ಒಟ್ಟು 49258 ಕಡೆಗಳಲ್ಲಿ , 138 ದಾಸರು , 11863 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎದ್ದಳೀಗಿದಕೋ ಶ್ರೀರಮಣಿ || ಎದ್ದಳೀಗಿದಕೋ ಪ ಮುದ್ದು ಶ್ರೀ ಹರಿಯಾ ತೋಳ ತೆಕ್ಕೆಯಾನುಸಳಿ ಶುದ್ಧ ರಾತ್ರಿಲಿ ಹರಿ ರತಿಯೊಳು ಮಲಗಿ ಅ.ಪ. ಸರಸಿಜ ಸಖನ ಮುಂಬೆಳಗವ ಹರಿಯಲು | ಭರದಲಿ ಹಕ್ಕಿಯು ಕಲಕಲವೆನಲು 1 ನಾರದ ತುಂಬುರ ಮಾಡುವ ಪ್ರಾತ:| ಸ್ಮರಣೆಯ ಗಾಯನ ಧ್ವನಿಯನು ಕೇಳಿ 2 ಕರತಳದಲಿಯವಿಗಳನು - ವರೆಸುತಲಿ | ತೆರೆವುತ ಮುಚ್ಚುತ ಅರೆಗಣ್ಣ ನೋಟದಿ 3 ಬಾಯೊಳಗಿನ ತಂಬುಲವ ನುಗುಳುತ | ಅಧರ ವಕೆಂಪವ ನಡಗಿಸುತ 4 ಕಿರಿಬೆಮರವ ಕೊನೆ ಯುಗುರದಿ ಹಾರಿಸಿ | ಕುರುಳು ಗೂದಲು ಬೈತಲು ನೀಟಾಮಾಡುವ5 ಸಡಲಿದ ಅಲರ ಮುಡಿಯಾತಿದ್ದಿ ಬಿಗಿವುತಾ | ಒಡನೆ ಕೊರಳಾ ಭರಣವ ತಿರುಹುತಲಿ 6 ಎಡಬಲ ಕೊಲದ ವಡ್ಯಾಣ ಸರಿಸಿ ಉಟ್ಟಾ | ಉಡಿಗಿಯಾ ನಿರಯಾ ಮುಂದಕ sಸಾಂವರಿಸುತ7 ಪ್ರಕಟದಿದೋರ್ವ ಕುಚದ ನಖಕ್ಷತಗಳ | ಯುಕುತಿಲಿ ಅಡಗಿಸಿ ಪುಟವನು ಬಿಗಿವುತ 8 ತನ್ನನಂಬಿದ ಬಾಲರ ಹೊರಿಯಲುದಯ | ಕಮಠ ನ್ಯಾಯದಲಿ9 ಈರೇಳು ಜಗದ ಜೀವನ ಪಡೆದ ಜನನಿ | ಗುರುಮಹಿ ಪತಿಸುತ ಪ್ರಭುವಿನ ಅರಸಿ10
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎದ್ದು ನಿಂತ ಖಳರ ಕೃತಾಂತಹೊದ್ದಿದವರ ಪೊರೆವ ಧವಳಗಂಗೆ ಹನುಮಂತಪ. ಕಪಟ ದಶಮುಖನ ಮದಭಂಜನ ಮಾಳ್ಪೆನೆಂದೆದ್ದು ನಿಂತಸಂಜೀವನವ ತಂದು ಕಪಿಗಳ ಕಾಯ್ದಆಂಜನೆಯ ತನಯ ತಾನೆದ್ದು ನಿಂತ 1 ಗುದ್ದ್ದಿ ರಾವಣನ ಧರೆಯೊಳು ಕೆಡಹಿ ಅರಿಕಟಕಮರ್ದನ ಮಹಾಮಹಿಮನೆದ್ದು ನಿಂತಯುದ್ಧದಲಿ ರಘುಪತಿಯ ಹೊತ್ತು ಭಕುತಿಯ ತೋರ್ದಶುದ್ಧಸ್ವಭಾವ ತಾನೆದ್ದು ನಿಂತ2 ರಾಗಗಳ ಮೇಳೈಸಿ ಹಯವದನನೊಲಿಸಿಯೋಗಿಗಳನುದ್ಧರಿಸಲೆಂದೆದ್ದು ನಿಂತಈಗ ಧರೆಯೊಳು ಸುಜನರ ಮನೋಭೀಷ್ಟಗಳವೇಗದಲಿ ಕೊಡುವೆನೆಂದೆದ್ದು ನಿಂತ3
--------------
ವಾದಿರಾಜ
ಎದ್ದು ಬರುತಾರೆ ನೋಡೆ ತಾ - ವೆದ್ದು ಬರುತಾರೆ ನೋಡೆ ಪ ಮುದ್ದು ಬೃಂದಾವನ ಮಧ್ಯದೊಳಗಿದ್ದು ತಿದ್ದಿ ಹಚ್ಚಿದ ನಾಮ - ಮುದ್ರೆಗಳೊಪ್ಪುತೀಗ ಅ.ಪ ಗಳದೊಳು ಶ್ರೀ ತುಳಸಿ ನಳಿನಾಕ್ಷಿ ಮಾಲೆಯು ಚಲುವ ಮುಖದೊಳು ಪೊಳೆವೊ ದಂತಗಳಿಂದ 1 ಹೃದಯ ಸದನದಲ್ಲಿ ಪದುಮನಾಭನ ಭಜಿಸಿ ನಿತ್ಯ ಸದಮಲ ರೂಪತಾಳಿ 2 ದಾತ ಗುರು ಜಗನ್ನಾಥವಿಠಲನ್ನ ಪ್ರೀತಿಯ ಬಡಿಸುತ ದೂತರ ಪೊರೆಯುತ 3
--------------
ಗುರುಜಗನ್ನಾಥದಾಸರು
ಎದ್ದುನಿಂತ ಬಂದು ನಿಂತ ಮುಂದೆ ನಿಂದಂಥಮಾರಾಂತರ್ಗೆ ಕೃತಾಂತ ನಿಶ್ಚಿಂತ ಹನುಮಂತಬಲವಂತ ಯೆದೆಗೊಂತ ತನಪಂಥ ಸಲಲೆನುತಸÀಂತರಿಗೆ ಸಂತತ ಶಾಂತ ನಿಂತ ಮಾರಾಂತ ಕೃತಾಂತ ಪ. ದುರುಳ ರಾವಣನ ವನದ ತರುವಿನ ಕೊನೆಯೇರಿದಕರಚರಣಗಳ ಘಾಯದಿ ಮರಂಗಳ ಮುರಿದಅರಿಗಜ ಗಂಡಭೇರುಂಡನೆಂಬ ತನ್ನ ಬಲುಬಿರುದಮೆರೆದು ಮಾರುತಿ ಪ್ರತಿಭಟರ ಶಿರಂಗಳ ತರಿದ 1 ಸೀತೆಗೆ ಉಂಗುರವನ್ನಿತ್ತು ಮತ್ತೆ ಕೈಗಳ ಮುಗಿದಪ್ರೀತಿಯಿಂ ಪೊನ್ನಕಚ್ಚುಟಕ್ಕಿಟ್ಟ ಗಂಟನು ಬಿಗಿದಖ್ಯಾತ ಮಂಡೋದರಿಕುವರನ ಬಸುರನು ಬಗಿದವಾತಸುತನು ವೈರಿಪುರವ ಸುಡಲು ತೊಡಗಿದ 2 ನಲಿದು ಲಂಘಿಸಿ ನಳನಳಿಸುವ ಬಾಲವನೆತ್ತಿಖಳರೆದೆ ಶೂಲ ಹುಬ್ಬುಗಳ ಗಂಟಿಕ್ಕಿ ನೋಡುವ ಅರ್ಥಿಆಳುತಲಿಹ ಅಬಲೆಯರ ಭಯಂಕರಮೂರ್ತಿಸುಳಿದನು ಕೇರಿಕೇರಿಯಲಸುರರ ನುಗ್ಗೊತ್ತಿ 3 ಲಂಕಾನಗರಿಯ ಪುಚ್ಚದ ಕಿಚ್ಚಿಂದ ಸುಟ್ಟಹುಂಕರಿಸುತ ಅಹಿತರ ಬೇಗ ತೆಗೆದೊಗದಿಟ್ಟಕಂಕಣ ಮಕುಟ ಹಾರಂಗಳಿಂದೊಪ್ಪುವ ಬಲುದಿಟ್ಟಶಂಕೆಯಿಲ್ಲದನಿಲಜ ಶತ್ರುಗಳಿಗಿಂತರ್ಥಿಯ ಕೊಟ್ಟ 4 ಹೋಗೆಲೊ ಕಪಿಯೆನೆ ಹೊಕ್ಕು ರಕ್ಕಸರನು ಬಿಗಿದಕಾಗೆಯ ಬಳಗಕೆ ಕಲ್ಲನಿಟ್ಟಂದದಿ ಮಾಡಿದಆಗಲೆ ಕಂಡ ದಶಮುಖನೆಂಬ ಕಳ್ಳನ ನೋಡಿದಬೇಗ ಜಾನಕಿಯನ್ನು ಬಿಡು ಬಿಡುಯೆನಲು ತೊಡಗಿದ 5 ಮೂರರದೊಂದು ಪಾಲು ಖಳರ ಜನಂಗಳ ಕೊಂದಮೀರಿದ ಸೇನೆ ನಮ್ಮ ರಘುಪತಿಗಿರಲೆಂದು ನಿಂದನೂರುಯೋಜನದ ವಾರಾಶಿಯ ತೀರಕೆ ಬಂದಹಾರಿದನು ಗಗನಕೆ ಹನುಮನು ಭರವಸದಿಂದ ನಿಂದ 6 ಕುಂಭಿನೀ ಸುತೆಯ ಕುರುಹಿನ ಸನ್ಮಣಿಯ ತಕ್ಕೊಂಡಅಂಬುಧಿಯನು ಬೇಗ ದಾಟಿ ಶ್ರೀರಾಮರ ಕಂಡತ್ರ್ಯಂಬಕ ಮೊದಲಾದ ಸುರರ ತಂಡದಲಿ ಪ್ರಚಂಡಕಂಬುಕಂಧರ ಹಯವದನನ ಭಕ್ತಿರಸಾಯನ ಉಂಡ 7
--------------
ವಾದಿರಾಜ
ಎದ್ದೆವು ನಾವಿನ್ನು ಸದ್ಗುರು ಕೃಪೆಯಿಂದ ಧ್ರುವ ಭವ ನಿದ್ರಿಯಗಳೆದು 1 ಕಾಯ ಮಂದಿರದೊಳು | ಮಾಯ ಮುಸುಕು ತೆಗೆದು 2 ಚೆನ್ನಾಗಿ ಮಲಗಿದ್ದ | ಜನ್ಮ ಹಾಸಿಗೆ ಬಿಟ್ಟು 3 ತನ್ನ ತಾ ತಿಳಿವ್ಹಾಂಗೆ ಕಣ್ದೆರೆದಿನ್ನು 4 ಎದ್ದಿದ್ದರೆ ನೀವಿನ್ನು ಶುದ್ಧ ಬದ್ಧರಾಗಿ 5 ಮನದಲ್ಲಿ ಇನಕೋಟಿ ತೇಜನ ಕಾಣುಹಾಂಗೆ 6 ದೀನ ಮಹಿಪತಿ ಸ್ವಾಮಿ ಮನೋಹರ ಮಾಡೊಹಾಂಗೆ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಎನಗ ನೀ ಕಾಯಲಾಗದೇ|ಆಗದೇ ದೇವಾಪ ದಶ ಜನುಮ ವಂಗೀಕರಿಸಿ ಭಕ್ತ ಅಂಬ| ರೀಷನ ಶಾಪ ಹರಿದೆ ದೇವಾ 1 ಗಣಿಕಾ ಅಜಮಿಳ ಶಬರಿ ಮುಖ್ಯರಾಗಿಹಾ| ಗಣಿತರನು ಪೊರೆದೆ ದೇವಾ 2 ಗುರುವರ ಮಹಿಪತಿ ಸುತ ಪ್ರಭು ಯನ್ನನು| ದ್ದರಿಸುವದನರಿದ ಅರಿದೇ ದೇವಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎನಗಳವೆ ನಿನ್ನ ಮಹಿಮೆಯನು ಪೊಗಳಲು ಹೀನಮತಿ ನಾ ಪನ್ನಂಗಶಯನ ಪ ನೀಲಶಾಮನೆ ನಿಮ್ಮ ಲೀಲೆ ಪೊಗಳಲ್ಕೆ ಬ್ರಹ್ಮ ಸಾಲವು ನಾಲ್ಕುವೇದವೆಂದು ನಾಲಿಗೆಯೋಳ್ವಾಣಿನಿಟ್ಟಿರುವನಂತೆ 1 ಸಾಸಿರ ಜಿಹ್ವೆಗಳಿಂದ್ಹೊಗಳಲ್ ಈಶಭಜನೆ ತೀರದೆಂದು ಶೇಷ ಇನ್ನು ಸಾಸಿರಜಿಹ್ವೆ ಆಶಿಸಿ ಬೇಡುವನಂತೆ2 ಪ್ರಾರ್ಥಿಸಲು ನಿಮ್ಮ ಚರಿತ ಶಕ್ತಿ ಸಾಲದಂಥವರಿಗೆ ಭಕ್ತಿಯಿಂ ಪೊಗಳುವೆನಿಷ್ಟೆ ಮುಕ್ತಿದಾಯಕ ಶ್ರೀರಾಮಯೆನುತ 3
--------------
ರಾಮದಾಸರು
ಎನಗಾಧಿಯೋ ಗುರು ಅಧಿಯೋ ಧ್ರುವ ಒಬ್ಬಗೆ ಶ್ರುತಿಪುರಾಣಾದಿ ಒಬ್ಬಗೆ ಶ್ರೋತ್ರಾಧಿ ಒಬ್ಬಗೆ ಸ್ಮಾರ್ತಾಧಿ ಒಬ್ಬಗೆ ಜ್ಯೋತಿಷ್ಯದಾಧಿ ಮಿತವಾಕ್ಯದಾಧಿ ಶ್ರೀಪಾದದಾಧಿ 1 ಒಬ್ಬಗೆ ವೃತ್ತಾಧಿ ಒಬ್ಬಗೆ ವಿತ್ತಾಧಿ ಒಬ್ಬಗೆ ಸ್ತುತಿಸುವದಾಧಿ ಯಂತ್ರ ಮಂತ್ರದಾಧಿ ಒಬ್ಬಗೆ ಶೈವಾಧಿ ಒಬ್ಬಗೆ ಶಕ್ತ್ಯಾಧಿ ಒಬ್ಬಗಾಗಮಯುಕ್ತಿ ಆಧಿ ಶ್ರೀಪಾದದಾಧಿ 2 ಒಬ್ಬಗೆ ಹಟದಾಧಿ ಒಬ್ಬಗೆ ದಿಟದಾಧಿ ಒಬ್ಬಗೆ ತಟಕೂಪದಾಧಿ ಒಬ್ಬಗೆ ಪಟದಾಧಿ ಬಗೆ ಪಠಣ್ಯಾದಿ ಒಬ್ಬಗೆ ಮಠಮಾನದ್ಯಾಧಿ ಒಬ್ಬಗೆ ಕುಟಲಾಧಿ ಒಬ್ಬಗೆ ಜಟದಾಧಿ ಒಬ್ಬಗೆ ಫಟಿಸುವ ಆಧಿ ಶ್ರೀಪಾದದಾಧಿ 3 ಒಬ್ಬಗೆ ರಸದಾಧಿ ಒಬ್ಬಗೆ ಕಸದಾಧಿ ಒಬ್ಬಗೌಷಧಮಣಿ ಆಧಿ ಒಬ್ಬಗೆ ಕೃಷದಾಧಿ ಒಬ್ಬಗೆ ದೇಶಿ ಆಧಿ ಒಬ್ಬಗೆ ಹುಸಿಹುಟ್ಟಣ್ಯಾಧಿ ಒಬ್ಬಗೆ ವೃಷದಾಧಿ ಒಬ್ಬಗೆ ದ್ವೇಷಾಧಿ ಒಬ್ಬಗೆ ಪ್ರಶಂಸದಾಧಿ ನಿಮ್ಮ ಶ್ರೀಪಾದದಾಧಿ 4 ಮನಕೆ ಮರೆಯಾಗಿ ಜನಕ ಠವಿಸುವ ಅನೇಕಪರಿ ಲೋಕದಾಧಿ ಖೂನಕೆ ಬಾರದೆ ಙÁ್ಞನಕೆ ತಾನೊಂದು ಅನುಭವಕಿಲ್ಲದಾಧಿ ಉಂಟಾಗಿಹ್ಯದಾಧಿ ಮಹಿಪತಿಗೆ ಅಧಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಎನಗಿನ್ಯಾತರ ಹಂಗೇನು | ಘನ ಗುರು ತಾನಾದ ಶ್ರಯಧೇನು ಪ ಸುರಲೋಕ ಪದವಿಯ ಸುಖದಿಚ್ಛೆಯಾತಕ | ಪರಗತಿ ದಾಯಕ ದೊರಕಿರಲಿಕ್ಕೆ 1 ರಿದ್ದಿ ಶಿದ್ದಿಗಳೆಂಬ ಮಾತಿನ ಗೊಡವಿಲ್ಲಾ | ಪಾದ ಕಮಲಾ 2 ಹಂಬಲಿಸೆನು ಯೋಗ ಭೋಗ ಮುಕ್ತಿಯ ನಾಲಕು | ಅಂಬುಜಾಕ್ಷನ ಸೇವೆಲಿರುವುದೇ ಸಾಕು 3 ತಂದೆ ಮಹೀಪತಿ ಪ್ರಭು ದಯದಿಂದಲಿ | ಕಂದಗ ವಿಶ್ರಾಂತಿ ಇದಿರಿಟ್ಟಿರಲಿ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎನಗೆ ಕಾರಣವೇನು ಪಾಪಕ್ಕೆ ುನ್ನುನಿನಗೆ ಕಾರಣವೆಂಬ ಮಾತಿನ್ನದೇಕೆ ಪಎನ್ನ ಸ್ಟೃಯ ಮಾಡ ಹೇಳಿದೆನೆ ಮತ್ತೆಅನ್ನವನಿತ್ತುಣ್ಣ ಕಲಿಸೆಂದೆನೆಮನ್ಮಥ ನೆಲೆಯಾಗಬೇಕೆಂದೆನೆ ಬೇಗಕನ್ನೆಯೊಬ್ಬಳ ಮುಂದೆ ನಿಲಿಸೆಂದೆನೆ ಸ್ವಾಮಿ 1ಜಾತಾದಿ ಷೋಡಶ ಕರ್ಮಗಳ ನಿತ್ಯಪ್ರೀತಿುಂದಲಿ ಮಾಡಿ ಸ್ವರ್ಗಗಳವೋತು ಪಾಪಗಳಿಂದ ನರಕಗಳ ಹೊಂದಿಯಾತನೆಗೊಳಿಪಂತಾಗೆಂದೆನೆ ವಿಧಿಗಳ 2ಮಡದಿ ಮಕ್ಕಳು ಮನೆವಾರ್ತೆಯೆಂಬ ಬಲುತೊಡಕಿನೊಳನ್ಯರೆನ್ನವರೆಂತೆಂಬಬಡಿಶಕ್ಕೆ ಸಿಲುಕಿಯೊದ್ದಾಡಿಕೊಂಬ ುಂಥಹೆಡಗುಡಿಯನು ಕಟ್ಟಿ ಕೊಲ್ಲೆಂದೆನೆ ಸ್ವಾಮಿ 3ಆಡಿಸಿದಂತೆ ನೀನಾಡುವೆನು ುೀಗನೋಡಿದರಿಲ್ಲ ಸ್ವತಂತ್ರವಿನ್ನೇನುಬೇಡಿಕೊಂಬೆನು ಪಾದಕ್ಕೆರಗೀಗ ನಾನು ನೀನುಕೂಡಿ ರಕ್ಷಿಸಬೇಕು ಕಪಟವಿನ್ನೇನು 4ಸೂತ್ರಧಾರಕ ನೀನು ಸಕಲಕ್ಕೆ ಮಾಯಾಮಾತ್ರವೀ ಜಗವಿದನಾಡಲಿನ್ನೇಕೆಪಾತ್ರ ಕೃಪೆಗೆ ನಾನು ಗುರು ನೀನಾಗಲ್ಕೆ ಸುಪವಿತ್ರ ಚರಿತ್ರ ವೆಂಕಟ ಮರೆಹೊಕ್ಕೆನು 5ಓಂ ಸತ್ಯಭಾಮಾಧವಾಯ ನಮಃ
--------------
ತಿಮ್ಮಪ್ಪದಾಸರು
ಎನಗೆ ನೀ ಬಂಧು ಎಂದೆಂದು ದಯಾಸಿಂಧುಪ. ತಮನ ಕೊಂದೆ ಶ್ರುತಿತತಿಯ ನೀ ತಂದೆ ಕೂ-ರುಮನಾಗಿ ಗಿರಿಯನೆತ್ತಿದೆಕ್ಷಮೆಯ ಪೊತ್ತೆ ಹಿರಣ್ಯಕನ ಕಿತ್ತೆ ತ್ರಿವಿ-ಕ್ರಮನಾಗಿ ಬೆಳೆದೆ ತ್ರೈಲೋಕ್ಯವನಳೆದೆ 1 ರಾಯರಾಯರ ಗೆಲಿದೆ ರಾವಣಬಲವನು ಮುರಿದೆ ಉ-ಪಾಯದಿ ಗೋವಳನಾದೆಸ್ತ್ರೀಯರ ಕೆಡಿಸಿದೆ ಕಲಿಯಾಗಿ ಕೊಲಿಸಿದೆಕಾಯಜನ ತಾತ ಕಾಮಿತಫಲದಾತ 2 ಸಿರಿ ಹಯವದನ ಪಾವನ್ನಪರಿಪೂರ್ಣ ಶಶಿವರ್ಣನಿರುತ ನಿನ್ನವನ್ನ ಕಾಯಬೇಕೆನ್ನ 3
--------------
ವಾದಿರಾಜ
ಎನಗೆ ನೀನೇ ಬಂಧು ಎಲೆಲೆ ಕರುಣಾಸಿಂಧುಎನ್ನ ಮನವೇ ನಿನ್ನ ಮನೆಯೆಂದು ನೆನೆದು ಬಾರೊ ತಂದೆ ಪ. ಮಕ್ಕಳ ಕೊಡುವೆ ಕಂಡ ಸುಜನರ್ಗೆ ಮಗ ನಾನುಅಕ್ಕರಿಂದ ಬೇಡುವವರ ರಕ್ಷಿಸಿಕೊಂಡು ತಂದೆಅಕ್ಷಿಹೀನರಿಗೆ ಪೊಸಚಕ್ಷುವನೀವೆ ಎನಗಿರ್ದಅಕ್ಷಿದೋಷವ ಕಳೆದು ರಕ್ಷಿಸಿಕೊಡು ತಂದೆ 1 ಪೋದ ಗಂಟ ತರಿಸಿಕೊಡುವುದು ನಿನ್ನ ಬಿರುದು ನಿನ್ನಬೋಧನೆಂಬ ಧನದ ಗಂಟು ನಾನು ನನ್ನ ರಕ್ಷಿಸಿಕೊಈ ಧರೆಯ ಕುಂಟರ ಬಲುಬಂಟರ ಮಾಡಿ ನಡೆಸಿದೆಮೋದನಿಧಿ ನಿನ್ನ ಭಕ್ತನ ಕುಂಟುತನವ ಬಿಡಿಸೊ 2 ಸಿರಿಹಯವದನ ತಿಮ್ಮ ನೀ ನಿಧರ್Àನರ್ಗೆ ಧನವಿತ್ತುಕರುಣಿ ಎನ್ನ ಧೈರ್ಯಧÀನವನು ಕೊಡೆಯದೇಕೆಧರೆಯೊಳೆನ್ನಾಜ್ಞೆಯನು ನಿಲಿಸಿಕೊಳಬೇಕಾದರೆಧುರದಿ ಅನನ್ಯಾಶ್ಚಿಂತಯೆಂತೋ ಎಂದ ಮಾತ ಸಲಿಸೋ 3
--------------
ವಾದಿರಾಜ
ಎನಗೆಲ್ಲಿಯ ಕೊರತೆ ನಿನ ನಂಬಿದ ಮೇಲೆ ಮನಸಿಜನೈಯ್ಯಾ ಶ್ರೀ ರಂಗೇಶವಿಠಲ ಪ ಕೊಡುವ ಕರ್ತನು ನೀನು ಎಡಬಿಡದಿರುವಾಗ ಬಡತನವೆನಗ್ಯಾಕೆ ರಂಗೇಶವಿಠಲ 1 ಸತಿಯು ಸುತರು ಎನಗೆ ಹಿತವ ಬಯಸಲಿಲ್ಲ ಗತಿಯು ಎನಗೆ ನೀನೆ ರಂಗೇಶವಿಠಲ 2 ಮಂದಮತಿಯು ನಾನು ಸಿಂಧುಶಯನ ನಿನ್ನ ಕಂದನೆಂದು ತಿಳಿಯೊ ರಂಗೇಶವಿಠಲ 3
--------------
ರಂಗೇಶವಿಠಲದಾಸರು
ಎನಗೊಬ್ಬರು ಇಲ್ಲಾ ನೋಡಿ ಸಿರಿನಲ್ಲ ಪ ಮನದಿ ಯೋಚಿಸಲು ತಂದೆ ತಾಯಿಸತಿ ತನಯ ಸಹೋದರ ಮಿತ್ರರೆಂಬುವರು ಅ.ಪ ಒಬ್ಬರಾದರೂ ಇವರಲಿ ಇದ್ದರೆ ಹಬ್ಬವಾಗಿ ಸಂತೋಷ ಪುಟ್ಟುವುದು ತಬ್ಬಲಿಯಾದೆನು ಸಂಸ್ಮರಣವೆಂಬ ಹೆಬ್ಬುಲಿಯಕೈಗೆ ಸಿಕ್ಕಿರುವೆನು ನಾಂ1 ಯಾರಿಗೆ ಮೊರೆಯಿಡಲೀ ಕಷ್ಟ ಕಿವಿ- ಯಾರ ಕೇಳಿ ಪರಿಹರಿಸುವರಾರು 2 ರಾಯ ತಂದೆ ಧರ್ಮವೆ ಸೋದರರು ಸತಿ ನೋಯಿಸದಿರುವುದು ಮಿತ್ರನು ಇವರೊಳು 3 ಈ ಬಂಧುಗಳುಳ್ಳವಗೆ ನಿರುತವು ಮ- ಹಾಭಾಗ್ಯವುಯಿಹಪರ ಸೌಖ್ಯವು ನಾ ಭ್ರಾಂತಿಯೊಳೆಲ್ಲೆಲ್ಲಿ ತಿರುಗಿದರು ವೋ ಭಗವಂತ ಮಹಂತಾನಂತನೆ 4 ಹೊರಗಿನವರ ಬಾಲ್ಯದಿ ಕಾಣದೆ ಕರೆ ಗುರುರಾಮವಿಠಲ ಹೊರವೊಳಗೂನೀ ನಿರುವೆ ಕರುಣಿಸೈ ಸರ್ವವು ನೀನೆ 5
--------------
ಗುರುರಾಮವಿಠಲ
ಎನಗ್ಯಾರು ಗತಿಯಿಲ್ಲ ನಿನಗ್ಯಾರು ಸರಿಯಿಲ್ಲ | ಎನಗೆ ನಿನಗೆ ನ್ಯಾಯ ಪೇಳುವರಿಲ್ಲ ಪ ಒಂದುಗೂಡಿಲಿ ಬಂದು ಒಂದು ಕ್ಷಣ ವಗಲದೆ | ಪಾದ ಪೊಂದಿರಲೂ || ಬಂದ ವಿಷಯಂಗಳಿಗೆ ಯೆನ್ನನೊಪ್ಪಿಸಿ ಕೊಟ್ಟು | ನೀನಂಧಕನಂತೆ ನೋಡುವದುಚಿತವೆ ರಂಗಾ 1 ಪರಸತಿಯರ ಕೂಡಿದರೆ ಪರಮ ಪಾತಕವೆಂದು | ಪರಿ ಪರಿಯ ನರಕಗಳ ನಿರ್ಮಿಸಿರುವಿ || ಪರಸತಿಯರೊಲುಮೆ ನಿನಗೊಪ್ಪಿತೆಲೋ ದೇವಾ | ನಿನ್ನ | ದೊರೆತನಕಂಜಿ ನಾ ಶರಣೆಂಬೆನಲ್ಲದೇ 2 ನಿನ್ನಾಜ್ಞ್ಞಧಾರನಾಗಿ ನಿನ್ನ ಪ್ರೇರಣೆಯಿಂದ | ಅನೇಕ ವಿಧಕರ್ಮಗಳ ಮಾಡುತಿರುವೇ || ಯೆನ್ನಪರಾಧಗಳ ವರ್ಣಿಸಲಾಗದೊ | ದೇವ | ಪನ್ನಂಗಶಯನ ಶ್ರೀ ವಿಜಯವಿಠಲನೇ 3
--------------
ವಿಜಯದಾಸ