ಒಟ್ಟು 274 ಕಡೆಗಳಲ್ಲಿ , 60 ದಾಸರು , 230 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಂದೇ ಶ್ರೀ ಗೌರಿನಂದನ ಸುರನರ ವೃಂದವಂದಿತಚರಣ ಗಜಾನನ ಪ. ಶಂಕರೋಲ್ಲಾಸ ಪಾಶಾಂಕುಶಧರ ಕರ ಪಂಕಜ ಸುವಿರಾಜ ರವಿತೇಜ 1 ಜಂಭಾರಿಸಂನುತ ಜಾಹ್ನವೀಧರಸುತ ಲಂಬೋದರ ಸುಂದರ ಕೃಪಾಕರ 2 ಸುಕ್ಷೇಮಧಾಮ ಶ್ರೀ ಲಕ್ಷ್ಮೀನಾರಾಯಣನ ಪಕ್ಷೈಕಪಾವನ ಸುಧೀಷಣ 3
--------------
ತುಪಾಕಿ ವೆಂಕಟರಮಣಾಚಾರ್ಯ
ವಾರಿವದನ ಗೇಹ ವಾಸಮಾಡಿಹನ ಕು ಮಾರಿ ಗಂಡನ ತಲೆ ಕಡಿದಾ ನತ್ತಿಗೆವ್ಯಯ ಸೊಸೆಮಾನ ಕಾಯ್ವನ ತಂದಿಗೆ ಸಾರೂಪದೆಶವಾನೊರದ ನಪ್ಪನ ಪೆತ್ತ ನಾರೀ ಸಖನ ಸೂತನಣ್ಣನ ಪಿತಸಹ ಮೂರು ಮೂವತ್ತುಕೋಟಿ ವಿಭುಧರಿಂಸ್ತುತಿಗೊಂಬ ಶಂಭುರಕ್ಷಿಸುದೆಮ್ಮನು 1 ಶರಣು ಧನಪತಿಮಿತ್ರ ಪಾವನತರಚರಿತ್ರ ಶರಣು ಕರ್ಪುರಗೌರ ವಂಗಗುಣ ಮಂದಾರ ಯೋಗಿ ಮನಕಾ ಭೇದ್ಯ ಶರಣು ಮಹಿಪತಿನಂದ ಮುನಿಜನ ವಂದ್ಯಶರಣು ಆನಂದ ಕಂದ 2
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ವಾಸವನುತಾಬ್ಜ ಪಾದಾ | ಪ್ರಮ | ಥೇಶ ಭಕ್ತ ವರದಾ ಪ ಮೀಸಲಹುದು ಶೇಷ ಪದಾ | ಈಶ ಎನ್ನ ಪೊರೆಯೊ ಸದಾ ಅ.ಪ. ದುರಿತ ಸಾರಥಿ ಅಜ | ಮೇರುವೆ ಧ್ವಜ | ಧಾರುಣಿ ಧರ ಥೋರಾ ಧನು |ಶ್ರೀ ಹರಿ ಶರ | ಮೂರೂರುಗಳ್ | ದಾರಿತ ಹರ 1 ವ್ಯೋಮಕೇಶ | ಪ್ರಮಥ ಪೋಷ | ಭೀಮ ನಾ5 | ಮಶಣವಾಸಸ್ವಾಮಿ ತೀರ್ಥ ವಾಸ ದಾಸ | ಕಾಮಿತಾರ್ಥ ಸಲಿಸೊ ಈಶ ||ಭೂಮಿಜೆ ಪತಿನಾಮಮೃತ ಪ್ರೇಮದಸವಿ ನೆ5ುವು ತವಭೌಮನ ಹರ | ಭುಮ5 ಹರಿ | ನಾಮ ಸ್ಕøತಿ ನೇಮವಕೊಡು || ಮೋದ | ಕರುಣಿಸೂವುದು ಭಕ್ತವರದ |ನರಮೃಗ ಹರಿ | ಚರಣಾಬ್ಜವ | ನಿರಂತರ | ಸ್ಮರಿಸುತ್ತಿಹಗೌರೀವರ | ಚರಣಂಗಳಿ | ಗೆರಗುವೆನು | ಪಾಲಿಸು ಹರ 3
--------------
ಗುರುಗೋವಿಂದವಿಠಲರು
ವಾಸುದೇವ ನಿನ್ನ ಮರ್ಮಕರ್ಮಂಗಳದೇಶದೇಶದಲ್ಲಿ ಪ್ರಕಟಿಸಲೊ ಪ ಬೇಸರದೆ ಎನ್ನ ಹೃದಯಕಮಲದಲ್ಲಿ ವಾಸವಾಗಿ ಸುಮ್ಮನಿದ್ದೀಯೊ ಅ.ಪ. ತರಳತನದಲಿದ್ದು ದುರುಳನಾಗಿ ಬಂದುಒರಳಿಗೆ ಕಟ್ಟಿಸಿಕೊಂಡುದನುತುರುವ ಕಾಯಲಿ ಹೋಗಿ ಕಲ್ಲಿಯೋಗರವನುಗೊಲ್ಲರ ಕೂಡೆ ನೀ ಉಂಡುದನುನೆರೆಮನೆ ಹೊರಮನೆಗಳ ಪೊಕ್ಕು ಬೆಣ್ಣೆಯಅರಿಯದಂತೆ ಕದ್ದು ಮೆದ್ದುದನುಕೇಳಿಸಿದೆಯಾದರೆ ಒದರುವೆ ಎಲೊ ನರ -ಹರಿ ಎನ್ನ ಬಾಯಿಗೆ ಬಂದುದನು 1 ಕಟ್ಟಿ ಕರೆವ ಏಳುದಿನದ ಮಳೆಗೆ ಪೋಗಿಬೆಟ್ಟವ ಪೊತ್ತದ್ದು ಹೇಳಲೊಅಟ್ಟಿಸಿಕೊಳ್ಳುತ ಯಾಗಶಾಲೆಗೆ ಪೋಗಿಹೊಟ್ಟೆಯ ಹೊರೆದದ್ದು ಹೇಳಲೊದುಷ್ಟ ಹಾವಿನ ಹೆಡೆಯನು ತುಳಿದಾಡಿದದುಷ್ಟತನವನು ಹೇಳಲೊನೆಟ್ಟುನೆ ಅಂಬರಕೆತ್ತಿದನ ಹೊಯ್ದುಹಿಟ್ಟುಕಟ್ಟಿಟ್ಟುದ ಹೇಳಲೊ 2 ಪಿಡಿಯವಲಿಗೆ ಮೆಚ್ಚಿ ಸಂಪದವನು ಕೊಟ್ಟಬೆಡಗತನವನಿಲ್ಲಿ ಹೇಳಲೊಹಿಡಿಯ ಬಂದ ಕಾಲಯವನಿಗಂಜಿ ಕಲ್ಲಪಡೆಯ ಹೊದ್ದುದ ಹೇಳಲೊಮಡಿದ ಮಗನ ಗುರುವಿಗೆ ಕೊಡಬೇಕೆಂಬಸಡಗರತನವಿಲ್ಲಿ ಹೇಳೆಲೊಮಡದಿ ಮಾತಿಗೆ ಪೋಗಿ ನೀ ಪಾರಿಜಾತವತಡೆಯದೆ ತಂದದ್ದು ಹೇಳಲೊ 3 ಮೌನಗೌರಿಯ ನೋಡ ಬಂದ ಹೆಂಗಳನ್ನೆಲ್ಲಮಾನವ ಕೊಂಡದ್ದು ಹೇಳಲೊತಾನಾಗಿ ಮೊಲೆಯನೂಡಿಸ ಬಂದವಳನ್ನುಪ್ರಾಣವ ಕೊಂಡದ್ದು ಹೇಳಲೊಕಾನನದೊಳು ತುರುವಿಂಡುಗಳನು ಕಾಯ್ದಹೀನತನವನಿಲ್ಲಿ ಹೇಳಲೊಮಾನಿನಿಯರ ಮನೆಗಳ ಪೊಕ್ಕು ಬೆಣ್ಣೆಯಹಾನಿಯ ಮಾಡಿದ್ದು ಹೇಳಲೊ 4 ಧರಣಿಮಗನ ಕೊಂದು ತರುಣಿಯರನುದುರುಳತನವನಿಲ್ಲಿ ಹೇಳಲೊಜರೆಯ ಮಗನಿಗಂಜಿ ಪುರವ ಬಿಟ್ಟು ಹೋಗಿಶರಧಿಯ ಪೊಕ್ಕದ್ದು ಹೇಳಲೊಧರೆಯೊಳಧಿಕ ಶ್ರೀರಂಗಪಟ್ಟಣದಲ್ಲಿಸ್ಥಿರವಾಗಿ ನಿಂತದ್ದು ಹೇಳಲೊಶರಣಾಗತರ ಕಾವ ರಂಗವಿಠಲನ್ನಪರಮ ದಯಾಳೆಂದು ಹೇಳಲೊ 5
--------------
ಶ್ರೀಪಾದರಾಜರು
ವೃಷಭಾರೂಡಗೆ ರವಿಶಶಿ ನಯನಗೆ ವೃಷಭಪಾವನತ್ರಿಯಂಬಕಗೆ || ವೃಷಭಸ್ವರೂಪದಿ ಮೆರೆವ ಆಕಾರದೇವಗೆ | ವೃಷಭ ಕನ್ನಿಕೆಯರಾರುತಿ ಎತ್ತಿರೆ ವೃಷಭಾಶಿವಗೆ ಸಂಗಮಗ ಜಗದೀಶ ಮಹೇಶ-ಗಾರುತಿಯನೆತ್ತಿರೆ ವೃಷಭ ಶಿವಗೆ ಸಂಗಮಗೆ 1 ಭಾನು ಕೋಟಿ ದಿವ್ಯ ತೇಜ ಪ್ರಕಾಶಗೆ ಆನಂದಮಯಗೆ ಚಿನ್ಮಯಗೆ | ಮಾನಸದಿಂದಲಿಮೆರೆವೆನ್ನ ದೇವಗೆ ಮಾನ ಕನ್ನಿಕೆಯರಾರುತಿ ಎತ್ತಿರೆ |ವೃಷಭ ಶಿವಗೆ ಸಂಗಮಗೆ 2 ಭಾಗೀರಥಿ ಪ್ರಿಯಗೆ ಭಾಲನೇತ್ರಗೆ ಶ್ರೀ ಗೌರಿಯ ಮನೋಹರಗೆ | ನಾಗಭೂಷಣನಾರಾಯಣ ಪ್ರಿಯಗೆ ನಾಗ ಕನ್ನಿಕೆಯರಾರುತಿ ಎತ್ತಿರೆ 3 ದೇವರ ದೇವಗೆ ದೇವ ಜಗದೀಶಗೆ | ದೇವಸನ್ಮೋಹನಸ್ವಾಮಿಗೆ | ದೇವ ಸಿಂಧಾಪುರದ ಶ್ರೀ ವಿಶ್ವನಾಥಗೆದೇವ ಕನ್ನಿಕೆಯರಾರುತಿ ಎತ್ತಿರೆ 4
--------------
ಭೀಮಾಶಂಕರ
ವೇಣುಗೋಪಾಲನಿಲಯೇ ವೀಣಾವಿನೋದವಲಯೇ ಪ ವಾಣಿ ಗೌರಿನುತೆ ತಾಯೆ | ಪ್ರಾಣತ್ರಾಣದಾತೆ ಸದಯೆ ಅ.ಪ ಬೃಂದಾವನ ವನವಾಸಿನಿ ಮಂದಾಕಿನಿ ಪ್ರಿತಮೋಹಿನಿ ಮಂದಾತ್ಮಜ ಸಹಚಾರಿಣಿ ಬೃಂದಾರಕ ಸುಖವರ್ಧಿನಿ 1 ಇಂದೀವರ ಸುಮಭೂಷಿಣಿ ವಂದೇ ಮಾಂಗಿರೀಶ ತೋಷಿಣಿ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶಂಕರ ಗುರುವರ ಮಹದೇವ ಭವ- ಸಂಕಟ ಪರಿಹರಿಸಯ್ಯ ಶಿವ ಪ. ಸಂಕಲ್ಪ ವಿಕಲ್ಪಮನೋನಿಯಾಮಕ ಕಿಂಕರಜನಸಂಜೀವ ಅ.ಪ. ಭಾಗವತರರಸ ಭಾಗೀರಥೀಧರ ಬಾಗುವೆ ಶಿರ ಶರಣಾಗುವೆ ಹರ ಶ್ರೀ ಗೌರೀವರ ಯೋಗಿಜನೋದ್ಧರ ಸಾಗರಗುಣಗಂಭೀರ 1 ರಾಯ ಲಕ್ಷ್ಮೀನಾರಾಯಣ ಭಕ್ತಿಪ- ರಾಯಣ ತ್ರಿನಯನ ಪುರಹನ ಕಾಯಜಮಥನ ಮುನೀಂದ್ರ ಸಿದ್ಧಜನ- ಗೇಯಸ್ವರೂಪೇಶಾನ 2
--------------
ತುಪಾಕಿ ವೆಂಕಟರಮಣಾಚಾರ್ಯ
ಶಂಕರ ಶಿವಶಂಕರ ಶಿವಶಂಕರ ಶಿವಶಂಕರ ಕಿಂಕರೇಷ್ಟಪ್ರಧಾನಶೀಲ ವೃಷಾಂಕ ಮಹಲಿಂಗೇಶ್ವರ ಪ. ವ್ಯೋಮಕೇಶ ಭವಾಬ್ಧಿತಾರಕ ರಾಮನಾಮೋಪಾಸಕ ಸಾಮಜಾಜಿನವಸನಮಂಡನ ಸ್ವಾಮಿ ತ್ರಿಜಗನ್ನಾಯಕ ಭೀಮಬಲ ಸುತ್ರಾಮಮುಖ ಸುರಸ್ತೋಮ ವಿನುತಪದಾಂಬುಜ ಸೋಮಸೂರ್ಯಾನಲಯನ ನಿಸ್ಸೀಮ ಮಹಿಮ ಮಹಾಭುಜ1 ಭಜಕಜನಸೌಭಾಗ್ಯದಾಯಕ ವಿಜಯಪಾಶುಪತಾಸ್ತ್ರದ ಭುಜಗಭೂಷಣ ಭುವನಪೋಷಣ ರಜತಗಿರಿಶಿಖರಾಸ್ಪದ ವೃಜಿನಹಾಮಲ ಸ್ಫಟಿಕಸನ್ನಿಭ ಕುಜನವಿಪಿನದವಾನಲ ವಿಜಿತಕಾಮ ವಿರಾಗಿಯೋಗಿ ವ್ರಜಕುಟುಂಬ ಮಹಾಬಲ 2 ನೀಲಕಂಠ ನಿರಾಮಯಾಭಯಶೂಲಧರ ಸುಮನೋಹರ ಶೈಲರಾಜಸುತಾಧರಾಮೃತಲೋಲ ಲೋಕಧುರಂಧರ ಕರುಣಾಲವಾಲ ಮಹೇಶ್ವರ ಪಾಲಿತಾಖಿಳಸಿದ್ಧ ಮುನಿಜನಜಾಲ ಜಾಹ್ನವಿಶೇಖರ 3 ಕೃತ್ತಿವಾಸ ಗಿರೀಶ ಶ್ರುತಿತತ್ತ್ವಾರ್ಥಬೋಧ ಗುಣೋದಯ ದೈತ್ಯಮೋಹಕ ಶಾಸ್ತ್ರಕೃತ್ಪ್ರಮಥೋತ್ತಮ ವಿರತಾಶ್ರಯ ಸತ್ಯಸಂಕಲ್ಪಾನುಸಾರ ನಿವೃತ್ತಿಮಾರ್ಗ ಪ್ರವರ್ತಕ ಮೃಡ ನಮೋ„ಸ್ತು ಸುಮನನಿಯಾಮಕ 4 ಪಂಡಿತೋತ್ತಮ ಪವನಶಿಷ್ಯ ಮೃಕಂಡುತನಯಭಯಾಪಹ ಚಂಡಿಕಾಧವ ಶಿವ ದಯಾರ್ಣವ ಖಂಡಪರಶು ಸುರಾರಿಹ ಚಂಡಭಾನುಶತಪ್ರಕಾಶಾಖಂಡವೈರಾಗ್ಯಾಧಿಪ ಕುಂಡಲೀಂದ್ರ ಪದಾರ್ಹನಗ ಕೋದಂಡವಿದೃಶ ಮಹಾನ್‍ತಪ 5 ಮಂಗಲಪ್ರದ ದಕ್ಷಕೃತಮುಖಭಂಗ ಭಾಗವತೋತ್ತಮ ಜಂಗಮಸ್ಥಾವರಹೃದಿಸ್ಥ ಶುಭಾಂಗ ಸತ್ಯಪರಾಕ್ರಮ ಲಿಂಗಮಯ ಜಯಜಯತು ಗಿರಿಜಾಲಿಂಗಿತಾಂಗ ಸದೋದಿತ ಸಂಗರಹಿತಾಚ್ಯುತಕಥಾಮೃತ ಭೃಂಗವತ್ಸೇವನರತ 6 ಭರ್ಗ ಭಾರ್ಗವ ಋಷಿಪ್ರತಿಷ್ಠಿತ ಸ್ವರ್ಗಮೋಕ್ಷ ಫಲಪ್ರದ ನಿರ್ಗತಾಖಿಲದುರಿತ ಭೂಸುರವರ್ಗಪಾಲನಕೋವಿದ ದುರ್ಘಟಿತಧುರಧೀರ ಭವಸಂಸರ್ಗದೂರ ಸನಾತನ ನಿರ್ಗುಣೈಕಧ್ಯಾನಪರ ಸನ್ಮಾರ್ಗಭಕ್ತಿನಿಕೇತನ 7 ಚಾರುಪಾವಂಜಾಖ್ಯಕ್ಷೇತ್ರಾಧಾರದಾಂತದಯಾಕರ ನೀರಜಾಸನತನಯ ಲಕ್ಷ್ಮೀನಾರಾಯಣಕಿಂಕರ ವಾರಿನಿಧಿಗಂಬೀರ ದೀನೋದ್ಧಾರ ಧಾರ್ಮಿಕಜನಹಿತ ವಾರಣಾಸ್ಯಕುಮಾರಗುರು ಗೌರೀರಮಣ ಸುದೃಢವ್ರತ 8
--------------
ತುಪಾಕಿ ವೆಂಕಟರಮಣಾಚಾರ್ಯ
ಶಂಭೋಶಿವಶಂಕರ ಗೌರೀಶಾ ಲಂಬೋದರಜನಕ ಪ ಸಾಂಬಾನಂದಿವಾಹನ ನಂಬಿರುವೆನೊ ನಾನಿನ್ನ ಜಂಭವೈರಿಮುಖ್ಯದೇವ ಕದಂಬವಂದಿತಾಭಯದಾತ ಅ.ಪ ಅಣಿಮಾ ಮಹಿಮಾ ಗರಿಮಾ ಲಘಿಮಾದ್ಯಷ್ಟ ಸಿದ್ಧಿಗಳಿದ್ದರು ಭಸ್ಮವನು ಲೇಪಿಸಿರುವ 1 ವಿರಾಜಿಪ 2 ಪಂಚಮುಖಾ ವಿಮುಕ್ತೇಶ 3
--------------
ಗುರುರಾಮವಿಠಲ
ಶರಣು ಶ್ರೀ ಪಾರ್ವತಿದೇವಿಗೆ ಶರಣು ಶಾಂಭವಿಗೌರಿಗೆ | ನಮ್ಮ ಶರ್ವಾಣಿಗೆ ಪ ಲಂಬ ಕರ್ಣನ ಬಿಂಬಛಿದ್ರನ ಸಂಭ್ರಮದಿ ಪಡೆದಮ್ಮಗೆ ಶಂಬರಾರಿಯ ಅಂಬಿಗಾಹರ ನಂಬಿದಾ ಪಟ್ಟದರಸಿಗೆ 1 ಅಮಿತ ಮಹಿಮಳೆ ಜ್ಯೋತಿ ಆದಿಶಕ್ತಿ ದುರ್ಗಾಂಬೆಗೆ ಹೇಮವರ್ಣ ಭವಾನಿಗೆ 2 ಹೊಡೆವ ಮೃಡಾಣಿಗೆ ಸ್ಮರಿಸದವರನ ಕಾಯ್ವಳೆ 3
--------------
ಹೆನ್ನೆರಂಗದಾಸರು
ಶರಣು ಹೈಮವತೀಶ ಶಿವಶಂಭು ಅವಿನಾಶ | ಶರಣು ಧನಪತಿ ಮಿತ್ರ ಪಾವನತರಚರಿತ್ರ | ಶರಣು ದಾನವವಿಪಕ್ಷಾ || ಶರಣು ಕರ್ಪೂರ ಗೌರಾಂಗ ಗುಣಮಂದಾರ | ಶರಣು ಶೃತಿಪೃತಿಪಾದ್ಯಯೋಗಿಮನಕಾಭೇದ್ಯ | ಶರಣು ಆನಂದ ಕಂದಾ ||
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶಶಿಕಲಾ ಭೂಷಣನೆ ಶಂಕರನೆ ಪ ಗಂಗಾಧರನೆ ಗೌರೀವರನೆ ಅಂಗಜಮದಹರನೇ ಶಂಕರನೇ 1 ಮೃತ್ಯುಂಜಯನೆ ಮುಪ್ಪುರ ಹರನೆ ಭಕ್ತರ ಪೊರೆಯುವನೆ ಶಂಕರನೆ 2 ಶ್ರೀಕಾಂತ ಹಿತಸಖ ಏಕಾಂತ ಹೃದಯ ನೀ ಕರುಣಿಸೊ ಸದಯಾ ಶಂಕರನೆ 3
--------------
ಲಕ್ಷ್ಮೀನಾರಯಣರಾಯರು
ಶಶಿವದನೇರೆಲ್ಲ ದಿವಸಿವ್ರತವ ಮಾಡಿರೇ ಶಶಿಧರನ ಮಡದಿಯಾ ಭಜಿಸಿ ಪಾಡಿರೇ ಪ ಕತ್ಲೆರಾಯನ ಪತ್ನಿಯೂ | ಸುಪುತ್ರನ್ನ ಪಡೆಯಲೂ ಇತ್ತಳು ವಸ್ತ್ರಗಳನ್ನು ಚೆಂದದಿ ದ್ವಿಜರಿಗೆ ಕೊಡಲೂ ಪಡೆದಳು ಪುತ್ರನಾ ಬುಧರು ಕಾಳಿಂಗ ನೆಂದು ಕರೆದರು ಪರಿ ಪರಿವಿಧದಿಂದ ರಾಜರು ಹರುಷಗರೆದರೂ 1 ಗಿರಿಕಾನನದಿ ಚಲಿಸಿ | ಮೃಗವ ಸಂಹರಿಸೀ ಬಾಲಕನೂ | ಬರುತಿರಲು ಬಾಲಕನು ವ್ಯಾಘ್ರದ ದನಿಕೇಳಿ ಮೂರ್ಛೆಗೈದು ಮೃತನಾದನು 2 ಮೃತನಾದ ಸುತಗೆ | ಸತಿಯ ಕೊಡಬೇಕೆಂದು ಸಾರಿಸಿದ ಸತತ ದ್ರವ್ಯ ಕೊಡುವೆನೆಂದು ಮಾತ ನಾಡಿದೆ ದ್ವಿಜನಸುತನ ಸತಿಯ ತ್ಯಜಿಸಿ ಹೋಗಿರಲು ನಿಜಸುತಗೆ ಭಗಿನಿಯ ಕೊಡುವೆನೆಂದು ನುಡಿದಾನು 3 ಬೆಳ್ಳಿ ಬಂಗಾರ ಸಹಿತ ನಮಗೆ ಇರುವೋದೂ ಕನ್ನಿಕೆಗೆ ಮಾಂಗಲ್ಯ ಬಂಧನ ಮಾಡಿಹೋದಾರು 4 ರಾಜನು ಹೋಗುವಾಗ | ಸೊಸಿಯಮನೆಗೇಳೆಂದನು ಪತಿಯ ಬಿಟ್ಟು ಹ್ಯಾಂಗೆ ಮನೆಗೆ ಬರುವೋದೆಂದಳು ಪತಿಯ ಬಿಟ್ಟು ಬಂದರೆ ಪತಿವ್ರತವು ಇರುವೋದೆ ಹಿತವು ಬಯಸಿ ಬಂದರೆ ಸದ್ಗತಿಯು ದೊರೆವುದೇ 5 ಒಂದು ದಿನ ಸುಂದರಿ ಬಂದವರ ಕೇಳಿದಳು ಇಂದು ದಿವಸಿ ವ್ರತವು ಅಂದರು ಹಿಂದೆ ಗೌರಿಪೂಜಿಸಿದೆ ಮುಂದೆ ವ್ರತವನು ಬಂಧು ಬಳಗೆ ಇಲ್ಲದಲೆ ಮಾಡುವುದೇನು 6 ನಾರುಬತ್ತಿ ನೀರು ಎಣ್ಣೆ ಗೌರಿಗೆ ಮಾಡಿದಳು ಅಪಾರ ಸದಿಗೆ ಮುರಿದುಗೌರಿ ಪೂಜಿಸಿದಳು ಹರತಾ ಭಂಡಾರ ಒಡೆದು ಹರುಷಗರೆದನು ವರ ಕಾಳಿಂಗ ಕ್ಷಣ ದೊಳೆದ್ದು ಮಾತಾಡಿದನು ಪತಿಯಸಹಿತಾಗಿ ತಮ್ಮ ಗೃಹಕೆ ಬಂದರು ಸತತ ನಾರಸಿಂಹನ ಸ್ಮರಣೆ ಮಾಡಿದರು 7
--------------
ಓರಬಾಯಿ ಲಕ್ಷ್ಮೀದೇವಮ್ಮ
ಶಾಂತೇರಿ ಕಾಮಾಕ್ಷಿ ಲಕ್ಷ್ಮೀಕಾಂತನ ಸೋದರಿ ಸಂತಜನರ ಭಯನಿವಾರಿ ಕಂತುಸಹಸ್ರ ಸುಂದರಿ ಪ. ಬಂಗಧಿ ದೇವಿ ಸುಪ್ರಸಿದ್ಧೆ ಮಹೇಶ್ವರಿ ಶುದ್ಧ ಶ್ರೀಹರಿಭಕ್ತಿಜ್ಞಾನ ಶ್ರದ್ಧೆಯ ನೀಡಮ್ಮ ಶಂಕರಿ 1 ಪಂಚಾಸ್ಯನಾರಿ ಪಾವನೆ ಕಾಂಚನಾಭೆ ಗೌರಿ ಪಂಚ ಮಹಾಪಾಪವಿದಾರಿ ಪಾಹಿಮಾಂ ಶ್ರೀವಿಶ್ವಂಭರಿ 2 ಸುಕ್ಷೇತ್ರ ಕುಮಟಾಖ್ಯ ನಗರಾಧ್ಯಕ್ಷೆ- ದೇವಿ ಭವಾನಿ ತ್ರೈಕ್ಷನ ರಾಣಿ ಕಲ್ಯಾಣಿ ಲಕ್ಷ್ಮೀನಾರಾಯಣಿ3
--------------
ತುಪಾಕಿ ವೆಂಕಟರಮಣಾಚಾರ್ಯ
ಶಾಂಭವಿ ಶೈಲಜೆ ಅಂಬಿಕೆ ದೇವಿ ಅಂಬುರು ಹಾಸನೆ ಪಾಲಿಸು ಪ್ರೇಮದಿ ಪ ಅಕ್ಷಯ ರಾಕ್ಷಸನಾಶಿನಿ ಯಕ್ಷಸುಪೋಷಿಣೆ 1 ದಿವ್ಯಸ್ವರೂಪೆ ಭವ್ಯಕಲಾಪೆ ಸ್ತವ್ಯ ಸ್ವರೂಪಿಣಿ ಗರ್ವ ವಿದಾರಿಣೆ 2 ಪಾಲಿಸು ಶಂಕರಿ ಗೌರಿ 3 ಪ್ರೇಮದಿ ಸ್ವರ್ನಸುಗಾತ್ರಿ 4 ಧ್ಯಾನವಗೈಯುವೆ ಧೇನುಪುರೀಶೆ 5
--------------
ಬೇಟೆರಾಯ ದೀಕ್ಷಿತರು