿ ವಳಿತು ಹೊಲ್ಲೆ | ಪಕ್ಷದ್ವಯಕ ಬಾಹುದು ಮಾಡಿದಾಂಗ ಕೂಡಿದಾಂಗ | ರಕ್ಷಿಸೆಂದು ಮಹಿಪತಿಸುತ ಜೀವನಾದಿ ವಿಶ್ವಾ | ಭವ ಹಿಂಗು ಬ್ಯಾಗ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶಾಂತಿನಿಲಯ ಸುಖದ ಪ ಭ್ರಾಂತನಾದೆ ಪರಿಭವದ ತಂತು ತಿಳಿಯದಕಟ ಶ್ರೀ ಕಾಂತ ಕಾಯೊ ಪಿಡಿದು ಕರು ಣಾಂತರಂಗ ಕುಸುಮನಾಭ 1 ಉದಧಿಯಂದದುಕ್ಕಿಬರುವ ಅಧಮನಕೆ ಕಲ್ಪನೆಗಳು ಒದಗಿ ವಿಧ ವಿಧ ನೋಯಿಪು ದಿದನು ಬೇಗ ಪರಿಹರಿಸು 2 ನಂಬಿಭಜಿಪ ಭಕುತಜನರಿ ಗಿಂಬು ನೀನೆ ಅಂಬುಜಾಕ್ಷ ಇಂಬುಗೊಟ್ಟು ಸಲಹು ಸದಾ 3
--------------
ರಾಮದಾಸರು
ಶಾಮಸುಂದರನೆ ನೀನು ಪ್ರೇಮಾದಿ ಕಾಯೊ ಪ ಧರೆಯೊಳು ನಾ ಬಂದು ಥರಥರದಲ್ಲಿ ನೊಂದು ಮರುಗಿದೆ ತೋರ್ನಿನ್ನ ಚರಣಕಮಲವಾ 1 ಅನ್ಯನೆಂದರಿಯದೆ ನಿನ್ನವನೆಂದೆನ್ನ ಬನ್ನ ಬಿಡಿಸು ಬಾರೋ 2 ಶ್ರೀವತ್ಸಾಂಕಿತ ನೀನು ಶರಣಾಗತ ನಾನು ಸರಸಿಜನಯನ ಬ್ಯಾಗ ಬಾರೊ ನಿನ್ನ 3
--------------
ಸಿರಿವತ್ಸಾಂಕಿತರು
ಶಾರದೇಂದುಮುಖಿ ನೀರಜನಯನಳೆ ಬಾರೆಲೆ ಬಾಗಿಲ ತೆಗಿಯಲೆ ಭಾಮೆ ಪ ಯಾರಯ್ಯ ಬಾಗಿಲ ಹೊರಗೆ ನಿಂತಿರುವನು ಜಾರ ಪುರುಷನಂತೆ ತೋರುವೆ ನೀನು ಅ.ಪ ಜಾರನಾದರೆ ನಿಂಗೆ ಜಾರನಲ್ಲವೆ ಮೀನಾ ಕಾರ ಧರಿಸಿರುವ ಹರಿಯಲೆ ಭಾಮೆ ಮೀನನಾದರೇ ಬಲು ಮೌನದಲಿರದಂತೆ ಮಾನವರಂತೆ ಮಾತು ಯಾವುದೋ ನಿನಗೆ 1 ಮಂದರಗಿರಿಯ ಬೆನ್ನಿಂದ ಧರಿಸಿರುವ ಅಂದ ಕೂರ್ಮನಲ್ಲವೇನೆ ಭಾಮೆ ಕೂರ್ಮ ನೀನಾದರೆ ಕೂಪದೊಳಿರುವುದೆ ಧರ್ಮವೆಂಬುವುದನು ಮರೆತೆಯಾ ನೀನು 2 ನೀಲವೇಣಿಯೆ ಕೇಳೆ ಕೋಲರೂಪದಿ ಬಂದು ಕ್ಷಿತಿ ತಂದೆನೆ ಭಾಮೆ ಪೋತರೂಪನೇ ನಿಜ ಧಾತ್ರಿಯ ಭೇದಿಸಿ ಗಾತ್ರ ರಕ್ಷಣೆ ಮಾಡು ಹೋಗೆಲೊ 3 ಸ್ತಂಭ ಭೇದಿಸಿ ರಿಪು ಡಿಂಭನ ಕಾಯಲು ಜಂಭದಿ ಖಳನನು ಕೊಂದೆನೇ ಭಾಮೆ ಸ್ಥಂಭ ಭೇದಿಸಿದ ನಾ ನಂಬುವುದಿಲ್ಲವೊ ಡಂಭದಿ ಬಾಗಿಲು ಭೇದಿಸಿ ಬಾರೊ 4 ವಾಮನನೆಂದು ವಟುರೂಪದಿ ಬಂದು ಸಾರ್ವ ಭೌಮನಲ್ಲಿ ಭೂಮಿ ಬೇಡಿದೆ, ಭಾಮೆ ವಟುರೂಪನಾದರೆ ಕುಟಿಲಾಕ್ಷಿಯರಲಿಂಥ ಚಾಟುವಚನಗಳು ಯಾಕೆಲೊ 5 ದುರುಳನೃಪರ ಪರಿಹರಿಸಿದ ಭೃಗುಮುನಿ ವರಕುಲಜಾತ ಶ್ರೀ ರಾಮನೇ ಭಾಮೆ ಮುನಿವರಸುತನಾಗಿ ಸ್ವನಿಯಮಗಳ ಬಿಟ್ಟು ವನಿತೆಯರಲ್ಲಿಂಥಾ ಸರಸವೆ ನಿನಗೆ 6 ದಶರಥ ನೃಪತಿಯ ಮನೆಯೊಳವತರಿಸಿ ದಶಶಿರರನು ಕೊಂದ ರಾಮನೆ ಭಾಮೆ ಪರ ಕಾಮಿನಿಯರೊಳಿಂಥಾ ಪ್ರೇಮ ಮಾಡುವುದುಂಟೆ ಯೋಚಿಸೊ ನೀನು 7 ನೀರಜಾಕ್ಷಿ ಕೇಳೆ ಜಾರಚೋರತೆಯಲ್ಲಿ ಸಿರಿ ಕೃಷ್ಣನೇ ಭಾಮೆ ಚೋರನಾದ ಮೇಲೆ ಸೇರಿಸುವುದು ಹೇಗೆ ಭಾರಿ ಆಭರಣಗಳಿರುವುವೊ 8 ಮುಗ್ಧೆ ಕೇಳೆ ಇದಬದ್ಧವಲ್ಲದೆ ಅತಿ ಶುದ್ಧನಾದ ಬುದ್ಧರೂಪನೆ ಬುದ್ಧರೂಪನೆ ನಿನ್ನ ನಡತೆಯ ಕೇಳಲು ಶುದ್ಧಿಯು ಲೋಕಪ್ರಸಿದ್ಧವು9 ಸರಸಿಜಮುಖಿ ವರತುರಗವನೇರಿದ ನೃಪರ ಗೆಲ್ವ ಕಲ್ಕಿಯೇ ಭಾಮೆ ದುರುಳ ಜನರು ಇಲ್ಲಿ ಸೇರುವುದಿಲ್ಲವೊ ತರಳೆಯರಲಿ ದುಷ್ಟ ಕಾರ್ಯವೇ ಪೋಗೊ10 ಪರಿ ಸರಸವನಾಡುವ ನಾಮಗಿರಿ ನರಹರಿ ರೂಪ ರಮಾ ರಮೇಶರು ವಿಹರಿಪ ಬಗೆಯನು ಸ್ಮರಿಸುವ ಸುಜನರ ಪರಮಪುರುಷ ಹರಿ ಪೊರೆವುದು ನಿಜ 11
--------------
ವಿದ್ಯಾರತ್ನಾಕರತೀರ್ಥರು
ಶಿವ - ಪಾವ9ತಿಯರು ಪರಮೇಶ್ವರಾ ಮಹದೇವಾ | ಗಿರಿಜಾವರ ಶಿವ ಶಂಭೋ | ಪರಮೇಶ್ವರ ಮಹದೇವಾ ಪ ಹರಶವ9 ಕಾಲಕಾಲ | ವಿರೂಪಾಕ್ಷ ರುಂಡಮಾಲಾ | ಶರಣು ಜನರಪಾಲಾ | ಗಿರಿ ಶೋಭಾವಾ ನೀ ಲೋಲಾ 1 ಭೂತೇಶ ವ್ಯೊಮಕೇಶಾ | ಶಿತಿಕಂಠ ಕೃತ್ತಿವಾಸಾ | ಕ್ರತು ಧ್ವಂಸಿ ದುಷ್ಟ ನಾಶಾ 2 ಈಶಾನ್ಯ ಭಗ9ರುದ್ರಾ | ಪಶುಪತೇ ವೀರಭದ್ರಾ | ಕೃಶಾನು ರೇತಸ್ ರೌದ್ರಾ | ಶಶಿಧರಾ ಯೋಗನಿದ್ರಾ 3 ಪಿನಾಕಿ ಮೃತ್ಯುಂಜಯನೇ | ನಾ ನಿನ್ನ ಮರತಿಹನೇ| ದೀನರ ಪಾಲಿಸುವನೇ | ನೀನೆನ್ನ ಕಾಯೋ ಭವನೇ 4 ಗಜಮುಖ ತಾತ ಬಾರೋ | ಭಜಿಸುವೆನೀ ಮೈದೋರೋ | ನಿಜದಾ ಸದಾನಂದ ಬಾರೋ | ರಜತಾದ್ರಿವಾಸ ತೋರೊ 5
--------------
ಸದಾನಂದರು
ಶಿವಮಂಗಳಂ ಸದಾಶಿವ ಮಂಗಳಂಮಂಗಳಂ ರಜತಾದ್ರಿ ಮುಖ್ಯನಿಲಯಾಯ ಪಹಿಮಕರಾವತಂಸಾಯ ಹಿಮರುಚಿರಕಾಯಾಯಹಿಮರೂಪಗಿರಿಚಿತ್ತ ಹಾರಕಾಯಹಿಮಹರಾಮಿತಕಾಂತಿ ಸದೃಶಾಯ ಸೌಮ್ಯಾಯಹಿಮತಾಪರಹಿತಾಯ ಹೇಮವರ್ಣಾಯ 1ವರಜಟಾಮಕುಟಾಯ ವಾರಿಯುತಕೇಶಾಯಸ್ಫುರದಿನಾನಲಸೋಮಲೋಚನಾಯಗರನೀಲಕಂಠಾಯ ಕದ್ರುಸುತ ಹಾರಾಯಪರಶು ಮೃಗ ಶೂಲಾದಿ ಪರಮಾಯುಧಾಯ2ನಾಗೋಪವೀತಾಯ ನಾಗೇಶ ವಲಯಾಯನಾಗಧವಳಾಂಗಾಯ ನಾಯಕಾಯನಾಗವಾಹನ ಮುಖ್ಯ ನಾಕಜನನಾಥಾಯನಾಗಪರ್ಯಂಕಸ್ಥ ನಿತ್ಯಮಿತ್ರಾಯ 3ಗೌರೀಧೃತಾಂಗಾಯ ಗಂಧರ್ವಸೇವ್ಯಾಯಭೂರಿ ಗುಣಬ್ರಹ್ಮಾಂಡ ಭೂತಾಯಚಾರು ಕಟಿ ಶುಭ ಜಂಘಾಯನೀರಜಾಮಲ ಪೀಠ ನಿಹಿತ ಪಾದಾಯ 4ಮೃಗಚರ್ಮವಸನಾಯ ಮಂಜುಳ ಮಯೂಖಾಯಜಗದೇಕನಾಥಾಯ ಜೀವನಾಯಸುಗಮ ತಿರುಪತಿ ನಾಮ ಸದ್ಮಾಧಿನಾಥಾಯಗಗನಧುನಿ ಗಿರಿ ವಾಸ ಗಂಗಾಧರಾಯ 5 ಓಂ ನವನೀತನವಾಹಾರಾಯ ನಮಃ
--------------
ತಿಮ್ಮಪ್ಪದಾಸರು
ಶಿವಶಿವ ಜಯಜಯ ಶಿವ ಸರ್ವೋತ್ತಮಕಾಯ ಶಿವ ದೂರಿಕೃತಮಾಯ ಶಿವಶರಣಾಗತಪ್ರಿಯ ಪ ಸನಕಾದಿ ಮುನಿಹೃದಯ ವನಜಸ್ಥಾಪಿತಸೂರ್ಯ ದನುಜ ವಿಮರ್ದನ ವೀರ್ಯ ಸುಗುಣನಿರಾಕೃತ ಕೋಪ 1 ಚಾಪ ನಿಗಮಾಗೋಚರ ರೂಪ ಜಗದಂತಃಸ್ಥಿತದೀಪ ಸುಗುಣನಿರಾಕೃತ ಕೋಪ 2 ಪರಮಪಾವನ ಕಾಮಹರ ಕಕುದ್ಗಿರಿಧಾಮವರ ಗಂಗಾಧರನಾಮ ತಿರುಪತೀಶ್ವರ ಪ್ರೇಮ 3
--------------
ತಿಮ್ಮಪ್ಪದಾಸರು
ಶಿಶುಗಳಪರಾಧಕೆ ಶಿಕ್ಷೆ ಕಣ್ಣೀಲಲ್ಲದೇ ಯಶವ ಬಡಿಗೋಲವನು ಎತ್ತುವರೇ ರಂಗಾ ಪ ಇಲಿಗೆ ಹೆಬ್ಬುಲಿಯಾಕೆ|ಮೊಲಕೆ ಮದಗಜವ್ಯಾಕೆ| ಕಳೆತ ಹಣ್ಣಿಗೆ ಮತ್ತೆ ಕರಗಸ್ಯಾಕೆ| ಕಲೆ ಬಿದ್ದ ಕನ್ನಡಿಗೆ ಗುದ್ದಲಿಯ ತರಲೇಕೆ| ಗುಳಲಿ ಕಾಯಿಗೆ ಹೊತ್ತಗಲ್ಲ ವ್ಯಾಕೆ 1 ಹಳ್ಳಗೆ ಹಡಗವ್ಯಾಕೆ|ಕೊಳ್ಳಿಗೆ ಕೊಡ ಜಲವ್ಯಾಕೆ| ಮುಳ್ಳು ಮುರಿದುದಕ ಮೊನೆ ಹಾರಿ ಯಾಕೆ| ಮಲ್ಲಿಗೆ ಹೋವಿಗೆ ಬಂಧ ಹಗ್ಗದಲ್ಯಾಕೆ| ಹಲ್ಲಿ ಬೆದರಿಸೆ ಹೊಡೆವ ಭೇರಿಯಾಕೆ 2 ಜ್ಞಾನಹೀನರ ನಮ್ಮ ತಪ್ಪನೆಣಿಸಿದುರಿತ| ಮೊನೆಗಾಣಿಸುತ ಬನ್ನಿ ಬಡಿಸುವುದುಚಿತವೇ| ದೀನವತ್ಸಲ ತಂದೆ ಮಹಿಪತಿ ಸುತ ಪ್ರಭುವೇ| ನ್ಯೂನಾರಿಸದೇ ನಿನ್ನವನೆಂದು ಸಲಹೋ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶಿಸ್ತಿಗೆ ಅಲಂಕಾರವು ಪ ಗೃಹಸ್ಥರಲ್ಲಿ ವ್ಯಾಜ್ಯವು ನಾಸ್ತಿ ಭಕ್ಷ್ಯ ಭೋಜ್ಯವು ಅ.ಪ ನೀರು ತುಪ್ಪ ಬಡಿಸುತ 1 ಹಪ್ಪಳ ಮುರಿದು ಹಾಕಿಸಿ ಅತಿಥಿಗಳನು ನೂಕಿಸಿ ತುಪ್ಪದ ಸೌಟು ತೋರಿಸಿ ಉಪ್ಪು ಚಟ್ನಿ ಹೆಚ್ಚಿಸಿ 2 ಮೂರು ಗಂಟೆಯೂಟವು ಮೂಢತನದೋಡಾಟವು ವೋರೆ ವೋರೆ ನೋಟವು ಸಾರು ಅನ್ನಾ ಕಾಟವು 3 ಎಣ್ಣೆ ವಗ್ಗರಣೆ ಎಲ್ಲಕು ಅನ್ನ ಹೊತ್ತಿ ಇರುವುದು ಸನ್ನೆ ಸೈಯಿಗೆಯೇ ಬಲ 4 ಸಾಲದಡಿಗೆ ಕಾಯಿಪಲ್ಯ ಬೇಯಲಿಲ್ಲ ವೊಂದಾದರು ರಾಯ ಗುರುರಾಮವಿಠಲ ಬಲ್ಲ ಉ- ಪಾಯಗಾರರು ಬೀಗರು 5
--------------
ಗುರುರಾಮವಿಠಲ
ಶುಭ | ಮಂಗಳ ಶ್ರೀ ಲಕ್ಷ್ಮೀ ನರಸಿಂಹಗೇ | ಸಹಸ್ರ | ಮಂಗಳ ಭಕ್ತರ ಸಲಹುವಗೆ ಪ ಶರಣ ಪ್ರಲ್ಹಾದಗೆ ಪಟ್ಟಾಭಿಷೇಚನ | ಕರುಣದಿಮಾಡಿಸಿಸುರದಿಂದಲಿ | ಅರಸುತನವಕೊಟ್ಟು ಭಕ್ತಾಗ್ರಣಿ ಮಾಡಿ ವರಮುಕ್ತಿಗಳ ಸೂರಾಡಿದವಗೆ | ಮಂಗಳ .... 1 ಎನ್ನನು ನೆನೆಯಲಿ ನೆನೆಯದವರಿರಲಿ ಒಮ್ಮೆ | ನಿನ್ನ ನೆನೆದು ಘನ ಚರಿತೆಯನು || ಮನ್ನಿಸಿ ಒದುವ ಕೇಳುವ ಮನುಜರ | ಚೆನ್ನಾಗಿ ಕಾಯ್ವೆನೆಂದಭಯ ವಿತ್ತವಗೆ ಮಂಗಳ ..... 2 ಅಂದಿಗಿಂದಿಗೆ ತನ್ನ ದಾಸರಾದಾಸನಾ | ಮಂದಿರ ಸಾರಿದವಗೆ ದಯದೀ || ಚಂದಾಗಿ ತನ್ನ ಭಕುತಿ ಎಚ್ಚರವ ನೀವ | ತಂದೆ ಮಹೀಪತಿ ಸುತ ಪ್ರೀಯಗೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶುಭ ಜಯತು ಶುಕಪ್ರೀಯಾಕಾಯಯ್ಯ ಕವಿಗೇಯ ಮಹರಾಯಾ ಪ ಜಗದೀಶ ಸಖನಾಗಿ ಶಸ್ತ್ರಾಸ್ತ್ರವನೆ ಕೈಗೊಂಡುಜಯಶೀಲನೆಂದೆನಿಸಿ ಜಗದೊಳಗೆ ಮೆರೆದೆ ಜಯ ಭೀಮರಾಯನು ಈ ಮೇದಿನೀ ಸ್ಥಳಕ್ಕೆ ಬರಲು ಅಸಮ ಪಶು ಎಂದೆನಿಸಿ ಸೇವಿಸಿದಿ ನಿತ್ಯಾ ಸತ್ಯಾ 1 ಮಣಿ ಸರ್ವಜ್ಞರಾಯರು ವಿರಚಿಸಿದ ಗ್ರಂಥಗಳನಿರೇ ಸಜ್ಜನರಿಗೆ ಸುಜ್ಞಾನವನು ತೋರಿ ಸುಜ್ಞಾನಿಗಳವಾಗ್ಬಾಣದಿಂದರಿದ್ಯೋ ತರಿದ್ಯೊ 2 ಶಿರಿದೇವಿ ವರಬಲದಿ ಆಗಮಾದ್ರಿಯ ಮಥಿಸಿಸತ್ಸುಖಾ ತೆಗೆದು ಸಾಧುಗಳಿಗಿತ್ತೇಮಳಾಪುರಿನಿಲಯ ಪವನೇಶತಂದೆವರದಗೋಪಾಲವಿಠ್ಠಲನ ದೂತಾ ಖ್ಯಾತಾ ದಾತಾ 3
--------------
ತಂದೆವರದಗೋಪಾಲವಿಠಲರು
ಶುಭ ಮಂಗಳ ತ್ರಯಭುವನ ವಂದ್ಯ ಸೀತಾಕಾಂತಗೆ ಪ ದಶರಥಾತ್ಮಜನಾಗಿನರಲೀಲಿ ನಟಿಸಿದಗ ಋಷಿಮುಖಕಾಯ್ದ ಹಿಲ್ಯೋದ್ದಾರಗ ಅಸಮಧನುಮುರಿದ ವನಿಜೆಯಾಮಾಲೆಧರಿಸಿದಗ ಬೀಸಜಲೋಚನ ಜನಕ ಜಾಮಾತಗ 1 ಮೂನವರನುಜರ ಕೂಡಿ ಕಲ್ಯಾಣವಿಡಿದಂಗ ದೇವಭೃಗುಪತಿ ಮನಾನಲಿಸಿದವಂಗ ಅವಿಭವಿ ಬಂದಯೋಧ್ಯಾ ಪುರವನಾಳ್ದಂಗ ಜೀವಜಾತಕಸುಖವ ಬಡಿಸಿದಂಗೆ 2 ಗುರು ಮಹೀಪತಿ ಸುತನ ಜೀವ್ಹದಲಿತಾನಿಲಿಸಿ ನಿರುಪಚಾರಿತ್ರ ನುಡಿಸಿದಂಗೆ ಧರೆಯೊಳಗ ದೀನ ಅನಾಥರನು ಪೊರೆವ ಪರಮ ಮಂಗಳ ನಾಮ ಶ್ರೀ ರಾಮಗೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶುಭ ಮಂಗಳಂಮಂಗಳಂ ಆರೂಢ ಮಹಾತ್ಮಗೆ ಪ ಕರ್ಮ ವಿಧ್ವಂಸಗೆಬಲು ಅವಿದ್ಯಾಬ್ರಾಂತಿ ವಿನಾಶಗೆಲಲಿತ ನಿಜ ಮುಕ್ತಗೆ ಲಕ್ಷ್ಯ ಅಲಕ್ಷ್ಯಗೆಥಳಥಳಿಪ ತೇಜೋಮಯಾತ್ಮನಿಗೆ 1 ಮಾಯೆ ನಿರ್ಮೂಲಗೆ ಮಲತ್ರಯ ವಜ್ರ್ಯಗೆಕಾಯ ಭ್ರಾಂತಿಯನು ತೊಲಗಿಪಗೆಸಾಯಸವಳಿದಗೆ ಸಾಕ್ಷಿಯಾಗಿಹಗೆಮಾಯಾ ರಹಿತಗೆ ಶಿವಶರಣಗೆ2 ಸಿಂಧು ಆನಂದಗೆ ಶಿವನಾದವನಿಗೆಎಂದೆಂದಿಗು ಇಹ ಏಕನಿಗೆಬಿಂದು ಕಳಾತೀತಗೆ ಬೋಧದಖಂಡಗೆಸುಂದರ ಚಿದಾನಂದ ಸೂಕ್ಷ್ಮಾತ್ಮನಿಗೆ3
--------------
ಚಿದಾನಂದ ಅವಧೂತರು
ಶುಭ ವಾಸುದೇವ ಮೂರುತಿಗೆ ಪಕುಂದಣಕೆ ಸರಿಯಾದ ಕಾಯದತಿ ಕಾಂತಿಗೆಸಿಂಧುವನು ಪೋಲ್ವ ಗಂಭೀರ ರಸಕೆಇಂದುಬಿಂಬವ ಜರೆವ ಮುಖದ ಸೊಂಪಿನ ಸಿರಿಗೆಕಂದರ್ಪ ಕೋಟಿ ಲಾವಣ್ಯ ನಿಧಿಗೆ 1ಅಭಯದಾನವ ಕೊಡುವ ಕರಗಳತಿ ಚೆಲು'ಕೆಗೆಶುಭಗಳಿಗೆ ನೆಲೆಯಾದ ನೇತ್ರಗಳಿಗೆ'ಭವಗಳಿಗೆಡೆಬಿಡದ ಮುಗುಳುನಗೆಯೊಗು'ುಗೆಗೆತ್ರಿಭುವನಂಗಳನಳೆದ ಪದ ನಳಿನಗಳಿಗೆ 2ಜ್ಞಾನಮುದ್ರೆಯ ಕರದಿ ಜ್ಞಾನೋಪದೇಶವನುತಾನೆ ಕರೆದಿತ್ತು ಭಕ್ತರ ಸಲಹುತಾ ಮಾನವನು ಕಡೆಗೊತ್ತಿ ಮಾನ್ಯ ತಾನೆಂದೆನಿಪಶ್ರೀನಿಕೇತನ ನಿಜದ ಚಿನ್ಮಯಾತ್ಮಕಗೆ 3ಕಾವೇರಿ ಗಂಗೆಯೊಲು ಕಮಲನಾಭನ ಕಥೆಯ ಪಾವನದ ತೀರ್ಥದಲಿ ಪಾಪವಳಿದು ಜೀವಭಾವವ ಬಿಟ್ಟು ಬ್ರಹ್ಮ ತಾನೇಯಾಗಿಯಾವಗವು ಸುಖಶರಧಿಯಾದ ಚಿನ್ಮಯಗೆ 4ರಾಗಾದಿರ'ತನಿಗೆ ರಾಗಿಗಳ ಸಂಸಾರಸಾಗರವ ದಾಟಿಸುವ ಬೋಧ ಘನಗೆಯೋಗಿಗಳ ಸಂಮತಗೆ ಗುರು ವಾಸುದೇವಗೆಯೋಗೇಶ ತಿರುಪತಿಯ ವೆಂಕಟೇಶ್ವರಗೆ 5ಓಂ ಶ್ರೀವತ್ಸಕೌಸ್ತುಭಧರಾಯ ನಮಃ
--------------
ತಿಮ್ಮಪ್ಪದಾಸರು