ಒಟ್ಟು 747 ಕಡೆಗಳಲ್ಲಿ , 91 ದಾಸರು , 672 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೊಟ್ಟ ಭಾಗ್ಯವೆ ಸಾಕೋ ಶ್ರೀ ಪ ಕೃಷ್ಣನ ದಯಬೇಕೋ ದೇವ ಅ.ಪ ಸಾಸಿರ ಬಂದರೆ ಶಾಂತಿಯೆಂದರಿತೆನೊ ಸಾಸಿರ ಬಂದಿತು ಶಾಂತಿ ಕಾಣಲಿಲ್ಲ ಸಾಸಿರ ಸಾಸಿರವೇಸು ಬಂದವೋ ಕ್ಲೇಶವು ಏರಿತು ಮೋಸಹೋದೆನೊ 1 ಗಾಳಿಯ ಗುದ್ದಿ ಕೈ ಕೀಲು ಮರಿಯಿತೊ ಕೇಳುವುದಿಲ್ಲವೊ ನಾಳಿನ ಕೂಳನು ಕಾಲಕಾಲಕೆ ಹುಲಿ ಹಾಲನು ತರುತಿಹ ಬಾಲಗೋಪಾಲನ ಕೇಳಿ ಮೋಸಹೋದೆ 2 ಬೇಡವೆನ್ನುವರಿಗೆ ನೀಡುವ ದೊರೆ ನೀ ರೂಢಿಯ ಬಲ್ಲೆನೋ ಕಾಡುವುದಿಲ್ಲವೊ ನೀಡಿದ ಭಾಗ್ಯವು ಕೇಡುತರದೆ ಕಾ ಪಾಡಬೇಕೆಲೊ ಪ್ರೌಢÀ ಪ್ರಸನ್ನನೆ 3
--------------
ವಿದ್ಯಾಪ್ರಸನ್ನತೀರ್ಥರು
ಕೊಳಲಕೃಷ್ಣ ಬಂದು ನಿಲ್ಲೊ ಹೃದಯ ಕಮಲದಿ ನಳಿನನಾಭ ನಿನ್ನ ದಿವ್ಯ ಚಲುವ ರೂಪದಿ ಪ. ಶಿರದಿ ಮಕುಟ ಫಣೆಯ ತಿಲುಕ ಒಲಿವ ಮುಂಗುರುಳು ನಾಸಿಕ ಗಲ್ಲ ಹೊಳೆಯುತ 1 ಕರ್ಣದಲಿ ಕುಂಡಲಗಳು ಸ್ವರ್ಣ ಕಂಠವು ನಿನ್ನ ದಂತ ಹೊಳೆಯುತಿರಲು ಚನ್ನ ಶ್ರೀಹರಿಯೆ 2 ಅಧರ ಉರದಿ ಲಕ್ಷಿಯು ನಳಿತೋಳಿನಲಿ ಶಂಖ ಚಕ್ರ ವೇಣು ಪಿಡಿದಿಹ 3 ಕಮಲ ಮಾಲೆ ಮೇಲೆ ತುಳಸಿಯು ಮಾರಜನಕ ಹೊಳೆವೊ ಜರಿಯ ಪೀತ ವಸನವು 4 ರಕ್ತವರ್ಣ ವಸನ ಉಟ್ಟು ಕಟ್ಟಿ ಕಿರುಗೆಜ್ಜೆ ಮುಕ್ತರೊಡೆಯ ಮುಕ್ತಿಕೊಡುವ ಪಾದಕಮಲವು 5 ಕ್ಲೇಶ ಕಳೆಯುತ ದಾಸ ಜನರ ಕಾಯ್ವ ಕೃಷ್ಣ ಘಾಸಿಗೊಳಿಸದೆ 6 ಗುರುಗಳಲ್ಲಿ ನಿಂತು ಎನ್ನ ಹರುಷಪಡಿಸೊ ನೀ ಪರಮಪುರುಷ ನರಹರಿಯೆ ದುರಿತದೂರನೆ 7 ನೀರೊಳಾಡಿ ಭಾರಪೊತ್ತು ಕೋರೆ ತೋರಿದೆ ಘೋರರೂಪಿ ಬ್ರಹ್ಮಚಾರಿ ಕ್ಷತ್ರಿಯಾರಿ ನೀ 8 ಶ್ರೀ ಹರಿ ರಾಮ ಕೃಷ್ಣ ಬೌದ್ಧ ಕಲ್ಕಿಯೆ ಗೋಪಾಲಕೃಷ್ಣವಿಠ್ಠಲ ರೂಪ ತೋರೊ ನೀ 9
--------------
ಅಂಬಾಬಾಯಿ
ಕೋಸಲಾಧಿಪ ಶುಭವನು ದಾಶರಥೇ ಪ ದಾಸನಲ್ಲಿ ಕೃಪಾಲೇಶವ ಬೀರೆಲೊ ಅ.ಪ ಹರನ ಚಾಪವ ಮುರಿದು ಸ್ವಯಂ ಕರವ ಪಿಡಿದು ಸರಸಿಜಲೋಚನ ಕಾಯೊ ಕರುಣದಲಿ 1 ವನವ ಸೇರಿ ಮುನಿಗಳ ಶಂ ಸನವ ಪೊಂದಿದ ಜಾನಕೀಪತಿ ಮುನಿದು ದುರುಳರ ಹನನ ಮಾಡಿದ ಹನುಮನಿಗೆ ದರುಶನವಿತ್ತ 2 ವಾನರಬಲದಿಂದ ಕೂಡಿ ವನದಿ ಬಂಧಿಸಿ ಲಂಕೆ ಸೇರಿದ ಶಾನನ ಮುಖರನು ಕೊಂದು ಜಾನಕಿಯಲಿ ಪ್ರಸನ್ನನಾದ 3
--------------
ವಿದ್ಯಾಪ್ರಸನ್ನತೀರ್ಥರು
ಕ್ಲೇಶ ಕಷ್ಟದಿ ಮುಳುಗಿ ಬಳಲಬೇಡ ಪ ಹಿಂದೆ ನಾನಾ ಯೋನಿಯಲ್ಲಿ ಹಡಿಕೆಯೊಳು ಜನಿಸಿ ಜನಿಸಿತಂದೆ ತಾಯಿ ಹೆಂಡಿರೇಸು ಲೆಕ್ಕವಾಯ್ತು ನೋಡಮುಂದೆ ಬಹ ದುಃಖಕೆ ಮುಳುಗಿ ಮುಳುಗಿ ಧೈರ್ಯ ಪಡೆದುಮಂದ ಮತಿಯಾಗಿ ಗುರುವ ಮರೆಯಲಿ ಬೇಡ 1 ದುರ್ಜನರ ಸಂಗ ಮಾಡಿ ದುಷ್ಟ ನಡತೆಯಲ್ಲಿ ನಡೆದುಸಜ್ಜನರ ಸಂಗ ನೀ ಮರೆಯಲಿ ಬೇಡಜಜ್ಜುಗಟ್ಟಿ ಪಾಪಕರ್ಮ ಜರಿದು ಜರಿದುಜೋಕೆಯಲ್ಲಿ ಸದ್ಗುರುನಾಥ ಸ್ಮರಣೆ ಮಾಡು2 ಮನೆಯು ಮಕ್ಕಳೆಂಬ ಧನವು ಪಶುಗಳಲ್ಲಿ ಆಸೆಯಿಟ್ಟುನೆನೆಸಿ ನೆನೆಸಿ ಬಿಕ್ಕಿ ಬಿಕ್ಕಿ ಅಳಲು ಬೇಡಚಿನ್ಮಯ ಚಿದಾನಂದಾವಧೂತನೊಳು ಬೆರೆತುಘನವನೈದಿ ಸದ್ಗುಣಾದಿ ತಿಳಿದು ನೋಡ 3
--------------
ಚಿದಾನಂದ ಅವಧೂತರು
ಕ್ಲೇಶ ಪ ಅಸ್ತಿತ್ವಕ್ಚರ್ಮಾದಿ ಮಾಂಸ | ಧಾತುಸಪ್ತಾವರಣ ಕಾಯದೊಳಗೆ ಆ ವಾಸ |ಲಿಪ್ತನಾಗದೆ ಇದ್ದು ಶ್ರೀಶ | ಜೀವರಾಪ್ತ ಸಾಧನ ಮಾಡಿ ಮಾಡಿದೆ ಅನಿಶಾ 1 ಸಪ್ತವು ದಶದ್ವಯ ಸಹಸಾ | ನಾಡಿಸಪ್ತಾಬ್ಜದೊಳು ಸನ್ನಿವಾಸ |ಭಕ್ತರಿಗೊಲಿವೆಯೊ ಮೇಶ | ನಿನ್ನಗುಪ್ತ ಮಹಿಮೆ ನೀನೆ ತಿಳಿಸೊ ಸರ್ವೇಶ 2 ಭೋಕ್ತ | ನಾಗಿಮುಕ್ತಾನಂದದಲಿದ್ದು ಮೆರೆವೆ ವಿಧಾತಾ 3 ಆರ್ತನಾಗುತ ಬೇಡ್ವೆ ಹರಿಯೇ | ನಿನ್ನವ್ಯಾಪ್ತಿ ತೋರೋ ಸರ್ವ ಲೋಕದ ಧೊರೆಯೆಮೂರ್ತಿ ನಿಲ್ಲಲಿ ಮನದಿ ಹರಿಯೇ | ನಿನ್ನಕೀರ್ತಿ ಕೊಂಡಾಡಿಸು ಸತತದಿ ಶೌರೀ 4 ತಪ್ತ ಕಾಂಚನದಂತೆ ಹೃದಯ | ದಲ್ಲಿದೀಪ್ತನಾಗಿದ್ದರು ಕಾಣದ ಪರಿಯೆ |ಸುಪ್ತಿಯ ಕಳೆ ತವ ಮೂರ್ತಿಯ | ತೋರೊಗೋಪ್ತ ಗುರು ಗೋವಿಂದ ವಿಠಲಯ್ಯ 5
--------------
ಗುರುಗೋವಿಂದವಿಠಲರು
ಕ್ಲೇಶಮಾಡಲಿ ಬೇಡ ಮನವೆ ನೀನೂ ದೇಶದೊಳಗೆ ಕೇಳು ಜ್ಞಾನಿಗಳ ಸಮ್ಮತಾ ಪ ವಸಿಷ್ಠ ಮಹಾಋಷಿಗೆ ನೂರುಮಂದಿ ಸುತರು ಅಸಮಸಾಹಸರು ಬಲು ಶೀಲಜ್ಞರು ಕಾಲ ಮೃತ್ಯುವಿನ ಕೈ ವಶವಾಗಿ ಹೋದರದು ನೋಡು ದು:ಖವ ಬಿಡು 1 ಕೃಷ್ಣ ಸೋದರಮಾವ ಮತ್ತೆ ಭೀಮಸೇನ ಜೇಷ್ಠಪಿತ, ಪಾರ್ಥನು ಪಡೆದ ಶೂರ ಇಷ್ಟು ಜನ ಇರಲಾಗಿ ಅಭಿಮನ್ಯು ದೇಹವನು ಬಿಟ್ಟು ಪೋಗಲು ಒಬ್ಬರಾದರು ಉಳುಹಿದರೆ2 ಇಂಥವರಿಗೀತ್ಯರನು ನಿನಗಾವ ಸ್ವಾತಂತ್ರ್ಯ ಸಂತೋಷವೆ ಬಡು ಧೈರ್ಯದಲ್ಲಿ ಕಂತು ಜನಕ ನಮ್ಮ ವಿಜಯವಿಟ್ಠಲನಂಘ್ರಿ ಅಂತರಂಗದಲಿಡು ಮುಂದಿನಗತಿ ಬೇಡು 3
--------------
ವಿಜಯದಾಸ
ಗಂಡಾಂತರ ಪರಿಹರಿಸು ಗರುಡಾಂಕಗಮನ ಹರಿ ಪುಂಡರೀಕಾಯತಾಕ್ಷ ಮೊಂಡತನ ತಾಳಿರುವ ಲಂಡರಸನಭಿಮತವ ಖಂಡಿಸು ಕೃಪಾಂಬುರಾಶಿ ಗ್ರಹವಾಸಿ ಪ. ನಿನ್ನ ಸೇವೆಯ ಮಾಳ್ಪ ನಿರಪರಾಧಿಯ ಮ್ಯಾಲೆ ಅನ್ಯಾಯ ಕೃತಭಾರವ ತನ್ನಂತೆ ಪೊರಿಸಬೇಕೆಂನುವರ ನೀನೆಂತು ಮನ್ನಿಸುವೆ ಮಾನ ಕಾವ ಭಿನ್ನ ಭಾವನೆ ತಾಳ್ದ ಭೂಪತಿಗೆ ಭಯದೋರಿ ಎನ್ನ ಕಾಪಾಡುವ ದೇವ ಭವನಾವ 1 ಅಡಿಗಡಿಗೆ ನಿನಗಂಜಿ ನಡೆವೆ ನಾನೆಂಬುದನು ಒಡೆಯ ನಿನಗೆಂಬುದೇನು ಕಡು ಮೂರ್ಖ ಜನರೆನ್ನ ಕಷ್ಟಗೊಳಿಪುದ ನೋಡಿ ಬಿಡಲ್ಯಾಕೆ ಭಾಗ್ಯವೇನು ಒಡೆಯ ಕಂಭದಿ ಬಂದು ಪಿಡಿದಾದಿ ದೈತ್ಯೇಯ- ನೊಡಲ ಬಗೆದಂಥ ಧೀರ ಬಲಸಾರ 2 ಪರಿಯಂತ ಪಾಲಿಸದ ಶೇಷಾದ್ರಿ ಶಿಖರವಾಸ ಬ್ಯಾಸತ್ತು ಬಹು ವಿಧದಿ ಬಳಲಿ ಬೆಂಡಾಗಿಹೆನು ದೋಷವೆಣಿಸದಿರು ಲೇಶ ನೀ ಸಲಹು ನಿಗಮಭೂಷ ಹೇ ಶ್ರೀಶ 3
--------------
ತುಪಾಕಿ ವೆಂಕಟರಮಣಾಚಾರ್ಯ
ಗರ್ವವು ಸುಜನವ್ರಾತದಲಿ ಸರ್ವವು ನನಗೆ ನಮ್ಮಪ್ಪಗಿಹಲಿ ಪ ಕಾಸುಕಾಸಿನಿಂದ ಹಣ ಹೊನ್ನಹುದು ದೇಶ ದೇಶದಿಂದ ರಾಜ್ಯವಾಗುವದು 1 ಕ್ಲೇಶ ಕ್ಲೇಶದಿಂದ ಹಾಸನಾಗುವುದು ದಾಸದಾಸರಿಂದ ಮುಕ್ತಿಮಾರ್ಗಹುದು2 ಸಾರಾಸಾರದಿಂದ ತತ್ವವಾಗುವದು ಧೀರ ನರಸಿಂಹವಿಠಲನರಿಯುವದು 3
--------------
ನರಸಿಂಹವಿಠಲರು
ಗುಬ್ಬಿಯಾಳೊ ಗೋವಿಂದ ಗೋವಿಂದಾ ಗೋವಿಂದ ಗೋವಿಂದಾನೆಂದು ನೆನಯಿರೊ ಗುಬ್ಬಿಯಾಳೊ ಪ. ಕ್ಲೇಶ ಪರಿಹಾರವು ಗುಬ್ಬಿಯಾಳೊ ನಾರಾಯಣನ ಧ್ಯಾನದಿಂದ ನರಕಭಯವಿಲ್ಲವೊ ಗುಬ್ಬಿಯಾಳೊ 1 ಮಾಧವನ ನೆನೆದರೆ ಮನೋಭೀಷ್ಟ ಕೊಡುವೊನು ಗುಬ್ಬಿಯಾಳೊ ನಾಶನವು ಗುಬ್ಬಿಯಾಳೊ 2 ವಿಷ್ಣುಭಜನೆಯಿಲ್ಲದವಗೆ ವೈಷ್ಣವರ ಜನ್ಮವುಂಟೆ ಗುಬ್ಬಿಯಾಳೊ ಇಹುದೊ ಗುಬ್ಬಿಯಾಳೊ 3 ತ್ರಿವಿಕ್ರಮನ ನೆನೆದರೆ ಸಾವಿತ್ರಿಯಾಗಿಹರೊ ಗುಬ್ಬಿಯಾಳೊ ವಾಮನದೇವರು ನಮಗೆ ವರಗಳ ಕೊಡುವೋರು ಗುಬ್ಬಿಯಾಳೊ 4 ಸಿರಿ ನಮಗೆ ಒಲಿವಳೊ ಗುಬ್ಬಿಯಾಳೊ ಹೃಷೀಕೇಶನ ಧ್ಯಾನದಿಂದ ಹೃದಯ ಪರಿಶುದ್ಧವೊ ಗುಬ್ಬಿಯಾಳೊ 5 ಪದ್ಮನಾಭ ನಮ್ಮೆಲ್ಲರ ಪಾಲಿಸಿ ರಕ್ಷಿಪನೊ ಗುಬ್ಬಿಯಾಳೊ ದಾಮೋದರನ ನೆನೆದರೆ ಪಾಮರತ್ವ ಬಿಡಿಸುವನೊ ಗುಬ್ಬಿಯಾಳೊ 6 ಸಂಕರ್ಷಣನ ಧ್ಯಾನದಿಂದ ಸಂತಾನ ಅಭಿವೃದ್ಧಿಯು ಗುಬ್ಬಿಯಾಳೊ ವಾಸುದೇವನ ದಯದಿಂದ ವಂಶಉದ್ಧಾರವೊ ಗುಬ್ಬಿಯಾಳೊ 7 ಪ್ರದ್ಯುಮ್ನನ ನೆನೆದರೆ ಭೂಪ್ರದಕ್ಷಿಣೆ ಫಲವು ಗುಬ್ಬಿಯಾಳೊ ಅನಿರುದ್ಧನ [ಸೇವಿಸೆ ಪುನೀತರಹೆವೊ] ಗುಬ್ಬಿಯಾಳೊ 8 ತಿಳಿಯಿರೊ ಗುಬ್ಬಿಯಾಳೊ ಅಧೋಕ್ಷಜ ನಮ್ಮೆಲ್ಲರಿಗಾಧಾರವಾಗಿಹನೊ ಗುಬ್ಬಿಯಾಳೊ 9 ನಾರಸಿಂಹದೇವರು ನಮ್ಮ ಕುಲದೈವವೊ ಗುಬ್ಬಿಯಾಳೊ ಅಚ್ಯುತ ಲಕ್ಷ್ಮಿಯ ಕೂಡಿ ಸಚ್ಚಿದಾನಂದನೊ ಗುಬ್ಬಿಯಾಳೊ 10 ಜನಾರ್ದನದೇವರು ಜಗಕೆಲ್ಲ ಶ್ರೇಷ್ಠರೊ ಗುಬ್ಬಿಯಾಳೊ ಕ್ಷಮಿಸುವನೊ ಗುಬ್ಬಿಯಾಳೊ 11 ಹರಿನಾಮಾಮೃತಕೆ ಸರಿಧರೆಯೊಳಗೆ ಇಲ್ಲವೊ ಗುಬ್ಬಿಯಾಳೊ ಶ್ರೀಕೃಷ್ಣ ರಂಗೇಶಯೆಂಬೊ ಸಿದ್ಧಕ್ರಿಯ ಬಲ್ಲರೆ ಗುಬ್ಬಿಯಾಳೊ12 ಈ ಗುಬ್ಬಿ ಪಾಡುವರಿಗೆ ಇಹಪರವು ಸಂತತವು ಗುಬ್ಬಿಯಾಳೊ ಧರಣಿಯೊಳು ಆಚಂದ್ರಾರ್ಕ ತಾರಕವಾಗಿಹರು ಗುಬ್ಬಿಯಾಳೊ 13 ನಿತ್ಯ ಮರೆಯದೆ ನೀ ನೆನೆಮನವೆ ನಿತ್ಯ ಮನವೆ ಗುಬ್ಬಿಯಾಳೊ 13
--------------
ವಾದಿರಾಜ
ಗುರು ಪ್ರಸನ್ನ ವಿಠಲ | ಪೊರೆಯ ಬೇಕಿವನಾ ಪ ದುರಿತ ದುಷ್ಕøತ ನಿಚಯ | ಪರಿಹರಿಸಿ ವರ್ಯಾ ಅ.ಪ. ಮಧ್ವ ಮತದಲಿ ಶ್ರದ್ಧೆ | ವೃದ್ಧಿಗೈ ಸಿವನಲ್ಲಿಶ್ರದ್ಧೆ ಪತಿನುತ ಹರಿಯೆ | ಮಧ್ವಾಂತರಾತ್ಮಾಬುದ್ಧಿ ಜೀವಿಯು ಇವನು | ಸಾಧನದಿ ಶಕ್ತನಿಹನಿದ್ರೆಯಿಂದೆಚ್ಚರಿಸಿ | ಉದ್ಧರಿಸೊ ಇವನಾ 1 ಅಂಕಿತದ ಉಪದೇಶ ಕಾಂಕ್ಷಿಸುತ್ತಿಹ ಇವಗೆಬಿಂಕದಲಿ ತೈಜಸನು | ಗುರು ರೂಪಿಲಿಂದಾಲೆಂಕಕನ ಸ್ವೀಕರಿಸಿ | ಆಶಿಷವ ನಿತ್ತಿಹನುಪಂಕಜಾಸನ ವಂದ್ಯ | ಅಂಕಿತವ ನಿತ್ತೇ 2 ಸಂಸಾರ ಕ್ಲೇಶಪದ | ಪಾಂಸು ಭಜಿಪುದರಿಂದೆಸಂಶಯವು ರಹಿತಾಗಿ | ದೂರ ಓಡುವುದೋಕಂಸಾರಿ ನಿನ ಅಂಶಿ | ಅಂಶಾವತಾರಗಳಶಂಸನದಿ ಸಾಧನವ | ಗೈಸೊ ಶ್ರೀಹರಿಯೇ 3 ಭವ ವಂದ್ಯಾ 4 ಯೋಗೀಶ ಶ್ರೀ ಕೃಷ್ಣ | ಯೋಗ ಸಾಧನೆಯಿತ್ತುನೀಗು ಭವವನು ಇವಗೆ | ಭಾಗವತರೊಡೆಯಬಾಗಿ ಬೇಡುವೆ ದಯಾ | ಸಾಗರನೆ ಉದ್ಧರಿಸೊಯೋಗಿ ಜನ ವಂದ್ಯ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಗುರುರಾಜ ನಿನ್ನ ಹೊರತು ಪೊರೆವ ಧೊರೆಗಳ ಕಾಣೆ | ಶರಣಜನರಿಷ್ಟವನೆ ಸುರತರುವಿನಂತೀವೆ ಪ ತರಳಪ್ರಹ್ಲಾದನಾಗಿರಲು ವರಭಕುತಿಯಿಂ | ನರಹರಿಯ ಮೆಚ್ಚಿಸಿದೆ ಪರಮಕರುಣಾಸಿಂಧೊ 1 ವ್ಯಾಸಮುನಿಯು ನೀನೆ ವಾಸುದೇವನ ಭಜಿಸಿ | ಲೇಸಾದ ಚಂದ್ರಿಕೆಯ ಭೂಸುರರಿಗರುಹಿದೆ 2 ಶ್ರೀರಾಮಚಂದ್ರಪದಸರಸೀರುಹಾಭೃಂಗ | ಶ್ರೀ ರಾಘವೇಂದ್ರಯತಿ ಸುರುಚಿರಕೃಪಾಪಾಂಗ 3 ನರಹರಿ ಸಿರಿರಾಮ ಮುರವೈರಿ ಮುನಿವ್ಯಾಸ | ಇರುತಿಹರು ನಿನ್ನೊಳು ಧರೆಯ ಪಾಲಿಸೆ ಮುದದಿ 4 ಕರೆದಲ್ಲಿ ಬರುವೆನೆಂದೊರೆದ ವಚನವ ಸಲಿಸೆ | ಭರದಿ ನಾರಾಯಣಪುರಕೈದಿದಿಯೊ ಮುದದಿ 5 ಭೀಮಸೇತ್ವ್ಯಾಖ್ಯ ಮಠ ಸೋಮರಘುತಿಲಕರಿಂ | ದೇ ಮಹಾಸೇವೆಯ ಕೈಗೊಂಡೆಯೋ ಮುದದಿ 6 ದೋಷದೂರನೆ ಪ್ರಭುವೆ ಆಶೆಯಿಂ ಸೇವಿಪರ | ಕ್ಲೇಶವೆಲ್ಲವನಳಿದು ಶ್ರೀಶಕೇಶವನೊಲಿಸೊ 7
--------------
ಶ್ರೀಶ ಕೇಶವದಾಸರು
ಗುರುಸ್ತುತಿ ದಾಸರ ಭಜಿಸುತ ಕ್ಲೇಶವ ಕಳೆಯಿರೊ ವಾಸುದೇವನ ಭಕ್ತರಾದ ಶ್ರೀಪುರಂದರ ಪ ಮೀಸಲ ಮನದಲಿ ಕೇಶವನಡಿಗಳ ಆಸೆಲಿ ಪೂಜಿಪ ದಾಸರೊಳಗೆ ಶ್ರೇಷ್ಠ ಅ.ಪ ಪುರಂದರ ಗಡದೊಳು ಹಿರಿಯನೆಂದೆನಿಸಿದ ವರದಪ್ಪನಿಗೆ ವರಕÀುವರ ನೆಂದೆನಿಸಿದೀ ಧರೆಯೊಳು ತನಗ್ಯಾರು ಸರಿಯಿಲ್ಲದಂತೆ ಮೆರೆಯೆ ಸಿರಿಯರಸನು ಶೀಘ್ರದಲಿ ತಾನರಿಯುತ 1 ಬಂದನು ಮಗನಿಗೆ ಮುಂಜಿಯೆಂದೆನುತಲಿ ಚಂದದಿಂದಲಿ ಬೇಡಲು ಧಣಿಯ ಬಂದೆಯಾತಕೆ ನಮ್ಮ ಚಂದದ ಬೀದಿಲಿ ಹಿಂದಕೆ ತೆರಳೆನೆ ಬಂದನು ಬಾರಿ ಬಾರಿ 2 ಹರಿಯೆಂದು ತಿಳಿಯದೆ ಜರಿಯುತ ನುಡಿಯಲು ಮರಳಿ ಮರಳಿ ಯಾಚಿಸೆ ಬಿಡದೆ ತೆರಳನು ಈ ವೃದ್ಧ ತೆರಳಿಪೆನೆನುತಲಿ ಸರಸರ ತೆಗೆಯುತ ಸುರಿದನು ನಾಣ್ಯವ 3 ನೋಡುತ ಶ್ರೀಹರಿ ಗಾಡದಿ ಕೈನೀಡೆ ನೀಡಿದ ಸವೆದ ರೊಕ್ಕವ ನೋಡೀ ಗಾಡನೆ ಬಂದು ನಾಯಕನ ಸತಿಯಳನು ಬೇಡಿದ ಪುಣ್ಯವು ಬಾಹೋದೆನುತಲಿ 4 ಏನು ನೀಡಲಿ ಎನಗೇನಿಹುದೆನ್ನಲು ಮಾನಿನಿ ಮೂಗುತಿ ನೀಡೆಂದೆನಲು ಮಾನಿನಿ ಮಾಡಲು ಜ್ಞಾನಿಗಳರಸನು ಗಾಡ ಹಿಂತಿರುಗುತ 5 ಗಾಡನೆ ಮೂಗುತಿ ನೀಡುತ ದ್ರವ್ಯವ ಬೇಡಲು ಬೇಗದಿ ನೀಡುತ ನುಡಿದನು ನೋಡುತ ವಡವೆಯ ನೀಡಿದ ಭರಣಿಲಿ ಸತಿ ಮುಖವಾ 6 ಮೂಗುತಿ ಎಲ್ಲೆನೆ ಬೇಗದಿ ನಡುಗುತ ನಾಗವೇಣಿಯು ಪ್ರಾರ್ಥಿಸಿ ಹರಿಯ ಆಗ ಕುಡಿವೆ ವಿಷವೆನ್ನುತ ಕರದಲಿ ನಾಗವಿಷದ ಬಟ್ಲಲಿ ಇರಲು 7 ತೋರಿದಳಾಗಲೆ ತನ್ನಯ ರಮಣಗೆ ತೋರದಿರಲು ಮುಂದಿನ ಕಾರ್ಯ ಭಾರಿ ಆಲೋಚನೆಯ ಮಾಡುತ ಮನದಲಿ ಸಾರಿದ ತನ್ನ ವ್ಯಾಪಾರದ ಸ್ಥಳಕೆ 8 ತೆರೆದು ನೋಡಲು ಆ ವಡವೆಯ ಕಾಣದೆ ಮಿಗೆ ಚಿಂತೆಯು ತಾಳುತ ಮನದಿ ನಗಧರನ ಬಹು ಬಗೆಯಲಿ ಪೊಗಳುತೆ ತೆಗೆದ ಅಸ್ಥಿರ ರಾಜ್ಯದಿ ಮನವ 9 ಕಳವಳ ಪಡುತಲಿ ಆ ಲಲನೆಯ ಸಹಿತದಿ ತನುಮನ ಧನ ಹರಿಗರ್ಪಿಸುತಾ ಕ್ಷಣ ಬಿಡದಲೆ ಹರಿ ಚರಣವ ಸ್ಮರಿಸುತ ಕಮಲನಾಭ ವಿಠ್ಠಲನೆನ್ನುವ ಹರಿ 10
--------------
ನಿಡಗುರುಕಿ ಜೀವೂಬಾಯಿ
ಗೋಪಾಲವಿಠಲ ನೀ ಕಾಪಾಡೊ ಎನ್ನನುಅಪಾರ ಜನುಮದಿ ಪೊಂದಿ ಇಪ್ಪೆ ನಿನ್ನ ಪ. ಉದಿತ ತರಣೀನಿಭ ಪದಪದ್ಮ ನಿನ್ನಯಹೃದಯದೊಳಗಿರಿಸಿ ಮುದದಿಂದ ಧ್ಯಾನಿಪಸದಯುಗಳ ಪಾದಪದುಮಸೇವೆಯನುಒದಗಿ ಪಾಲಿಸೊ ಶಶಿವದನ ಸಂ(ಕಂ)ಸದನನೆ 1 ವಾಸುದೇವನೆ ಎನ್ನ ದೋಷಿಯೆಂತೆಂದರೆಆಸರಿನ್ನ್ಯಾರು ನಿನ್ನ ದಾಸರದಾಸಗೆದಾಸವಿನುತ ಹೀಗುದಾಸೀನ ಮಾಡಲುದಾಸಜನರು ನಿನ್ನ ಲೇಶವು ಮೆಚ್ಚರು 2 ಪಿರಿಯರೆಲ್ಲರು ನಿನ್ನ ಚರಣವ ಪೂಜಿಸಿಪರಮಾನುಗ್ರಹ ಪರಿಪಾಲಿಸಿಪ್ಪರೆನ್ನನಿರುತದಿಬೇಡುವೆ ಗೋಪಾಲವಿಠಲ ಶ್ರೀಲೋಲನೆದೊರೆಯೆ ನಿನ್ನ ಮೂರುತಿ ಬರವೆನ್ನ ಮನಸಿಗೆ 3
--------------
ಗೋಪಾಲದಾಸರು
ಚನ್ನಕೇಶವ ಇನ್ನೇನಿನ್ನೇನಿನ್ನು ಯನಗಿನ್ನೇನಿನ್ನೇನಿನ್ನು ಪ. ಚನ್ನಕೇಶವನಿವನನ್ನು ಹೃದಯದೊಳ್ ಚೆನ್ನಾಗಿ ನೆಲಸಿರಲಿನ್ನೇನ ಬೇಡುವೆ 1 ಭುವಿಜಾತೆಯೆನ್ನ ಮಾತೆ - ಭುವಿನಾಥನೆನ್ನ ತಾತ ಇವರೆನ್ನೊಳಿರುತಿರೆ ಭವಕ್ಲೇಶ ಪರಿದಿರೆ 2 ಅಂಡಜವಾಹನಾಖಂಡಲಾರ್ಚಿತನ ಪುಂಡರೀಕಾಕ್ಷನ ಕಂಡು ಕೊಂಡಾಡಿದೆ 3 ಧರೆಯೊಳಧಿಕ ಶೇಷಗಿರಿಯೊಳು ನೆಲಸಿರ್ಪ ವರದ ಶ್ರೀನರಹರಿ ವರದನೆನ್ನೊಳಿರೆ 4
--------------
ನಂಜನಗೂಡು ತಿರುಮಲಾಂಬಾ
ಚಿತ್ತದ ಕ್ಲೇಶವ ಭಂಜಿಸಿ ವಾಸುದೇವನೆ ದಯದಿ ಹರೆ ಪ ಇಂದಿರಾವದನಾರವಿಂದ ಭಾಸ್ಕರ ಕುಂದರದನ ವದನ ಹರೆ 1 ಪಾವನ ಮೂರುತಿಯೆ ಹರೆ 2 ಚಿನ್ಮಯ ರೂಪನೆ ಬ್ರಹ್ಮಕಾರಣಗುಣ ನಿರ್ಮಲ ನಿರ್ಗುಣನೆ ಹರೆ 3 ಭೋಗಿ ಭೂಷ ನುತನೆ ಹರೆ 4 ಧ್ಯಾನವ ಗೈಯುವೆನೈ ಹರೆ 5
--------------
ಬೇಟೆರಾಯ ದೀಕ್ಷಿತರು