ಒಟ್ಟು 168 ಕಡೆಗಳಲ್ಲಿ , 49 ದಾಸರು , 153 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಂದಿತಯ್ಯ ಪ್ರಾಯವು |ಸಂದಿತಯ್ಯ ಪ್ರಾಯವು ಪಮೂರು ತಿಂಗಳುಸಂದುಹೋಯಿತು ತಿಳಿಯದೆ ||ಬಂದೆ ತಾಯಿಯ ಜಠರದಲಿ ಮ-|ತ್ತೊಂದು ಬುದ್ಧಿಯನರಿಯದೆ ||ಬೆಂದೆ ನವಮಾಸದಲಿ ಗರ್ಭದಿ |ಒಂದು ದಿವಸವು ತಡೆಯದೆ ||ಕುಂದದೀಪರಿಯೊಂದು ವರುಷವು |ಇಂದಿರೇಶನೆ ಕೇಳು ದುಃಖವ 1ಕತ್ತಲೆಯೊಳಿರಲಾರೆನೆನುತಲಿ |ಹೊತ್ತೆ ಹರಕೆಯ ನಿನ್ನನು ||ಮತ್ತೆ ಜನಿಸಲು ಭೂಮಿಯೊಳು ನಾ |ಅತ್ತುನಿನ್ನನು ಮರೆತೆನು ||ಮತ್ತೆ ಮಲ-ಮೂತ್ರದೊಳು ಬಾಲ್ಯದಿ |ಹೊತ್ತು ದಿನಗಳ ಕಳೆದೆನು ||ಮತ್ತೆ ನರಕದೊಳುರುಳುತುರುಳುತ |ಉತ್ತಮೋತ್ತಮ ನಿನ್ನ ನೆನೆಯದೆ 2ಚಿಕ್ಕತನವನು ಮಕ್ಕಳಾಟದಿ |ಅಕ್ಕರಿಂದಲಿ ಕಳೆದೆನು ||ಸೊಕ್ಕಿ ಹದಿನಾರಲಿ ನಾನತಿ |ಮಿಕ್ಕಿ ನಡೆದೆನು ನಿನ್ನನು ||ಸಿಕ್ಕಿ ಬಹು ಸಂಸಾರ ಮಾಯೆಯ |ಕಕ್ಕುಲಿತೆಯೊಳು ಬಿದ್ದೆನು ||ಹೊಕ್ಕುದಿಲ್ಲವು ನಿನ್ನ ಪಾದವ |ರಕ್ಕಸಾರಿಯೆ ಕೇಳು ದುಃಖವ 3ಸುಳಿದೆ ಮನೆಮನೆ ಕಳೆದೆ ಕಾಲವ |ಉಳಿದ ಯೋಚನೆ ಮಾಡದೆ ||ಬೆಳೆದೆ ತಾಳೆಯ ಮರದ ತೆರದಲಿ ||ಉಳಿವ ಬಗೆಯನು ನೋಡದೆ ||ಎಳೆಯ ಮನದೊಳೆ ಇಳೆಯ ಜನರೊಳು |ಬಳಕೆ ಮಾತುಗಳಾಡಿದೆ ||ಕಳೆದೆ ಈ ಪರಿಯಿಂದ ಕಾಲವ |ನಳಿನನಾಭನೆ ನಿನ್ನ ನೆನೆಯದೆ 4ಎಡೆಬಿಡದೆಅನುದಿನದಿ ಪಾಪದ |ಕಡಲೊಳಗೆ ನಾನಾಳ್ದೆನು ||ದರವ ಕಾಣೆದೆ ಮಧ್ಯದಲಿ ಎ-|ನ್ನೊಡಲೊಳಗೆ ನಾನೊಂದನು ||ದೃಢದಿ ನಿನ್ನಯ ಧ್ಯಾನವೆಂಬಾ |ಹಡಗವೇರಿಸು ಎನ್ನನು ||ಒಡೆಯ ಪುರಂದರವಿಠಲ ಎನ್ನನು |ಬಿಡದೆ ಕಾಯೈ ಬೇಗ ಶ್ರೀಹರಿ5
--------------
ಪುರಂದರದಾಸರು
ಸೀತೆ ಸದ್ಗುಣ ಗಣ | ವ್ರಾತೆ ಈರೇಳು ಲೋಕ |ಮಾತೆ ಪ್ರಣತ ಜನ | ಪ್ರೀತೆ ಸಾಗರ ಜಾತೆ ||ಮಾತು ಮಾತಿಗೆ ರಘು | ನಾಥನ ಸ್ಮರಣೆಯ |ಆತುರದಲಿ ಕೊಡು | ಸಿತಾಂಶು ವದನೆ ||ಪಲ್ಲ||ಶ್ರೀ ಭೂ ದುರ್ಗಾಂಭ್ರಣೀ ಸ್ವ | ರ್ಣಾಭೆ ರಾಮನ ರಾಣೀ |ಸಾಭಿಮಾನ ನಿನ್ನದ | ಮ್ಮಾ ಬಾಲಕನ ಕರ- ||ವ ಬಿಡದಲೆ ಸರ್ವ | ದಾ ಬಾದರಾಯಣನಂ- |ಘ್ರಿಬಿಸಜದ್ವಯವ | ನೇ ಭಜಿಸಲು ಜ್ಞಾನ- ||ವ ಒಲಿಸುವದತಿ | ಶೋಭನ ವಿಗ್ರಹೆ |ಹೇ ಬಡವನು ಗೈ | ಯ್ವಾ ಬಿನ್ನಪವನು |ನೀ ಬಿಸುಟದೆ ಬಹ | ಳಾ ಭಯ ಪರಿಹರಿ |ಸೀ ಭಕುತ ಜನರೊ | ಳು ಬೆರಸುವದೇ 1ಮಾಕಂಜದಳನೇತ್ರೆ | ಶ್ರೀ ಕುಂಭಿಣೀಜೆ ದಾತೆ |ನೀ ಕರುಣದಿ ನೋ | ಡೀಕಕುಲಾತಿಹಿಂಗಿಸೆ |ಬೇಕು ಸತ್ಸಾಧನವು | ಸಾಕು ದುರ್ವಿಷಯಗಳು |ಲೌಕಿಕಗಳೆಲ್ಲಾ ವೈ | ದಿಕವಾಗಲೆನಗೆ ||ನಾಕು ಮೊಗನ ಜನ | ನೀ ಕರಿಗಮನೆ ಪ- |ರಾಕುದಿವಿಜನುತೆ | ಶೋಕರಹಿತೆ ದನು- |ಜಾ ಕುಲ ಸಂಹರೆ | ಈ ಕಠಿಣ ಭವದೊ- |ಳೇಕೆ ದಣಿಸುತಿಹೆ | ನೀ ಕಡೆಗೆತ್ತಲೆ 2ದಾತಪ್ರಾಣೇಶ ವಿಠಲ | ಸೋತೆನೆಂದು ನಗಲು ನೀ- |ನಾತನ ದಾಯದಿಂ ಪುರು | ಹೂತನ ಸೋಲಿಸಿ ಪ್ರ- |ಖ್ಯಾತೆಯಾದೆ ಉದರೌ | ಜಾತ ಸದನೆ |ಸತ್ರಾಜಿತೆ ಲಕ್ಷ್ಮೀಯಾದಿ ದೇ | ವತೆಭಾಸ್ಕರಕಾಂತೆ ||ಭೂತಳದೊಳಗೆ ಅ | ನಾಥರಿಗೆವರಪ್ರ- |ದಾತೆ ಕೃಪಾ ನಿಧಿ | ಯೇ ತಡೆ ದುರ್ಮತಿ |ಧೌತ ವ್ರಜನಿ ಧರಿ | ಪೋತನಕನಲದೆ |ವಾತಪೂಜಿತೆ ರಮೆ | ಪಾತು ಪ್ರತಿಕ್ಷಣದಿ 3
--------------
ಪ್ರಾಣೇಶದಾಸರು
ಹಿಡಿರಂಗ ಜವಳಿಕೊಡು ಉಡುಗೊರೆಪಾಲ್ಗಡಲ ಶಯನಭೂಪತಿ ಗುಡುಗೊರೆ ಪ.ತಟಿತ್ತಾ ಸರಸವುಳ್ಳಪಟ್ಟಾವಳಿಧೋತರದಟ್ಟಿತ ವಾಗಿದ್ದ ಬಿಡಿಮುತ್ತುದಟ್ಟಿತವಾಗಿದ್ದ ಬಿಡಿ ಮುತ್ತು ಮುತ್ತಿನಕಂಠಿಮಠದವರಿಗೆ ಕೊಟ್ಟ ಉಡುಗೊರೆ 1ಬಟ್ಟು ಗೋಲಂಚಿನಧಿಟ್ಟಾದ ಧೋತರಬಟ್ಟಿಗುಂಗುರ ಉಡದಾರಬಟ್ಟಿಗುಂಗುರ ಉಡದಾರ ಶೂರಪಾಲಿಕಟ್ಟಿಯವರಿಗೆ ಕೊಟ್ಟ ಉಡುಗೊರೆ 2ಹತ್ತು ಬಟ್ಟಿಗೆ ತಕ್ಕಮುತ್ತಿನ ಉಂಗುರಮತ್ತೆ ಎಲೆ ಅಡಕೆ ನಡುವಿಟ್ಟುಎಲೆ ಅಡಕೆ ನಡುವಿಟ್ಟು ಇವರಮನೆಜೋಯಿಸರಿಗೆ ಕೊಟ್ಟ ಉಡುಗೊರೆ 3ಅಕ್ಕ ಕೊಲ್ಹಾಪುರಮುಖ್ಯ ಪಂಢರಾಪುರಚಿಕ್ಕ ಸಾತಾರೆ ಪುಣೆಯವಚಿಕ್ಕ ಸಾತಾರೆ ಪುಣೆಯವ ಪೈಠಣ ಶಾಲುಮುಖ್ಯ ಗಲಗಲಿಯವರಿಗೆ ಉಡುಗೊರೆ 4ಕಂಕಣವಾಡಿ ಮುಂದೆಡೊಂಕಾಗಿ ಹರಿದಾಳುವಂಶಿಯ ಜೋಡು ನಡುವಿಟ್ಟುವಂಶಿಯ ಜೋಡು ನಡುವಿಟ್ಟು ಗಲಗಲಿಯಮುತೈದೆಯರಿಗೆಲ್ಲ ಉಡುಗೊರೆ 5ಅಧ್ಯಾಪಕ ಜನರೊಳುವಿದ್ವಾಂಸರಿಗೆಲ್ಲಶುದ್ಧ ರತ್ನದಲಿ ರಚಿಸಿದಶುದ್ಧ ರತ್ನದಲಿ ರಚಿಸಿದ ಉಂಗುರವಿದ್ವಾಂಸರಿಗೆಲ್ಲ ಉಡುಗೊರೆ 6ನಾಲ್ಕು ಸಾವಿರ ಉಂಗುರಅನೇಕ ಬಗೆ ಶಾಲುಈ ಕಾಲದಲೆ ತರಿಸೇವಈ ಕಾಲದಲೆ ತರಿಸೇವ ರಮಿಯರಸುಕೊಟ್ಟ ಅನೇಕ ಜನರಿಗೆ ಉಡುಗೊರೆ 7
--------------
ಗಲಗಲಿಅವ್ವನವರು