ಒಟ್ಟು 57925 ಕಡೆಗಳಲ್ಲಿ , 139 ದಾಸರು , 12496 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲೊ ರಂಗ ಎಲೋ ರಂಗನೇ ಸಲಹೊ ಶುಭಾಂಗನೆ ಪ ಜಯಕರ ಶ್ರೀಹರಿಯೆ ದಯವಂತನಾಗಯ್ಯ ಭಯ ಭಕ್ತಿಯಲಿ ನಿಮ್ಮ ದಯವ ಬೇಡುವೆನಯ್ಯ 1 ನಿನ್ನ ಭಕ್ತನು ನಾನು ಬನ್ನಬಡಿಸುವಿ ಯಾಕೋ ಮುನ್ನಿನ ಭಕ್ತರಂತೆನ್ನನು ಸ್ಮರಿಸಯ್ಯ 2 ಶರಣೆಂದು ವಿಭೀಷಣಗೆ ಕರುಣಿಸಿ ಲಂಕೆಯ ಸ್ಥಿರಪಟ್ಟ ಕೊಟ್ಟಂಥ ಕರುಣಾಳು ಮೊರೆ ಕೇಳೊ 3 ಯತಿವರನ ಯಾಗವ ಹಿತದಿ ರಕ್ಷಿಸಿದಂಥ ಪತಿತಪಾವನ ಎನ್ನ ಹಿತದಿಂದ ಕಾಯೆಲೊ 4 ಸತತ ನಿಮ್ಮಯ ಪಾದಸ್ತುತಿಯೊಳಿರಿಸಿ ಎನ್ನ ಮೃತ್ಯುಬಾಧ್ಹರಿಸಯ್ಯ ಕ್ಷಿತಿವರ ಶ್ರೀರಾಮ 5
--------------
ರಾಮದಾಸರು
ಎಲ್ಯಾಡಿ ನೀ ಬಂದ್ಯೋ ಹರಿ ಫುಲ್ಲಲೋಚನ ಕೃಷ್ಣ ಧ್ರುವ ಬಲಿ ಮಹಿಮರನೆಲ್ಲ ಸಂರಕ್ಷಿಸಿ ಮಲ್ಲದೈತ್ಯರ ಹಲ್ಲು ಮುರಿದು ನೀ ಬಂದ್ಯೊ 1 ಸುಗಮ ಸುಪಥದೋರಿ ನಿನ್ನ ಉಗಮ ಸಾರಿ ನೀ ಬಂದ್ಯೊ ನಗ ನೆಗಹಿ ನಿಂದು ಜಗದೋದ್ಧಾರವ ಮಾಡಿ ನೀ ಬಂದ್ಯೋ 2 ಶರಣ ರಕ್ಷಕನಾಗಿ ನಿನ್ನ ಕರುಣ ನೀ ಬೀರಿ ಬಂದ್ಯೋ ತರಳಗೊಲಿದು ಧÀರಿ ಮೂರಡಿಯೆನೆ ಮಾಡಿ ಪರಶುಧರನಾಗಿ ಆಡಿ ನೀ ಬಂದ್ಯೊ 3 ಮೊರೆಯ ಹೊಕ್ಕವರಿಗೆ ಪದ ಸ್ಥಿತವನಿತ್ತುನೀ ಬಂದ್ಯೊ ಸುರರ ಸ್ಥಾಪನೆ ಮಾಡಿ ತುರುಗಳ ಕಾಯಿದು ಪರ ನಾರೇರ ವ್ರತವಳಿದು ನೀ ಬಂದ್ಯೋ 4 ನೀನೆ ರಾವುತನಾಗಿ ನಿನ್ನ ಖೂನ ನೀ ದೋರಿ ಬಂದ್ಯೊ ದೀನ ಮಹಿಪತಿ ಸ್ವಾಮಿ ಭಾನುಕೋಟಿ ತೇಜ ನೀನೆ ನೀನಾಗೆನ್ನ ಹೊರಿಯಲು ಬಂದ್ಯೊ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಎಲ್ಯಾಡಿ ಬಂದ್ಯೋ ಮುದ್ದು ರಂಗಯ್ಯಾ ನೀ - * ನೆಲ್ಯಾಡಿ ಬಂದ್ಯೋ ಎನ್ನ ಕಣ್ಣ ಮುಂದಾಡದೆ ಪ ಆಲಯದೊಳಗೆ ನೀನಾಡದೆ ಬೆಣ್ಣೆ ಪಾಲು ಸಕ್ಕರೆಯನೊಲ್ಲದೆ ಚಿಕ್ಕ ಬಾಲೇಯರೊಳು ನೀನಾಡದೆ ಬಾಲಯ್ಯ ನೀಯೆನ್ನ ಕಣ್ಣ ಮುಂದಾಡದೆ 1 ಬಿಟ್ಟ ಮುತ್ತಿನ ಬೊಗಸೆ ಕಂಗಳು ಫಣಿಯೊಳಿಟ್ಟ ಕಸ್ತೂರಿ ತಿಲಕ ಗಂಧವು ದಿಟ್ಟತನದಿ ಬರುವ ಅಂದವು ಮುದ್ದು ಕೃಷ್ಣ ನೀಯೆನ್ನ ಕಣ್ಣ ಮುಂದಾಡದೆ 2 ಅಷ್ಟದಿಕ್ಕಲಿ ಅರಸಿ ಕಾಣದೆ ಬಾಳ ದೃಷ್ಟಿಗೆಟ್ಟೆನೊ ನಿನ್ನ ನೋಡದೆ - ನ್ನೆಷ್ಟು ಪೇಳಲಿ ಹೇಳಬಾರದೆ ಶ್ರೀದ - ವಿಠಲ ನೀಯೆನ್ನ ಕಣ್ಣ ಮುಂದಾಡದೆ 3
--------------
ಶ್ರೀದವಿಠಲರು
ಎಲ್ಯಾದರು ಮಾಡಬೇಕು ಕೆಲಸ ಪ ಅಲ್ಲೇನು ಇಲ್ಲೇನು ಬಲ್ಲಂಥಾವನಾದರೆ ತಾನು ಅ.ಪ ಶರೀರ ಸಂಬಂಧಿಗಳಿಗಾಗಿ | ಮೂರು ಕರಣದಿಂದಲಿ ಅನುವಾಗಿ ಕರೆಕರೆಪಡುತಲಿ ಅರೆನಿಮಿಷವಾದರೆ ಬಿಡದೆ 1 ತ್ತರವಾದ ಕಟ್ಟಾಜ್ಞೆ ಅಲ್ಲಿ ನ- ರರ ಕಾಟವು ಇಲ್ಲಿ ಸುರರ ನಿಬಂಧನೆಯಲ್ಲಿ 2 ಬಾಲ್ಯ ಯೌವನ ಕೌಮಾರ | ಮುಪ್ಪು ಲೀಲೆಯಿಂದಲಿ ಕೆಲವರು ಗೋಳಾಡುತಲಿ ಕೆಲವರು3 ಸ್ವಲ್ಪಾದರು ಸತ್ಕರ್ಮ ಮಾಡೆ | ಫಣಿ- ಅಲ್ಪರಿವುದು ಯಾಕೆ 4 ಇಪ್ಪತ್ತು ನಾಲ್ಕು ತತ್ವಗಳಿಂದ | ನ- ಕ್ಲುಪ್ತಗೈದಿರುವನು ಆಪ್ತ ಎಂದಿಗೂ ನಮಗವನು 5
--------------
ಗುರುರಾಮವಿಠಲ
ಎಲ್ಲ ದೇವರ ಗಂಡ | ಕೃಷ್ಣ ಚಿಲ್ಲರೆ ದೈವರ ಮಿಂಡ ಪ ಪಾದದಿ ನದಿಯನು ಪೆತ್ತ | ಅದನು ರುದ್ರನು ಶಿರದಲಿ ಪೊತ್ತ ಮಾಧವನ್ಹೊಕ್ಕಳ ಜಾತ | ಶತ ಮೋದನು ಲೋಕ ಪ್ರಖ್ಯಾತ 1 ಸೃಷ್ಟಿ ಸಂಹಾರಗೈದ | ಪರ ಮೇಷ್ಟಿ ರುದ್ರರನಾಳ್ದ ಯೆಟ್ಟ ದೈತ್ಯರ ಶಿರ ಮುರಿದ | ದುರಿತ- ದೃಷ್ಟಿಸಿ ನಾಶಗೈದ 2 ಬಂಟರ ಪಾಲಕನೀತ | ವೈ- ಕುಂಠದ ಒಡೆಯನು ದಾತ ತುಂಟರ ಮಡಹುವ ಸತತ | ನಮಗೆ ನಂಟನು ಗೋಕುಲನಾಥ 3 ಮನಸಿಗೆ ಬಂದುದು ಸಿದ್ಧ | ಪ್ರತಿ ಯೆಣಿಸುವ ಜೀವನೆ ಬದ್ಧ ನೆನೆಸುವರಲಿ ತಾನಿದ್ದ | ದಯ ವನಧಿಯು ಬೆಣ್ಣೆಯ | ಕದ್ದ 4 ಭಂಗ | ತಾ ನಿರುತ ಮಾಡುವ ರಂಗ ಜಯೇಶವಿಠಲ ತುಂಗ | ಮಹಿ ಮಾ ರಕ್ಷಿಸು ದಯಾಪಾಂಗ
--------------
ಜಯೇಶವಿಠಲ
ಎಲ್ಲ ಭಯ ಎಲ್ಲ ಭಯ ಕ್ಷುಲ್ಲಕ ಜನಗಳಿಗೆಲ್ಲ ಭಯ ಪ ತಲ್ಲಣಿಸದೆ ಸಿರಿವಲ್ಲಭನಲಿ ಮನ ನಿಲ್ಲಿಸುವರಿಗೆಲ್ಲ ಜಯ ಅ.ಪ ಇರಲು ಭಯ ಧನವಿರಲು ಭಯ ಇಲ್ಲದಿದ್ದರೆ ತಿರಿದುಂಬೊ ಭಯ ನೆರೆ ಹೊರೆ ಜನಗಳ ಸಿರಿಯನು ನೋಡಲು ಉರಿಯುವ ಜನಗಳಿಗೆಲ್ಲಿ ಜಯ 1 ಎಲ್ಲ ಜಯ ಎಲ್ಲ ಜಯ ಬಲ್ಲ ಸುಜನಗಳಿಗೆಲ್ಲ ಜಯ ಪೊಳ್ಳು ಜೀವನದ ಜಳ್ಳು ಸೌಖ್ಯಗಳ ಒಲ್ಲೆನೆಂಬುವರಿಗೆಲ್ಲ ಜಯ 2 ಸರಳ ಜನರ ನೋಡುವುದೆ ಭಯ ದುರುಳ ಜನಕೆ ತಮ್ಮ ನೆರಳನು ಕಂಡರೆ ಅಧಿಕ ಭಯ 3 ಜ್ಞಾನ ಜಯ ದಿವ್ಯ ಜ್ಞಾನ ಜಯ ಜ್ಞಾನದಿಂದ ಹರಿಸ್ಥಾನ ಜಯ ಹಾನಿಯ ನೀಡುವ ನಾನಾ ಭೋಗವ ಮೌನದಿ ತ್ಯಜಿಪರಿಗೇನು ಭಯ 4 ಒಂದು ಜಯ ನೂರು ಭಯ ದ್ವಂದ್ವಗಳನು ಸಹಿಸದ ನರಗೆ ತಂದೆ ಪ್ರಸನ್ನ ಶ್ರೀಕೃಷ್ಣನ ಚರಣ ದ್ವಂದ್ವ ಸೇವಕರಿಗೆಂದೂ ಜಯ 5
--------------
ವಿದ್ಯಾಪ್ರಸನ್ನತೀರ್ಥರು
ಎಲ್ಲ ಲೀಲೆ ಇದೆಲ್ಲ ಲೀಲೆಎಲ್ಲ ಲೀಲೆ ರಂಗಗೆಲ್ಲ ಲೀಲೆ ಪ. ಪುಟ್ಟಿಸುವುದು ಮನವಿಟ್ಟು ಕಾವುದುದುಷ್ಟರ ಶಿಕ್ಷೆ ಅಲ್ಲಿ ವಿಶಿಷ್ಟರ ರಕ್ಷೆ1 ನೀರೊಳುಲ್ಲಾಸ ಮತ್ತಾರಣ್ಯವಾಸಹಾರುವರಾಟ ತನ್ನ ನಾರಿಯ ಬೇಟ 2 ಗೊಲ್ಲರಾಕೃತಿ ಬತ್ತಲೆಯ ಸ್ಥಿತಿಬಲ್ಲಿದ ದೈವ ಕಲಿಯ ಗೆಲ್ಲುವ ಭಾಗ 3 ವರನಿಪ್ಪುದು ಕರೆದರೆ ಬಪ್ಪುದುಧರೆಯಜಮ ಪರಿಪರಿಯ ಕರ್ಮ4 ಹೆಂಗಳಕೂಟ ಅಪಾಂಗದ ನೋಟ ಹಾಸ್ಯದಂಗದಿಂದೂಟ ರಣರಂಗದಿಂದೋಟ 5 ಅಂಬಿನ ವೇಧ ನಿನ ತುಂಬಿದ ಕ್ರೋಧ ತ್ರಿ-ಯಂಬಕ ಪೂಜೆ ತ್ರಿವಿಡಂಬನವೋಜೆ6 ಕರ್ತುಮಾಕರ್ತು ಮತ್ತನ್ಯಥಾಕರ್ತು ಎಂಬಶಕ್ತಿದೇವಗೆ ಬಲುಯುಕ್ತಿ ಇವಗೆ7 ನಾವೆಕರ್ತವ್ಯಂ ಸುಪ್ರವೆ ವಕ್ತವ್ಯಂಏಸು ಮಹಿಮೆಗೆ ಕೃತಕೃತ್ಯ ನಮಗೆ 8 ಪ್ರಿಯಮೋದನ ದೈತ್ಯೇಯಭೇದನಹಯವದನ ನಿನ್ನರ್ಥಿ ಕಾಯಿದನ9
--------------
ವಾದಿರಾಜ
ಎಲ್ಲ ವಾರ್ತೆಯ ಹೇಳ ಮನ್ನಿಸಿನಮ್ಮ ಫುಲ್ಲನಾಭನ ಗುಣ ವರ್ಣಿಸಿ ದೂತೆ ಪ. ಗೆಜ್ಜೆ ಘಿಲ ಘಿಲಕೆಂದು ಬಂದಳು ದೂತೆಗುಜ್ಜಿ ದ್ರೌಪತಿಗೆರಗಿ ನಿಂತಳುನಮ್ಮ ಅರ್ಜುನಗೆ ಅತಿ ದಯವೆಂದಳು ನಿರ್ಜರೇಶನ ಕಂಡೆನೆಂದಳು1 ಕಳಕಳಿಯ ಸೂಸುತ ತನ್ನ ಥಳ ಥಳ ಮುಖಕಮಲ ಹೊಳೆವುತದೂತೆನಳಿನ ತೋಳಿನ ವಸ್ತ ಝಳ ಝಳಿಸುತಬಂದು ಕುಳಿತಳೆ ಮಾತಿನ ಚಪಲೆ 2 ನಡೆದು ಅಚ್ಯುತನಲ್ಲೆ ಹೋದೆಯಾ ಕೃಷ್ಣನ ಅಡಿಗೆರಗಿ ಮುಖ ನೋಡಿದೆಯನಯ ನುಡಿಯ ಮಾತುಗಳನೆ ಆಡಿದೆಯ ನಿಮ್ಮ ಒಡೆಯರ ಭಕುತಿ ಕೊಂಡಾಡಿದೆಯ ದೂತೆ 3 ಶಾಂತ ಮೂರುತಿ ನಿನ್ನ ನೋಡಿದನೇನಐವರಿಗೆ ಅಂತಃಕರುಣ ಭಾಳ ಮಾಡಿದನೇನಎನ್ನ ಅಂತರಂಗದ ಮಾತು ನುಡಿದೆಯೇನಲಕ್ಷ್ಮಿಕಾಂತನ ಗುಣ ಕೊಂಡಾಡಿದೆಯ ದೂತೆ4 ಎನ್ನ ದ್ರೌಪತಿ ಕಳುಹ್ಯಾಳೆಂದೇನೆ ಸ್ವಾಮಿನಿನ್ನ ಮಾತುಗಳ ಮನಕೆ ತಂದಾನೇನ ಕೃಷ್ಣ ಎನ್ನ ಪ್ರಾಣವು ಐವರದೆಂದನೇನಇನ್ನುದಯದ ಸುಗ್ಗಿ ಸುದ್ದಿ ತಂದೇನ ದೂತೆ 5 ಭಾವೆ ರುಕ್ಮಿಣಿಪಾದ ನೋಡಿದೆಯ ನೀನುಭಾವ ಭಕುತಿಯಲಿ ವಂದನೆ ಮಾಡಿದೆಯ ನಿಮ್ಮ ಮೋಹ ದ್ರೌಪತಿಗಿರಲಂದೆಯ ಮುಯ್ಯಾ ತಾಹೊ ವಿಸ್ತಾರವ ಕೊಂಡಾಡಿದೆಯ 6 ಪಾದ ಕಂಡೆಯಘೃತ ಹಾಲು ಸಕ್ಕರೆ ಸವಿದುಂಡೆಯ ವಸ್ತ್ರ ವೀಳ್ಯ ರಾಮೇಶನಿಂದ ಕೊಂಡೆಯನಿನ್ನ ಕಣ್ಣು ಹಬ್ಬವ ಮಾಡಿಕೊಂಡೇನ ದೂತೆ 7
--------------
ಗಲಗಲಿಅವ್ವನವರು
ಎಲ್ಲಡಗಿದನೊ ಹರಿ ಎನ್ನಯ ಧೊರಿ ಪ ಎಲ್ಲೆಲ್ಲಿ ಪರಿಪೂರ್ಣನೆಂಬೊ ಸೊಲ್ಲನು ಮುನ್ನಾ ಮಲ್ಲಮರ್ದನ ಪುಲ್ಲಲೋಚನ ಹರಿಅ ಪ ಶರಣೆಂದವರ ಕಾಯ್ವ ಕರುಣಾ ಸಮುದ್ರನು ಕರುಣನ ಅರಿಯದೆ ಹರಿಣಾಂಕ ನಿಭವಕ್ತ್ರ 1 ಕರಿರಾಜನ ಮೊರೆ ಕೇಳಿ ತ್ವರಿತದಿಂದ ಗರುಡನೇರಿ ಬಂದ ಗರ್ವರಹಿತ ದೇವ 2 ವರ ಭುಜದಲಿ ಶಂಖ ಚಕ್ರವ ಧರಿಸಿದ ಪರಮೇಷ್ಠಿ ಜನಕನು 3 ವನಜ ಮಲ್ಲಿಗೆ ಜಾಜಿ ವನದಲ್ಲಿ ಚಲಿಸುವ ವನಿತೆಯರಾಟಕ್ಕೆ ಮನಮೆಚ್ಚಿ ನಡೆದಾನೊ 4 ಹಿಂಡು ಗೋಪಾಲರನು ಕಂಡು ಕಾವ ವಿಷಯಕ್ಕಾಗಿ ಕಮಲಲೋಚನ ಹರಿ5 ಇನ ಚಂದ್ರ ನಿಭವಕ್ತ್ರ ಕನಕಾಂಬರಧರ ವಿನಯದಿಂದಾಡುತ್ತ ಮುನಿಗಳಲ್ಲಿಗೆ ದೇವ 6 ಗಜ ಧ್ರುವ ಬಲಿ ಪಾಂಚಾಲಿ ವರದನೆಂಬ ನಿಜವಾದ ಬಿರುದುಳ್ಳ ವಿಜಯವಿಠ್ಠಲರೇಯ7
--------------
ವಿಜಯದಾಸ
ಎಲ್ಲನು ನಿನಗೆ ಕೂಡಿತಯ್ಯ ಹರಿ ಪುಲ್ಲನಾಭ ದಯ ಮಾಡಯ್ಯ ಪ ಖುಲ್ಲನು ನಾಬಲು ಎಲ್ಲಿಯುಸಲ್ಲದೆ ತಲ್ಲಣಿಸುತ ನಿನ್ನ ಬಲವಂದೆ ದೇವ ದೇವ ಅ.ಪ ಧೃಢಗುಣ ಎನ್ನೊಳಿಲ್ಲಯ್ಯ ಬಲು ನುಡಿ ಹೀನ ನಾಕಡು ಪಾಪ್ಯಯ್ಯ ನಡೆ ನುಡಿ ಇಲ್ಲದೆ ಕಡುನೊಂದೀಗ ನಿಮ್ಮ ನ್ಹುಡುಕುತ ತಿರುಗುವೆ ಜಡಜಾಕ್ಷನೆ ಪೊರೆ 1 ಪರರದ್ರವ್ಯವಪಹರಿಸಿದೆನೊ ನಾ ಪರಮನೀಚನಾಗಿ ಚರಿಸಿದೆನೊ ಅಗಣಿತ ದುರಿತವನುನಾ ಜರೆಯದೆ ಪರಿಪರಿ ಮಾಡಿದೆನೊ ಮರೆವೆಲಿ ಮಾಡಿದ ಪರಮ ಎನ್ನತಪ್ಪು ಕರುಣಾಕರನೆ ನೀಕರುಣದಿ ಕ್ಷಮಿಸಯ್ಯ 2 ಶರಣಾಗತ ವತ್ಸಲನೆಂದು ನಿನ್ನ ಮರೆಯಹೊಕ್ಕೆನೆಯ್ಯ ದಯಾಸಿಂಧು ಮೊರೆಕೇಳು ಭಕ್ತರ ಪ್ರಿಯಬಂಧು ಎನ್ನ ದುರಿತದಿ ಕಡೆ ಹಾಯ್ಸಯ್ ಇಂದು ಶಿರಬಾಗಿ ನಿಮಗೆ ಸೆರೆಗೊಡ್ಡಿ ಬೇಡುವೆ ಕರಪಿಡಿ ಬಿಡಬೇಡ ಸಿರಿವರ ಶ್ರೀರಾಮ 3
--------------
ರಾಮದಾಸರು
ಎಲ್ಲಮ್ಮ ದಯಮಾಡಮ್ಮ ಕಾಡಬೇಡ ಎನ್ನಮ್ಮ ಪ ಇಲ್ಲದೆ ಪೋದರೆ ನಿಲ್ಲದೆ ಏನನು ಬಲ್ಲಿದನ ಕರೆತಂದು ಕೊಲ್ಲಿಸಿಬಿಡುವೆನೆ ಅ.ಪ ಕೊಡಲಿ ಹೊತ್ತು ಬರುತಾನ ತಾಯಿ ಗಡನೆ ಹೊರಳಿ ನೋಡಿನ್ನ ಬಡವರ ದಯಾನಿಧಿ ಕಡುಬಾಧೆ ಕಂಡರೆ ತಡೆಯದೆ ನಿನ್ನನು ಕಡಿಯದೆ ಬಿಡನವ್ವ 1 ತಂದೆವಚನ ಪರಿಪಾಲನು ಅವ ಬಂದರೆ ನಿನ್ನನು ಕೊಂದಾನು ಕಂದನ ಬಂಧನ ಚಂದದಿ ಕಳೆದಾ ನಂದವ ಕೊಡು ಕೊಡು ಸುಂದರಮುಖಿಯೆ 2 ಕಾರ್ತವೀರ್ಯ ತಂದಾನೇ ಈ ವಾರ್ತೆ ಕೇಳಲು ನಿನ್ನ ಬಿಟ್ಟಾನೇ ಅರ್ತುಭಜಿಪೆ ನಿನ್ನ ಗುರ್ತಿಟ್ಟೀಬಾಧೆ ತುರ್ತು ಕಳೆಯೆ ತಾಯಿ ಅರ್ತು ಶ್ರೀರಾಮನ 3
--------------
ರಾಮದಾಸರು
ಎಲ್ಲರ ಮನೆ ದೋಸೆ ತೂತು ಪ ಚಿಲ್ಲರೆಯಲ್ಲವಿದೀ ಮಾತು ಅ.ಪ ಗಾಜಿನ ಮನೆಯಲಿ ವಾಸಿಸುವ ಪರ ಗೇಹಕೆ ಕಲ್ಲುಗಳೆಸೆಯುಬಹುದೇ ಮೂರ್ಜಗನಿಂದಕ ತನ್ನಯ ನಾಶಕೆ ಬೀಜ ಬಿತ್ತಿ ಫಲ ಭೋಜನ ಮಾಡುವ 1 ನೀರ ಕ್ಷೀರ ನ್ಯಾಯವ ಕೇಳದ ಜನ ರ್ಯಾರಿರುವರು ಈ ಧರೆಯೊಳಗೆ ಬಾರಿಬಾರಿಗದ ಮನಕೆ ತಾರದೆಲೆ ದೂರಿನ ನುಡಿಯಲಿ ರುಚಿಯು ಉಚಿತವೆ 2 ಗೂಳಿಯು ಹಳ್ಳಕೆ ಬಿದ್ದ ಕಾಲದಲಿ ಆಳಗೊಂದು ಕಲ್ಲೆಸೆಯುವರು ಬಾಳಿಬಾಳಿಸುವ ನರನ ಪ್ರಸನ್ನನು ಕಾಲಕಾಲದಲಿ ಸಲಹದೇ ಇರುವನೆ 3
--------------
ವಿದ್ಯಾಪ್ರಸನ್ನತೀರ್ಥರು
ಎಲ್ಲರ ಮಾತು ನಿಜ | ಇದು ಅಲ್ಲ ಎಂಬುದು ಸಜ ಪ ಬಲ್ಲವರು ಮನದಲಿ ಯೋಚಿಪುದು ಸು- ಸೂರಿ ಜನಗಳಿಗೆ ಅ.ಪ ಅಂತರ್ಯಾಮಿಯ ವೀಕ್ಷಾ | ಇದು ಅ ದ್ವೈತ ಮತದ ದೀಕ್ಷಾ ಸ್ವಾಂತದಿ ನೋಡೆ ಪ್ರಪಂಚಕಾಯ ಭಗ ವಂತನೆಂಬುದು ವಿಶಿಷ್ಟಾದ್ವೈತವು 1 ಅಣುರೇಣು ತೃಣಕಾಷ್ಠದಲಿ | ನೋಡೆ ಅ- ವನೇ ವ್ಯಾಪಿಸಿಹನಲ್ಲಿ ರೇಣು ಬೇರೆ ಅವನೇ ಬೇರೆ ಅನಿಲಾಂತರ್ಗತನಾಗಿ ಸಮಸ್ತದಿ 2 ಮೂರು ವಿಧದ ಜೀವಗಳು ಕರ್ಮ ಮೂರಾಗಿ ತೋರುವ ಗುರುರಾಮ ವಿಠಲನು 3
--------------
ಗುರುರಾಮವಿಠಲ
ಎಲ್ಲರಂತಲ್ಲ ಹರಿ ಜಗದೊಳಗೆಲ್ಲ ತಿಳಿಯಬೇಡಿರೊ ಪ. ಪುಲ್ಲಲೋಚನ ತನ್ನಲ್ಲೇ ಮನವ ನಿಲ್ಲಿಸಿದಂಥ ತಾ ಅಲ್ಲೆ ಆಟವಾತೋರಿದ ಅ.ಪ. ಮಣ್ಣುತಿಂದನೆಂದ್ಹೊಡೆದರೆ ಗೋಪಿ ಕಣ್ಣು ಮುಚ್ಚುತ ಅಳುವ ಬೆಣ್ಣೆ ಬಾಯ್ತೆರೆಯೆನೆ ಸಣ್ಣ ಮೂರ್ ಲೋಕವೆ ಗೋಪಿ ತಾ ಅಗ್ರಗಣ್ಯ1 ಕಟ್ಟಲು ಹರಿ ಪೋಗಿ ಥಟ್ಟೆರಡು ಮರದೊಳಿಟ್ಟು ವರಳನೆಳೆದು ಇಷ್ಟ ಮೂರುತಿ ಕೃಷ್ಣ ಸಿಟ್ಟು ಮಾಡಿದನೇ2 ಶ್ರೀ ಶ್ರೀನಿವಾಸನನು ತನ್ನರಿ ವಾಸುದೇವನೆಂದು ಘಾಸಿಮಾಡಲು ಕಂಸಾನೇಕ ಖಳರ ಅಟ್ಟಿ ಶ್ರೀಶ ಸಂಹರಿಸಿ ಯಶೋದೆಯ ತೋಷಪಡಿಸಿದನು 3
--------------
ಸರಸ್ವತಿ ಬಾಯಿ
ಎಲ್ಲರೂ ದಾಸರಹರೇ ಪ ಪುಲ್ಲನಾಭನ ದಯವಿಲ್ಲದೆ ಅ.ಪ. ಜ್ಞಾನವಿಲ್ಲ ಭಕುತಿಯಿಲ್ಲ ಧ್ಯಾನ ವೈರಾಗ್ಯ ಮೊದಲೆ ಇಲ್ಲ ಹೀನ ಕರ್ಮಗಳನು ಮಾಡಿ ಶ್ರೀನಿವಾಸನ ಮರೆತವರು 1 ಪರವಧುವಿನ ರೂಪ ಮನದಿ ಸ್ಮರಣೆ ಮಾಡುತ ಬಾಯಿಯೊಳು ಹರಿಯ ಧ್ಯಾನ ಮಾಡುತಿರುವ ಪರಮ ನೀಚರಾದ ಜನರು 2 ಪಟ್ಟೆನಾಮ ಹಚ್ಚಿ ಕಾವಿ ಬಟ್ಟೆಯನ್ನು ಹೊದ್ದುಕೊಂಡು ಅಟ್ಟಹಾಸ ತೋರಿಕೊಳುತ ಗುಟ್ಟು ತಿಳಿಯದಿರುವ ಜನರು 3 ದೊಡ್ಡ ತಂಬೂರಿಯ ಪಿಡಿದು ಅಡ್ಡ ಉದ್ದ ರಾಗ ಪಾಡಿ ದುಡ್ಡುಕಾಸಿಗಾಗಿ ಭ್ರಮಿಸಿ ಹೆಡ್ಡರಾಗಿ ತಿರುಗುವವರು 4 ನೋವು ಬಾರದಂತೆ ಸದಾ ಓವಿಕೊಂಡು ಬರುತಲಿರುವ ದೇವ ರಂಗೇಶವಿಠಲನ ಸೇವೆಯನ್ನು ಮಾಡದಿರುವ 5
--------------
ರಂಗೇಶವಿಠಲದಾಸರು