ಕೈಮುಗಿದು ಕೇಳಿಕೊಂಬೆ ಕರುಣಾಸಾಗರ ಶ್ರೀಕರ ಪ
ಶ್ರೀಮನೋಹರ ಭಾವಿಸುತ್ತ ಭಕ್ತಿಯೀವುದೈ ಶುಭಕರ ಅ.ಪ
ಕಣ್ಣ ತುಂಬ ನೋಡುವೆ
ಚನ್ನ ಪಾದಯುಗಳ ನೀನಿಡುನಾ
ನನ್ನಿಯಿಂ ನಮಿಪೆ ನಾರಾಯಣ 1
ಎನ್ನೊಳೆರಡು ಮಾತನಾಡು ಮೃದುನುಡಿ ಕೇಳುವೆ ಸಂ
ಪನ್ನ ಕೃಪಾದೃಷ್ಟಿಯ ನೀಡು ಧನ್ಯನಾಗುವೆ ದೀನಬಂಧು2
ಬಾಲಗೋಪಾಲ ಲೀಲೆ ತೋರೋ ನಲಿಯುವೆ ಶ್ರೀಲೋಲ
ಮುದ್ದಾಡುವೆ ಮುದ್ದು ಕೃಷ್ಣ3
ಎನ್ನ ಬಿನ್ನಪವ ಕೇಳು ಜನ್ಮ ಸಾರ್ಥಕವ ಮಾಡು
ಇನ್ನು ಸಾವಕಾಶವೇಕೊ ಜಾಜೀಕೇಶವ ಸುವೈಭವ 4