ಒಟ್ಟು 34031 ಕಡೆಗಳಲ್ಲಿ , 136 ದಾಸರು , 11034 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಓ ಎನ್ನಬಾರದೇ ಹರಿಯೆ | ಶ್ರೀಯರಸನೇ ನೀನೇ ಗತಿಯೆಂದು ಅನ್ಯ ಉ| ಪಾಯವನರಿಯದ ಬಾಲಕ ಕರೆದರೆ ಪ ಹಾಲವ ಬೇಡುವ ಮೊರೆಯಿಡಲುಪಮನ್ಯು ಆ | ಬಾಲಗ ಧ್ವನಿ ದೋರಿದಂತೆ | ಚಾಲವರಿದು ಸರೋವರದಲಿ ಕರೆದ ಶುಂ| ಡಾಲಗೆ ಧ್ವನಿ ದೋರದಂತೆ | ವ್ಯಾಳ್ಯೆಕ್ಕ ಒದಗೆಂದು ರಾತ್ರಿಲಿ ಕರೆದ ಪಾಂ| ಚಾಲಿಗೆ ಧ್ವನಿ ದೋರಿದಂತೆ | ಕಾಲಕಾಲಕ ಬಂದು ಮೊರೆಯಿಡೆ ಸುರಮುನಿ | ಜಾಲಕ ಮೈದೋರಿ ಧ್ವನಿ ದೋರಿದಂತೀಗ 1 ಆವಾಗ ಧ್ವನಿದೋರಿದಂತೆ | ಗೋವ ಮೇಯಿಸಿ ತೆರಳಲು ಗೊಲ್ಲರೊದರುವ ಭಾವಕ ಧ್ವನಿದೋರಿದಂತೆ | ದೇವ ನೀಮರಿಯಾಗೆ ಹುಂಕರಿಸ್ಸೊದರಲು | ಆವಿಗೆ ಧನಿ ದೋರಿದಂತೆ | ಕಾವನೈಯ್ಯನೆ ನಿನ್ನ ನೆನೆದ ಗೊಲ್ಲತೆರಾ | ಜೀವನ ಹಿತವಾಗಿ ಧನಿದೋರಿದಂತೀಗ 2 ಬಂದೂಳಗಕ ನಿನ್ನ ಪಾಂಡವರೊದಲು | ನಿಂದು ನೀ ಧನಿದೋರಿದಂತೆ | ಇಂದಾದಾ ಕಲಿಯುಗದ ದಾಸರ ಮಾತಿಗೆ | ಬಂದು ನೀ ಧನಿ ದೋರಿದಂತೆ | ಕಂದನಳುವ ಧ್ವನಿ ಕೇಳುತ ಜನನಿ ಅ | ನಂದದಿ ಧನಿದೋರುವಂತೆ | ತಂದೆ ಮಹಿಪತಿ - ನಂದನ ಪ್ರಭು ಗೋ | ವಿಂದ ಮುಕುಂದೆನ್ನ ಸಲಹೆಂಬ ಮೂಢನಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಓ ದಯಾನಿಧೇ ನೀ ದಯಮಾಡೋ ಓಂಕಾರ ಪ್ರಣವ ಮೊದಲೋ ಪ ಬೀದಿ ಪದಗಳ ಪೂಜ್ಯಮಾಗಲಿ ಸಾಧು ಜನ ಹೃದಯಾಂತರಸ್ಧಿತಿ1 ರಾಧೆಯರಸ ಪರಾತ್ಪರನೆ ಜಾಯ ವೇದನಿಜ ವೇದಾಂತರಸ್ಥಿತಿ2 ಕೋಲುಪೇಟೆ ಪುರೀಶ ತುಲಸಿ ಮೂಲವಿಗ್ರಹದ ನಾದ ಕಾರಣ 3
--------------
ಚನ್ನಪಟ್ಟಣದ ಅಹೋಬಲದಾಸರು
ಓ ದೇವ ನೀನೆಂಥ ಕರುಣಾಳೊ ಮಾದೇವ ನೀನೆಂಥ ಕರುಣಾಳೊ ಪ ಕಾಲನ ಕಾಲಲೊದ್ದು ಬಾಲನಿಗಾಯುಷ್ಯ ಪಾಲಿಸಿದೆ ನೀನೆಂಥ ಕರುಣಾಳೊ 1 ಸುರೇಂದ್ರ ಪ್ರಮುಖರ ಪೊರೆಯಲು ಗರಳವ ಕೊರಳೊಳು ಧರಿಸಿದೆ ಕರುಣಾಳು 2 ಘೋರ ಭವಾಂಬುಧಿ ತಾರಣೋಪಾಯವ ಬೀರಿದೆ ಜಗಕೆಲ್ಲ ಕರುಣಾಳು 3 ಕ್ಷೀರವ ಬೇಡಲು ಕ್ಷೀರೋದಧಿಯನಿತ್ತೆ ಪೋರನಿಗೆ ಇನ್ನೆಂಥ ಕರುಣಾಳು 4 ಶ್ರೀಕಾಂತ ಹಿತ ಸಖ ಶ್ರೀಕಂಠ ನಿನ್ನಂಥ ನಾ ಕಾಣೆ ಧರೆಯೊಳು ಕರುಣಿಗಳ 5
--------------
ಲಕ್ಷ್ಮೀನಾರಯಣರಾಯರು
ಓಂ ನಮೋ ನಮಃ ಕುಲಸ್ವಾಮಿ ಬಿನ್ನಪ ಲಾಲಿಸು ಪ್ರೇಮಿ ಮನ್ನಿಸೆಮ್ಮ ಭಕ್ತ ಸುಪ್ರಸನ್ನ ಮೂರುತಿ ಪ. ವಹ್ನಿಜಠರಸಂಸ್ಥಿತ ಸ್ವರ್ನದೀಗರ್ಭಸಂಭೃತ ಪನ್ನಂಗಭೂಷಣನ ವೀರ್ಯೋತ್ಪನ್ನ ಸಂಪನ್ನ 1 ತಾರಕಾದಿದೈತ್ಯಾಂತಕ ವೀರವೈಷ್ಣವರ ತಿಲಕ ಸೇರಿದವರ ಪೊರೆವ ಕರುಣಾವಾರಿ ರಾಶಿಯೇ2 ಶಿವಕುಮಾರಾಶ್ರಿತಮಂದಾರ ದಿವಿ ಭುವಿ ವಿಖ್ಯಾತ ಶೂರ ನವವಿಧ ಹರಿಭಕ್ತಿಯಂ ಬೇಡುವೆನು ನೀಡಯ್ಯಾ 3 ಸ್ಥಾನಿಕಾಖ್ಯವಿಪ್ರರಿಂದ ಅನವರತ ಪೂಜೆಗೊಂಬ ದೀನಜನವತ್ಸಲ ಭವಾನಿಪುತ್ರನೆ 4 ಭೂವಳಯದಲ್ಲಿ ಮೆರೆವ ಪಾವಂಜಾಖ್ಯ ಪುರನಿವಾಸ ದೇವಲಕ್ಷ್ಮೀನಾರಾಯಣನ ಸೇವಕೋತ್ತಮ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಓಂ ನಮೋ ನಮಃ ಕುಲಸ್ವಾಮಿ ಬಿನ್ನಪ ಲಾಲಿಸು ಪ್ರೇಮಿ ಮನ್ನಿಸೆಮ್ಮ ಭಕ್ತ ಸುಪ್ರಸನ್ನ ಮೂರುತಿಪ. ವಹ್ನಿಜಠರಸಂಸ್ಥಿತ ಸ್ವರ್ನದೀಗರ್ಭಸಂಭೃತ ಪನ್ನಂಗಭೂಷಣನ ವೀರ್ಯೋತ್ಪನ್ನ ಸಂಪನ್ನ1 ತಾರಕಾದಿದೈತ್ಯಾಂತಕ ವೀರವೈಷ್ಣವರ ತಿಲಕ ಸೇರಿದವರ ಪೊರೆವ ಕರುಣಾವಾರಿ ರಾಶಿಯೇ2 ಶಿವಕುಮಾರಾಶ್ರಿತಮಂದಾರ ದಿವಿ ಭುವಿ ವಿಖ್ಯಾತ ಶೂರ ನವವಿಧ ಹರಿಭಕ್ತಿಯಂ ಬೇಡುವೆನು ನೀಡಯ್ಯಾ3 ಸ್ಥಾನಿಕಾಖ್ಯವಿಪ್ರರಿಂದ ಅನವರತ ಪೂಜೆಗೊಂಬ ದೀನಜನವತ್ಸಲ ಭವಾನಿಪುತ್ರನೆ4 ಭೂವಳಯದಲ್ಲಿ ಮೆರೆವ ಪಾವಂಜಾಖ್ಯ ಪುರನಿವಾಸ ದೇವಲಕ್ಷ್ಮೀನಾರಾಯಣನ ಸೇವಕೋತ್ತಮ5
--------------
ತುಪಾಕಿ ವೆಂಕಟರಮಣಾಚಾರ್ಯ
ಓಂ ನಮೋ ನಾರಾಯಣ ಪ ದುರಿತ ಹರ | ಓಂ ನಮೋ ಜಗದೀಶ ಪಾಲಿಸೊಅ.ಪ ಪೊರೆಯೊ ಅನಾಥ ಬಂಧು 1 ಬಾಧಿಸುವ ಮಾಯಾಗುಣಂಗಳು | ಭವ ಆಧರಿಸಿ ಸಲಹುವರ ಕಾಣೆನು 2 ತಂದೆ ಸದಾನಂದ 3
--------------
ಸದಾನಂದರು
ಓಂ ನಮೋ ನಾರಾಯಣಾಯ ತೇ ನಮೋ ನಮೋ ನಮೋ ಪ ಓಂ ನಮೋ ಓಂಕಾರಾದಿ ನೀ ಘನ್ನ ಮಹಿಮ ಅಷ್ಟಾಕ್ಷರಾತ್ಮಕನೆ ಅ.ಪ ಪ್ರಣವ ಪ್ರತಿಪಾದ್ಯ ನೀ ಅಷ್ಟಾಕ್ಷರದೊಳು ವಿಶ್ವತÉೈಜಸ ಪ್ರಾಜ್ಞ ತುರ್ಯಾತ್ಮ ಅಂತರಾತ್ಮ ಪರಮಾತ್ಮ ಜ್ಞಾನಾತ್ಮ ವರ್ಣಾತ್ಮಕ ನೀ ಓಂಕಾರದೊಳು ಅಉ ಮನಾದಬಿಂದು ಘೋಷ ಶಾಂತ ಅತಿಶಾಂತದೊಳು ಪ್ರತಿಪಾದ್ಯಮೂರುತಿ ಹರೆ1 ಪ್ರಣವದೊಳು ಆದಿವರ್ಣದಿಂದಭಿವ್ಮಕ್ತಿ ಕಾಲಗಳ್‍ವ್ಯಕ್ತವೊ ಪ್ರಾಣ ಲಕುಮಿಯಭಿಮಾನಿಗಳನಂತ ವೇದಗಳಿಂ ವಿಶ್ವಮೂರುತೀ ಹರೆ2 ವಯ್ಯ ಕವರ್ಗ ವರ್ಗವೈದು ಪಂಚಭೂತಗಳಂ ವರ್ಣದೊಳಭಿಮಾನಿಗಳ್ ಭೂತಕ ಗಣಪ ಪ್ರಹವವಾಯು ತೈಜಸ ಮೂರುತೇ3 ಪ್ರತಿಪಾದ್ಯನೆ ಮಕಾರ ವಾಚ್ಯ ಶ್ರೀ ಪ್ರಾಜ್ಞ ನಿನ್ನಿಂದಭಿ- ವ್ಯಕ್ತಿ ಚವರ್ಗ ಪಂಚಕ ಜ್ಞಾನೇಂದ್ರಿಯ ವೈದು ಸೂರ್ಯ ಪ್ರಾಣ ದಿಗ್ದೇ- ವತೆಗಳಿಹರು ಪ್ರತಿಗಾಣಿನೊ ಶ್ರೀ ಪ್ರಾಜ್ಞಮೂರುತಿ ಹರೆ4 ನಾದವಾಚ್ಯಪ್ರತಿಪಾದ್ಯ ತುರ್ಯನೆ ಅಭಿವ್ಯಕ್ತ ಪಂಚವರ್ಣ ಟವರ್ಗ ಕರ್ಮೇಂದ್ರಿಯಗಳ್ ಶ್ರೀ ತುರ್ಯ ಮೂರುತೆ 5 ಬಿಂದುವಾಚ್ಯ ಪ್ರತಿಪಾದ್ಯ ನೀನಾತ್ಮ ಬಿಂದುವಿಂದ ತವರ್ಗ ಪೊಂದಿಕೊಂಡಿಹುದು ತನ್ಮಾತ್ರಪಂಚಕ ಪಂಚವಾಯುಗಳಿಹರಯ್ಯ ಬಂಧ ಮೋಚಕ ನೀ ಕಾರಣ ಹರೆ 6 ಘೋಷದಿಂದಲಭಿವ್ಯಕ್ತಿ ಪಂಚಮನೋ ವೃತ್ತಿಗಳದರಭಿಮಾನಿ ಓಷಧೀಧರ ಖಗಪ ಶೇಷೇಂದ್ರ ಕಾಮರು ಪಕಾರ ಪಂಚವರ್ಣ ದೋಷರಹಿತ ಮನೋಧಾಮದಿ ನೀ ದೊರೆ 7 ಕಾರಾದಿ ಸಪ್ತವರ್ಣ ಸಪ್ತಧಾತುಗಳಲ್ಲಿ ಪರಿ ಅರಿಯೆನೊ ಹರಿಯೆ 8 ಅತಿ ಶಾಂತದೊಳು ಪ್ರತಿಪಾದ್ಯನಾಗಿಹೆ ಜ್ಞಾನಾತ್ಮ ಹಕಾರಾದಿ ತ್ರೈವರ್ಣ ಅದರಿಂದ ಗುಣಕ್ರಿಯವೊ ತತುಕ್ರಿಯ ಜಾಗೃತ ಸ್ವಪ್ನ ಸುಷುಪ್ತಿ ವಿಶ್ವಾದಿರೂಪದಿಂದ ಉರಗಾದ್ರಿವಾಸವಿಠಲ ಮೂರುತೇ 9
--------------
ಉರಗಾದ್ರಿವಾಸವಿಠಲದಾಸರು
ಓಂ ನಮೋ ಮಹೀಪತಿ ಸದಾನಂದ ಗುರುಮೂರ್ತಿ | ಸನ್ನುತ ನಿಮ್ಮ ಖ್ಯಾತಿ ಪೊಗಳಲಾಪೆನೆ ಕೀರ್ತಿ ಪ ತನ್ನ ತಾ ಮರೆದವರಾ | ನೀನು ಕೊಟ್ಟು ಎಚ್ಚರಾ | ಮುನ್ನಿ ನಂದದಿ ಮಾಡಿ | ಓಡಿಸಿದೇ ಭವದೂರಾ 1 ಸಹಜ ಬೀರುವ ವಚನಾ | ಅದೇ ಉಪದೇಶ ಜ್ಞಾನಾ| ಇಹ ಪರಕ ನಿಧಾನಾ | ಮಾಡುವದು ಸಾವಧಾನಾ2 ವೇದ ಸಿದ್ಧಾಂತದಲ್ಲಿ | ರಾಜಯೋಗ ಮನೆಯಲ್ಲಿ | ಬೋಧಿಸುವ ವಸ್ತು ನೀನೇ | ಸರಿಗಾಣೆ ನಾನೆಲ್ಲಿ3 ಏನು ಪುಣ್ಯವೋ ಎನ್ನಾ | ಅದೇ ಬಾಲಕ ನಿನ್ನಾ | ತಾನೇನ ಸಾಧುವೆನಗ | ಇರಲು ನಿಮ್ಮ ದಯಾಘನಾ 4 ದಾಸರಾ ದಾಸನೆಂದು | ಇನ್ನು ನೋಡದೆವೆ ಕುಂದು | ಭಾಸಿ ಪಾಲಿಸು ಕೃಷ್ಣಗ ಎಂದೂ | ಕೈಯ್ಯಾ ಬಿಡೆನೆಂದು5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಓಂ ನಮೋ ರಾ‌ಘವೇಂದ್ರಾಪ ಓಂ ನಮೋ ರಾಘವೇಂದ್ರಾ ಘನದಯ ದಾಸಾಂದ್ರಾ ವಾರಿಧಿ ಪೂರ್ಣಚಂದ್ರಾ1 ಶ್ರೀರಾಮ ಜಯರಾಮ ಸ್ವಾಮಿ ಜಯಜಯ ರಾಮಾ ಈರೀತಿ ಸ್ಮøತಿಸಲಿಕೆ ಕೊಡುವಿ ವೈಕುಂಠ ಧಾಮಾ2 ಉಗ್ರ ವೃತ ತಪದಿಂದಾ ಜಪ ಅನುಷ್ಠಾನದಿಂದಾ ಶ್ರೀಘ್ರದಿಂದ ಪಡಕೊಂಬಾ ಫಲಕಾಮ ಸನ್ನಿಧಾ3 ಹನುಮಬಲ್ಲಾ ಹರಬಲ್ಲಾ ಋಷಿನಾರದ ಬಲ್ಲಾ ನೆನವನಾಮ ಸವಿಯಲೋ ಹೇಳಲಿಕೆ ಅಳವಲ್ಲಾ 4 ಮರಳು ಮಾನವರಂತಾ ಎನ್ನ ನೋಡಬ್ಯಾಡ ಡೊಂಕಾ ಗುರುಮಹಿಪತಿ ಸ್ವಾಮಿ ನಾಮ ವೆನೆವ ನಿ:ಶಂಕಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಓಂ ನಮೋ ಸಕಲ ಮಂಗಲದಾಯಕ |ಘನ್ನ ಮಹಿಮ ಶ್ರೀ ಗಣನಾಯಕ |ನಿನ್ನ ಕೀರ್ತಿ ಪಾಠವ ಭಕ್ತರ |ಇನ್ನು ಮಾಡೋ ನಿರ್ವಿಘ್ನದಿ ಮುಕ್ತರ 1 ನಿರ್ಜರ ವಾಣಿ |ಬಂದು ಸನ್ಮತಿ ನೀಡುತ ಶಾರದಾ |ಇಂದು ವದನೆ ರಕ್ಷಿಸು ಶಾರದಾ 2 ನಿರ್ಜರ ರಂಜನಾ |ಕೃಪೆ ಯಲಿ ರಕ್ಷಿಸು ದೋರಿ ನಿರಂಜನಾ 3 ಸಚ್ಚಿದಾನಂದಾ ವಿಗೃಹ ಮೂರುತಿ |ಅಚ್ಯುತಾನಂತ ಮಂಗಲ ಕೀರುತಿ |ಎಚ್ಚರಿ ಸೆನಗೆ ಭಕ್ತಿಯ ಸ್ಪಾದವಾ |ನಿಚ್ಚ ರಕ್ಷಿಸು ತೋರುತ ಪಾದವಾ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಓಂಕಾರ ಪ್ರತಿಪಾದ್ಯ ಶಂಖಚಕ್ರಾಭಯಕರ ಬಿಂಕದಿಂದ ಬಾಕು ಟೊಂಕದಿ ಕಟ್ಟಿ ಮೆರೆವ ದೇವ 1 ಇಷ್ಟು ಜನರ ರೋಗ ತೊಟ್ಟಿ ತೀರ್ಥದಿಂದ ಕಳೆವ ಕಷ್ಟದ ಕಂಕಣ ಕಟ್ಟಿ ಮೆರೆವ ದೇವಾ 2 ದೇಶದೇಶದಿ ಬರುವ ದಾಸ ಜನರ ಅರ್ಥಿ ಕಾಸುವೀಸಕೆ ಕೊಟ್ಟು ಲೇಸಾಗಿರುವಿಯಿಲ್ಲಿ 3 ನಾಮ ತೀರ್ಥ ಪ್ರಸಾದ ಕಾಮಿಸೆ ವಿಕ್ರಯಿಸುವ ನೇಮಗಳನೆ ಕೊಟ್ಟು ತ್ರಿಧಾಮ ನಿಲಯನೆ 4 ಮಂಗಳ ಮಹಿಮನೆ ಗಂಗಾಜನಕನೆ ಅಂಗಜನಯ್ಯನೆ ವೆಂಕಟರಮಣನೆ 5 ತಾಳ ತಂಬೂರಿ ದಮ್ಮಡಿ ಮೇಳದೊಳು ದಾಸರು ವೇಳೆ ವೇಳೆಗೆ ಸೇವಿಸೆ ಕಾಳ ದೋಷವ ಕಳೆವ 6 ರಮಾ ಸೇವಿತÀ ವಿಜಯ ರಾಮಚಂದ್ರವಿಠಲ ನಿತ್ಯ ನಿನ್ನ ನಾಮಗಳನೆ ನುಡಿಸೊ 7
--------------
ವಿಜಯ ರಾಮಚಂದ್ರವಿಠಲ
ಓಂಕಾರ ರೂಪಿಣಿ ಭದ್ರಾಣಿ ಕಲ್ಯಾಣಿ ಪಂಕೇಜದಳಲೋಚನೀ ಅಂಬಾ ಪ ಶಂಕರ ಪ್ರಿಯರಾಣಿ ಗೀರ್ವಾಣೆ ರುದ್ರಾಣಿ | ಸ ರ್ವ ಮಂಗಳವಾಣಿ | ಕರುಣಿ ಶುಶ್ರೋಣಿ ಅ.ಪ ಹೈಮವತೀ ಮಾತೆ | ಹಿಮಗಿರಿ ತನುಜಾತೆ ಭಾಮೆ ಸ್ವಯಂಜಾತೆ | ಸುರಮೌನಿಗೀತೆ ಪ್ರೇಮ ರಸಾನ್ವಿತೇ | ರಾಮಾಭಿನಂದಯುತೆ ಶ್ರೀಮಾಂಗಿರೀಶ | ರಂಗಸಹಜಾತೆ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಓಂಕಾರಾ ಕಾರಾ ಶಿವನೇ | ಪಾಲಯ ಮಾಂ ಪ ವೈಕಾರಿಕಾದಿ ತ್ರ್ಯಾಕಾರ ಹರನೆಸ್ವೀಕರಿಸುವುದೀ ತೋಕನ ಬಿನ್ನಪ ಅ.ಪ. ನರ್ಮದೆ ಕಾವೇರೀ ಸಂಗಮಾ | ಶೈಲವಾಸಾ |ಹಮ್ರ್ಯ ದೊಳಗೆ ಇಹ | ಬೊಮ್ಮನಯ್ಯಾ ಪದಕಮ್ಮಲ ಕಾಂಬ ಸು | ಹಮ್ಮ ನೀಯೊ ಹರ 1 ವ್ರಾತ ತುತಿಸೆ ಬಲುಪ್ರೀತಿಲಿ ತ್ರಿಪುರಾ | ರಾತಿ ಎನಿಸಿದೇ 2 ಬದರೀಯಾ ವಾಸವಾ | ನಾರಾಯಣನಾ |ಪದದ ಉದಕ | ಅಭಿಷೇಚಿಸುವೆನುಮುದದಿ ಕೊಳ್ಳೊ ಗುರು | ಗೋವಿಂದ ಪೌತ್ರಾ 3
--------------
ಗುರುಗೋವಿಂದವಿಠಲರು
ಓಡದಿರು ಓಡದಿರು ಖೋಡಿ ಮನವೆ ಮೂಢತನದಲಿ ಬರುವ ಕೇಡುಗಳನರಿದರಿದು ಪ. ಬೀಸುವದು ಬಿರುಗಾಳಿ ಸೂಸುವದು ಉರಿಮಳೆಯು ಪೆಸರಿಲ್ಲದೆ ಕತ್ತಲೆಯು ಮುಸುಕುತಿಹುದು ಈಸು ನೆಲಸಿಹ ಘೋರ ಭೀಷಣಾಟವಿಯೊಳಗೆ ಬೀಸುವನು ಬೇಡನೊಬ್ಬನು ಬಲೆಯನಿಕದಕೊ1 ಅತ್ತೆಯೆಂಬುವಳು ನಿನ್ನ ನೆತ್ತಿಯಲಿ ತೈಲವನು ಒತ್ತಿ ಮೋಹದಿ ವಹಿಸಿಕೊಂಡಿರುವಳು ಅತ್ತ ಕಡೆ ಬೇಡ ಹಿಂದೊತ್ತಿ ಬರುವರೆ ಬೇಗ ತುತ್ತಾಗ ಎನುತ ಬಾಯ್ ತೆರೆದಿರುವಳು 2 ಮುಂಗಡಯೊಳ್ ಸಾಲಾಗಿ ಅಂಗಡಿಗಳಿರುತಿಹವು ಹಂಗಿಗನು ನೀನಾಗಿ ಬೇಡ ಅವರ ಸಂಗ ಗೈಯುತ ವ್ಯಾಪಾರಂಗಳನು ಮಾಡಿದರೆ ಭಂಗಿಯನು ಕೊಟ್ಟು ಬಲು ಭಂಗಪಡಿಸುವರಯ್ಯ 3 ಖೂಳತನ ಬೇಡ ಬಾ ಮಾಳಿಗೆಗೆ ಹೋಗುವ ಏಳು ಮೆಟ್ಟಲ ದಾಂಟಿ ಲೋಲತನದಿ ಅಲದೆಲೆ ಮಂಚದಲಿ ಲೋಲನಾಗಿಹನ ಪದ ಆಲಿಂಗನದಿ ಬಲು ಕುಶಾಲಿನಲ್ಲಿರು ಕಂಡ್ಯ 4 ಈ ರೀತಿಯಲಿ ನಿನಗೆ ಸಾರಿ ಪೇಳಿದೆ ನೋಡು ಭೂರಿ ಮಾಯಾಭ್ರಾಂತಿಗೊಳಗಾಗದೆ ಕಾರಣಿಕ ಲಕ್ಷ್ಮೀನಾರಾಯಣನ ಪಾದ ವಾರಿಜದಿ ನಲಿದು ಸುಖಿಯಾಗು ನೀ ಮನವೆ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಓಡದಿರು ಓಡದಿರು ಖೋಡಿ ಮನವೆ ಮೂಢತನದಲಿ ಬರುವ ಕೇಡುಗಳನರಿದರಿದುಪ. ಬೀಸುವದು ಬಿರುಗಾಳಿ ಸೂಸುವದು ಉರಿಮಳೆಯು ಪೆಸರಿಲ್ಲದೆ ಕತ್ತಲೆಯು ಮುಸುಕುತಿಹುದು ಈಸು ನೆಲಸಿಹ ಘೋರ ಭೀಷಣಾಟವಿಯೊಳಗೆ ಬೀಸುವನು ಬೇಡನೊಬ್ಬನು ಬಲೆಯನಿಕದಕೊ1 ಅತ್ತೆಯೆಂಬುವಳು ನಿನ್ನ ನೆತ್ತಿಯಲಿ ತೈಲವನು ಒತ್ತಿ ಮೋಹದಿ ವಹಿಸಿಕೊಂಡಿರುವಳು ಅತ್ತ ಕಡೆ ಬೇಡ ಹಿಂದೊತ್ತಿ ಬರುವರೆ ಬೇಗ ತುತ್ತಾಗ ಎನುತ ಬಾಯ್ ತೆರೆದಿರುವಳು 2 ಮುಂಗಡಯೊಳ್ ಸಾಲಾಗಿ ಅಂಗಡಿಗಳಿರುತಿಹವು ಹಂಗಿಗನು ನೀನಾಗಿ ಬೇಡ ಅವರ ಸಂಗ ಗೈಯುತ ವ್ಯಾಪಾರಂಗಳನು ಮಾಡಿದರೆ ಭಂಗಿಯನು ಕೊಟ್ಟು ಬಲು ಭಂಗಪಡಿಸುವರಯ್ಯ 3 ಖೂಳತನ ಬೇಡ ಬಾ ಮಾಳಿಗೆಗೆ ಹೋಗುವ ಏಳು ಮೆಟ್ಟಲ ದಾಂಟಿ ಲೋಲತನದಿ ಅಲದೆಲೆ ಮಂಚದಲಿ ಲೋಲನಾಗಿಹನ ಪದ ಆಲಿಂಗನದಿ ಬಲು ಕುಶಾಲಿನಲ್ಲಿರು ಕಂಡ್ಯ4 ಈ ರೀತಿಯಲಿ ನಿನಗೆ ಸಾರಿ ಪೇಳಿದೆ ನೋಡು ಭೂರಿ ಮಾಯಾಭ್ರಾಂತಿಗೊಳಗಾಗದೆ ಕಾರಣಿಕ ಲಕ್ಷ್ಮೀನಾರಾಯಣನ ಪಾದ ವಾರಿಜದಿ ನಲಿದು ಸುಖಿಯಾಗು ನೀ ಮನವೆ5
--------------
ತುಪಾಕಿ ವೆಂಕಟರಮಣಾಚಾರ್ಯ