ಒಟ್ಟು 7653 ಕಡೆಗಳಲ್ಲಿ , 132 ದಾಸರು , 4671 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾನಾ ವೇಷಗಳಿನ್ನು ನಿನಗ್ಯಾಕೊ ಹರಿಯೆ ನಿನ್ನ ಭಕ್ತರು ನಿನ್ನ ತಿಳಿಯದೆ ಬಿಡರು ಪ ಮೀನಾಗಿ ಜಲದೊಳು ತಿರುಗುವದ್ಯಾಕೊ ಚಾರಣನೆಂದೆನಿಸಿ ಭಾರವ ಪೊತ್ತುದ್ಯಾಕೊ 1 ಹಂದ್ಯಾಗಿ ದಿತಿಜನ ಬಡಿದೆ ನೀನ್ಯಾತಕೋ ಕಂದನ ಪೊರೆಯೆ ಕಂಬದಿ ತೋರಿದ್ಯಾಕೊ 2 ವಟುವಾಗಿ ಭೂಮಿಯ ಬೇಡಿದೆ ಏತಕೊ ಹಟವು ರಾಯರ ಮೇಲೆ ನಿನಗ್ಯಾಕೆ ಬೇಕೋ 3 ಮಲತಾಯಿ ನುಡಿಗಾಗಿ ವನವಾಸ ನಿನಗ್ಯಾಕೊ ಬಲದಿ ತಂದೆಯ ಬಂಧ ಬಿಡಿಸಿದ್ದು ಸಾಕೊ 4 ರಾಜೇಶ ಹಯಮುಖ ಬತ್ತಲೆ ನಿಂತೆ ಏಕೊ ತೇಜಿಯನೇರ್ದು ತೋರುವ ಶೌರ್ಯ ಸಾಕೊ 5
--------------
ವಿಶ್ವೇಂದ್ರತೀರ್ಥ
ನಾನಾಗಿ ನನಗಾಗಿ ನಮಿಸುವೆನು ಬಾಗಿ ನೀನಾಗಿ ಕೃಪೆಮಾಡೋ ದೀನಾನುರಾಗಿ ಪ ನಾನಿನ್ನ ಕೈಗೊಂಬೆ ನೀನೆಗತಿಯೆಂಬೆ ನೀನನ್ನ ಕರೆತಂದೆ ಶ್ರೀನಾಥ ನಾ ಬಂದೆ ಅ.ಪ ತರಳನ ಕರೆತಂದೆ ತರುಣಿಕೂಗಿ [ದರಿಕೆಬಿಡಿಸಿ ಮಾನಿನಿಯ ರಕ್ಷಿಸಿದೆ] ಹರಿಯೊಂದು ಜಲದಲಿ ನರಳಿದಕರೆಗೆ ಕರುಣದೊಳೋಡಿ ಬಂದು ಪೊರೆದೆ ನೀತಂದೆ 1 ಜ್ಞಾನಿಯು ನಾನಲ್ಲ ಮಾನಿಯುಮಲ್ಲ ಧ್ಯಾನದ ರೀತಿಯ ನಾನರಿತಿಲ್ಲ ನಾನಾ ಶಾಸ್ತ್ರಂಗಳ ಕಲಿತವನಲ್ಲ ನೀನೆ ಶರಣೆಂಬೆ ಮಾಂಗಿರಿಯ ರಂಗಯ್ಯ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಾನಿನ್ನ ತೆಗಳಿದೆನೇ ರಂಗಯ್ಯ ನಾನಿನ್ನ ಮಹಿಮೆಯ ಹೊಗಳಿದೆನಲ್ಲವೆ ಪ ನೀನೇತಕೆನ್ನೊಳು ದಯತೋರದಿರುವೆ ನಾನಿನ್ನ ಚರಣವ ದೃಢದಿ ನಂಬಿರುವೆ ಅ.ಪ ಮೀನಾಗಿ ನಾಲ್ಕುಮಕ್ಕಳ ಹೊತ್ತು ತಂದೆ ನೀನೇ ಕಮಠನಾಗಿ ನಗವೆತ್ತಿ ನಿಂದೆ ದಾನವ ಸಂಹಾರಕಾಗಿ ಸೂಕರನಾದೆ ನೀನೇ ನರಹರಿಯೆಂದು ನುತಿಸಿದೆನಲ್ಲದೆ 1 ಭೂಮಿಯನಳೆದವನೆಂದೆ ನೀನೇ ಭೂಮಿಪರನು ಕೊಂದೆ ಎಂದೆ ಭೂಮಿಜೆಯರಸ ರಾವಣವೈರಿಯೆಂದೆ ಕಾಮಪಾಲನು ಹಲಧರನೆಂದೆನಲ್ಲದೆ 2 ತರುಣಿದ್ರೌಪದಿಗಾಗಿ ಕುರುಕುಲವಿರಿದೆ ತುರಗವನೇರಿ ದುಷ್ಟರನೆಲ್ಲ ತರಿದೆ ಶರಣ ಜನರಿಗಾಗಿ ಹರಿಹರ ನೀನಾದೆ ವರದ ಮಾಂಗಿರಿರಂಗ ನೀನೆಂದೆನಲ್ಲದೆ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಾನು ಎಂಬೊದೆ ದೊಡ್ಡದು ನೀನೆಲ್ಲಿಹೆಯೊ ನಾನೆಲ್ಲಿ ಕಾಣಲಿ ಪ. ನಾನೆಂಬೊ ವ್ಯಾಪಾರ ನೀನೆ ಮಾಡಿಹೆ ಗಾನಲೋಲ ಸರ್ವರಂಗಲಿ ನಾನೇ ಇಹೆನೆಂದು ಅ.ಪ. ಸರ್ವರೊಳಗೆ ನಾನೆಂಬೊದೇ ಇರಲಾಗಿ ಸಾರ್ವಜನಿಕ ನೀನೆಲ್ಲಿಹೆಯೊ ಸರ್ವಧಿಕಾರಿ ನೀನೇ ಎಂಬ ವಿಬುಧರ ಸರ್ವಕಾಲದಿ ಸರ್ವ ಸುರರ ಸಹಿತಿಹೆ ನಾನು 1 ಮಿಂಚಿದ ಪಾಪವ ಮಾಡುವ ಮನುಜರ ವಂಚಕತನದಲಿ ದೇಹದೊಳಿಹೆ ನೀನು ಸಂಚಿತಾರ್ಥದ ಪುಣ್ಯವ ಗಳಿಸಿದ ಭಕ್ತರ ಮಿಂಚಿನ ಹುಳದಂತೆ ಕಂಚಿ ವರದ ಇಹೆ 2 ರಘುಪತೆ ರಾಘವನೆನುತ ಶ್ರೀ ಶ್ರೀನಿವಾಸನ ಬಗೆ ಬಗೆ ಸ್ತುತಿಸದೆ ಅಧಮರಿಗಿಲ್ಲ ಅಘಹರ ಗೋಪಿಗೆ ಮಿಗೆಯಾಟ ತೋರಿಹೆ ನಗಧರ ಅಳಗಿರಿ ಸೊಗಸಿನ ಚೆನ್ನಿಗ ನಾನು 3
--------------
ಸರಸ್ವತಿ ಬಾಯಿ
ನಾನು ನಿನ್ನ ಸೇವಕ ಏನಾದರೂ ಬರಲಿ ನಿನ್ನ ಬಿಡುವನೆ ರಂಗಾ ಪ ಅಪತ್ತೆ ಬರಲಿ ಅತಿಶಯದ ಕ್ಲೇಶವೇ ಬರಲಿ ಕೋಪ ಕಾಮಾದಿಗಳು ವೆಗ್ಗಳಿಸಲಿ ಪಾಪದ ರಾಶಿಗಳು ಬಂದು ಬೆನ್ನಟ್ಟಲಿ ಶ್ರೀಪತಿ ನಿನ ಪಾದವನು ಬಿಡಬಲ್ಲನೆ 1 ಬಟ್ಟೆ ಅತಿ ಕಠಿಣವಾಗಲಿ ಯಮನಾಳು ಬಲು ಭಯಂಕರರಾಗಲಿ ಯಮನು ದಂಡಿಸಿ ತೀವ್ರ ನಿರಯದೊಳಗೆ ಇಡಲಿ ಕಮಲನಾಭನೆ ನಿನ್ನ ಪಾದವನು ಬಿಡಬಲ್ಲನೆ2 ಲೋಕದೊಳಗಿದ್ದ ಜನರಿಗೆ ಬಪ್ಪ ದೋಷಗಳು ಏಕವಾಗಿ ಎನಗೆ ಬರಲಿ ಇಂದೆ ನಾ ಕಳವಳಿಸಿದರು ನಿನ್ನಂಘ್ರಿಯಗಳಾಣೆ ಶ್ರೀಕಾಂತ ವಿಜಯವಿಠ್ಠಲರಂಗ ಕೇಳೊ3
--------------
ವಿಜಯದಾಸ
ನಾನೆಲ್ಲಿ ಜ್ಞಾನಿಯು ನಾನೆಲ್ಲಿ ಸುಜನನು ಹೀನ ವಿಷಯಗಳುಂಬ ಶ್ವಾನನಂತಿರುವೆ ಪ ಗಾತ್ರ ಬಳಲಿಸಿ ಮದನಸೂತ್ರ ಬೊಂಬೆಯು ಎನಿಸಿ ನೇತ್ರದಿಂದಪಾತ್ರದವರನು ನೋಡಿ ಸ್ತೋತ್ರಮಾಡುತ ಹಿಗ್ಗಿರಾತ್ರೆ ಹಗಲು ಕೆಟ್ಟ ವಾರ್ತೆಯಲ್ಲಿರುವೆ 1 ಧನದಾಸೆ ಘನವಾಗಿ ಅಣು ಮಹತ್ಕಾರ್ಯದೊಳುತಣಿಸಿ ದಣಿಯಲು ತೃಣವು ದೊರೆಯದಿರಲುಮನೆ ಮನೆಗೆ ಬಾಯ್ದೆರೆದು ಶುನಕನಂತೆ ದಿನಗಳೆವೆಮನುಜ ಪಶುವಿಗೆ ಇನ್ನು ಮುನಿಯೆಂಬಿರೆಂತೋ2 ನಾಲಗೆಯ ರುಚಿಯಿಂದ ಸಾಲದಾಯಿತು ಬಯಕೆಕಾಲ ಕಾಲಕೆ ನೆನಸಿ ಹಾಳಾದರೂಶೀಲಗಳ ಕಳಕೊಂಡು ಚಾಲುವರಿಯುತ ಪರರಆಲಯದ ಉಚ್ಚಿಷ್ಠ ಮೇಲಾದ ಸವಿಯ3 ಸ್ನಾನಧ್ಯಾನವನರಿಯೆ ಸಾನುರಾಗದಿ ಭಕ್ತಿಕೂನ(ಗುರುತು)ವಿಲ್ಲದೆ ಡಂಭ ಮೌನಿಯೆನಿಸಿನಾನಾ ವಿಷಯ ಮನದಿ ನಾ ನೆನೆಸುವೆ ನಿತ್ಯಏನಾದರೂ ಕಷ್ಟ ಕಾಣದಂತಿರುತಿಪ್ಪೆ 4 ಪತಿತರೊಳು ಎನ್ನಂಥ ಪತಿತರೊಬ್ಬರ ಕಾಣೆಗತಿಯು ನೀನಲ್ಲದೆ ಅನ್ಯರಿಲ್ಲಪತಿತ ಪಾವನನೆಂಬೊ ಬಿರುದುಂಟುಮಾಡುವಕ್ಷಿತಿಪತಿ ಶ್ರೀಕೃಷ್ಣರಾಯ ನೀನಹುದೋ5
--------------
ವ್ಯಾಸರಾಯರು
ನಾನೇ ಭ್ರಮಿಸಿದೆನೋ ವಿಷಯ ಸಂಗ ನೀನೇ ನಲಿದಿತ್ತೆಯೋ ಪ. ಗಾನಲೋಲನೆ ಕೃಷ್ಣ ಏನೆಂಬುದರಿಯೆನೊ ಮೌನಿ ಜನಪ್ರಿಯ ಧ್ಯಾನಗಮ್ಯನೆ ರಂಗ ಅ.ಪ. ನೂಕುತ ದಿನ ಕಳೆದೆ ಕಾಕು ಯುಕುತಿಯಲ್ಲಿ ವ್ಯಾಕುಲ ಮನಕಿಲ್ಲ ಶ್ರೀಕಾಂತ ನಿನ್ನಿಚ್ಛೆ ಸುಖದುಃಖ ನಿಕರವ 1 ಆಟ ಪಾಟ ನೋಟವೂ ಊಟ ಕೂಟ ಕಾಟ ಕರ್ಮಗಳೆಲ್ಲವೂ ಹಾಟಕಾಂಬರ ನಿನ್ನಾಟವÉನ್ನಲುಭವ ದಾಟಿಸುವವೊ ತೆರೆ ಏಟಿಗೆ ಕೊಡುವುವೋ 2 ನರಕಕೆ ಕಾರಣವೋ ಹೇ ಶ್ರೀನರ ಹರಿ ನಿನ್ನ ಪ್ರೀತಿ ಕರವೋ ಸಂಚಿತ ಕರ್ಮ ಹರಿಸುತ ವರ ಸುಖ ಪಾಲಿಪ ಗುರುತಿನ ಪರಿಯೋ 3 ದೇಹಕ್ಕೆ ಹಿತಕರವೋ ಇಲ್ಲವೆ ಮನ ದಾಹಕ್ಕೆ ಮೃತ ಕರವೋ ದೇಹ ಮೋಹಾದಿಗಳಳಿದು ನಿಶ್ಚಲ ತತ್ವ ಶ್ರೀಹರಿ ತೋರುವ ತೆರವೊ ಒಂದರಿಯೆ 4 ಪಾಪಕ್ಕೆ ಹಿತಕರವೋ ಇಲ್ಲವೆ ಮನ ದಾಹಕ್ಕೆ ಮೃತ ಕರವೋ ದೇಹ ಮೋಹಾದಿಗಳಳಿದು ನಿಶ್ಚಲ ತತ್ವ ಶ್ರೀಹರಿ ತೋರುವ ತೆರವೊ ಒಂದರಿಯೆ 5 ಪಾಪಕ್ಕೆ ಕಾರಣವೋ ಈ ಕರ್ಮಗಳ ಳಾಪದುದ್ಧಾರಕವೋ ಗೋಪಾಲಕೃಷ್ಣವಿಠ್ಠಲನೆ ಮದ್ಗುರು ಬಿಂಬ ವ್ಯಾಪಾರದ್ವಯ ನಿಂದು ನೀ ಪ್ರೀತನಾಗಲೊ 6
--------------
ಅಂಬಾಬಾಯಿ
ನಾನೇನ ಮಾಡಿದೆ ತಪ್ಪುಗಳನ್ನ ನಾನೇನ ಮಾಡಿದೆ ದೇವರದೇವ ಪ ನಿನ್ನ ದಾಸರ ತಪ್ಪನೆಣಿಸದೆ ಪೊರೆಯುವೆ ನಾನೊಬ್ಬ ದಾಸನೆಂದರಿದು ನೀ ಪೊರೆಯೊ 1 ಭೃಗುವಂತೆ ನಿನ್ನಯ ಎದೆಗೆ ತುಳಿಯಲಿಲ್ಲ ನಗವೈರಿಯಂತೆ ಯುದ್ಧವ ಮಾಡಲಿಲ್ಲ 2 ಅಂಗಾಧಿಪತಿಯಂತೆ ಕೊಂದೆನೆಂದರಿತಿಲ್ಲ ಗಂಗೆಯ ಸುತನಂತೆ ಫಣಿಗೆ ಹೊಡೆಯಲಿಲ್ಲ 3 ನಿನ್ನ ಬಿಟ್ಟನ್ಯ ದೇಶಕೆ ಪೋಗಲಿಲ್ಲಾ 4 ಭಾವದಿ ನುಡಿದಂತೆ ನಿನಗೇನು ಪೇಳಿಲ್ಲ 5 ನಿನ್ನಾ ಕುವರರು ಸುಭದ್ರೆಯ ಮದುವೆಯ ಚೆನ್ನಾಗಿ ತಡೆದಂತೆ ತಡೆಯಲಿಲ್ಲವೊ ನಾನು6 ವಸುದೇವ ದೇವಕಿ ಮುಖ್ಯರಂತೆ ನಿನ್ನ ಮಾ- ನುಷನೆಂದು ನಾನೇನು ತಿಳಿದುಕೊಂಡಿಲ್ಲ 7 ಮೌಲಿಯ ಕದ್ದಂತೆ ಕದ್ದುಕೊಂಡಿಲ್ಲ8 ರಾಜೇಶಹಯಮುಖ ಭಜಕರೊಳಗೆ ಮತ್ತೆ ನಿತ್ಯ ಭಕ್ತರಾರಿಹರು 9
--------------
ವಿಶ್ವೇಂದ್ರತೀರ್ಥ
ನಾನೇನು ನಿನಗೆಂದೆನೊ ಶ್ರೀಹರಿಯೆನಾನಿನಗೇನೆಂದೆನೊ ಪ ನಾನೇನು ನಿನಗೆಂದೆ ನೀನಿಂತು ನನ್ನದುಧ್ಯಾನವ ಬಿಡಿಸಲು ಜ್ಞಾನಿಗಳರಸನೆ ಅ.ಪ. ಕರುಣಿ ನೀನೆಂತೆಂಬೋದು ನನಗೆ ಇನ್ನುಭರವಸೆ ಇಲ್ಲೆಂಬೆನೋಕರುಣಿ ನೀನಾದರೆ ಪರಿಪರಿ ಬೇಡಲುಕರುಣೆ ತೋರದೆ ಇರುವದು ಸರಿಯೇನೊ 1 ಭಕ್ತನು ನಾನಲ್ಲವೇನೊ ನಿನ್ನೊಳಗನುರಕ್ತಿ ಮಾಡುವದಿಲ್ಲೇನೋಮುಕ್ತಿ ಮಾಡಲು ಮತ್ತೆ ರಿಕ್ತ ಕರಣನೆಂಬ ಉಕ್ತಿ ಸುಳ್ಳೇನೋ2 ಸ್ಮರಿಸಲು ದುರಿತಗಳ ತರಿವನುಡಿಬರಿದೆನ್ನ ಬಗೆಗಾಯ್ತೆನೊಧರೆಯೊಳು ಗದುಗಿನ ವೀರನಾರಾಯಣಬಿರುಸು ನನ್ನ ನುಡಿ ಬರೆಯಲ್ಲವೇನೋ 3
--------------
ವೀರನಾರಾಯಣ
ನಾನೊಂದು ಮಾಡಲು ತಾನೊಂದಾದಮೇಲಿನ್ನೇನಿನ್ನೇನು ದೇವರೆಂದು ನಮಿಸಲು ದೆವ್ವಾಗಿ ಬಡಿದ ಮೇಲಿನ್ನೇನಿನ್ನೇನು ಜೀವದಾಪ್ತರೆ ತನ್ನ ಕೊಲ್ಲಲೆತ್ನಿಸಿದರಿನ್ನೇನಿನ್ನೇನು 1 ತಾಯ್ತಂದೆಗಳೆ ಸುತರಿಗ್ವಿಷವನೆರೆದ ಮೇಲಿನ್ನೇನಿನ್ನೇನು ಕೈಯೊಳು ಪಿಡಿದ ಬೆತ್ತ ಹಾವಾಗಿ ಕಚ್ಚಲು ಇನ್ನೇನಿನ್ನೇನು 2 ಕಣ್ಣಿಲ್ಲದವನಿಗೆ ಮಾರ್ಗ ತಪ್ಪಿದ ಮೇಲೆನ್ನೇನಿನ್ನೇನು 3 ಹಾಲೆಂದು ಸವಿದರೆ ಹಲ್ಲು ಮುರಿದಮೇಲಿನ್ನೇನಿನ್ನೇನು ಮಾಲ್ಯೆಂದು ಧರಿಸಲು ಉರುಲು ಬಿದ್ದ ಮೇಲಿನ್ನೇನಿನ್ನೇನು 4 ಬೇಲ್ಯೆದ್ದು ಹೊಲದ ಬೆಳೆಯ ತಾ ಮೇಯಲಿನ್ನೇನಿನ್ನೇನು ಮಾಳಿಗೆ ಮನೆಯೆ ತಾ ಗಾಳಿಗೆ ಸಡಲಿದರರಿನ್ನೇನಿನ್ನೇನು 5 ಭೂಪತಿಗಳತಿನೀತಿತಪ್ಪಿದ ಮೇಲಿನ್ನೇನಿನ್ನೇನು ಪಾಪಿಗಳತಿಶಯಯಕೋಪ ತಾಳಿದ ಮೇಲಿನ್ನೇನಿನ್ನೇನು 6 ನೋಪಿದ ಗೌರಿಯೆ ಶಾಪವಿತ್ತ ಮೇಲಿನ್ನೇನಿನ್ನೇನು ದೀಪವೆ ಕಾಲಾಗ್ನಿಯಾಗಿ ಉರಿದಮೇಲಿನ್ನೇನಿನ್ನೇನು 7 ಹೂಳಿಟ್ಟ ಹಣವೆಲ್ಲ ಚೇಳಾಗ್ಹರಿದ ಮೇಲಿನ್ನೇನಿನ್ನೇನು ಅಳಿದ ಗೋವುಗಳು ಹುಲಿಯಾಗ್ಹಾರಿದ ಮೇಲಿನ್ನೇನಿನ್ನೇನು 8 ಆಳುವ ಒಡೆಯರೆ ಅಹಿತರಾದ ಮೇಲಿನ್ನೇನಿನ್ನೇನು ಬಾಳುವುದೆಂತಯ್ಯ ಶ್ರೀರಾಮ ನೀಮುನಿದರಿನ್ನೇನಿನ್ನೇನು 9
--------------
ರಾಮದಾಸರು
ನಾನೊಬ್ಬಳ್ಭಾರತದಲ್ಲಿದ್ದೆ ಬಂದೆ ಪೂರ್ವದ ಹಿಂದೆ ಪ ಹೊಂದಿ ಐವರಿಗಾನಂದ ಸುಂದರಿ 1 ಮಾರಿ ಕೌರವರಿಗೆ ಹಾರ ಪಾಂಡವರಿಗೆ ಭಾರತಿ ಧಾತ್ರಿಗೆ ಕ್ಷೀರ ಮಾರಪಿತಗೆ 2 ನರಸಿಂºವಿಠಲಗೆ ಕರುಣದ ಕರಡಿಗೆ ಉರಿ ದುರುಳರಿಗೆ ಮರೆ ಶರಣರಿಗೆ 3
--------------
ನರಸಿಂಹವಿಠಲರು
ನಾನೊರಲುವಾ ದನಿಯು ಕೇಳದೆ ರಂಗಾ ಭಂಗ ಪ ನಾರಿಯೊಬ್ಬಳು ಬಾಲರಿಬ್ಬರು ಕರಿಯೊಂದು ಕ್ಷೀರಾಬ್ಧಿಯೆಡೆಗೈದಿ ಬಾರೋವರೇನೋ ನಾರದನಾ ಯೆನ್ನಂಗ ಬಾರೆಂದೊಡೇನಾಯ್ತೋ ನೀರಜಾಂಬಕ ನೀನು ಪರಿದೋಡಲೇಕೋ 1 ಒಂದೆಲೆಯ ನೈವೇದ್ಯ ಒಂದು ಹಿಡಿಯವಲಕ್ಕಿ ಒಂದು ಹನಿಗೋಕ್ಷೀರ ಒಂದು ದಳ ಶ್ರೀತುಳಸಿ ಒಂದು ಫಲವರ್ಪಣಕೆ ತೇಗಲಿಲ್ಲವೆ ಸ್ವಾಮಿ ತಂದೆಯೆನ್ನಾತ್ಮನೈವೇದ್ಯ ಸಾಲದೆ ರಂಗಾ 2 ಕಾಲು ಕೈ ಕಣ್ಣು ಬೆನ್ನು ಸೋಲುವಂತಾದಾಗಾ ನೀಲಾಂಗ ನಿನ್ನ ಸೇವೆಯು ಸಾಧ್ಯವಲ್ಲ ಕಾಲ ಎಂದೊಳ್ಳಿತೈ ನಾಲಗೆಗೆ ನೋವಿಲ್ಲ ಬಾಲ ಗೋಪಾಲ ಮಾಂಗಿರಿಯ ರಂಗ ದಯಮಾಡೊ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಾಯಿ ಕಚ್ಚೀತೆಚ್ಚರಿಕೆ ಎಲೋ ಡಾವಿಟ್ಟು ಬರುತಾದೆಚ್ಚರಿಕೆ ಪ ನೋವು ತೀರದೀ ನಾಯಿ ಕಚ್ಚಲು ಕೇವಲ ವಿಷವುಳ್ಳ ಹೇಯನಾಯಿ ಅ.ಪ ಮೆಚ್ಚು ಮದ್ದಿಕ್ಕುವುದು ಅಚ್ಚರೋಗದ ನಾಯಿ ಮುಚ್ಚುಮನೆ ಮುರಿವುದು ಲುಚ್ಚನಾಯಿ ಸಾಚ್ಯನೆಂದು ನಂಬಿ ನೆಚ್ಚಿದವರ ಮೇಲೆ ಕಚ್ಚಿ ಬಿಚ್ಚುವುದೊಂದ್ಹುಚ್ಚು ನಾಯಿ 1 ಸೂಳೆನ್ನ ಹೋಗುವುದು ಮೂಳನಾಯಿ ಶೀಲ ತೊರೆವುದೊಂದು ಜೂಲುನಾಯಿ ಕೀಳರಿಂ ತಲೆಗೂಡಿ ಹಾಳ್ಹರಟ್ಹೊಡೆವುದು ಕೂಳ ಕಾಣದಂಥ ಹಾಳೂರನಾಯಿ 2 ಉಂಡುಂಡು ಮಲಗ್ವುದು ಸುಂಡಿನಾಯಿ ಕಂಡಂತೆ ತಿರಗುವ ದಂಡನಾಯಿ ಹೆಂಡ್ತಿನ್ನ ಬಿಟ್ಟು ಪರರ್ಹೆಂಡರಿಗೊಲಿವುದು ಉಂಡೊಗೆದೆಂಜಲ ನೆಕ್ಕುವ ನಾಯಿ 3 ಬಡವರ ಬಡಿವುದು ಬಡಕನಾಯಿ ಕಡುಗರ್ವದಿರುವುದು ತುಡುಗ ನಾಯಿ ದೃಢಯುತರನು ಕಂಡು ಬಿಡುನುಡಿಯಾಡ್ವುದು ಸುಡುಗಾಡೋಳ್ಬಿದ್ದಸ್ತಿ ಕಡಿಯುವ ನಾಯಿ 4 ವಿಚಾರನರಿಯದ್ದು ಬೇಬಿಟ್ಟಿನಾಯಿ ಅಚಾರಮನವಿಲ್ಲದ್ಹರಕುನಾಯಿ ಊಚಸ್ಥಾನದಿ ಕೂತು ನಾಚದೆ ಮೋರಿಚ್ಛೆ ವಾಚ ಪೇಳ್ವುದೊಂದು ನೀಚನಾಯಿ 5 ಆಸೆ ಪೇಳುವುದೊಂದು ಮೋಸದ ನಾಯಿ ಶಾಶ್ವತ ತಿಳಿಯದ್ದು ಪಾಶದ ನಾಯಿ ಈಶನ ದಾಸರ ದೂಷಿಪುದು ಹೊಲೆ ದಾಸರಮನೆಮುಂದಿನ್ಹೇಸಿನಾಯಿ6 ಕೋಪವ ತೊರೆಯದ್ದು ತಿರುಕನಾಯಿ ಪಾಪಕ್ಕೆ ಅಂಜದ್ದೀ ನರಕಿನಾಯಿ ಭೂಪ ಶ್ರೀರಾಮನ ಜ್ಞಾಪಕಕೆ ತರುವೆನು ಕೂಪದಿ ಉರುಳುವ ಪಾಪಿನಾಯಿ 7
--------------
ರಾಮದಾಸರು
ನಾರಗಾ ಎನುತಂದು ಸಾರಲಾ ನುಡಿಕೇಳಿ ಆರಯ್ದು ಕಯ್ವಿಡಿದು ಕಾಯ್ದೆ ದ್ವಿಜನ ಗೋವಿಂದ ಪೊರೆ ಎಂದು ಗೋಳಿಟ್ರಗಜರಾಜಗಾ ದಿವ್ಯದರ್ಶನಾನಂದಮಾಯ್ತು ಅಕ್ಷಯನೆ ಕಾಪಿಡೆಂದಾಕ್ಷಣವೆ ಪಾಂಚಾಲಿ ಗಕ್ಷಯಾಂಬರಗಳಿಂ ರಕ್ಷೆಯಾಯ್ತು ಪಾರ್ಥಸೂತನೆ ನಿನ್ನನರ್ಥಿಯಿಂ ಕೆಲಸಾರ್ದು ಪ್ರಾರ್ಥಿಸುತ್ತಿರ್ಪೆನೈ ಪರಮಪುರುಷ ವರಶೇಷಗಿರಿನಿಲಯ ಸುಗುಣವಲಯ ಶರದಿಂದು ನಿಭವದನ ಚತುರವಚನ ದಮನ ಗರುಡಗಮನ ಪರಿಪಾಹಿ ಮಮದೇವ ಸುಪ್ರಭಾವ
--------------
ನಂಜನಗೂಡು ತಿರುಮಲಾಂಬಾ
ನಾರದ ಇಲ್ಲೆ ಬಂದಿಹ ಮುನಿ ಇಲ್ಲೇ ಬಂದಿಹಾಎಲ್ಲ ಲೋಕ ತಿರುಗಿ ಇಲ್ಲೆ ಬಂದಿಹಾ ಪ ಫುಲ್ಲನಾಭನ ಭಕ್ತರಲ್ಲಿ ಮಾಣಿಕ್ಯವೇಅ.ಪ. ಕರದಿ ವೀಣೆಯನ್ನು ಧರಿಸಿ ಶಿಷ್ಯರಿಂದಸುರಮುನಿಯು ಕೇಳಿ ಭರದಿ ಜಾಗರಕ್ಕೆ 1 ಹರಿಯ ದಿನದಿ ನಿನ್ನ ಚರಿತಾಮೃತವ ಪಾಡೆಹರಿಯ ನಿಲಯದಿ ಗಾನ ಭರದಿ ಮಾಡುತಲೆ 2 ನಂದ ಬಾಲಕನ ತಂದುತೋರುವನೇಇಂದು ನಿನ್ನ ತುತಿಪೆ ಇಂದಿರೇಶ ದಾಸಾ 3
--------------
ಇಂದಿರೇಶರು