ಒಟ್ಟು 10607 ಕಡೆಗಳಲ್ಲಿ , 130 ದಾಸರು , 5708 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯ ಜಯಜಗತ್ಪ್ರಾಣತ್ರಾಣ ಜನನ ಮರಣಕ್ಲೇಶಹರಣ ಜಯ ಪಾವನ ದಿವ್ಯಚರಣ ಪ. ಸರ್ವದೇವತಾಗ್ರಗಣ್ಯ ಸರ್ವಜೀವೋತ್ತಮ ಶರಣ್ಯ ಪೂರ್ವಾಮರಪುರದಹನ ಪೂರ್ಣಗುಣಗಣ 1 ವೈಷ್ಣವ ಜನ ಶಿರೋರತುನ ವಿಶ್ವಾಂತರ್ಗತಭಾವನ ತೀಕ್ಷ್ಣಮನೋದುಷ್ಟದಮನ ಶಿಷ್ಟಜೀವನ 2 ಭಕುತಿಜ್ಞಾನನಿಧಿ ಕಲ್ಯಾಣ ಭಜಕಜನಭವಾಬ್ಧಿತರಣ ಲಕುಮಿನಾರಾಯಣಶರಣ ಬಕವಿದಾರಣ 3
--------------
ತುಪಾಕಿ ವೆಂಕಟರಮಣಾಚಾರ್ಯ
ಜಯ ಜಯರಾಘವೇಂದ್ರ ಸಜ್ಜನಪಯೋನಿಧಿಚಂದ್ರ ಜಯದೇವ ಭೂಸುರವೃಂದ ಸುಗುಣಸಾಂದ್ರ ಪ. ದಶಕಂಠ ಕುಲಕಾಲ ದಾನಶೀಲ ಶಶಿಮೌಳಿಧನುರ್ಭಂಗ ಭುವಿಜಾ ಮನೋಹರಾಂಗ [ಋಷಿ] ಮನೋಂಬುಜಭೃಂಗ ಕರುಣಾಂತರಂಗ 1 ಶ್ರೀಕಾಮಿನೀಸದನ ಭೂವೈಕುಂಠ [ಕಾರಣ] ಶ್ರೀ ಕೌಸ್ತುಭಾ ಭರಣ ಶೇಷಗಿರಿರಮಣ 2
--------------
ನಂಜನಗೂಡು ತಿರುಮಲಾಂಬಾ
ಜಯ ಜಯವೆನ್ನಿ ಕೈಯ ಮುಗುಬನ್ನಿ ದಯವುಳ್ಳ ಮಹಿಮಗಾರುತಿ ಮಾಡುವ ಬನ್ನಿ ಧ್ರುವ ಮನವೆ ಬತ್ತಿ ತನುವಾರತಿ ಘನಕೆ ಮಾಡವ ಬನ್ನಿ ನೆನವು ತುಪ್ಪ ಙÁ್ಞನದೀಪವನ್ನು ಬೆಳಗುವ ಬನ್ನಿ 1 ಭಾವಗುಟ್ಟು ಠಾವಿಲಿಟ್ಟು ದೈವ ನೋಡು ಬನ್ನಿ ಮಾವಮಕರಗುಣ ಬಿಟ್ಟು ಸೇವೆಮಾಡು ಬನ್ನಿ 2 ಮಹಿಪತಿಸ್ವಾಮಿಗಿನ್ನು ಜಯಜಯವೆನ್ನಿ ಬಾಹ್ಯಾಂತ್ರ ಬೆಳಗಿ ಪೂರ್ಣ ಧನ್ಯವಾಗು ಬನ್ನಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ಜಯವೆನ್ನಿ ಗುರು ಜಗದೀಶಗೆ ಜಯ ಜಯ ಜಗತ್ರಯ ಪಾವನಗೆ ಧ್ರುವ ಆನಂದೊ ಬ್ರಹ್ಮ ಆನಂದ ಕಂದಗೆ ಅನುದಿನ ಜಯ ಜಯ ಅನುಪಮಗೆ ಸನಕ ಸನಂದನ ವಂದಿತಗೆ ಮುನಿಜನ ಹೃದಯ ನಿವಾಸಗೆ 1 ನಿತ್ಯ ನಿರ್ಗುಣಗೆ ಅಗಣಿತಗುಣ ಪರಿಪೂರ್ಣಗೆ ಝಗಿಝಗಿಸುವ ಜಗನ್ಮೋಹನಗೆ ಜಗಜ್ಜೀವ ಜಗದಾತ್ಮಗೆ 2 ಜಯ ಜಯ ಮಂಗಳ ಮಹಾಮುನಿಗೆ ಮಹಿಮಾನಂದ ಗುರುಮೂರ್ತಿಗೆ ಮಹಿಪತಿ ಸ್ವಾಮಿ ಸರ್ವೋತ್ತಮಗೆ ಜಯ ಜಯವೆನ್ನಿರೊ ಜಗದೊಳಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ಜಯವೆನ್ನಿ ಸ್ವಾಮಿ ಶ್ರೀಹರಿಗೆ ದಯೆಯುಳ್ಳ ಮಹಿಮ ಶ್ರೀಮುಕುಂದ ಮುರಾರಿಗೆ ಧ್ರುವ ಭಾವಿಸಿ ನಿಮ್ಮೊಳಗೆ ದೇವಾಧಿ ಶ್ರೀದೇವಿಗೆ 1 ಅನುಭವಿಸುವ್ಹಾಂಗೆಂದೆಂದು ಮನೋಮಂದಿರಕೆ ತಂದು 2 ಕಾಣುವನ ಕಂಡು ನೋಡಿ ಕಾಣಿಸಿಕೊಂಬ್ಹಾಂಗೆ ಮಾಡಿ 3 ಪಾವನಗೈಸುವ ದೇವಗೆ ಕಾವ ಕರುಣನಿಧಿಗೆ 4 ಸಿರಿ ಸುಖಲೋಲಗೆ 5 ಅಂತರಾತ್ಮಲಿಹಗೆ ಸಂತತ ಸದೋದಿತಗೆ 6 ಭಾನುಕೋಟಿ ತೇಜಗೆ ದೀನಮಹಿಪತಿ ಸ್ವಾಮಿಗೆ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ಜಯವೆನ್ನಿರೊ ಶ್ರೀ ಗುರುವಿಗೆ ದಯಾಸಿಂಧು ಶ್ರೀಸ್ವಾಮಿ ಸದ್ಗುರುವಿಗೆ ಧ್ರುವ ಗುಹ್ಯಗುರುತ ದೋರುವ ಗುರುಮಣಿಗೆ ಮಾಯರಹಿತ ನಿರಾಳ ನಿರ್ವಾಣೆಗೆ ತ್ರೈಲೋಕ್ಯವಂದಿತ ವರಮುನಿಗೆ ದಯಯುಳ್ಳ ಶ್ರೀ ದೇವಶಿಖಾಮಣಿಗೆ 1 ತ್ರಿಗುಣಾತೀತ ತಾರಕ ನಿರಂಜನಗೆ ಝಗಿ ಝಗಿಸುವ ಜಗನ್ಮೋಹನಗೆ ಜಾಗಿಸುವ ಜಗತ್ರಯ ಜೀವನಿಗೆ ಯೋಗಿಜನ ಧ್ಯಾಯಿಸುವ ನಿರ್ವಾಣೆಗೆ 2 ಜಯ ಜಯವೆನ್ನಿರೊ ಗುರುಮೂರ್ತಿಗೆ ಇಹಪರ ಪೂರ್ಣ ಪರಂಜ್ಯೋತಿಗೆ ಬಾಹ್ಯಾಂತ್ರ ಭಾಸುವ ಶ್ರೀಪತಿಗೆ ಮಹಿಪತಿಯ ಶ್ರೀ ಸ್ವಾಮಿ ಜಗತ್ಪಿತಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ದೇವ ಜಯ ದೇವ ಜಯ ಗುರು ನಾಗೇಶ ದಯಗುಣದಲಿ ನೀ ಮಾಡೊ ಭವತಾಪ ನಾಶ ದ್ರುವ ಜನ್ಮ ಮರಣಗಳೆಂಬ ಖಚ್ಚಿಖವಡಿಗಳು ನಿಮ್ಮ ನಾಮಸ್ಮರಣಿಲೆ ಓಡುದು ದುರಿತಗಳು ಬ್ರಹ್ಮಾನಂದದ ಸುಖ ಭಾಸುದು ಮನದೊಳು ನಮ್ಮ ಸ್ವಾಮಿ ನೀನೆ ಅಹುದೊ ಕೃಪಾಳು 1 ತಾಪತ್ರಯವೆಂಬುದು ಬಲು ಪೀಡಿಯ ಗುಣ ಆಶೆÀ ನೀನೆ ಪರಿಹಾರ ಮಾಡೊ ಘನ ಕರುಣ ಕೋಪತಾಪವೆಂಬುದು ತದ್ದುದುರೀಯ ಗುಣ ಕೃಪೆಯಿಂದಲಿ ಮಾಡುದು ನಿಮ್ಮ ಶ್ರಮ ನಿರ್ವಾಣ 2 ದುರಿತ ಸಂಹಾರ ಸುರಜನ ಸಹಕಾರ ಕರುಣಾಕರ ಗುರುಮೂರ್ತಿ ಮುನಿಜನ ಮಂದಾರ ತರಳ ಮಹಿಪತಿಸ್ವಾಮಿ ಘನ ಕೃಪಾಕರ ಶರಣ ರಕ್ಷಕ ಪೂರ್ಣ ನೀ ಜಗದೋದ್ಧಾರ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ದೇವ ಜಯ ದೇವ ಜಯ ಜಗಜೀವನ ಕರ ರತ್ನ ಧ್ರುವ ಅಜ ಸುರ ಮುನಿ ಪ್ರಾಣ ರಾಜೀವ ನಯನ ಸುಜನ ಸುಭೂಷಣ ತ್ರಿಜಗ ಪಾವನ 1 ಭಕ್ತ ಜನ ಉದ್ಧಾರ ಘನಗುರು ದಾತಾರ ಪತಿತಪಾವನಮೂರ್ತಿ ಮುನಿಜನ ಮಂದಾರ ಅತಿಶಯಾನಂದ ಅನುಪಮ ವ್ಯಾಪಕ ನಿರ್ಧಾರ ಸತತ ಸುಪಥ ಸದ್ಗುರು ಸಹಕಾರ 2 ಸಹ್ಯಾದ್ರಿ ಗಿರಿವಾಸ ಶ್ರೀಗುರು ಸರ್ವೇಶ ಬಾಹ್ಯಾಂತ್ರ ಪರಿಪೂರ್ಣ ಜಗದೀಶ ಮಹಿಪತಿಸ್ವಾಮಿ ಶ್ರೀ ದೇವದೇವೇಶ ದಾತ ಭಾಸ್ಕರಕೋಟಿ ಪ್ರಕಾಶ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ದೇವ ಜಯ ದೇವ ಜಯ ಬ್ರಹ್ಮಾನಂದ ಜಯ ಜಯವೆಂದು ಬೆಳಗುವೆ ಬೆಳಗಿಲಿ ನಿಮ್ಮಿಂದ ಧ್ರುವ ಅರುವಿಗೆ ನಿಮ್ಮರುವುದೋರಿತು ಘನದರುವು ಅರುವೆ ಅರುವಾಗಿದೋರಿತು ಅರುವೆ ಘನ ಅರುಹು ತಿರುಹುಮುರವ್ಹಿನ ಕುರುವುದೋರಿತು ಘನದರುವು ಕುರುವ್ಹೆ ಕುರುವ್ಹಾಗಿದೋರಿತು ಘನ ಪರಾತ್ಪರವು 1 ಬೆಳಗಿನ ಘನ ಬೆಳಗು ಹೊಳೆವದು ಥಳಥಳವು ಹೇಳೇನಂದರೆ ಬಾರದು ತಿಳವ್ಹಿಗೆ ನಿಜಸುಳಹು ಕಳೆ ಮೊಳೆಗಳ ಉಳಹು ತುಳಕುತ ಘನದೊಲವು ಭಳಭಳ ಭಾಸುವ ನಿಮ್ಮ ಬೆಳಗೆ ನಿರ್ಮಳವು 2 ಅನುಭವದಾರತಿ ಸ್ವಾನುಭವದ ಪ್ರೀತಿ ಅನುದಿನ ಬೆಳಗುವದು ತಾ ಘನಗುರು ನಿಜಪ್ರೀತಿ ತಾನೆತಾನಾಗಿಹ ಙÁ್ಞನಸಾಗರ ಮೂರ್ತಿ ದೀನಮಹಿಪತಿ ಬೆಳಗುವೆ ಮನ ಮಂಗಳಾರ್ತಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ದೇವ ಜಯ ದೇವ ಜಯ ವರ ಗುರುಮೂರ್ತಿ ಜಯ ಜಯವೆಂದು ಬೆಳಗುವೆ ಬೆಳಗುವೆ ಮನದಾರ್ತಿ ಧ್ರುವ ಜ್ಯೋತಿಗೆ ಸ್ವಜ್ಯೋತಿ ಘನಪರಂಜ್ಯೋತಿ ನೇತಿ ನೇತಿಯೆಂಬುದು ನೋಡಲು ಘನಶ್ರುತಿ ಶ್ರುತಿಸ್ಮøತಿಗೆ ತಿಳಿಯ ನೀ ಅಪ್ರತಿ ಅತಿಸೂಕ್ಷ್ಮ ನಿನ್ನರಿವುದು ಸದ್ಗುರು ದಯಕೀರ್ತಿ 1 ರಾಜಿಸುತಿಹ ನಿಜ ವಿಶ್ವದ ನೀ ಬೀಜ ರಾಜತೇಜೋನಿಧಿ ಸಹಜೆ ಸಹಜ ಅಜ ಸುರವಂದ್ಯ ಸುಜನರಾತ್ಮದ ನೀಗ್ರೂಜ ರಾಜಮಹಾರಾಜ ಸದ್ಗುರು ಸುಭೋಜ 2 ಮಗುಟ ಸ್ವಾನುಭವಕೆ ನೀಟ ಜ್ಞಾನರಹಿತ ಕೂಟ ಘನ ದಯನೋಟ ಅನುವಾಗಿದೋರಿತು ನೀಟಕೆ ನಿಜನೀಟ ದೀನಮಹಿಪತಿಸ್ವಾಮಿ ನೀನೆ ಘನಪ್ರಗಟ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ಮಂಗಳಂ ಮಹಾ ಶುಭಮಂಗಳಂ ಶ್ರೀಯಕರಾನಂದ ಘನಚಿನ್ಮೂರ್ತಿಗೆ ಪ ಅನಿಮಿಷಾಕ್ಷಗ ಧರಮಹೀಗ ಸಂಭೋದ್ಬವಗ ಮುನಿಪಟು ಕ್ಷತ್ರಿ ಕುಲಸಂಹಾರಗ ಇನಕುಲೋದ್ಭವ ವಾಸುದೇವಶ್ರೀ ಬೌದ್ಧಗ ಘನತರದ ತುರಗ ಹರರಾವುತಂಗೆ 1 ಮರಮತ್ಸ್ಯ ಶ್ರೀಕಮಠ ಹಿರಣ್ಯಕ್ಷಮರ್ಧನಗೆ ಕೊರಳೊನಮೂಲಿ ವಾಮನದೇವಗೆ ಧರಿ ಭೂಸುರಗಿತ್ತು ಧಾಶರಥಿ ಶ್ರೀ ಹರಿಗೆ ಸಿರಿದಿಂಗಬರ ಕಲ್ಕಿ ಯವತಾರಗೆ 2 ಕೂರ್ಮ ವರಾಹನರಸಿಂಹಗೆ ಅಗವೈರಿಯನುಜ ಪರಶುರಾಮಗ ರುಘುನಾಥ ಕೃಷ್ಣ ಬೌದ್ದೇಶಕಲಿನಾಶಗ ಜಗದ್ಗುರು ಮಹಿಪತಿ ಸುತಪ್ರಿಯಗೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಯ ಮಂಗಳ ಶುಭ ಶುಭ ಮಂಗಳ ಪ ಜಯ ಮಂಗಳ ಜಗದುದರ ಶ್ರೀದೇವಗೆ ಶುಭ ಮಂಗಳ ಸುಂದರ ವರಲಕ್ಷ್ಮಿಗೆ 1 ಜಯ ಮಂಗಳ ಭಕ್ತರ ಪರಿಪಾಲಗೆ ಭಾರ್ಗವಿ ಮಹಲಕ್ಷ್ಮಿಗೆ 2 ಶುಭ ಶುಭ ಕಮಲಾಸನ ಪಿತನರಸಿಗೆ 3
--------------
ನಿಡಗುರುಕಿ ಜೀವೂಬಾಯಿ
ಜಯ ರುಕ್ಮಿಣೀ ಕಾಂತ ಜಯ ಪಯೋನಿಧಿ ಶಾಂತ ಪ ಜಯತು ಜಯ ಭಗವಂತ ಜಯತು ಧೀಮಂತ ಅ.ಪ ಜಯ ಭಕ್ತಮಂದಾರ ಜಯ ಮೌನಿಪರಿವಾರ ಜಯತು ಜಯ ಧುರಧೀರ ಜಯತು ಸಾಕಾರಾ 1 ವಿಜಯ ಮೌಕ್ತಿಕಾಭರಣ ಜಯತು ವಿಧಿನುತಚರಣ ಜಯತು ಜಯ ಭವತರಣ ಜಯ ಶರಣಕರುಣಾ 2 ಜಯನಾದ ಸುವಿಲಾಸ ಜಯತು ಭಾಸ್ಕರ ಭಾಸ ಜಯ ಮಾಂಗಿರೀವಾಸ ಜಯ ಶ್ರೀನಿವಾಸ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಜಯ ಲಕ್ಷ್ಮಿ ಬಾ ಹಸೆಗೆ ಜಯ ಜಯ ಜಗನ್ಮಾತೆ ತ್ರೈಲೋಕವಿಖ್ಯಾತೆ ಪ ಮುತ್ತಿನ ಮಂಟಪದಿ ರತ್ನಪೀಠವಿರಿಸಿ ಮುತ್ತೈದೆಯರು ನಿನ್ನ ಅರ್ಥಿಯಲಿ ಕರೆವರು ಅ.ಪ ಗೆಜ್ಜೆ ಸರಪಣಿ ಕಾಲಗೆಜ್ಜೆ ನಾದದಿಂದ ಹೆಜ್ಜೆನಿಡುತ ಬಾ ಬಾ ಸಜ್ಜನರಕ್ಷಕಳೆ1 ಅಚ್ಚ ಜರಿ ಪೀತಾಂಬರ ಹೆಚ್ಚಿನಾಭರಣಗಳು ಮಿತ್ರೇರಲಂಕರಿಸುವರು ಅಚ್ಚುತನೊಡಗೊಡಿ 2 ಮುತ್ತಿನ್ಹಾರ ಪದಕ ಜತ್ತಿಲೊಲಿಯುತಿಹುದು ಹಸ್ತ ಕಡಗ ದೋರ್ಯ ಸಿಸ್ತಿನ ಸುಂದರಿಯೆ 3 ಕರ್ತೃ ಕಮಲನಾಭ ವಿಠ್ಠಲನರಸಿಯೆ ಹಸ್ತಿಗಮನೆ ಬಾ ಬಾ ಉತ್ತಮ ಪೀಠಕೆ 4
--------------
ನಿಡಗುರುಕಿ ಜೀವೂಬಾಯಿ
ಜಯ ಶರಣರ ಸುರಧೇನು ಜಯ ಜಯ ಸೀತಾರಮಣ ಪ ಸೊಕ್ಕಿದ ದೈತ್ಯರ ಬಾಧಿಗಾರದಿಹ ದೇವರ್ಕಳ ಮೊರೆಯನು ಕೇಳಿ ಮಿಕ್ಕನುಜರ ಕೂಡ ಬೆಳೆದು ಅಕ್ಕರದಲಿ ಕಾಯದು ಬರಲಿ ನಕ್ಕಿ ಕೈವಿಡಿದನೇ ಜಯತು 1 ಆಖರ ದೂಷಣರಳಿದು ತಾಕಪಿಕರಢಿಯನೆ ಕೂಡಿ ಬೇಕಾದ ಸ್ಥಿರಪದ ನೀಡಿ ಸಾಕೇತ ಪುರಾಧೀಶ ಜಯತು 2 ಲಲನೆ ದಾಮದಲಿ ಕುಳ್ಳಿರಲಿ ಬಲಕವಶಿಷ್ಠ ಭರತ ಶತೃಘ್ನ ಕೂಡೆ ನೆಲಿಛತ್ರ ವಿಡಯೆ ಲಕ್ಷ್ಮಣನು ಉಳಿದಸುರನರರು ಕುಳ್ಳಿರಲಿ ಬೆಳಗಿದಳಾರತಿ ಜಯತು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು