ಒಟ್ಟು 197 ಕಡೆಗಳಲ್ಲಿ , 52 ದಾಸರು , 170 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸದ್ಗುರುನಾಥನ ಕರುಣ ದೇಹಕೆ ಬೀಳೆಬದ್ಧಜೀವವದೆಂಬುದೆ ಮಾಡಿದನುಇದ್ದ ಸ್ವಾಸ್ಥಿಗಳೆಲ್ಲ ಆಶ್ರಯವದಾಯಿತುಶುದ್ಧಿ ಮಾಡಲಿಕ್ಕಿಲ್ಲ ಜೀವನನುಪಗುರುವೆ ನೋಡುವನಾದಗುರುವೆ ಕೇಳುವನಾದಗುರುವೆ ಶೀತೋಷ್ಣ ಅರಿವನಾದಗುರುವೆ ಘ್ರಾಣಿಪನಾದ ಗುರುವೆ ಉಣ್ಣುವನಾದಗುರುವೆ ಮನಸು ಬುದ್ಧಿ ತಾನಾದನು1ನಡೆವವನು ತಾನಾದ ನುಡಿವವನು ತಾನಾದಸಡಗರದ ಸಂಪತ್ತು ತಾನಾದನುಕೊಡುವವನು ತಾನಾದಕೊಂಬುವವ ತಾನಾದಕೊನಬುಗಾರಿಕೆಯೆಲ್ಲ ತಾನಾದನು2ತಾನೆ ಸಾಕ್ಷಾತ್ತಾಗಿ ಕೂರುವವ ಮಲಗುವವತಾನೆ ನಗುವವನು ತಾನೆ ಸಂತೋಷಿಯುತಾನೆ ಚಿದಾನಂದ ಗುರುನಾಥ ದೇಹದಿಂತಾನೆ ತಾನಾಗಿರಲು ಜೀವ ಮುಳುಗಿದನು3
--------------
ಚಿದಾನಂದ ಅವಧೂತರು
ಸಲ್ಲದು ಪುನರ್ಜನ್ಮ ಸಲ್ಲದು ಯೋಗಿಗೆಪರದವಲ್ಲಭತಾನಾಗಿನಿತ್ಯಸುಖಿಸುವಾತಾಂಗೆಪಬೀಜವದು ಹೋಗಿ ಅನ್ಯ ತೇಜದೊಳು ಬಿದ್ದ ಬಳಿಕಬೀಜವೆಂದು ಬಿತ್ತಲದು ಫಲಿತವಾಗುವುದೋಸಾಜಕರ್ಮಿಗಳು ಗುರುಕೃಪೆಯ ಪಡೆಯಲುಮುಕುತಿ ತಾನಲ್ಲದೆ ಪುನರ್ಜನ್ಮವೆಲ್ಲಿಯದೋ1ಕಾಷ್ಠವದು ಹೋಗಿ ಅಗ್ನಿ ಕುಂಡದಲಿ ಸುಟ್ಟ ಬಳಿಕಕಾಷ್ಠವೆಂದು ಕರೆಯಲದು ಕಾಷ್ಠವಹುದೇಶ್ರೇಷ್ಠವಾದ ಬ್ರಹ್ಮದೊಳು ವೇಷ್ಠಿತಾನಾದ ಬಳಿಕನಷ್ಟಮಾತಲ್ಲದೇ ಪುನರ್ಜನ್ಮವೆಲ್ಲಿಹುದು2ಕೀಟವದು ಹೋಗಿ ಭೃಮರದಾಟದೊಳು ಬಿದ್ದು ತನ್ನಕೀಟತನವಳಿದ ಮೇಲೆ ಕೀಟವಾಗುವುದೇಪಾಡಿ ಚಿದಾನಂದನೊಳು ಕೂಟವು ತಾನಾದ ಮೇಲೆಮುಕುತಿ ತಾನಲ್ಲದೆ ಪುನರ್ಜನ್ಮವೆಲ್ಲಿಯದು3
--------------
ಚಿದಾನಂದ ಅವಧೂತರು
ಸೊಕ್ಕು ನೋಡಿ ಯೋಗೀಶನ ಸೊಕ್ಕು ನೋಡಿಮಿಕ್ಕು ಮೀರಿ ಮೂರಕ್ಕರಗಳಕಂಡುನಕ್ಕು ಪಶ್ಚಿಮಗಿರಿ ಪೊಕ್ಕು ಬೆಳಗಿ ಜನಪಮೂರಕಟ್ಟಿಮೂರನು ಅರಶೀರಗುಟ್ಟಿಆರು ಎಂಟನೆ ಅಟ್ಟಿ ಐದು ಏಳನು ಮೆಟ್ಟಿತೋರುವ ಎರಡು ನಾಲ್ಕನು ತೊಲಗಿಸಿದಾತನ1ಲೋಕದ ಕೂಡ ಕೂಡಿಯೆ ವಿವೇಕ ಬೇಡಏಕವೆಂಬುದು ಬಿಡ ಅನೇಕವೆಂಬುದ ನಾಡಮೂಕ ಪದಗಳೆಂದು ನಿರಾಕರಿಸುತಲಿಹನು2ಅಕ್ಷಯಮುಚ್ಚಿ ತೆರದು ತೆರದಕ್ಷಯ ಮುಚ್ಚಿರಕ್ಷಿಸುತಿಪ್ಪ ಭಾಳೇಕ್ಷಣ ತಾನೆಂದು-ಪೇಕ್ಷೆಮಾಡುತ ಸರ್ವವ ನಿರೀಕ್ಷಿಸುತಿರುವವನ3ಮತಗಳ ನೆನೆದು ಶಾಸ್ತ್ರಗಳ ಗೆಲಿದುಪಾತಾಳಕಿಟ್ಟ ಮತಿ ಮೋಕ್ಷಗಳ ಬಿಟ್ಟ ತಿರುಗಿಸಿ ತಿರುಗಿಸಿ ಹುಟ್ಟಸತತ ಕಾಲದಿ ತನ್ನ ಮತಿ ಹಿಡಿಯೆಂಬನ4ಏನುಪಾಯ ಈ ಯೋಗಿಗೆ ಇನ್ನೇನು ನ್ಯಾಯತಾನಾಗದಗುರುಚಿದಾನಂದನ ತಾ ಕಂಡುತಾನೆ ತಾನಾಗಿ ತೋರುವ ನಿಜ ಯೋಗಿಯ5
--------------
ಚಿದಾನಂದ ಅವಧೂತರು
ಹಿರಿದು ಸಂಸಾರ ನೆಲೆಯದು ಕಲ್ಪತರುಕಾಮಧೇನುವದು ಸುಖವೋ ದುಃಖವೋಹೊನ್ನು ಸತಿಯು ಸುತರೆನ್ನವರೆನ್ನದೆಚಿನ್ಮಯರೂಪೆಂದು ತಿಳಿದುಉನ್ನತವಾಗಿಹ ಸಾಧುಗುಣದಿ ತಾಮುನ್ನ ನೋಡುವವನ ನರನೋ ಹರನೋ1ಮನೆಯು ಮಾತಾ ಪಿತ ಮನುಜವರ್ಗವನೆಲ್ಲಘನಮಹಿಮನ ವಿನೋದವೆಂದುಸನುಮತದಲಿ ತಾನಧಿಕಾರಿಯೆನಿಸಿಯೆಮನದಿ ಸೂಚಿಪುದು ಉರಿಯೋ ಸಿರಿಯೋ2ಬಂಧನದೊಳು ಮಹಾ ನಿಂದನೆಯನು ಕೇಳುತಲಿಕುಂದುಕೊರತೆಗೆಲ್ಲ ಹಿಗ್ಗುತಲಿಇಂದಿದು ಅತ್ಮನ ಲೀಲಾ ಚರಿತನೆಂದುಮುಂದೆ ತೋರುವದಿದು ಭಯವೋ ಜಯವೋ3ಜನನ ಮರಣ ಸುಟ್ಟುಮನುಜ ಜೀವನ ಕೆಟ್ಟುಕನಸಿನ ತೆರ ಸಂಸಾರ ಮೂಡಿದಿನಕರಜ್ಯೋತಿಯಲಿ ಬಹುಬೆಳಗುತಲಿ ತಾ ನಿಹುದುಗೆಲುವೋ ಒಲವೋ4ಕರುಣಕಟಾಕ್ಷಸುಕರುಣ ಶಾಂತತ್ವದಿಸರಸ ಸುಜ್ಞಾನವನಳವಡಿಸಿಗುರುಚಿದಾನಂದಾವಧೂತನೆ ತಾನಾಗಿಹರುಷಿಸಿ ಸುಖಿಪುದು ದೊರೆಯೋ ಚರಿಯೋ5
--------------
ಚಿದಾನಂದ ಅವಧೂತರು
ಹೇಗಿಹನು ಹಾಗಿಹನು ಪರಿಪೂರ್ಣ ಬ್ರಹ್ಮಹೇಗಿಹನು ಹಾಗಿಹನುಹೇಗಿಹನು ಎಂತೆಂದು ಕೇಳುವರು ಯಾರುಹೀಗಿಹನು ಎಂತೆಂದು ಹೇಳುವರು ಯಾರುಪಹಸಿವೆಯಾಗಿರಲು ಹಸಿವೆಯಂತಿಹನುತೃಷೆಯು ತಾನಾಗಿರಲು ತೃಷೆಯಂತೆ ಇಹನು1ದುಃಖಿಯಾಗಿರಲು ದುಃಖಿಯಂತಿಹನುಸುಖಿಯು ತಾನಾಗಿರಲು ಸುಖಿಯಂತೆ ಇಹನು2ದುಷ್ಟ ತಾನಾಗಿರಲು ಅವ ದುಷ್ಟನಾಗಿಹನುಶಿಷ್ಟನಾಗಿರಲು ಅವ ಶಿಷ್ಟನಾಗಿಹನು3ಜೀವನಾಗಿರಲು ಅವ ಜೀವನಾಗಿಹನುಶಿವನಾಗಿರಲು ಅವ ಶಿವನಾಗಿ ಇಹನು4ಚಿತ್ತಕ್ಕೆ ಬುದ್ಧಿಗೆ ತಾನಿಹನು ದೂರಸತ್ಯ ಚಿದಾನಂದ ಗುರುವೆಂಬಾತನು5
--------------
ಚಿದಾನಂದ ಅವಧೂತರು