ಒಟ್ಟು 337 ಕಡೆಗಳಲ್ಲಿ , 67 ದಾಸರು , 322 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಂದ್ಯಾ ಬಾ ಮಂದಗಾಮಿನಿ ಚಂದಿರವದನೆ ಸುಂದರವದನೆ ಬಂದ್ಯಾ ಪ ಬಂದ ಭಕ್ತವೃಂದಭೀಷ್ಟ ನೀಡ್ವೆನೆಂದು ಚಂದ ಕರಗಳಿಂದ ಶೋಭಿಸುತಾ ಬಂದ್ಯಾ 1 ಪದುಮನಿಲಯ ಪದುಮಾನನೆ ಪದುಮಾಯತಾಕ್ಷಿ ಪದುಮನಾಭನ ರಾಣಿ 2 ನರಸಿಂಹವಿಠ್ಠಲನರಸಿ ಪ್ರಸನ್ನಮುಖಿ ಇರಿಸು ಶರಣರಲ್ಲಿ ಕರುಣಾಕಟಾಕ್ಷ 3
--------------
ನರಸಿಂಹವಿಠಲರು
ಬಂಧಕವಾಗದ ಹಾಂಗೆ | ಕರ್ಮಛಂದಾಗಿ ಮಾಡಿಸೊ ಹರಿಯೆ ಪ ದಾತ | ನೀನೆನ್ನ ಸಲಹೊ ಸತ್ರಾಣ1 ಸತಿಸುತ ಧನಧಾನ್ಯ ಅಯ್ಯ | ಎನ್ನ | ಮತಿ ಭ್ರಮಣೆ ಮಾಡಿದ ಪರಿಯಪ್ರತಿಕ್ರಿಯೆ ನೀನೆಲ್ಲ ತಿಳಿಯ | ಎನ್ನ | ಹಿತದಿಂದ ಪಾಲಿಸೋ ಜೀಯಾ 2 ಸರ್ವ ಕರ್ಮವು ಕ್ರೀಯಗಳಲಿ | ಅಲ್ಲಿ ಸರ್ವಸ್ವಾಮ್ಯವು ನಿನ್ನದಿರಲಿಸರ್ವದ ನಾಮ ನಾಲಿಗೆಲಿ | ನಿಂತು | ಸರ್ವತ್ರ ಎನ್ನ ಪಾಲಿಸಲಿ 3 ಕಾರಕ ಕ್ರಿಯ ದ್ರವ್ಯವೆಂಬ | ಭ್ರಮೆ | ಮೂರುಗಳನು ಕಳೆಯೆಂಬಸಾರ ಪ್ರಾರ್ಥನೆ ಇದೆಯೆಂಬ | ಎನ್ನ | ದೂರ ವ5À್ಪುದು ಮಾಣು ಬಿಂಬ 4 ತನು ಕರಣ ವಿಷಯಾದಿಗಳು | ಜಡ | ಮನದಿಂದಾಗುವ 5iರ್Àುಗಳುಅಣು ಜೀವಕ್ಕಾರೋಪಗಳು | ಮಾಡಿ | ಜನನ ಮರಣದ ಭವಣೆಗಳು 5 ಇತ್ತೆ ನೀ ಸ್ವಾತಂತ್ರ ಎನಗೆ | ಎಂಬ | ಶಾಸ್ತ್ರದ ಸೊಲ್ಲಿನ ಬಗೆಸುತ್ತು ಹುಟ್ಟುವ ಪರಿಯಾಗೆ | ಕಾಯೊ | ಭಕ್ತವತ್ಸಲ ದಯಾವಾಗೆ6 ಕರ್ಮ | ಮರ್ಮವ ತಿಳಿಸಲೋ ಧೊರೆಯೆ |ನಿರ್ಮಲಾತ್ಮನೆ ಮೊರೆಯಿಡುವೆ | ಎನ್ನ | ಕರ್ಮವ ಸುಡುವುದು ಹರಿಯೆ7 ಕರ್ಮ | ಗುರು | ಪ್ರಾಣಾಂತರ್ಗತಗೀವ ಮರ್ಮಜ್ಞಾನಾನು ಸಂಧಾನ ಪರ್ಮ | ಇತ್ತು ನೀನಾಗಿ ಪಾಲಿಸೊ ಧರ್ಮ 8 ಭಾವ ಕ್ರಿಯ ದ್ರವ್ಯಾದ್ವೈತ | ಮೂರು | ಭಾವಗಳಿಂದನುಷ್ಠಾತಶ್ರೀವರ ಎನಿಸೆನ್ನ ತಾತ | ಗುರು | ಗೋವಿಂದ ವಿಠಲ ಸುಪ್ರೀತ 9
--------------
ಗುರುಗೋವಿಂದವಿಠಲರು
ಬರಬೇಕು ಇಂದಿಲ್ಲಿಗೆ ಇಂದಿರೆರಮಣಾ ಪಬಾರಯ್ಯಾ ಶ್ರೀಹರಿ 'ಠ್ಠಲ ವೆಂಕಟರಮಣಾಉಡುಪಿಯ ಶ್ರೀಕೃಷ್ಣಾ ಬದರಿನಾರಾಯಣಾ ಅ.ಪಕರಿರಾಜ ಕರೆಯಲು ಕರುಣಸಾಗರ ನೀನುಗರುಡವಾಹನನಾಗಿ ಭರದಿಂದ ಬಂದಂತೆ 1ಭಕ್ತ ಬಾಲನ ಮಾತು ಸತ್ಯಮಾಡಲು ನೀನುತತ್ಕ್ಷಣ ಸ್ತಂಭದಿಂ ಪುಟಿದು ನೀ ಬಂದಂತೆ 2ಸಚ್ಚಿದಾನಂದಾತ್ಮ ಸರ್ವತ್ರ ಪರಿಪೂರ್ಣಭಕ್ತವತ್ಸಲ ಶ್ರೀ ಭೂಪತಿ'ಠ್ಠಲ ಸ್ವಾ'ು 3
--------------
ಭೂಪತಿ ವಿಠಲರು
ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆಕೂಗಿದರು ಧ್ವನಿ ಕೇಳಲಿಲ್ಲವೇ ನರಹರಿಯೇ ಪ ಪರಮ ಪದದೊಳಗೆ ವಿಷಧರನ ತಲ್ಪದಲಿ ನೀಸಿರಿ ಸಹಿತ ಕ್ಷೀರವಾರಿಧಿಯೊಳಿರಲುಕರಿರಾಜ ಕಷ್ಟದಲಿ ಆದಿಮೂಲಾ ಎಂದುಕರೆಯಲಾಕ್ಷಣ ಬಂದು ಒದಗಿದೆಯೊ ನರಹರಿಯೆ 1 ಕಡುಕೋಪದಿಂ ಖಳನು ಖಡುಗವನು ಪಿಡಿದು ನಿ-ನ್ನೊಡೆಯನೆಲ್ಲಿಹನೆಂದು ಜಡಿದು ನುಡಿಯೆದೃಢ ಭಕುತಿಯಲಿ ಶಿಶುವು ಬಿಡದೆ ನಿನ್ನನು ಭಜಿಸೆಸಡಗರದಿ ಕಂಬದಿಂದೊಡೆದೆ ನರಹರಿಯೆ 2 ಯಮಸುತನ ರಾಣಿಗಕ್ಷಯ ವಸನವನ್ನಿತ್ತೆಸಮಯದಲಿ ಅಜಮಿಳನ ಪೊರೆದೆಸಮಯಾಸಮಯವುಂಟೆ ಭಕ್ತವತ್ಸಲ ನಿನಗೆಕಮಲಾಕ್ಷ ಕಾಗಿನೆಲೆಯಾದಿಕೇಶವನೆ 3
--------------
ಕನಕದಾಸ
ಬಾರಯ್ಯ ಬಾರಯ್ಯ ಭಕ್ತವತ್ಸಲ ಹರಿ ಶ್ರೀಕೃಷ್ಣ ಪ ಭಕ್ತರು ಬಂದು ದ್ವಾರದಿ ನಿಂದು ಭಕ್ತಿಲಿ ಹಾಡುತ ಪಾಡುತಲಿರುವರು ಮುಕ್ತಿದಾತ ನೀನಲ್ಲದೆ ಸರ್ವ- ಶಕ್ತರಿನ್ಯಾರಿಹರೈ ಎನ್ನುತ ಪೊಗಳ್ವರು 1 ತಾಳಮೇಳದವರೆಲ್ಲರು ನಿನ್ನಯ ಊಳಿಗ ಮಾಡಬೇಕೆನುತಲಿ ಬಂದು ವೇಳೆ ವೇಳೆಗೆ ತಮ್ಮ ಸೇವೆಯ ಸಲಿಸುತ ಭಾಳ ಸಂಭ್ರಮದಿಂದ ಹಾರೈಪರೊ ಹರಿ 2 ತುಂಬುರು ನಾರದರ್ವೀಣೆಯ ನುಡಿಸಲು ರಂಭಾದ್ಯಪ್ಸರ ಸ್ತ್ರೀಯರು ನರ್ತಿಸೆ ವಿಶ್ವ ಕು- ಟುಂಬಿಯೆ ಬಾ ಬಾರೆನ್ನುತ ಸ್ತುತಿಪರು3 ಅಂಬರದಲಿ ದೇವತೆಗಳೆಲ್ಲರು ನೆರೆದು ತುಂಬಿ ಪುಷ್ಪವೃಷ್ಟಿಗಳನೆ ಮಾಡುತ ಕುಸುಮ ಮಳೆ ಗಂಭೀರದಿ ಸುರಿಸುತ ಪ್ರಾರ್ಥಿಸುವರು 4 ಅತ್ರಿ ವಸಿಷ್ಠ ಗೌತಮ ಮೊದಲಾಗಿ ರಾತ್ರಿಹಗಲು ಎಡೆಬಿಡದಲೆ ಸ್ತುತಿಸುತ ವೃತ್ರಾರಿಯ ಸುತನಿಗೆ ಸಾರಥಿಯೆ ವಿ- ಚಿತ್ರ ವ್ಯಾಪಾರಿ ಶ್ರೀಹರಿ ಎಂದು ಪೊಗಳ್ವರು 5 ಅಣುಮಹದ್ರೂಪನೆ ಘನಮಹಿಮನೆ ನಿನ್ನ ಮಣಿದು ಬೇಡಿ ಕೈಮುಗಿಯುತ ಸ್ತುತಿಪರು ಪ್ರಣವ ಪ್ರತಿಪಾದ್ಯನೆ ನಿನ್ನ ಗುಣಗಳ ಎಣಿಸಲಸಾಧ್ಯವೆನುತ ಕೊಂಡಾಡ್ವರು 6 ನವನವ ರೂಪದಿ ನಲಿಯುವ ದೇವನೆ ನವವಿಧ ಭಕುತರು ನಮಿಸುತ ಕರೆವರು ಭುವನ ಮೋಹನ ಸುಂದರಮೂರ್ತಿಯೆ ಎಂದು ಕವಿಗಳು ಪೊಗಳುತ ಕುಣಿಯುತಲಿರುವರು 7 ಎಡಬಲದಲಿ ಶ್ರೀ ಭೂದೇವಿಯರಿರೆ ಬಿಡದೆ ಛತ್ರಚಾಮರಗಳಿಂದೊಪ್ಪುತ ತಡಮಾಡದೆ ಬಾ ಮಡದಿಯರ ಸಹಿತದಿ ದಡ ದಡ ಬಾರೆಂದು ಬಡ ಬಡ ಕರೆವರು 8 ವಿಶ್ವರೂಪಕ ವಿಶ್ವನಾಮಕ ವಿಶ್ವತೋಮುಖ ವಿಶ್ವನಾಟಕ ವಿಶ್ವವ್ಯಾಪಕ ವಿಶ್ವಾಧಾರಕ ವಿಶ್ವ ಕುಟುಂಬಿಯೆ ವಿಶ್ವಾಸದಿ ಬಾ 9 ವಿರೋಧಿಕೃತು ಸಂವತ್ಸರ ಬರುತಿರೆ ಪರೋಪಕಾರವ ಮಾಡುತ ಸುಜನರು ವಿರೋಧಿಗಳ ದೂರಿಡುತಲಿ ಶ್ರೀ ಹರಿ ಸರೋಜದಳ ನೇತ್ರನÀ ಸ್ತುತಿಸುವರು 10 ಕಮಲಾಕ್ಷಿಯ ಒಡಗೂಡುತ ಬಾ ಬಾ ಕಮಲಾಸನ ಜನಕನೆ ಹರಿ ಬಾ ಬಾ ಕಮಲನಾಭ ವಿಠ್ಠಲ ಬೇಗ ಬಾರೆಂದು ಸುಮನಸ ವಂದ್ಯನ ಸ್ಮರಿಸುತ ಕರೆವರು11
--------------
ನಿಡಗುರುಕಿ ಜೀವೂಬಾಯಿ
ಬಾರಯ್ಯ ಭಕ್ತವತ್ಸಲ ಬಾರೋ ಶ್ರೀ ಹರಿ ಗೋಪಾಲ ಸಿರಿಸುಖಲೋಲ ಧ್ರುವ ಸಾಮಗಾಯನ ಪ್ರಿಯ ಸಮಸ್ತಲೋಕದ ಶ್ರೇಯ ನೇಮಿಸಿ ಬೀರೊ ದಯ ಸ್ವಾಮಿ ನಮ್ಮಯ್ಯ 1 ಅನಾಥರನುಕೂಲ ಮುನಿಜನ ಪ್ರತಿಪಾಲ ಘನಸುಖದ ಕಲ್ಲೋಳ ದೀನದಯಾಳ 2 ದೀನಮಹಿಪತಿಗಾಳು ಘನವಾಗಿ ಕೇಳು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಾರಯ್ಯ ಭಕ್ತವತ್ಸಲ ಶ್ರೀ ಗುರು ಮುದ್ದುಕೃಷ್ಣ ಮದನಗೋಪಾಲ ಧ್ರುವ ಯಾದವಕುಲತಿಲಕ ಶ್ರೀದೇವದೇವ ಸಾಧುಜನರ ಪಾಲಕ ಉದ್ಧವ ಪ್ರಾಣಪೋಷಕ ಆದಿಕೇಶವ ಸದಮಲ ಸುಖದಾಯಕ 1 ಇಂದೀವರದಳನಯನ ನಂದಕುಮಾರ ಸುಂದರ ಶುಭವದನ ಮಾಧವ ಮಧುಸೂದನ ಮಂದರಧರ ವೃಂದ ಗೋಕುಲೋದ್ಧರಣ 2 ಮುರಹರ ಸಂಕರುಷಣ ಉರಗಶಯನ ತೋರಯ್ಯ ನಿಮ್ಮ ಚರಣ ಬಾರಯ್ಯ ನಾರಾಯಣ ಗರುಡವಾಹನ ಹೊರೆಯಾ ಮಹಿಪತಿ ಪ್ರಾಣ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಾರಯ್ಯ ಸ್ವಾಮಿ ಬಾರಯ್ಯ ಪ ಬಾರಯ್ಯ ಮುಖವನ್ನು ತೋರಯ್ಯ ತವಪಾದ ವಾರಿಜನಂಬಿದೆ ಮಾರಜನಕ ಬೇಗ ಅ.ಪ ಎಷ್ಟಂತ ಬಳಲಲಿ ನಾನು ಸಂಸಾರ ಕಷ್ಟದ ಕಾಡಿನೊಳಿನ್ನು ಧ್ವಂಸಾಗಿ ಭ್ರಷ್ಟತನದಿ ಬಾಳುವೆನು ಕಂಸಾರಿ ಇಷ್ಟುದಯವು ಬರದೇನು ಆಹ ಶಿಷ್ಟಜನುಮವೆಂದು ಅಟ್ಟಿ ಎನ್ನನು ಇಂಥ ಕೆಟ್ಟ ಬವಣೆಗೆ ಬಲಿಗೊಟ್ಟು ಬಿಡುವರೆ ಈಶ 1 ಜನನಿಜಠರದಲಿ ಎನ್ನ ಏನೆಂ ದೆನುತ ನೂಕಿದಿ ಪೇಳು ಮುನ್ನ ಸಾನಂದನುಪಮನು ತವಚರಣ ಆನಂದನುಕೂಲವಾದಂದಿಲ್ಲೇನ ಆಹ ಅನುಚಿತ್ತವೇನಯ್ಯ ದಿನವು ಪೋಯಿತು ಅರ್ಧ ಮನಕೆತರದಲಿಹಿ ಜನಕನೆ ಕರುಣದಿ 2 ಭಕ್ತವತ್ಸಲನೆಂಬ ಬಿರುದು ಮಾಜ ದ್ಹೊತ್ತು ನಿಖಿಲ ನೀನೆ ಬೆರೆದು ತ್ರಿಜ ಗೆತ್ತಿ ಆಳುವಿ ಮನವರಿದು ನೈಜ ದಿತ್ತು ಪೊರೆವಿ ಭಯತರಿದು ಆಹ ಕರ್ತನೆ ತವಪಾದ ಮರ್ತಿರಲಾರಿನ್ನು ತುರ್ತು ದಯವಾಗೆನ್ನೊಳರ್ತಿಯಿಂ ಶ್ರೀರಾಮ 3
--------------
ರಾಮದಾಸರು
ಬಾರೆ ಪಾರ್ವತಿ ಸಾರೆ ಸುಖವ ತೋರೆ ನಿನ ದಯವ ಪ ಬಾರಿ ಬಾರಿಗು ಪ್ರಾರ್ಥಿಸುವೆನೆ ಸಾರಸಾಕ್ಷಿಯೆ ಸರ್ಪವೇಣಿಯೆ ಅ.ಪ ದಕ್ಷಕುವರಿಯೆ ಈಕ್ಷಿಸೆನ್ನನು- ಪೇಕ್ಷೆ ಮಾಡದಲೆ ಅಕ್ಷಿತ್ರಯನ ಸತಿಯೆ ಭಕ್ತರ ಕಷ್ಟ ಬಡಿಸುತಲಿ ಸೂಕ್ಷ್ಮ ಮತಿಯನಿತ್ತು ಕೃಷ್ಣನ ಸ್ತೋತ್ರಗಾನದಲಿ ಅ- ಪೇಕ್ಷೆಯೊದಗುವ ಮನವ ಪಾಲಿಸು ರಕ್ಷಿಸೀಗಲೆ ಭಕ್ತವತ್ಸಲೆ 1 ಮಂದಗಮನೆ ಮತ್ತೊಂದು ಪೇಳುವೆ ನಂದಿವಾಹನನಾ ಮುಂದೆ ಸ್ತುತಿಪ ಭಕ್ತವೃಂದ ವಿ- ದೆಂದು ಪೇಳಿದೆ ನಾ ಸುಂದರ ಶ್ರೀ ಹರಿಯ ಸೇವೆಗೆ ಪೊಂದಿಸೆನ್ನ ಮನ ಚಂದದಿಂದ ಪ್ರಾರ್ಥಿಸುವೆನೆ ಸುಂದರಾಂಗಿಯೆ ನಿನ್ನನನುದಿನ 2 ಕಮಲನೇತ್ರೆಯೆ ವಿಮಲ ಸದ್ಗುಣಗುಣಿಯೆ ಪಾರ್ವತಿ ಕಮಲಸಂಭವ ಭವಸುರಾರ್ಚಿತನ ಸ್ಮರಿಸುವ ಮತಿ ಹೃ- ತ್ಕಮಲದೊಳಗೆ ನಿಲಿಸುವಂತೆ ಮಾಡು ಸದ್ಗತಿ ಕಮಲನಾಭ ವಿಠ್ಠಲ ಕೊಡುವ ನೆನುತ ಕೀರುತಿ 3
--------------
ನಿಡಗುರುಕಿ ಜೀವೂಬಾಯಿ
ಬಾರೆಲೋ ಬೇಗನೆ ಭಾರತೀಪತಿ ಪ್ರಿಯ ಸಾರುತ ಬೇಗ ಶ್ರೀ ನಾರಾಯಣ ಪ. ನಾರದಾದಿ ವಂದ್ಯ ಪಾರುಗಾಣಿಸೆ ಭವ ಗಾರು ಮಾಡದೆ ಶ್ರೀಶ ಸರ್ವೇಶ ಅ.ಪ. ಸುಮನಸರೊಡೆಯನೆ ನೀನಾಗಮಿಸಲು ಸಕಲವು ಸುಗಮವಹುದೆ ಕಮಲೆಯ ಪ್ರೀಯನೆ ನಿನ್ನಾಗಮನವನೆ ಬಯಸುವೆ 1 ಭಕ್ತರ ಕಾಯುವ ಯುಕ್ತಿ ನಿನಗೆ ಸರಿ ಭಕ್ತವತ್ಸಲನೆಂಬೊ ಬಿರುದಿನ ದೇವ ಶಕ್ತಿ ಸ್ವರೂಪನೆ ಅಶಕ್ತರ ಪೊರೆವಾ ಸಕ್ತಿಯ ತೋರಿಸೆ ಭಕ್ತರಿದ್ದೆಡೆಗೆ 2 ಎನ್ನಪರಾಧ ಎಣಿಸಲೆನ್ನಳವೆ ಪನ್ನಗಾದ್ರಿನಿವಾಸ ಕೃಪೆತೋರೊ ಸನ್ನುತಚರಿತ ನಿನ್ನ ಪೊರತು ಎನ ಗನ್ಯರ ಕಾಣೆನಾ ಶ್ರೀ ಶ್ರೀನಿವಾಸ ದೊರೆ 3
--------------
ಸರಸ್ವತಿ ಬಾಯಿ
ಬಿನ್ನೈಪೆ ನಿನಗಾನು ಭಕ್ತ ಬಂಧು ನಿನ್ನ ವಿಸ್ಮøತಿ ದೋಷ ಕೊಡದಿರೆಂದೆಂದು ಪ ಭಾರ ತಾಳುವಾಗಲಿ ಎಡಹಿ ಕಾಲ ಕಾಲಗಳಲ್ಲಿ ಕಾಲನಾಮಕ ನಿನ್ನ ಲೀಲೆಗಳ ಮರೆಯದೆ ನಾಲಿಗ್ಗೆ ಬರುವಂತೆ 1 ನಿಲ್ಲುವಾಗ ಕುಳಿತು ಮೈದೊಳೆವಾಗ ಅನ್ನಗಳ ಮೆಲುವಾಗ ವಿದ್ಯೆಗಳ ಕಲಿವಾಗ ಮಲಗಿ ಸುಖದಿಂದ ನಲಿವಾಗ ಭಕ್ತವ ತ್ಸಲ ನಿನ್ನ ಮಹಿಮೆಗಳ ತಿಳಿವಂತೆ ಮಾಡಯ್ಯ 2 ಖೇದ ಮೋದಗಳು ಸಂತೋಷ ಸಂಪಾದಿಸಿದ ವೈದೀಕವೈದಿಕಗಳು ಸ್ತ್ರೀ ಧನಗಳೆಲ್ಲ ಶ್ರೀಧವನ ಆರಾಧನೆಗೆ ನಿ ವೇದಿಪುದ ತಿಳಿಸೆಂದು 3 ಮೃಗ ಚೋರ ಮುಂತಾದ ಭಯಗಳಲಿ ಭ್ರಾಂತಿಗೊಳಿಸುವ ವಿಷಯ ಸಂತತಿಯಲಿ ಪ್ರಾತಃ ಕಾಲದಿ ರಮಾರಮಣ ನಿನ್ನ ಮೂರ್ತಿ ಚಿಂತನೆಗೆ ಬರಲೆಂದು ಸಂತೋಷದಾತ 4 ಶ್ವಾನ ಸೂಕರ ಜನ್ಮ ಬರಲಿ ಯಮ ದಂಡ ದೂತರ ಪಾಶಕಂಜೆ ನಾನು ಪಾಂಡವ ಪ್ರಿಯ ಜಗನ್ನಾಥ ವಿಠಲನೆ ಪಾ ಷಂಡಿ ಮತಗಳಲಿ ಚೆನ್ನ ಕೊಡದಿರೆಂದು 5
--------------
ಜಗನ್ನಾಥದಾಸರು
ಬೆಳೆಗಿಂಝಾವದಿ ಬಾರೊ ಹರಿಯೆ ನಿನ್ನ ಕಳೆಕಳೆ ರೂಪ ನೋಡುವೆ ಮುಕುಂದ ಪ. ಭಕ್ತರ ಭಯ ನಿವಾರಣನೆ ಭಕ್ತಿಲಿ ಕರೆವೆ ಗೋವಿಂದ ನಿನ್ನನೆ ಭಕ್ತವತ್ಸಲ ನೀನಲ್ಲವೇ ಸ ದ್ಭಕ್ತರ ಸಲಹೆ ಕಂಕಣ ಧರಿಸಿಹನೆ 1 ಶ್ರೀ ತುಳಸಿಯ ವನಮಾಲ ಶ್ರೀ ಕೃಷ್ಣ ನಿನ್ನ ದರ್ಶನದ ಲಾಭ ಶ್ರೀಶನೆ ಬಯಸುವೆ ದೇವ ಶ್ರೀರಮೆಯರಸ ದಯಪಾಲಿಸೊ ಕೃಷ್ಣ 2 ಒಮ್ಮೆಯಾದರೂ ತೋರೊ ರೂಪ ಎನ್ನ ಕರ್ಮ ಖಂಡನವಹ ತೆರೆದೊಳು ಶ್ರೀಪ ಬೊಮ್ಮನೈಯ್ಯ ನಿನ್ನ ನೋಡ್ವೆ ಸುಮ್ಮಾನವ್ಯಾಕೊ ಶ್ರೀ ಶ್ರೀನಿವಾಸ 3
--------------
ಸರಸ್ವತಿ ಬಾಯಿ
ಬೊಮ್ಮ ಮೃಡ ಮುಖ್ಯ ಸುರರಿಗೆಡೆಯನೆನಿಪ ಮುದ್ದು ಉಡುಪಿಯ ಕೃಷ್ಣನ ಪ. ಪೊಡವಿಯೊಳಗೆ ತನ್ನ ಅಡಿಗಳ ಧೇನಿಪ-ರಡಿಗಡಿಗವರ ವಾಂಛಿತ ವÀಸ್ತುವಕಡೆದು ಕೊಡುವೆನೆಂದು ಕಡೆಗೋಲ ನೇಣನೆಪಿಡಿದಿಹ ಸಿರಿಯರಾ ದೃಢಕೆ ಮೆಚ್ಚಿದನ 1 ಹರಿಸರ್ವೋತ್ತಮನೆಂಬೊ ಪರಮಸಿದ್ಧಾಂತಕ್ಕೆ ಮ-ಚ್ಚರಿಸುವ ಕುಮತದ ಕುಜನರಭರದಿ ಬಂಧಿಸಿ ಬನ್ನಂಬಡಿದು ಶಿಕ್ಷಿಪೆನೆಂದುವರಪಾಶದಂಡಧಾರಿಯಾಗಿ ತೋರಿಪ್ಪನ 2 ಭಕ್ತವತ್ಸಲನೆಂಬೊ ಸುಲಭೋಕ್ತಿಯನು ಬಂದನಿಕರಕ್ಕೆ ಪೇಳಲು ದ್ವಾರಕಾಪುರಿಯಸುಖತೀರ್ಥಮುನಿಗೆ ಸುಖಕರನಾಗಿ ಬಂದಅಕುಟಿಲ ಕೃಷ್ಣ ಹಯವದನರಾಯನ 3
--------------
ವಾದಿರಾಜ
ಬ್ರಹ್ಮ ಸುಖದಲಿ ನಲಿದಾಡುವೆ ಧ್ರುವ ನಮೋ ಶ್ರೀ ಗಣನಾಯಕನಿಗೆ ನಮೋ ನಮೋ ಶ್ರೀ ಸರಸ್ವತಿಗೆ ನಮೋ ನಮೋ 1 ಸದ್ಗುರುವಿಗೆ ನಮೋ ಶ್ರೀ ಸ್ವಾಮಿಗೆ ನಮೋ ನಮೋ 2 ಇಷ್ಟದೈವಕೆ ನಮೋ ಮಹಿಮಗೆ ನಮೋ ನಮೋ 3 ಸೂತ್ರಾಂತ್ರಿಗೆ ನಮೋ ಸುಪಥಕೆ ನಮೋ ನಮೋ 4 ಸುಸರ್ವ ದೈವಕೆ ನಮೋ ರೂಪಕೆ ನಮೋ ನಮೋ 5 ಶಕ್ತಿಗೆ ನಮೋ ಮುನಿಗಳಿಗೆ ನಮೋ ನಮೋ 6 ಸುಭಾಗವತರಿಗೆ ನಮೋ ನಮೋ ನಮೋ 7 ಸುಮಹಿಮರಿಗೆ ನಮೋ ಸುತೀರ್ಥಕ್ಷೇತ್ರಕ್ಕೆ ನಮೋ ನಮೋ 8 ಸುಪುಣ್ಯಶ್ಲೋಕರಿಗೆ ನಮೋ ಸಜ್ಜನರಿಗೆ ನಮೋ ನಮೋ 9 ತ್ರೈಲೋಕ್ಯನಾಥಗೆ ನಮೋ ಸರ್ವೋತ್ಮಗೆ ನಮೋ ನಮೋ 10 ಸುಕರುಣಿಗೆ ನಮೋ ಭಕ್ತವತ್ಸಲಗೆ ನಮೋ 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭಕ್ತವತ್ಸಲ ಭವಭಯ ಹರನೆ ಭಕ್ತಿ ಮುಕ್ತಿದ ಪರಿಪಾಲಿಸು ಧೀರನೆ ಪ. ಪ್ರತಿದಿನ ಉದಯಾರಂಭಿಸಿ ನಾ ಮಾಡುವ ಪಾಪ ತತಿಗಳನೆಲ್ಲವ ಭಸಿತಗೈಸಿ ಪತಿತಪಾವನ ಪರಮಾತ್ಮನ ರೂಪ ಶ್ರೀ- ಪಾದ ಸಂಸ್ಮøತಿಯಿತ್ತು ಕರುಣಿಸು 1 ವರದೇಶ ನಿನ್ನಯ ಚರಣಾರವಿಂದವ ಶರಣೆಂದು ನಂಬಿದ ನರರಿಗಿನ್ನು ಪುರುಷಾರ್ಥಗಳ ಸೇರಿ ಬರುವರಾಶ್ಚರಿಯವೆ ಕರಿರಾಜಗೊಲಿದ ಶ್ರೀಕರಮೂರ್ತಿ ದಯವಾಗು 2 ಘೋರ ಸಂಸೃತಿ ಪಾರಾವಾರ ದಾಟಿಸಲು ಬೇರಾರಿಲ್ಲ ನಿಜ ದಾಸೋದ್ಧಾರ ಹರೆ ವಾರಿಜಾಂಬಕ ವೆಂಕಟಾಚಲನಾಯಕ ಗಾರುಮಾಡದೆ ಬೇಗ ಬಾರೋ ಹೃತ್ಕಮಲದಿ 3
--------------
ತುಪಾಕಿ ವೆಂಕಟರಮಣಾಚಾರ್ಯ