ಒಟ್ಟು 4058 ಕಡೆಗಳಲ್ಲಿ , 131 ದಾಸರು , 2776 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮದನನಯ್ಯಾ ಮೋಹನ್ನರಾಯಾ ನೀ ಬಾರೋ |ಹದನದಿಂದ ಹೇಳಿದಳು ಮದಗಜಗಾಮಿನಿ ಪ ಕಾಣದೆ ನಿಲ್ಲಲಾರಳು | ಕನಸನಾದರೂ ಕಾಣಳು |ಗಾಢ ನಿದ್ರೆಯನರಿಯಳು | ಬೆಳಗಾದರೂ ಮರೆಯಳು 1 ನಿನ್ನ ಮೊನ್ನ ಬರದೆ ಹೋಗಿ | ಭಿನ್ನನುಸರದೆ ಬೆರಗಿ |ಸೊನ್ನೆಗಳ ಮಿತವೆಂದು | ಎನ್ನ ಕೂಡನಾಡಿದಳು 2 ಆವ ಮೋಹದ ಮಡದಿ | ನಿನ್ನಗಲಿಸಿದ್ದಾಳು |ರುಕ್ಮಭೂಷಾ ಆವಳಾಣಿಗಳ | ನಿನಗೆ ಹಾಕಿ ಹಿಡಿದಾಳು 3
--------------
ರುಕ್ಮಾಂಗದರು
ಮದನಮೋಹನ ಮಾಮನೋಹರ ಶ್ರೀದೇವ ಸಾಧುಪಾಲನಕಾಗಿ ಬಂದು ಮೇದಿನಿಯ ಭಾರಿಳುಹಿದೆ ಧ್ರುವ ಬಂದು ಯದುಕುಲದಲಿ ಜನಿಸಿದೆ ಶ್ರೀ ಕೃಷ್ಣನು ಪೂತಣಿ ನಂದಗೋಕುಲಲ್ಯಾಡಿದೆ ಮಂದರಧರ ಸುಂದರರೂಪ ಮುಕುಂದ ವೃಂದಗೋಪರ ನಂದದಲಿ ಕೂಡಿ ಚಂದ ಚಂದದಲ್ಯಾಡಿದೆ1 ದೇವಕೀ ಕಂದ ದೇವಾಧಿದೇವ ಗೋವಿಂದ ಹಾವನ್ಹಿಡಿದಿ ನೀ ಮೆಟ್ಟಿ ಫಣಿಯಲಿ ಮಾವನ ಮರ್ದಿಸಿದೆ ಸಾವಿರನಾಮ ಪಡೆದ ನೀ ಪೂರ್ಣ ಶ್ರೀಹರಿ ದೇವ ಇಂದ್ರನು ಮಳಿಯಗರೆ ಗೋವರ್ಧನವ ನೀನೆತ್ತಿದೆ 2 ವಿದುರವಂದ್ಯ ಸದಾ ಪಾಂಡವಪಕ್ಷ ಶ್ರೀಧರ ನಿರ್ಮಿಸಿ ಮಡುಹಿದೆ ವಾಸುದೇವ ನಮ್ಮಯ್ಯ ಮಹಿಪತಿಯ ಘನಸುಖದಾಯಕ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಂದರ ಧರನೆಂಬೊ ಕೋಲಸುಂದರಾಂಗನೆಂಬೊ ಯಾದವೇಂದ್ರಚಂದ್ರನೆಂಬೊ ಕೋಲ ಪಿಡಿದು ನಿಂತಾರು ಪ. ಹದಿನಾರು ಸಾವಿರ ಮಂದಿಮುದದಿಂದ ಹೆಜ್ಜೆಯನಿಕ್ಕುತ ಚದುರೆಯರು ಕೋಲಾಟಕ್ಕಾಗಿಒದಗಿ ನಿಂತಾರು1 ನೂರು ಮಂದಿ ನಾರಿಯರೆಲ್ಲಹಾರಭಾರ ಅಲಿಯುತಲೆಮುರಾರಿಯ ಮುಂದೆಲ್ಲಸಾಲು ಸಾಲಿಲೆನಿಂತರು 2 ನೀಲ ವರ್ಣನ ಮಡದಿಯರೆಲ್ಲಮೇಲಾದ ಕೋಲಾಟಕ್ಕಾಗಿಬಾಲೆಯರು ಬಂದೆಲ್ಲಸಾಲಾಗಿ ನಿಂತರು3 ಚಕ್ರಧರನ ಮಡದಿಯರೆಲ್ಲಚಕ್ಕನೆ ಕೋಲಾಟಕ್ಕಾಗಿನಕ್ಕು ಮುಗುಳನಗೆಯಸಖ್ಯದಲೆ ನಿಂತರು 4 ಪ್ರೇಮದಿಂದ ನಾರಿಯರೆಲ್ಲಭಾವೆ ರುಕ್ಮಿಣಿಗೆ ಎರಗಿಶ್ರೀಮಂತ ಧೀಮಂತ ನಮ್ಮಸ್ವಾಮಿ ಗೆಲಿಸೆಂದು 5 ಅಂಗನೆಯರು ರಾಮೇಶನ ಮಂಗಳ ಮಹಿಮೆಯಬೆಳದಿಂಗಳ ತುಂಬಿದರುಮೋಹನಾಂಗ ಚಂದ್ರಗೆ 6
--------------
ಗಲಗಲಿಅವ್ವನವರು
ಮಂದರಧರ ಪಾವನ ಇಂದಿರಾರಮಣನ _ ಗೋವಿಂದ ಎನ್ನಿರೋ ಪ ನಂದನ ಕಂದ ಮುಕುಂದಾಬ್ಧಿಶಯನನ - ಗೋವಿಂದ ಎನ್ನಿರೋ ಅ ಗರಳ ಕಂಧರ ಸಖನನುಜನ ಕೊಂದನ - ಗೋವಿಂದ ಎನ್ನಿರೋಸುರಮುನಿಯನುಜನ ಪಾದವ ಪಿಡಿದನ - ಗೋವಿಂದ ಎನ್ನಿರೋಪರಮ ವೈಷ್ಣವರ ಕೈಲಿ ದಾನವ ಪಿಡಿದನ _ ಗೋವಿಂದ ಎನ್ನಿರೋಉರಗನ ಮಗಳ ಗಂಡಗೆ ಪ್ರಾಣವಿತ್ತನ - ಗೋವಿಂದ ಎನ್ನಿರೋ 1 ಸತಿ ರೂಪ ತಾಳ್ದನ _ ಗೋವಿಂದ ಎನ್ನಿರೋಪಿತನ ಮಾತನು ಶಿರದೊಳಗಾಂತು ನಡೆದನ - ಗೋವಿಂದ ಎನ್ನಿರೋಮತಿವಂತನಾಗಿ ಮಾತೆಯ ಶಿರವ ತರಿದನ - ಗೋವಿಂದ ಎನ್ನಿರೋ 2 ಕರೆತರಿಸಿದ ಮಾವನ ಕೊಂದಾತನ - ಗೋವಿಂದ ಎನ್ನಿರೋಧರೆಯ ಒಯ್ದನ ಕಾಯಗಳೆದನ - ಗೋವಿಂದ ಎನ್ನಿರೋಈರೇಳು ಭುವನಗಳ ಉದರದೊಳಿಟ್ಟಹನ - ಗೋವಿಂದ ಎನ್ನಿರೋಮಾರಜನಕ ಕಾಗಿನೆಲೆಯಾದಿಕೇಶವನ - ಗೋವಿಂದ ಎನ್ನಿರೋ 3
--------------
ಕನಕದಾಸ
ಮಂದರೋದ್ಧಾರಾನಂದನ ಕಂದ ಬಾ ಬೇಗಾ ನಿನ್ನ ಸುಂದರಾನನಾನಂದದಿ ನೋಳ್ಪೆ ಬಾ ಬೇಗಾ ಪ. ಮದನ ಮೋಹನ ಚದುರ ಶ್ರೀ ಕೃಷ್ಣ ಬಾ ಬೇಗ ಸುದತಿಯೇರ ಮುದವಿಹಾರ ಮದಸೂದನ ಕೃಷ್ಣ ಅ.ಪ. ಕಸ್ತೂರಿತಿಲಕ ಶಿಸ್ತಲಿ ಪೊಳೆಯೆ ಬಾ ಬೇಗಾ, ನಿನ ಮಸ್ತಕದರಳೆಲೆ ಶಿಸ್ತನು ನೋಳ್ವೆ ಬಾ ಬೇಗಾ ಹಸ್ತದಿ ಕಡಗ ಕಂಕಣ ಶೋಭಾ ಬಾ ಬೇಗಾ ಶಿಸ್ತಿನಿಂದ ಕೊಳಲನೂದೆ ಹಸ್ತಿವರದನೆ 1 ಕೊರಳೊಳು ತುಲಸಿಮಾಲಾ ಶೋಭಾ ಬಾ ಬೇಗಾ ನಿನ ಮುಂಗುರುಳು ಕೂದಲೊಳು ಮೆರೆವ ಕಿರೀಟ ಬಾ ಬೇಗಾ ವೈಜಯಂತಿ ಮಾಲಾ ಶೋಭಾ ಬಾ ಬೇಗಾ ಸರಿಯಾರೊ ಜಗದಿ ನಿನಗೆ ವರ ಶ್ರೀ ಶ್ರೀನಿವಾಸ2
--------------
ಸರಸ್ವತಿ ಬಾಯಿ
ಮದಾಂಧನೋ ನಾನು ಮಧುಸೂದನ ಪ ಜಗವನು ತುಂಬಿದ ತ್ರಿಗುಣಾತ್ಮಕನೆತೆಗೆದು ಕಣ್ಗಳ ನೋಡದ ನಾನು 1 ಪವನನೊಡೆಯ ನಿನ್ನ ಸವಿಸವಿ ಸ್ತವಕೆಕಿವಿಗೊಡದೆ ಕಿವುಡನಾದೆನಾ 2 ಎಡೆಗಿದ್ದರು ಗಡ ಅಡಗಿಹನಿಲ್ಲೆಂದುಹುಡುಕುತ ಕೇಳುವ ಜಡಮತಿ ನಾನು 3 ಗದುಗಿನ ವೀರನಾರಾಯಣನೆ ಎನ್ನಎದೆಯೊಳು ನಿಂತಿರೆ ನೋಡದ ನಾನು 4
--------------
ವೀರನಾರಾಯಣ
ಮಧುಪುರದ ವಿಘ್ನೇಶ ದೇವ ಜಗದೀಶ ಫ ಪುರುಷಪಿತನಮಿತ ಕಮಲ ಗಿರಿಜಾತೆಯಣುಗಾದಿತ್ಯ ಕೋಟಿ ಪ್ರಕಾಶ ಕರಿವದನ ಕರುಣನಿಧಿ ಸಮುದ್ರ ಬಹುಕ್ಷಿಪ್ರ 1 ಭರದಿಂದ ರಕ್ಕಸ ಪುರವನು ದಹನಮಾಡೆ ಹರ ಮೊದಲು ನಿಮ್ಮನು ಅರ್ಚಿಸಿ ಮೆಚ್ಚಿಸಿ ಹರಿ ವಿರಂಚಾದಿಗಳೆಲ್ಲ ಜಯ ಜಯವೆನಲು ವರವಿತ್ತು ಮೆರೆದೆ ಗಣನಾಥ ವಿಖ್ಯಾತ 2 ಅರರೆ ನಿಮ್ಮ ಮಹಿಮೆಯನು ಪೊಗಳಲೆನಗಳವಲ್ಲ ಧರಣಿಯ ಪೊತ್ತಿಹ ಶೇಷಗರಿದು ಹರನಸುಕುಮಾರ ಸಕಲಾಗಮಕೆ ಸಾಕಾರ ಧರೆಯೋಳ್ ಮಧುಪರ ವಿಘ್ನೇಶ 3
--------------
ಕವಿ ಪರಮದೇವದಾಸರು
ಮಧ್ವಮತವ ಪೊಂದದವನ ಭಕುತಿಯಾತಕೆ ಪ ಊಧ್ರ್ವಪುಂಡ್ರ ತಿದ್ದದವನ ಕರ್ಮವ್ಯಾತಕೆಅ.ಪ ದಾನವನ್ನು ಮಾಡದವನ ದ್ರವ್ಯವ್ಯಾತಕೆ | ಸ್ನಾನವನ್ನು ಮಾಡದವನ ಮೌನವ್ಯಾತಕೆ | ಮಾನಿನಿಯು ಇಲ್ಲದವನ ಬದುಕು ಯಾತಕೆ | ಧ್ಯಾನವನ್ನು ಅರಿಯದವನ ಪೂಜೆ ಯಾತಕೆ 1 ವಂಶವನ್ನುದ್ಧರಿಸದಂಥ ಮಗನು ಯಾತಕೆ | ಹಿಂಸೆಯನ್ನು ಪಡಿಸುವಂಥ ಅರಸು ಯಾತಕೆ || ಸಂಸಾರವನು ಒಲ್ಲದಂಥ ಸತಿಯು ಯಾತಕೆ | ಕಂಸಾರಿಯನು ತಿಳಿಯದಂಥ ಜ್ಞಾನವ್ಯಾತಕೆ 2 ಬಂಧು ಬಳಗ ಬಿಟ್ಟು ಉಂಬ ನೆಂಟರ್ಯಾತಕೆ | ಕಂದರನ್ನು ಮಾರುತಿಪ್ಪ ತಂದೆಯಾತಕೆ || ಬಂದ ಅತಿಥಿಗನ್ನವಿಕ್ಕದ ಸದನವ್ಯಾತಕೆ | ನಿಂದೆಗಳು ಮಾಡುತಿಹನಾಚಾರವ್ಯಾತಕೆ 3 ಗುರೂಪದೇಶವಿಲ್ಲದಂಥ ಮಂತ್ರವ್ಯಾತಕೆ | ಹಿರಿಯರನ್ನು ಸಾಕದವನ ಪುಣ್ಯವ್ಯಾತಕೆ || ಚರಿಸಿ ತೀರ್ಥಯಾತ್ರೆ ಮಾಡದ ದೇಹವ್ಯಾತಕೆ | ವರ-ಪ್ರಸಾದವೀಯದಂಥ ದೇವರ್ಯಾತಕೆ4 ಏಕಾದಶಿಯ ಮಾಡದವನ ವ್ರತವು ಯಾತಕೆ | ಏಕಮನಸು ಇಲ್ಲದವನ ನಡತೆ ಯಾತಕೆ || ಸಾಕಿದವನ ಕೊಲ್ಲುವಂಥ ಭಂಟನ್ಯಾತಕೆ | ಲೋಕವಾರ್ತೆ ಬಿಡದವನ ಜಪವು ಯಾತಕೆ 5 ಭಾಷೆ ಬದ್ಧವಿಲ್ಲದವನ ಮಾತು ಯಾತಕೆ | ಕಾಸುವೀಸÀಕೆ ಬಡಿದಾಡುವ ಅನುಜರ್ಯಾತಕೆ || ಲೇಸು ಹೊಲ್ಲೆಹ ನೋಡದಂಥ ಗೆಳೆಯನ್ಯಾತಕೆ | ಆಸೆಯನ್ನು ಬಿಡದ ಸನ್ಯಾಸವ್ಯಾತಕೆ 6 ತಪ್ತ ಮುದ್ರೆಯಿಲ್ಲದವನ ಜನ್ಮವ್ಯಾತಕೆ | ಗುಪ್ತದಲ್ಲಿ ನಡೆಯದಿಪ್ಪ ದಾಸನ್ಯಾತಕೆ || ಆಪ್ತಬಂಧು ವಿಜಯವಿಠ್ಠಲನ ಶ್ರೀ ಚರಣದಿ | ಕ್ಲುಪ್ತ ಮೀರದೆ ನಡೆದ ಮೇಲೆ ನರಕವ್ಯಾತಕೆ 7
--------------
ವಿಜಯದಾಸ
ಮಧ್ವಮುನಿಯೇ ಎನ್ನ ಹೃತ್ಕುಮುದ ಚಂದ್ರ ಪ ಅದ್ವೈತಮತಾರಣ್ಯ ದಹನ ಗುಣಸಾಂದ್ರ ಅ.ಪ. ನೊಂದೆ ಎಂಭತ್ನಾಲ್ಕು ಲಕ್ಷಯೋನಿಗಳಲ್ಲಿ ಒಂದೇ ಪ್ರಕಾರ ಸಂಚgಣೆಯಿಂದ ಒಂದೊಂದು ಕರ್ಮಗಳನರಸಿ ನೋಡಲು ಅದ- ರಿಂದ ಭವಾಬ್ಧಿಗೆ ಬಂದುಪಾಯವ ಕಾಣೆ 1 ನೀರು ಚಳಪಳಕಾಸಿ ಆರಲಿಟ್ಟು ಹೆಪ್ಪು ನೀರಿನಿಂದಲಿ ಕೊಡಲು ಬಪ್ಪುದೇನೊ ಮಾರುತೀ ನಿನ್ನ ಕೃಪೆ ಪಡೆಯದಲೆ ಉಳಿದವರ ಕಾರುಣ್ಯವಾಗಲು ಮೋಕ್ಷಸಾಧನವಿಲ್ಲ2 ಹರಿಸಿರಿಗೆ ಎರಗುವ ಸತ್ವ ಶರೀರನೆ ನಿರುತ ಎನ್ನೊಳಗಿಪ್ಪ ಮೂಲಗುರುವೆ ನೆರೆ ನಂಬಿದೆನೊ ಸ್ವಾಮಿ ವಿಜಯವಿಠ್ಠಲರೇಯನಚರಣದಲ್ಲಿರುವಂತೆ ಸಾಧ್ಯವಾಗಲಿ ಮನಸು 3
--------------
ವಿಜಯದಾಸ
ಮಧ್ವೇಶ ವಿಠಲ ಪ ತವ ದಾಸೋಹಂ ಕೃಪಾಂಗರಂಗ ತವ ದಾಸೋಹಂ 1 ಅಗಣಿತ ತವದಾಸೋಹಂ ಜಗತ್ಪಾಲ ತವದಾಸೋಹಂ 2 ತವ ದಾಸೋಹಂ ಸಿರಿ ಮುಕುಂದಮೂರ್ತಿ ತವ ದಾಸೋಹಂ 3 ಅನ್ನಮಯನೆ ಆನಂದಮಯನೇ ವಿಜ್ಞಾನಮಯನೇ ತವದಾಸೋಹಂ ಮನೋಮಯನೇ ಮನ್ಮಥ ಜನಕನೆ ಪ್ರಾಣಮಯನೆ ಶ್ರೀ - ವಾಜ್ಞಯನೇ ತವ ದಾಸೋಹಂ4 ಶ್ರೀಶನೇ ಸರ್ವಮಹೀಶನೇ ವರ ಹನುಮೇಶವಿಠಲ ತವದಾಸೋಹಂ ಲಕುಮಿ ಉಲ್ಲಾಸನೇ ತವ ದಾಸೋಹಂ 5
--------------
ಹನುಮೇಶವಿಠಲ
ಮನಕಧೀಶನೆನಿಪ ಗುರುವರಾ | ನಿನ್ನ ಪಾದನೆನೆವೆ ಕಳೆಯೊ ಮಲಿನ ಸತ್ವರಾ ಪ ಅನಿಲ ಸುತನು ಎನಿಸಿ ನೀನು | ಅನಿಲ ನೆನಿಸಿ ಪಾಪತೂಲಘನ ಸುಮೇರುವನ್ನೇ ದಹಿಸೊ | ಅನಲ ಈಕ್ಷಣಾನೆ ಶಿವನೆ ಅ.ಪ. ಅನುದಿನ ಪಾದ | ವನಜ ಭಜಿಪ ಶರಣರೀಗೆತೃಣವು ತೆರನು ಪಾಪ ನಿ5iÀು | ಎಣಿಸಿ ಪೊರೆವುದುಚಿತ5É್ಲ 1 ಗೌರಿಧವನೆ ವಿಷಯ ಮೋಹನ | ಕಳೆದು ವೇಗಸೂರಿ ಜನರ ಸಂಗ ಮಾಡುವ ||ಸಾರ ಮನವವಿತ್ತು ಸಲಹೊ | ಕ್ರೂರಿ ಜನರ ದೂರಮಾಡೊಘೋರಾಘೋರ ರೂಪಿ ಹರನೆ | ಮಾರಪಿತನ ಸಖನೆ ರುದ್ರ 2 ಶುಕ ವಿಭೂತಿ 3
--------------
ಗುರುಗೋವಿಂದವಿಠಲರು
ಮನವ ಶೋಧಿಸದೆಲೆ ಡಂಭದಿ ದಿನದಿನದಲಿ ಕರ್ಮಮಾಡೆ ತನುವಿಗೆ ಬಲು ಕ್ಲೇಶವಲ್ಲದೆ ಅನುಕೂಲವೇನು ಪ ಕಾಮಕ್ರೋಧ ಲೋಭಮೋಹ ಮದ ಮತ್ಸರಗಳನು ಬಿಡದೆ ನಾಮಗಳನು ಬಳೆದು ಮರೆದರೆ ಶ್ರೀ ರಾಮನರಿಯನೆ 1 ಈಶ ಸೇವೆಗೆಂದು ಬಹಳ ಮೋಸದಿಂದ ಧನವ ಗಳಿಸಿ ಈಶನನ್ನು ಮರೆವ ನರನನು ಜಗದೀಶನರಿಯನೆ 2 ಪರಸತಿಯರ ಸರಸಗಳಿಗೆ ಜರಿದು ಮನವ ಮರುಳು ಮಾಡೆ ಸರಳತನದಿ ದಾನ ಮಾಡಲು ನರಹರಿಯು ಅರಿಯನೆ3 ಒಡಲು ಪೊರೆಯೆ ಸಡಗರದಲಿ ಮಡಿ ಮಡಿಯೆಂದು ನುಡಿವ ಮೂಢನ ಪೊಡವೀಶನರಿಯನೆ4 ಪನ್ನಗಾರಿವಾಹನ ಪ್ರಸನ್ನವದನ ಕೃಷ್ಣಮೂರ್ತಿಯ ಉನ್ನತ ಮಹಿಮೆಗಳನರಿತಗೆ ಇನ್ನೇನು ಬೇಕು 5
--------------
ವಿದ್ಯಾಪ್ರಸನ್ನತೀರ್ಥರು
ಮನವು ಕರಗದೇನೋ ಸಿರಿಹರಿ ಮುನಿಸದೇಕೆ ಪೇಳೋ ಪ ತನು ಮನ ಧನಗಳ ನಿನಗೊಪ್ಪಿಸುತ್ತಲಿ ಮುನಿವರರೊಲು ನಿನ್ನ ನೆನೆಯಲಿಲ್ಲವುಯೆಂದು ಅ.ಪ ಬಾಲತನದೆ ನಿನ್ನ ನೆನೆಯದೆ ಕಾಲಕಳೆದೆ ಯೌವನದೊಳು ಲೋಲುಪನಾದೆನ್ನ ಕಾಲದೂತರು ಬಂದು ನೂಲಿಂದಚಿಳೆದರೂ 1 ಜಗವು ಚಿರವೆಂದು ಸತತವು ಬಗೆದು ಭ್ರಾಂತನಾದೆನ ಅಗಣಿತ ನೀಲಮಣಿ | ಖಗಪತಿವಾಹನ [ಪೊರೆಯಲಿನ್ನು] 2 ಗಂಗಾಧರ ರಂಗಾ ನೀನೆನ್ನಂತರಂಗದೆ ನಿಲಲಿನ್ನು3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮನವು ನೆಮ್ಮದಿಯಾಗಲಿ ಪ ಅನುದಿನವು ನಿನ್ನ ಮನಸಾರೆ ಪೂಜಿಸುವಂತೆ ಅ.ಪ ಬೆಟ್ಟ ಬಿಸಿಲಿನಲಿ ಬೇಯುವುದ ನೋಡುತ ಮನವು ಕೆಟ್ಟು ಹೋಗದೆ ಸತತ ಶುದ್ಧವಿರಲಿ ಹೊಟ್ಟೆ ಪಾಡಿಗೆ ಕೊರತೆ ಪಡುತಿರುವ ಜನರಲ್ಲಿ ಸಿಟ್ಟುಬಾರದೆ ಮನಕೆ ತಾಳ್ಮೆಯಿರಲಿ 1 ನೀರು ಕಡೆದರೆ ಬೆಣ್ಣೆ ಬಾರದೆನ್ನುವ ಕ್ಲೇಶ ದೂರವಾಗಲಿ ತಿರುಗಿ ಬಾರದಿರಲಿ ವೀರ ಹನುಮನು ತನ್ನ ಸಾರಸೇವೆಗೆ ಫಲವ ಕೋರಿದನೆ ಧನಕನಕ ವೈಭವಗಳ 2 ಗೋಪುರವ ತಾಂಗಿರುವೆನೆಂಬ ಗೊಂಬೆಯ ಹೆಮ್ಮೆ ಈ ಪರಿಯೆ ಮನದ ಕ್ಲೇಶವ ತಂದಿತು ಶ್ರೀ ಪತಿಯು ಮಾಡಿ ಮಾಡಿಸುವೆನೆಂಬುವಜ್ಞಾನ ಲೋಪಪೊಂದದೆ ಮನ ಪ್ರಸನ್ನವಾಗಲಿ ದೇವ 3
--------------
ವಿದ್ಯಾಪ್ರಸನ್ನತೀರ್ಥರು
ಮನವೆ ಪೇಳುವೆ ಪ ಅಂತರಂಗದಲಿ ಚಿಂತಿಪರಘಶುಲಧ್ವಾಂತ ದಿವಾಕರನಾ ಶ್ರೀವರನಾ ಅ.ಪ ಎಂತು ಸುಕೃತವೂ ಸಿರಿಕಾಂತನುಯನ್ನೊಳು ನಿಂತಿರುವನು ಎನುತ ಪರ್ವತ ಸಂತೋಷದಲಿರುವಂತೆ ತೋರುವದು ಸು- ಕಾಂತ ಶಿಖರದಿಂದ ಛಂದ 1 ವರಶಿಲೆಯೊಳಿರುವ ಹರಿಯ ಶೇವಿಸಲು ಹರುಷದಿ ಸುರನಿಕರ ಭಾಸುರ ತರುಲತೆರೂಪದಿ ಇರುತಿಹರೆನ್ನುತ ಮೆರೆವನು ಗಿರಿರಾಜಾ ಸುತೇಜಾ2 ಗಿರಿನಾಥಾ ತೋರುತ ಅರಳಿದ ಪೂವಿನ ಪರಿಮಳ ಬೀರುವ ಸುರಚಿರ ತರುವ್ರಾತಾ ಶೋಭಿತ3 ಪವನ ಶೇವಿತನು ಭುವನೋದರ ತಾ ದಿವಿಜರಿಂದ ಸಹಿತ ಸೇವಿತ ಅವನಿಧರನು ಮಾಧವನ ತೆರದಿ ತೋ ರು ವೆನೆಂಬುಗರ್ವಾದಿಂದಿರುವ 4 ಸಿದ್ಧಚಾರಣ ತಪೋವೃದ್ಧರಿದೇ ಸ್ಥಳ ಸಿದ್ಧಿದಾಯಕವೆಂದೂ ಬಂದೂ ಪದ್ಮಾಕ್ಷನ ಪದಪದ್ಮವ ಧ್ಯಾನಿಸು- ತಿದ್ದರು ಗುಹೆಗಳಲಿ ಪೂರ್ವದಲಿ5 ಮುನಿ ಮಾರ್ಕಾಂಡೇಯನು ಬಹುದಿನದಲಿ ಘನ ತಪವಾಚರಿಸಿ ಸೇವಿಸಿ ವನಜನಾಭನ ಪದವನಜ ಮಧುಪ ನೆಂ ದೆನಿಸುತಲಿರೆ ಗುಹದಿ ತಪೋನಿಧಿ6 ಗಿರಿಯ ಬಲದಿ ಅಹೋಬಲ ನರಸಿಂಹನ ದರ್ಶನವನು ಕೊಳುತ ನಿರುತ ಇರುತಿರಲೊಂದಿನ ಬರಲಾಷಾಢದ ಹರಿವಾಸರ ವೃತವಾ ಚರಿಸುವ 7 ದ್ವಾದಶಿ ಸಾಧನೆ ಬರಲು ಪ್ರತಿದಿನದಿ ಶ್ರೀದನ ದರ್ಶನದಾ ನೇಮದ ಸಾಧನೆ ವಿಷಯದಿ ಯೋಚಿಸುತಿರೆ ಹರಿ ಮೋದದಿ ಮುನಿಗೊಲಿದಾ ಸೂಚಿಸಿದಾ 8 ಅರುಣೋದಯದಲಿ ಸುರಗಂಗೆಯು ತಾ ವರ ಪುಷ್ಕರಣಿಯೊಳು ಬರುವಳು ತರುರೂಪದಿ ನಾ ಬರುವೆನು ಬಿಡದಿರು ಮರುದಿನದಾ ಚರಣೆ ಪಾರಣೆ9 ಎಂತು ಕರುಣವೊ ನಿರಂತರ ಭಜಿಪರ ಚಿಂತಿತ ಫಲವೀವ ಕೇಶವ ಇಂತು ಹರಿಯ ಗುಣ ಚಿಂತಿಸುತಿರಲು ನಿ ಶಾಂತದಿ ಸರೋವರದಿ ವೇಗದಿ10 ಭಾಗೀರಥಿ ಜಲದಾಗಮ ವೀಕ್ಷಿಸಿ ರಾಗದಿ ವಂದಿಸಿದ ತುತಿಸಿದ ಯೋಗಿವರನುತ ಸ್ನಾನವಮಾಡಿ ಬರುವಾಗಲೆ ಧ್ಯಾನಿಸಿದ ಹರಿಪದ11 ಆ ತರುವಾಯದಿ ಪಾರಿಜಾತ ತರು ವ್ರಾತವ ನೋಡಿದನು ವಂದಿಸಿದನು ಈತನೆ ನರಮೃಗನಾಥನೆನುತ ಮುನಿ ಪ್ರಾತ:ಪಾರಣವ ಮಾಡಿದ ಜವ12 ಮೀಸಲು ಮನದಲಿ ಶೇಷಶಯನಗಾ- ವಾಸಗಿರಿಯ ಸೇವಾ ಮಾಡುವ ಭೂಸುರ ಗಣದಭಿಲಾಷೆಗಳನು ಪೂರೈಸಿ ಪೊರೆವನೀತಾ ಪ್ರಖ್ಯಾತಾ 13 ಶ್ರೀಯುತ ಮಾರ್ಕಾಂಡೇಯರ ಚರಿತೆಯ ಗಾಯನ ಫಲವಿದನು ಪೇಳುವೆನು ಶ್ರೇಯಸ್ಸಾದನ ಕಾಯದಿ ಬಲದೀ- ಮಾನವ 14 ಸುರತರು ಕಾರ್ಪರ ಶಿರಿ ನರಸಿಂಹನೆ ಈತ ಎನ್ನುತ ನಿರುತ ಅನಂತನ ಗಿರಿಯ ಮಹಿಮೆಯನು ಸ್ಮರಿಸುವ ನರಧನ್ಯಾ ಸನ್ಮಾನ್ಯ 15
--------------
ಕಾರ್ಪರ ನರಹರಿದಾಸರು