ಒಟ್ಟು 7503 ಕಡೆಗಳಲ್ಲಿ , 128 ದಾಸರು , 4808 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವದೇವರ ದೇವ ಭಕ್ತ ಸಂಜೀವಿ ಮಹಾನುಭಾವ ಪ ದಶರಥ ಸುಕುಮಾರ ಜಾನಕೀವರ ಧೀರ ಅಸಮ ಸಾಹಸಿ ಕಪಿವೆರಸಿ ಲಂಕೆಯಪೊಕ್ಕ ಅಸುರರ ಕೊಂದ ಶ್ರೀ ರಾಮಾವತಾರ 1 ಯದುಕುಲದೊಳಗುದಿಸಿ ಮಾತುಲಮದ ಮುಖರನ್ನು ವಧಿಸಿ ಪಾಂಡುವರನ್ನೇ ವಹಿಸಿದೆ 2 ಮೃಗ ಪುರದೆಡೆಯೊಳು ನಿಂದು ಸೇವಕÀ ವೆಂಕಟಾಚಲಗೋವಿಂದ 3
--------------
ಕವಿ ಪರಮದೇವದಾಸರು
ದೇವನ ನೆರೆನಂಬಿರೊ ಶ್ರೀವರ ವೇಲಾಪುರಿಯ ಚೆನ್ನಿಗನ ಪ ಕರೆಯರಿಗೊರಳಭವನ ಕೃಪೆಯಿಂದ ದಶಗ್ರೀವ ನೆರೆಭಾಗ್ಯಪಡೆದು ಗರ್ವದೊಳಿರಲು ಅರೆಯಟ್ಟಿ ಶಿರಗಳ ಕುಟ್ಟಿಹಾಕಿ ತನ್ನ ಮೊರೆಹೊಕ್ಕ ವಿಭೀಷಣಗೆ ಪಟ್ಟಗಟ್ಟಿದ 1 ಭಾಗೀರಥಿಯ ತಾಳ್ದ ಮಹೇಶನ ತಲೆ ವಾಗಿಲ ಕಾಯಿಸಿಕೊಂಡಿಹ ಬಾಣನ ತಾಗಿ ತೋಳಕಡಿದ ಸುರನ ಕುಮಾರತಿಗೆ ಭೋಗಿಸುವಂತೆ ತಮ್ಮಗೆ ಕೈವರ್ತಿಸಿ ಕೊಟ್ಟ2 ಲೋಕದೊಳಜಭವಾದಿಗಳಿಂದ ಉಬ್ಬಿದ ಅ- ನೇಕ ರಕ್ಕಸರನೊಟ್ಟಿಗೆ ತಾಹೆನು- ತಾ ಕೊಟ್ಟ ವರವನೆ ಶಿರಮುಟ್ಟಿ ಕೊಂಡಾ ಕರು ಣಾಕರ ವರ ವೇಲಾಪುರಿಯ ಚೆನ್ನಿಗನ 3
--------------
ಬೇಲೂರು ವೈಕುಂಠದಾಸರು
ದೇವನಲ್ಲವೇನೋ ಸದ್ಗುರು ಮಹಾದೇವನಲ್ಲವೇನೋ | ಆದಿಯೋಳ್ ಸಿದ್ಧರು ಹೋದ ದಾರಿಯ | ತೋರಿ ಭೇದವ ಬಿಡಿಸಿದ ಮೂರುತಿ ಪ ನರಜನ್ಮದೊಳಗೆ ಬಂದು ನೀನು | ಪ್ರಪಂಚದ ಕಡಲು ಮಧ್ಯದಿ ನಿಂದು | ಅರಿತು ಮರೆತು ಒಮ್ಮೆ ಗುರುವೆಂದು ನೆನೆದರೆ | ಗುರುತಿಟ್ಟು ಅವರಿಗೆ ಪರತರ ತೋರುವ 1 ಆಶಾಪಾಶವ ಬಿಡಿಸಿ ಮಾಡಿದ | ದೋಷ ಭವಂಗಳ ಕರ್ಮವ ಕೆಡಿಸಿ | ನ್ಯಾಸ ಧ್ಯಾಸದಿ ಜಪ ಮಾಡೆ ಗುರು |ಬೋಧ ಪ್ರಕಾಶವ ತೋರಿದ ಈಶನು 2 ಭಕ್ತಿ ಜ್ಞಾನವ ಹಿಡಿದು ನಂಬಿದಗೆ | ಮುಕ್ತಿಯ ನಿಶ್ಚಯದಿ ಪಾಲಿಸುವ | ಕರ್ತೃ ಸದ್ಗುರು ಭವತಾರಕ ಧರೆಯಲಿ | ಪ್ರತ್ಯಕ್ಷವಾದಂಥ ಪರಬ್ರಹ್ಮರೂಪನು 3
--------------
ಭಾವತರಕರು
ದೇವನಹುದೊ ದೇವಾಧಿದೇವ ಕಾವಕರುಣ ಶ್ರೀ ವಾಸುದೇವ ಭಾವಿಕರಿಗೆ ಜೀವಕೆ ಜೀವ ಧ್ರುವ ಸಾಮಜಪ್ರಿಯ ಸುರಲೋಕಪಾಲ ಕಾಮಪೂರಿತ ನೀ ಸಿರಿಸಖಲೋಲ ಸಾಮಗಾಯನಪ್ರಿಯ ಸದೋದಿತ ಸ್ವಾಮಿನಹುದೊ ನೀನೆವೆ ಗೋಪಾಲ 1 ಅಕ್ಷಯ ಪದ ಅವಿನಾಶ ಪೂರ್ಣ ಪಕ್ಷಿವಾಹನ ಉರಗಶಯನ ಪಕ್ಷಪಾಂಡವಹುದೊ ಪರಿಪೂರ್ಣ ಲಕ್ಷುಮಿಗೆ ನೀ ಜೀವನಪ್ರಾಣ 2 ದಾತನಹುದೊ ದೀನದಯಾಳ ಶಕ್ತಸಮರ್ಥ ನೀನೆ ಕೃಪಾಲ ಭಕ್ತವತ್ಸಲನಹುದೊ ಮಹಿಪತಿ ಸ್ವಾಮಿ ಪತಿತಪಾವನ ನೀನವೆ ಅಚಲ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದೇವರ ದೇವನೆ ಕಾಯೊ ದೇವಕಿನಂದನೆ ಕಾಯೊಜೀವರಾಸಿಗಳಿಗೆ ಸಂಜೀವನ ದೇವನೆ ಕಾಯೊ ಪ . ಮಕರಿ ಕೈಗೆಸಿಕ್ಕಿ ಮಾನಭಂಗಗೊಂಡ ದೀನಪ್ರಕೃತಿ ಬಂಧನದಿಂದ ಪಾಡು ಬಡುತ್ತಿದ್ದೆನಯ್ಯ 1 ಕಾಮವೆಂಬ ಕಡುವೈರಿ ಕಂಡಕಂಡಕಡೆಗೆನ್ನಸೀಮೆಯೊಳು ಸುಳಿವಂತೆ ಶ್ರೀಧರ ಮಾಡಿದ ನೋಡು 2 ಶ್ರೀ ಹಯವದನ ನೀನು ಶ್ರಿತಜನ ಕಾಮಧೇನುಮಹಂತನೆಂಬುದ ಕೇಳಿ ಮೆಚ್ಚಿಬಂದೆನಯ್ಯ ನಿನ್ನ 3
--------------
ವಾದಿರಾಜ
ದೇವರಲ್ಲೇ ಸಜ್ಜನವರವನಿ | ಪ ಅಕುಲ ತನ್ನಂತಖಿಳದಿ ನೋಡುತಾ | ಸಕಲರ ಹಿತದಲಿ ಪ್ರಕಟದಿ ಬಾಳುತಾ | ಮಕ ಮಾವುಗಳ ವಿಕಳರಿಯರು 1 ಶಾಂತಿ ಶಮೆದಮೆದಾಂತಿ ತಿತಕ್ಷಾ | ಅಂತರ್ಬಹಿಯವಂತರು ಭಕ್ತಿಯ | ಪಂಥದಿ ನಡೆಯುತ ನಂತನ ಮೂರುತಿ | ಚಿಂತಿಸಿ ಮನ ವಿಶ್ರಾಂತಿಯಲಿಹರು 2 ಅಣುಪರಿ ಸದ್ಗುಣ ಮನುಜನ ಕಂಡರ | ವನಪರ್ವತ ಸಮವೆನೆ ಕೊಂಡಾಡುವ | ತನುಮನ ವಚನದಿ ಘನ ಪುಣ್ಯಾಮೃತ | ಮನಿಗುರು ಮಹಿಪತಿ ತನು ಭವಗಂದಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದೇವರಾಗಬಾರದೇನೆಲೇ ದೆವ್ವಿನಂಥ....... ದೇವರಾಗಬಾರದೇನೆಲೇ ಪ ದೇವರಾಗಬಾರದೇಕೋದೇವನ ಪಾದವನಂಬಿ ಕಾವುಮೀರಿ ಹೋದಮೇಲೆ ಬಾಯಬಿಟ್ಟರೆ ಬರುವುದೇನೆಲೆ ಅ.ಪ ತಂದ ಬುತ್ತಿ ಚೆನ್ನಾಗುಣ್ಣೆಲೆ ನೀನದನು ಒಲ್ಲೆ ನೆಂದರೆ ಬಿಟ್ಟ್ಹೋಗ್ವುದೇನೆಲೆ ಹೇ ಪಾಪಿ ನೀನು ಬಂದಹಾದಿ ನೋಡಿಕೊಳ್ಳೆಲೆ ಮುಂದಿದರಿಯೆಲೆ ಬಿಂದುಮಾತ್ರಸುಖಕೆ ಮೋಹಿಸಿ ಪರ್ವತಾಕಾರ ಪಾಪಹೊತ್ತು ಬಂಧಕ್ಕೀಡಾಗುವುದಿದೇನೆಲೆ 1 ನಾಶನಾಗಿ ಹೋಗುತಾದೆಲೇ ಈ ಜಗವು ಒಂದಿನ ಆಸೆಯೆಂಬ ಕುಳಿ ಧುಮುಕ ಬೇಡೆಲೆ ಮಹನೀತಿವಿಡಿದು ನಾಶವಾಗದಪದವಿ ಗಳಿಸೆಲೇ ಸೋಸಿನೋಡೆಲೆ ಮೋಸಮರವೆಯಿಂ ನಾಶವಾಗದೆ ಹೇಸಿಸಂಸಾರ ನಾಮ ಭಜಿಸಿ 2 ಉಟ್ಟ ಸೀರೆಬಿಟ್ಟು ಹೋಗಿದ್ದ್ಯಂತೆ ಹೇ ಹುಚ್ಚು....... ಎಷ್ಟೋಸಾರಿ ಹುಟ್ಟ್ಹುಟ್ಟಿದರಂತೆ ಈ ಕಾಯಧರಿಸಿ ಬಿಟ್ಟುಹೋಗೇದಸ್ತಿ ಪರ್ವತ್ಹೋಲ್ವಂತೆ ಕೆಟ್ಟು ಬಿದ್ದೈತೆ ದುಷ್ಟಭ್ರಷ್ಟತೆಗಳನ್ನು ಬಿಟ್ಟು ಶಿಷ್ಟಸಂಗಕೆ ಮನವಗೊಟ್ಟು ಸೃಷ್ಟಿ ಗೀರೇಳು ಸೂತ್ರನಾದ ದಿಟ್ಟ ಶ್ರೀರಾಮನಡಿಗೆ ಪೊಂದಿ 3
--------------
ರಾಮದಾಸರು
ದೇವರಾಜ ನುತನೆ ಖಗಪಾ | ಬಲ | ದೇವ ಚರಣ ಮಧುಪ ಪ ಭಾವಜಾರಿ ಸಮನು ಎನಿಪ | ತಾವಕನ್ನ ಸಲಹೊ ಕಾಶ್ಯಪ ಅ.ಪ. ಜಲಧಿ ಗಾರುಡ ಮುಖ ಕಾರುಣ್ಯದಿ | ಹೊರಡೂಡುತ | ಹಾರಿದೆ ವಿ | ಸ್ತಾರಾಮೆಗೆ 1 ಕೂರ್ಮ ದ್ವೇಷದಿಂದಾ | ನೆರೆಹೊರೇಯ ದುಃಖದಿಂದಾ |ಇರಲು ಕಳೆಯೆ ಗರುಡನಿಂದಾ | ವರಮುನಿ ಪೇಳ್ದ ಮುದದಲಿಂದಾ ||ಭಾರಿಲಿ ಇಹ | ಕೂರಮ ಕರ್ಯ | ಹರವ ಮೇಲೆ | ಢೋರದ ತರುಕ್ಹಾರಲದೂ | ದಾರಿತ ವಿ | ಸ್ತಾರದ ಮಹಿ | ಮೋರುಗುಣಿ2 ಅಮೃತ ಕಲಶ ತಂದಾ ||ಕಾರುಣಿ ದಿತಿ | ಜಾರಿಗೆ ಮಾತೆ | ಕಾರಾಗೃಹ | ತಾರಣ ಮುರವೈರಿಯ ವಹ | ತೋರೈ ಹೃ | ದ್ವಾರಿಜದಿ | ಶ್ರೀಹರಿಪದ 3
--------------
ಗುರುಗೋವಿಂದವಿಠಲರು
ದೇವರಿಂದಲಿ ಭಕ್ತಧಿಕನು | ಭಾವ ಭಕುತಿಯಲಿ ಬಲ್ಲಿದನು ಪ ಅವನ ಉದರದಲಿ ಜಗವಿಹುದು | ಅವನ ತನ್ನೆದೆಯಲ್ಲಿ ನಿಲಿಸಿಹನು 1 ದಾವನಿಂದಲಿ ಜಗಹುಟ್ಟುತಲಿಹುದು | ಅವನ ಜನುಮಕಿವ ತಾರಿಸಿದನು 2 ಕಾಳಗದಲಿ ನಿಸ್ಸೀಮನ ದಾವನು | ಸೋಲಿಸಿದವನೆನು ನದಿಸುತನು 3 ಸಾಗರ ಜಲ ಘನ ತುಂಬಿಕೊಂಡಿಹುದು ಮೇಘ ಮುಖದಿ ಬೆಳೆಯಾಗುವದು 4 ಬಾಳಿಗಿಡವು ಸ್ವಾನಂದದಲಿಹುದು | ಬಾಳೆಹಣ್ಣವು ಜನ ನಲಿಸುವುದು 5 ಸಂಗರಹಿತ ಗುರು ಮಹಿಪತಿ ಸ್ವಾಮಿಯ | ಹಂಗಿಗನನು ತನ್ನ ಮಾಡಿದನು 6
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದೇವಾ ದೇವಾ ಸಾರಂಗ ಪಾಣಿ ದೇವಾ ದೇವಾ ಸಾರಂಗ ಪಾಣೀ ಪ ದೇವ ದೇವ ಘನ ಶ್ರೀ ವಧುವಲ್ಲಭ ಸಾವಿರ ನಾಮದ ಪಾವನ ರೂಪಾ 1 ಭುವನವ ಪಿಡಿದೊಯ್ದನುಜನ ಹರಿ ಪವನಜ ಪ್ರೀಯಾ2 ಕುಂಜರ ಧ್ವಜಜನ ರಂಜಿಪ ಕದಲಿಗೆ ಅಂಜಿಕೆ ಹಾರಿಪ ಕುಂಜದ ಕರನೇ 3 ಸುಮನದಿ ಧರೆಯೊಳು ನಮನ ಕೃತಕ ಭಯ ಗಮನ ಸುರೇಶಾ4 ವಿಧಿ ತ್ರಿಪುರ ವಿನುತ ಪದ ಮಿಥುನದಯಾಳಾ5 ಹರಿಯೆಂದೊದರಲು ಸರಿಯಾದಿಗಳಿಗೆ ಅರಿಯ ದಂದದಿ ಬಂದು ಕರಿಯನು ಕಾಯ್ದೆ6 ನಂದನ ನಂದನ ಮಂದರಗಿರಿಧರಾ ನಂದನೆ ಮಹಿಪತಿ ನಂದನ ಪ್ರೀಯಾ||7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದೇವಾ ನಿನ್ನ ಚರಣವನ್ನು ಮರೆಯಲಾರೆನು ಮರೆಯದಂತೆ ಕರುಣದಿ ಎನ್ನಾ ಸ್ಮರಣೆಯೊಳಿಡು ನೀನು ಪ ಪಂಕಜಾಂಬಕಿ ಲಕ್ಞ್ಮೀರಮಣಾ ರಂಗರಕ್ಷಕಾ ಶಂಕಾನಾಶ ಸರ್ವಾಧಾರ ಶಂಕರಸಖಾ ಶಂಖ ಚಕ್ರಗಳ ಕರದೊಳ್ ಪಿಡಿದ ಪಂಕಜನೇತ್ರನೇ 1 ತನ್ನವರಿಂತೆಂದೆನಿಸಿ ಕೊಂಡು ಅನ್ಯರ ಭಜಿಪುದು ಬನ್ನ ಬಡುವುದು ಮುನ್ನ ಎನ್ನನು ಪೊರೆವರ್ಯಾರೊ ಪನ್ನಗಶಯನನೇ 2 ಅಂತು ಇಂತೆನಲೊಲ್ಲೆ ದೇವಾ ಅನಂತ ಮಹಿಮೆಯಾ ಸಂತಸಾಧು ಸಾಧ್ಯನಾಗಿಹ ಅಂತರಾತ್ಮನಾ ಚಿಂತೆ ಭ್ರಾಂತಿಗಳ ತೊರೆದು ಗುರುವರ ಶಾಂತಿ ಪಾಲಿಪನೇ 3
--------------
ಶಾಂತಿಬಾಯಿ
ದೇವಾದಿ ದೇವ ನಮೋ ಶ್ರೀ ಸತ್ಯದೇವ ಪ ದೇವಾದಿ ದೇವ ಹರಿ ಗೋವಿಂದ ಮುಕುಂದ ಭಾವಜನಕ ಸದ್ಭಾವುಕ ಜನಪ್ರಿಯ ಅ.ಪ. ಶ್ರೀಶಾ ಶಶಿಕೋಟಿ ಸಂಕಾಶ ಸುಶೋಭಿತ ದರಹಾಸ ಸುಜನ ಪರಿಪೋಷ ಸನ್ನುತ ಸರ್ವೇಶ ಈಶಾ ಈ ಸಮಸ್ತ ಜಗದೀಶನೆಂದು ನಿನ್ನ ನಾ ಸ್ತುತಿಸುವೆ ಮನದಾಸೆಯ ಸಲ್ಲಿಸೊ ವಾಸವಾದಿ ಸುರಮಹಿಮ ಪ ರೇಶ ಪೂರ್ಣಗುಣ ದಾಸಜನಾವನ ಕ್ಲೇಶವ ಕಳೆದಿನ್ನು ನೀ ಸರ್ವದ ಎನ್ನ ಪೋಷಿಸು ಕರಿಗಿರಿ ವಾಸ ಶ್ರೀ ನರಹರಿ 1
--------------
ವರಾವಾಣಿರಾಮರಾಯದಾಸರು
ದೇವಾಧಿ ದೇವನೀತ ಜೀವ ಪ್ರಾಣನಾಥ ಕಾವ ಕರುಣನೀತ ಹಂಸನಾಥ 1 ದೇಶಿಕರ ದೇವ ಭಾಸಿ ಪಾಲಿಸುವ ವಾಸುದೇವ 2 ಸ್ಮರಿಸುವರ ಜೀವ ಹರಿ ಪರಂ ದೈವ ಪರಮ ಭಕ್ತರಿಗೀವ ಹರುಷವ 3 ಸಾಧು ಹೃದಯವಾಸ ಸದಮಲಾನಂದ ಘೋಷ ಸದೋದಿತ ಪ್ರಕಾಶ ಯಾದವೇಶ 4 ಇಹಪರ ಸಾಹ್ಯನೀತ ಬಾಹ್ಯಾಂತ್ರ ಸದೋದಿತ ಮಹಿಪತಿ ಪ್ರಾಣನಾಥ ಅವಧೂತ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದೇವಾಧಿದೇವ ನೀನಹುದು ಸಾಕ್ಷಾತ ಭಾವಿಸುವರಾತ್ಮ ಭಜಕರ ಪ್ರಾಣದಾತ ಧ್ರುವ ಸುಜನ ಮನೋಹರ ಮೂಜಗ ಆಧಾರ ಭಜಕ ಭಯಹರ 1 ಕರುಣಸಾಗರ ಪರಮ ಉದಾರ ದುರಿತ ಸಂಹಾರ 2 ಬಾಹ್ಯಂತ್ರಲಿವ್ಹ ಇಹಪರ ಕಾವ ಮಹಿಪತಿಯ ರಕ್ಷಿಸುವ ಶ್ರೀ ದೇವ ದೇವ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದೇವಾಧಿದೇವ ನೀನಹುದೊ ಶ್ರೀಹರಿ ಕಾವಕರುಣ ನೀನೆ ಮುರಾರಿ ಧ್ರುವ ಕಮಲಭವಾರ್ಜಿತ ಕಾರುಣ್ಯ ಶೀಲ ವಿಮಲ ವಿರಾಜಿತ ಮದನಗೋಪಾಲ 1 ಕನಕಾಂಬರಧರ ಕಸ್ತೂರಿತಿಲಕ ಸನಕಾದಿವಂದ್ಯ ಶರಣ ರಕ್ಷಕ 2 ಅಗಣಿತ ಮಹಿಮ ಅವರುಜ ನೇತ್ರ ನೀನಹುದೊ ನಿಸ್ಸೀಮ 3 ಮುನಿಜನ ಪಾಲಕ ಮಾಮನೋಹರ ಘನಸುಖದಾಯಕ ಸು ಜನ ಸಹಕಾರ 4 ಭಾನುಕೋಟಿತೇಜ ನೀನೆ ಸುಹೃದಯ ದೀನದಯಾಳು ನೀನಹುದೊ ಮಹಿಪತಿಯ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು