ಒಟ್ಟು 210 ಕಡೆಗಳಲ್ಲಿ , 66 ದಾಸರು , 160 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಕ್ಷ್ಮೀದೇವಿ151ಅಂಬೆ ಶ್ರೀ ಅಂಬೆ ಜಗದಂಬೆ ಶರಣೆಂಬೆಅಂಬುಜಾಯತಾಂಬಕನ ಇಂಬಲಿಹ ಬೊಂಬೆ ಪ.ಕಾವನಯ್ಯನ ಭಟರ ಕಾವೆ ವರವೀವೆದೇವಾದಿ ದೇವರ್ಕಳಿಗೆ ಕುಲದ ದೇವೆ ವಿ?ಭಾವಕರ ಜೀವೆ ಚಿದ್ಭವನೈದಿಸುವೆಸೇವಕರಾವೆ ಕಾಯಿ ಎನುವೆ ಧನ್ಯ ಎನುವೆ 1ಮಾಯಾಗುಣಮಯ ಅಂಬಾ ತರುವ ಹೊಂದಿರುವೆತಾಯಂದಿರಖಿಳಾರ್ಥ ತಾಯಿ ನೀನೀವೆಬಾಯೆನ್ನ ತಾಯೆನ್ನಲಾಯಾಸ ಬಿಡಿಸುವೆ ಎನ್ನಯ ಪ್ರಿಯಳೆ ಪೀಯೂಷನುಣಿಸುವೆ 2ಬೊಮ್ಮನಿಗಮ್ಮ ಪರಬೊಮ್ಮನೊಲಿಸಮ್ಮಸುಮ್ಮನಸರ ಮನೋರಮ್ಮೆ ಶ್ರೀರಮ್ಮೆನಿಮ್ಮ ಮನ ನಮ್ಮರಿಯಾ ಉಮ್ಮಯವೀಯಮ್ಮನಮ್ಮಯ ಪ್ರಸನ್ನವೆಂಕಟನ ಮೆಚ್ಚಿನಮ್ಮ 3
--------------
ಪ್ರಸನ್ನವೆಂಕಟದಾಸರು
ವರವ ಕೊಡೆ ತಾಯೆ ವರವ ಕೊಡೆ ಪ.ಶರಧಿಯ ಕನ್ನೆ ನೀ ಕೇಳೈ ಸಂಪನ್ನಳೆಸೆರಗೊಡ್ಡಿ ಬೇಡುವೆನಮ್ಮ ವರವ ಕೊಡೆನೆರೆನಂಬಿದೆನು ನಿನ್ನ ಚರಣಕಮಲವನುಪರಿಹರಿಸೆಮ್ಮ ದಾರಿದ್ರ್ಯ ಕಷ್ಟವ ತಾಯೆ 1ಹೊಳೆವಂಥ ಅರಸಿನ ಹೊಳೆವ ಕರಿಯಮಣಿಸ್ಥಿರವಾಗಿ ಕಟ್ಟುವಂಥ ವರವ ಕೊಡೆತಾಳೋಲೆ ಹೊನ್ನೋಲೆ ತೊಳೆದೊಯ್ದ ಬಿಚ್ಚೋಲೆಯಾವಾಗಲಿರುವಂಥ ವರವ ಕೊಡೆ 2ಬಾಗಿಲ ತೋರಣ ಮದುವೆ ಮುಂಜಿ ನಾಮಕರಣಯಾವಾಗಲಾಗುವಂಥ ವರವ ಕೊಡೆಬಂಧುಬಳಗ ಹೆಚ್ಚಿ ಹೆಸರುಳ್ಳಮನೆಕಟ್ಟಿಉಂಡಿಟ್ಟಿಡುವಂಥ ವರವ ಕೊಡೆ 3ಹಾಲ ಕರೆಯುವ ಮೇಲಾದ ಸರಳೆಮ್ಮೆಸಾಲಾಗಿ ಕಟ್ಟುವಂಥ ವರವ ಕೊಡೆಕಂಡಕಂಡವರಿಗೆ ಕರೆದು ಮೃಷ್ಟಾನ್ನವತಿಳಿ ನೀರು ಕೊಡುವಂಥ ವರವ ಕೊಡೆ 4ಲಕ್ಷ್ಮೀನಾರಾಯಣನ ವಕ್ಷಸ್ಥಳದಲ್ಲಿಲಕ್ಷ್ಮಣವಾಗಿರುವಂಥ ಮಹಾಲಕ್ಷ್ಮಿಅಷ್ಟೈಶ್ವರ್ಯವು ಪುತ್ರಸಂತಾನವಕೊಟ್ಟು ರಕ್ಷಿಸುವವಮ್ಮ ವರವ ಕೊಡೆ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ವೃಂದಾವನ ದೇವಿ ನಮೋ ನಮೋಗುಣ|ವೃಂದೆ ಸುಂದರಿ ಲೋಕಮಾತೆ ನಮೋ ನಮೋ ||ಬಂದು ಸೇವಿಸಿ ನಿನಗುದಕವ ನೆರೆಯಲುಇಂದುನಾವು ಮಾಡಿದ ಪಾಪ ಹೋಗುವುದೂಪಚಂದದಿಂದಲಿ ನಮ್ಮ ಕುಲದವರಿಗೆಲ್ಲಸುಂದರ ವೈಕುಂಠ ಪದವೀವಳೇ1ಹನ್ನೆರಡು ಪ್ರದಕ್ಷಿಣೆ ಬಂದು ವಂದನೆ ಮಾಡಿಚೆನ್ನಾಗಿ ಸ್ಮರಿಸೆ ಕಂಡು ಪರಸುವಳೆ |ಘನತರ ಭಕ್ತಿಯೊಳ್ ಬಂದು ಕೈ ಮುಗಿದವರನ್ನುಪನ್ನಂಗಶಯನ ಸ್ವಾಮಿ ಕರೆದೊಯ್ಯುವನೂ2ಭವಭವದಲಿಗೈದ ದೋಷನಿವಾರಿಸಿಭವಭಂಗಬಿಡಿಸೆನಗೊಲಿದು ತಾಯೆ |ದಯದಿ ಗೋವಿಂದನ ದಾಸನೆನಿಸೆಂದೆಂನ್ನ |ಭುವನಮೂರರೊಳ್ ಖ್ಯಾತಿ ಪಡೆದವಳೆ3xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'
--------------
ಗೋವಿಂದದಾಸ
ಶರಣು ಭಾರತೀ ತಾಯೆ |ಕರವಬಿಡದಲೆ ಕಾಯೆ ||ಮರುತದೇವನ ರಮಣಿ | ಸುರ ನದಿಯ ಭಗಿನಿ ಪಪ್ರದ್ಯುಮ್ನ ದೇವಸುತೆ | ರುದ್ರಾದಿ ಸುರ ವಿನುತೆ ||ಭದ್ರ ವಿಗ್ರಹೆ ದಯಾ ಸ | ಮುದ್ರೆ ಕುಲಿಶೆ ||ಅದ್ರಿಯೋಪಮ ದೋಷ | ಕಿದ್ದ ದುರ್ಮತಿಕ್ಲೇಶ||ವೊದ್ದು ನಿನ್ನವನೆನ್ನು | ಬುದ್ಧಿ ಕೊಡು ಇನ್ನೂ 1ನೀರಜಾಂಬಕೆ ಯನಗೆ | ತೋರು ಸಾಧನ ಕುನಗೆ |ಜಾರಿಸು ಭಕುತಿಯನ್ನು | ತೋರು ಕರುಣಾ ||ವಾರಿಧಿಹರಿಯಪಾದ| ಆರಾಧಿಸಲುಮೋದ|ವಾರವಾರಕೆ ಈಯೇ |ವಾರಣಗಮನೆಯೇ 2ಪ್ರಾಣೇಶ ವಿಠಲನ | ಧ್ಯಾನದೊಳಗಿರಿಸು ಮನ |ವಾಣೀ ಪದವೈದುವಳೇ |ಮಾನನಿನ್ನದೆಲೆ ||ಹೀನ ವಿಷಯಗಳೊಲ್ಲೆ | ನೀನೇ ಸ್ವಾಂತದಿ ನಿಲ್ಲೆ |ಕ್ಷೋಣಿಯೊಳಗತಿ ಮಾನೀ | ಜ್ಞಾನೀ ಅಹಿವೇಣೀ 3
--------------
ಪ್ರಾಣೇಶದಾಸರು
ಶರಣು ಶರಣೂ ಪ.ಮಹಾದೇವರಾ ಗರ್ಭದಲಿ ಉದ್ಭವಿಸಿದಿಯೊ ನೀನುಸಾಧುಮಾತೆಯ ಶಾಪವನ್ನು ಕೈಗೊಂಡುಆದಿಪೂಜೆಗೆ ಅಭಿಮಾನಿದೇವತೆಯಾದಿಮಾಧವನಮ್ಮ ಹಯವದನನ್ನ ಪ್ರಿಯ1ಹಿಮಗಿರಿಗೆ ಮಗಳಾಗಿ ಜನಿಸಿ ತಪವನು ಗೈದುಕಮಲಸಂಭವಸುತನ ಒಲಿಸಬೇಕೆಂದುರಮಣಿ ರಾಮಮಂತ್ರ್ರ ದಿನಸಹಸ್ರವು ಜಪಿಸೆಕಮಲಾಕ್ಷನೆಮ್ಮ ಹಯವದನನ್ನ ಪ್ರಿಯೆ 2ಮಡದಿ ಹೋದಾಗ್ರಹಕೆ ಜಡೆಯ ಕಿತ್ತಪ್ಪಳಿಸಿಕಡುಘೋರ ತಪಗೈಯೆ ಮನ್ಮಥನು ಬರಲುಕಿಡಿಗಣ್ಣಿನಲಿ ಅವನ ಭಸ್ಮವನು ಮಾಡಿದಿಕಡಲೊಡೆಯ ನಮ್ಮ ಹಯವದನನ್ನ ಪ್ರಿಯ 3ಮತ್ಸ್ಯದೇಶಕೆ ಪೋಗಿ ಮನದ ಚಿಂತೆಯಲಿರಲುತುಚ್ಛರಕ್ಕಸನು ನಿಮ್ಮನು ಪಿಡಿಯ ಬರಲುಚಿತ್ತದೊಲ್ಲಭಗ್ಹೇಳಿ ಕೊಚ್ಚಿಸಿದಿ ಅವನ ಶಿರಅಚ್ಯುತನಮ್ಮ ಹಯವದನನ್ನ ಪ್ರಿಯೆ4ಕೇಸರಿಯ ಗರ್ಭದಲಿ ಉದ್ಭವಿಸಿದಿಯೊ ನೀನುತ್ರೇತೆಯಲಿ ರಾಮರ ಸೇವೆಯನು ಮಾಡಿಭೂತಳದೊಳು ಭೀಮ ಕಡೆಗೆ ಯತಿಯಾಗಿ ನೀಶ್ರೀಪತಿ ಹಯವದನ ದೂತ ಪ್ರಖ್ಯಾತ 5ಈರೇಳು ಲೋಕದ ಜನರ ನಾಲಗೆಯಲ್ಲಿಬೀಜವನು ಬಿತ್ತಿ ಅನ್ನವ ಕೊಡುವ ತಾಯೆವಾರಿಜಸಂಭವನ ಹಿರಿಯ ಪಟ್ಟದ ರಾಣಿನೀರಜಾಕ್ಷನಮ್ಮ ಹಯವದನನ್ನ ಪ್ರಿಯೆ6ಜನನಿಹುಟ್ಟಿದ ನಾಳದಲ್ಲಿ ಜನಿಸಿದಿ ನೀನುಜನರ ಸೃಷ್ಟಿ ಸ್ಥಿತಿಗೆ ಕಾರಣನೆಂದುಅನಿಮಿಷರೆಲ್ಲರೂ ಸ್ತುತಿಸಿ ಕೊಂಡಾಡಲುವನಜಾಕ್ಷ ನಮ್ಮ ಹಯವದನನ್ನ ಪ್ರಿಯ 7ಪದ್ಮದಲ್ಲುದ್ಭವಿಸಿ ರಾಮರ ಕೈಹಿಡಿದುಪದ್ಮಾಕ್ಷನ ರಥಕ್ಕೆ ಕೈ ನೀಡಿ ಬಂದೆಪದ್ಮಾವತಿ ಎಂದು ಖ್ಯಾತಿ ಮೂರ್ಲೋಕದೊಳುಪದ್ಮಾಕ್ಷ ನಮ್ಮ ಹಯವದನನ್ನ ಪ್ರಿಯೆ 8ಅನಂತ ನಾಟಕಾನಂತ ಸೂತ್ರಧಾರಿಅನಂತ ಚರಿತ ನಿತ್ಯಾನಂದಭರಿತಅನಂತಾಸನ ಶ್ವೇತದ್ವೀಪ ವೈಕುಂಠಅನಂತಗುಣಭರಿತ ಹಯವದನ ಚರಿತ 9ಶರಣುಮತ್ಸ್ಯಕೂರ್ಮವರಾಹನಾರಸಿಂಹಶರಣು ವಾಮನಭಾರ್ಗವರಾಮಚಂದ್ರಶರಣು ಕೃಷ್ಣ ಬೌದ್ಧ ಕಲ್ಕ್ಯಸ್ವರೂಪನೆಶರಣು ಹಯವದನನ್ನ ಚರಣಗಳ ನುತಿಪೆ 10
--------------
ವಾದಿರಾಜ
ಶಾರದೆ ಜಗದ್ಭರಿತೆ ಸರಸ್ವತೆ ||ಸಾರಸದ್ಗುಣಚರಿತೆವಾರಿಜೋದ್ಭವನ ಪಾದಾರವಿಂದಾರ್ಚಿತೆ |ತೋರೆ ದಯವ | ಕೀರವಾಣಿ ಕಲ್ಯಾಣಿಯೆ ||ಶುಭಕರೆ ಶುಭವದನೇ ಸರ್ವೇಶ್ವರಿ |ಪ್ರಭಾಕರ ಪ್ರಭಾವದನೆ ಪಇಭರಾಜಗಮನೆ| ಸದ್ಬುದ್ಧಿಪ್ರದಾಯಿನಿ |ಅಭಯನೀಯುತಲೆನ್ನ | ಸಲಹು ಸ್ತ್ರೀಸಭಾಶೋಭೆ 1ತಾಯೆ ಮಯೂರ ವಾಹಿನೀ | ಜಯ ಜಯ ಜಗ -|ನ್ಮಾಯೆ ಮೋಹನ ರೂಪಿಣೀ ||ತೋಯಜಕುಸುಮದಳಾಯತ | ಲೋಚನೆ |ಕಾಯೇ ದಯದಿಭವಹೇಯವಿದಾರಿಣಿ 2ನೀತೆ ಪರಮಪುನೀತೆ | ಪಾಲಿಸು ಲೋಕ |ಮಾತೆ ಪಾವನ ಚರಿತೆ |ದಾತೆ ತ್ರಿಲೋಕ | ವಿಖ್ಯಾತೆ ಬ್ರಹ್ಮನ ಪ್ರೀತೆ ಆತ್ಮರಕ್ಷಿಣಿ |
--------------
ಗೋವಿಂದದಾಸ
ಶ್ರೀ ಭಾರತೀದೇವಿ72ಭಾರತಿತವ ಚರಣಾಂಬುರುಹವ ನಂಬಿದೆಪೊರೆಎನ್ನಪಹರಿಸಿರಿ ಪ್ರಿಯತರ ಮರುತನ ನಿಜಪತಿಹರ ಶಕ್ರಾದಿಗಳಿಂದಾರಾಧಿತೆ ಅಪಉದಿತ ಭಾಸ್ಕರನ ಪೋಲ್ವ ದ್ಯುತಿಯಿಂದಜ್ವಲಿಸುವೆ ಶುಭಕಾಯೆಹೃದಯಾಂತರ್ಬಹಿ ಶ್ರೀಶನ ಕಾಂಬುವಜ್ಞಾನ ಭಕುತಿಯೀಯೆ ತಾಯೆ 1ಬಲ ಕರದಲಿ ಜ್ಞಾನ ಊಧ್ರ್ವದಿಅಭಯಮುದ್ರೆಯು ಶುಭದಒಲಿವ ಸುವರಮುದ್ರೆ ಪುಸ್ತಕವಾಮದಿ ವಿದ್ಯಾಪ್ರದೆ ಸುಖದೆ 2ಶತಸುಖಪಿತ ಪ್ರಸನ್ನ ಶ್ರೀನಿವಾಸನು ಸುಖಮಯನುಸತತ ಎನಗೆ ಒಲಿವಂತೆ ನೀದಯಮಾಡೆ ಮಾತೆಭಾರತಿಶರಣು3
--------------
ಪ್ರಸನ್ನ ಶ್ರೀನಿವಾಸದಾಸರು
ಸರಸಿಜಾಲಯೆ ನಿಲಯೆ ಪಸ್ಥಳದಲ್ಲಿ ನೆಲಸಿ ಸಜ್ಜನರ ರಕ್ಷಕಳೆಂದು ಅ.ಪಕ್ಷೀರಸಾಗರಜಾತೆ ಮಾರನಯ್ಯನ ಪ್ರೀತೆಸಾರಸದಳನೇತ್ರೆಮಾರಮಣನ ಮನಸಾರ ಸೇವಿಪ ಮುದ್ದುಕೀರವಾಣಿಯ ಭಕ್ತಸ್ತೋಮ ರಕ್ಷಕಳೆಂದು 1ಅಂಬುಧಿಶಯನ ಪೀತಾಂಬರಧಾರಿಯಶಂಖು ಚಕ್ರಾಂಕಿತಹರಿಶೌರಿಯಶಂಭರಾರಿಯ ಪಿತನ ನಂಬಿಸೇವಿಪ ಜಗ-ದಂಬ ನಿನ್ನಯ ಪಾದಾಂಬುಜಕ್ಕೆರಗುತ 2ಪದ್ಮನಾಭನ ರಾಣಿ ಪದ್ಮ ಸಂಭವೆ ದೇವಿಪದ್ಮಾಕ್ಷಿ ಪದ್ಮ ಪಾಣಿಯೆ ಸುಂದರಿಪದ್ಮಾಸನನ ಮಾತೆ ಪದ್ಮಮುಖಿಯೆ ಹೃ-ತ್ಪದ್ಮದಿ ಹರಿಪಾದ ಪದ್ಮವ ತೋರೆಂದು 3ಸಾರಸಾಕ್ಷಿಯೆ ಹರಿಯ ಆರಾಧಿಸುವ ಜನರ-ಪಾರದು:ಖವನೀಗಿಪೊರೆವೆಯೆಂದುಬಾರಿಬಾರಿಗು ನಿನ್ನಚಾರುದರ್ಶನವಿತ್ತುಕೋರಿದ ವರಗಳ ಬೀರಿ ಭಕ್ತರ ಕಾಯೆ 4ಕರುಣದಿ ಭಕುತರ ಕರೆದು ಕಾಪಾಡುವಬಿರುದು ನಿನ್ನದು ತಾಯೆ ತ್ವರಿತದಿ ಕಾಯೆಕರುಣಿಸೆ ಕಮಲನಾಭ ವಿಠ್ಠಲನ ರಾಣಿಮರೆಯದೆ ಹರಿಯ ಧ್ಯಾನವ ಕೊಟ್ಟು ಸಲಹೆಂದು 5
--------------
ನಿಡಗುರುಕಿ ಜೀವೂಬಾಯಿ
ಸೀತೆ ಲೋಕಮಾತೆ ರಾಮನ ಪ್ರೀತೇಭೂಮಿಜಾತೇಪಾತಕಹರೆ ಸರ್ವಾರ್ಥಸಿದ್ಧಿಕರೆ ಖ್ಯಾತಿವಂತೆ ಸುನೀತೆ ಸುರಾರ್ಚಿತೆಪxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ತಾಯೆಮಹಾಮಾಯೆರಾಮನ ಛಾಯೆ ವಿಮಲಕಾಯೆ ತೋಯಜಾಕ್ಷಿ ನಿನ್ನ ಸೇವೆಯ ಮಾಡಲುಸಂಗರ ಕಾರಿಣಿಯೆ ರಾಮನಅಂಗನೆಗುಣಮಣಿಯೇಭೃಂಗಕುಂತಳೆಭವಭಂಗನಿವಾರಿಣಿ ಹಿಂಗದೆನ್ನಪೊರೆಹೇಮಾಂಗಿ ಶೃಂಗಾರಿಯೆ2ಚಂದ್ರವದನೆ ದೇವೀ ರಾಮಚಂದ್ರನಸಂಜೀವೀ ಸಿಂಧುಬಂಧನ ಗೋವಿಂದನದಾಸಗೆ ಬಂದು ಮೊಗವ ತೋರಿ ಚಂದದಿ ಪಾಲಿಸೆ
--------------
ಗೋವಿಂದದಾಸ
ಹರಿದಾಸರ ಸಂಗ ದೊರೆಯಿತು ಎನಗೀಗ ಇನ್ನೇನಿನ್ನೇನುವರಗುರು ಉಪದೇಶ ನೆರವಾಯ್ತು ಎನಗೀಗ ಇನ್ನೇನಿನ್ನೇನು ಪಮಾಯದ ಸಂಸಾರ ಮಮಕಾರ ತಗ್ಗಿತು ಇನ್ನೇನಿನ್ನೇನುತೋಯಜಾಕ್ಷನ ನಾಮ ಜಿಹ್ವೆಯೊಳ್ನೆಲಸಿತು ಇನ್ನೇನಿನ್ನೇನು 1ಹಲವು ದೈವಗಳೆಂಬ ಹಂಬಲ ಬಿಟ್ಟಿತು ಇನ್ನೇನಿನ್ನೇನುಜಲಜನಾಭನ ಧ್ಯಾನ ಹೃದಯದೊಳ್ನೆಲಸಿತು ಇನ್ನೇನಿನ್ನೇನು 2ತಂದೆ ತಾಯೆ ಮುಚುಕುಂದವರದನಾದ ಇನ್ನೇನಿನ್ನೇನುಸಂದೇಹವಿಲ್ಲ ಮುಕುಂದ ದಯಮಾಡಿದ ಇನ್ನೇನಿನ್ನೇನು 3ಏನೆಂದು ಹೇಳಲಿ ಆನಂದಸಂಭ್ರಮಇನ್ನೇನಿನ್ನೇನುಆನಂದಗೋಪನ ಕಂದನ ಮಹಿಮೆಯ ಇನ್ನೇನಿನ್ನೇನು 4ಎನ್ನವಂಶಗಳೆಲ್ಲ ಪಾವನವಾದುವು ಇನ್ನೇನಿನ್ನೇನುಚಿನ್ಮಯ ಪುರಂದರವಿಠಲಯ್ಯ ದೊರಕಿದ ಇನ್ನೇನಿನ್ನೇನು 5
--------------
ಪುರಂದರದಾಸರು