ಒಟ್ಟು 12179 ಕಡೆಗಳಲ್ಲಿ , 134 ದಾಸರು , 5885 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೌರೀದೇವಿ ಮಾತಾಡೇ ಎನ್ನ ಮೌನದ ಗೌರೀ ಯಾತಕಚಲಮನ ಸೋತವನೊಡನೆ ಮಾತಾಡೇ ಗೌರಿ ಮಾತಾಡೇ ಪ ನಸುನಗೆ ಮುಖವಿದು ಬಾಡಿ ಕೆಂದುಟಿಯು ಎಸೆದಿರಲು ನಾನೋಡಿ ವಸುಧೆಯೊಳಗೆ ನಾ ಜೀವಿಸಲಾರೆ ಘಸಘಸವ್ಯಾತಕೆ ತುಂಬಿತÀು ಅರಗಿಣಿ 1 ಕ್ಷಣ ಬಿಟ್ಟಿರಲಾರೆ ಅಮ್ಮ ಷಣ್ಮುಖ ಗಣಪರ ತಾಯೆ ನೀ ಬಾರೇ ವಸುಧೆಯೊಳಗೆ ನಾ ಜೀವಿಸಲಾರೆ ಘಸಘಸವ್ಯಾತಕೆ ತುಂಬಿತು ಅರಗಿಣಿ 2 ಕ್ರೋಧವ್ಯಾತಕೆ ಎನ್ನೊಳು ಗೌರೀ ಏನಪ- ರಾಧವು ಇದ್ದರು ತಾಳೇ ಪಾದ ಕಿಂಕಿಣಿಯೇ ಆದರಿಸುವೆ ನಾ ಆದರಿಸುವೆನೇ 3
--------------
ಶ್ರೀದವಿಠಲರು
ಗೌರೀಪ್ರಿಯ ಹರ ಗೌರೀಪ್ರೀಯ ಹರ ಗೌರೀಪ್ರಿಯ ಹರ ಗಂಗಾಧರ ಪ ನಿತ್ಯ ನಿರಾಮಯ ಪರ ಸ್ವಪ್ರಕಾಶ 1 ನಿರ್ಮಿತಚಿಚ್ಛಕ್ತಿ ಪರಿಣಾಮಬ್ರಹ್ಮಾಂಡ ನಿರ್ಮಲ ನಿಗಮಾಂತವೇದ್ಯ ಸ್ವಸಾಧ್ಯ 2 ಬಾಲೇಂದುಶೇಖರ ಭಕ್ತ ದುರಿತಹರ ಫಾಲಾಕ್ಷ ಫಣಿಹಾರಯುಕ್ತಶರೀರ 3 ಇನಕೋಟಿಸಂಕಾಶ ಕನಕಕುಂಡಲ ದೇವ ವಿನುತ ವಿರೂಪಾಕ್ಷ ವಿಬುಧೌಘ ಪಕ್ಷ 4 ದುರಿತ ದಿವಾಕರ ಭವ ಭಯ ಪರಿಹರ ಭವದೂರ ಧೀರ 5 ಪರಶು ಮೃಗಾಭಯ ವರದ ಚತುರ್ಭಜ ಪರಮ ಫವನ ಶೀಲ ಪುಣ್ಯ ವಿಶಾಲ 6 ಶರಣಾಗತ ತ್ರಾಣ ನಿಜಕರ್ಮ ನಿರ್ಲೇಪ ಚಾಪ ತ್ರಿಭುವನ ದೀಪ 7 ಮಂದರಗಿರಿ ವಾಸ ಮನ್ಮಥತನು ನಾಶ ನಂದಿವಾಹನ ಭೃಂಗಿನಾಟ್ಯ ವಿಲಾಸ 8 ಮುನಿವಂದ್ಯ ಮೃದುಪಾದ ಘನ ಕಕುದ್ಗಿರಿವಾಸವನಜಾಕ್ಷ ತಿರುಪತಿ ವೆಂಕಟರೂಪ 9
--------------
ತಿಮ್ಮಪ್ಪದಾಸರು
ಗೌರೀಶ ಮೃತ್ಯುಂಜಯನುತ ಪಾಲಯ ಗೌರೀಶ ಮೃತ್ಯುಂಜಯ ಪ ಸುಮಶರನಾಶ ಸುಮನರಪೋಷ ಶಮೆಶಾಂತಿದಯಭೂತೇಶ 1 ಶಂಕರ ಶಶಿಧರ ಕಿಂಕರ ಪ್ರಿಯಕರ ಶಂಕರಿಮನೋಹರ 2 ಉಮೆ ಪ್ರಿಯನಾಥ ಅಮಿತವರದಾತ ಅಮರಾದಿಸುರಾರ್ಚಿತ 3 ವರಮಹಲಿಂಗ ಪರಿಭವಭಂಗ ಪರತರ ಪಾವನಾಂಗ 4 ಗಜಚರ್ಮಾಂಬರ ಭುಜಗಾಲಂಕಾರ ಸುಜನಾತ್ಮ ಸುಖಂಕರ 5 ಪುರತ್ರಯ ಸಂಹರ ಪರಿಪಕ್ವರಾಧಾರ ನಿರಂಜನ ನಿರಾಕಾರ 6 ಕೆಂಡನಯನ ರುಂಡಮಾಲನೆ ಹರಣ 7 ಬೇಡುವೆನಭವ ಕಾಡದೆ ಪರಶಿವ ನೀಡು ಎನ್ನಗೆ ವರವ 8 ಭೂಮಿತ್ರಯಕೆ ಘನಸ್ವಾಮಿ ಶ್ರೀರಾಮನ ನಾಮ ಪಾಲಿಸು ಪಾವನ 9
--------------
ರಾಮದಾಸರು
ಘನ ಲಂಪಟಗೆಲ್ಲಿಹುದು ಗುರುಕೃಪೆ ಜ್ಞಾನ ತನು ಲಂಪಟಗೆಲ್ಲಿಹುದು ತನ್ನೊಳು ಖೂನ ಧ್ರುವ ವಿಷಯ ಲಂಪಟಗೆಲ್ಲಿಹುದು ತಾ ವಿರಕ್ತಿಯು ದೆಸೆಗೆಟ್ಟವಗೆಲ್ಲಿಹುದು ಯುಕ್ತಿಯು ಮುಸುಕಿದ ಮಾಯದವಗೆಲ್ಲಿಹುದು ಮುಕ್ತಿಯು ಹುಸಿಯಾಡುವಂಗೆಲ್ಲಿಹುದು ಋಷಿ ಭಕ್ತಿಯು 1 ಮರುಳಗುಂಟೆ ಅರುಹ ರಾಜಸನ್ಮಾನದ ತರಳಗುಂಟೆ ಭಯವು ಘಟಸರ್ಪದ ಮೃಗ ಜಲವೆಂಬುವದ ಸೂರಿಗೆ ಉಂಟೆ ಮಾತು ಚಾತುರ್ಯದ 2 ಕನಸ ಕಾಂಬುವಗೆಲ್ಲಿಹುದು ತಾನಿರುವ ಸ್ಥಾನ ಮನದಿಚ್ಛೆಲಿದ್ದವಗೆಲ್ಲಿಯ ಧ್ಯಾನ ದೀನ ಮಹಿಪತಿ ಸ್ವಾಮಿ ಕಾಣದವಗೆಲ್ಲಿ ಘನ ಅನುಭವಿಸಿಕೊಳ್ಳದೆ ಜನ್ಮಕ ಬಂದದ್ದೇನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಘನವೇನೋ ನಿನಗಿದು ಗುಣವನದೀ | ಮಾನದ ಮಾನ್ಯ ||ಮನವ ನಿನ್ನಲಿ ನಿಲ್ಲಿಸೋ ಪ ತನುಮನ ಸಕಲ ಸಾಧನವೆಲ್ಲ ಎನಗಿತ್ತುಮನ ಆದಿ ಕರಣವ ಎನಗೊಶಪಡಿಸದೆ ಅ.ಪ. ಅಚ್ಯುತ ಮೂರ್ತಿ | ಸತತ ಎನ್ನಲ್ಲಿ ಇದ್ದುಹಿತವ ಮಾಡಿದೆ ಎನ್ನ | ಹತಭಾಗ್ಯನೆನಿಪುದು 1 ಹೀನ ಬುದ್ಧಿಯ ಕಳೆಯದೇ | ಮುನಿಜನ ವಂದ್ಯಾ |ವಾನರ ನಾನಾದೆ ಹರಿಯೇ ||ಶ್ವಾನ ಮತಿಯ ನೀಗಿ | ಧ್ಯಾನ ಸಾಧನ ನೀಡೋ |ಗಾನ ಲೋಲನೆ ನಿಧಾನ ಮಾಡಲಿ ಬೇಡ 2 ತಂದೆ ಮುದ್ದು ಮೋಹನರೂ | ಮಂದನು ಎನ್ನ |ತಂದೆ ನಿನ್ನಡಿಗ್ಹಾಕಿದರೊ ||ಇಂದಿರೆಯರಸ ಗುರು | ಗೋವಿಂದ ವಿಠಲಯ್ಯ |ಛಂದಾಗೀಯೆನ್ನ ಮನ | ಮಂದಿರದೊಳು ನಿಲ್ಲೊ 3
--------------
ಗುರುಗೋವಿಂದವಿಠಲರು
ಘಿಲಿ ಘಿಲಿ ಘಿಲಿಕೆಂದು ಗೆಜ್ಜೆಘಿಲಿ ಘಿಲಿ ಘಿಲಿಕೆಂದು ಗೆಜ್ಜೆ ಪ. ಘಿಲಿ ಘಿಲಿ ಘಿಲಿ ಘಿಲಿಕು ಎನ್ನುತಲೆ ಬಲು ಬಲು ರೌಸದಿ ಬಾಲೆ ರಂಭಾ 1 ಕಿಲಿ ಕಿಲಿ ಕಿಲಿ ಕಿಲಿ ಕಿಂಕಿಣಿ ಜಾಲದಿನಲಿನಲಿದಾಡುತ ಚಲ್ವೆ ರಂಭಾ2 ಝಣ ಝಣರೆನುತಲಿ ಜಾಣಿ ಕುಣಿ ಕುಣಿದಾಡುತ ಕುಂಭಿಣಿ ಮ್ಯಾಲೆರಂಭಾ 3 ಥಳ ಥಳ ಹೊಳೆಯುತ ತಾಳವ ಹಾಕುತ ಅಳಕಿಸಿ ಸೂರ್ಯನ ಬೆಳಕವ ತಾನು 4 ತಕ್ಕಡ ತಕ್ಕಡ ತಾಥಾ ಎನುತಲೆ ಧಿಕ್ಕಿಡಿ ಧಿಕ್ಕಿಡಿ ಧಿಮಕಿಡಿ ಕೃಷ್ಣ 5 ಘಲು ಘಲು ಘಲುಕು ಎನುತ ಚಲ್ವ ರಾಮೇಶನ ಸುಲಭದಿ ಒಲಿಸಿ 6
--------------
ಗಲಗಲಿಅವ್ವನವರು
ಘೋರವಾರಾ ದುಃಖ ಪಾರಾವಾರಾವಿಲ್ಲ ಸಾಧುತಾ ಸಂಸಾರ ಪ ನೀರ ಪೊಕ್ಕು ಬಾರಾ ಬೆನ್ನಿನಲಿ ಧರಾ ಧಾರಿ ನರಹರಿ ಎನಿಸೆ ಅಸಾರ ಸಂಸಾರ ಧಿಕ್ಕಾರವೆಂಬೇನೇ ಸುರಾರಿ ವೃಂದದ ಸಂಹಾರ ಕಾರಣ 1 ದಾನಾ ಬೇಡಿ ಮಾತಾ ಹಾನಿ ಮಾಡಿ ಸೀತಾ ಮಾನಿ ಮಾನಿನಿಯುಳಿಸೆ ಭೂನಾಥ ಶ್ರೀಯುತ ಭವದಾತನೆಂಬೆನೆ ದಾನವರಾಂತಕ ದೀನರಪಾಲಕ 2 ಅರಿವೆಗ¼ಲ್ಲ್ಲಾ ಹರಿಯೇರಬಲ್ಲ ನರಸಿಂಹವಿಠಲೆನಿಸಿ ಅರಿವಲ್ಲ ಭವಗುಲ್ಲ ತಾಳಲ್ಲಿ ಎಂದೇನೆ ಅರಿಭವಮಾರಕ ಸುರಲೋಕದರ್ಶಕ ಸಾಧುತಾ ಸಂಸಾರ 3
--------------
ನರಸಿಂಹವಿಠಲರು
ಙÁ್ಞನವಿಲ್ಲದೆ ಬಾಳೂದೊಂದು ಸಾಧನವೆ ಗಾಣದೆತ್ತಿನಂತೆ ಕಾಣದಿಹ್ಯದೊಂದು ಗುಣವೆ ಧ್ರುವ ತನ್ನ ನÀರಿಯಲಿಲ್ಲ ಬನ್ನವಳಿಯಲಿಲ್ಲ ಕಣ್ಣದೆರೆದು ಖೂನಗಾಣಲಿಲ್ಲ ಸಣ್ಣದೊಡ್ಡರೋಳೆನೆಂದು ತಿಳಿಯಲಿಲ್ಲ ಬಣ್ಣ ಬಣ್ಣದ ಶ್ರಮ ಬಿಡುವದುಚಿತವಲ್ಲ 1 ಶಮದಮಗೊಳ್ಳಲಿಲ್ಲ ಕ್ಷಮೆಯು ಪಡೆಯಲಿಲ್ಲ ಸಮದೃಷ್ಟಿಯಲಿ ಜನವರಿಯಲಿಲ್ಲ ಸಮರಸವಾಗಿ ಸದ್ಛನವ ನೋಡಲಿಲ್ಲ ಭ್ರಮೆ ಅಳಿದು ಸದ್ಗುರುಪಾದಕೆರಗಲಿಲ್ಲ2 ಗುರು ಕೃಪೆ ಇಲ್ಲದೆ ಗುರುತಾಗುವದಲ್ಲ ಗುರುತಿಟ್ಟು ನೋಡಿಕೊಂಡವನೇ ಬಲ್ಲ ಗುರು ಭಾನುಕೋಟಿ ತೇಜನಂಘ್ರಿ ಕಂಡವನೆಬಲ್ಲ ತರಳ ಮಹಿಪತಿ ಸ್ವಾಮಿ ಸುಖ ಸೋರ್ಯಾಡುವದೆಲ್ಲ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಚಕ್ಷು ಶ್ರ್ಯವನೆ ಶೇಷಾ - ಪಾಲಯ ಪ ಕ | ಟಾಕ್ಷದಿ ನಾಗನೆಅ.ಪ. ಅಕ್ಷಾರಿಪದಪಾಂಸು ಧರನೇ | ವಾಯುಪುಚ್ಛಾಶ್ರಯಿಸಿ ಜಗಧಾರನೇ ||ಪಕ್ಷಿ ವಾಹಗೆ ಶಯ್ಯ | ಪಕ್ಷೀಯ ಸಮ ಪೂರ್ವತ್ರ್ಯಕ್ಷನೆ ಸೋಮರ್ಕ | ಅಕ್ಷಿ ಅನಲ ಕಾಯೊ 1 ತಾಮಸ್ಸಾಹಂ ತತ್ವ ಮಾನಿಯೇ || ಕಾಯೊಭೂಮಿ ಧರನೆ ಬಹು ಮಾನಿಯೇ |ಆಮಹ ಪಂಚರಾ | ತ್ರಗಮಗಳ್ ಮಾನಿಕಾಮಿತ ಪಾಲಿಸೊ | ಸ್ವಾಮಿ ನಿಮಗೆ ನಮೊ 2 ವಾಸವ ವಂದಿತ ವಾತಾಶನಾ | ನಿನ್ನಆಸನ ಮಾಡಿಹ ರಮೇಶನಾ ||ಹಾಸಿಗೆ ಎನಿಸುತ್ತ | ಲೇಸು ಸೇವಿಸಿ ಹರಿಸಾಸಿರ ನಾಮನ | ದಾಸನೆಂದೆನಿಸಿದೆ 3 ಮುಕ್ತಿಗೆ ಯೋಗ್ಯರ ಮಾರ್ಗದಾ | ಹರಿಭಕ್ತಿಯ ಪಾಲಿಸೊ ದೀರ್ಘದಾ ||ಸಕ್ತಿಯಾಗಲಿ ಮನ | ಸೂಕ್ತಮೇಯನಲ್ಲಿಉಕ್ತಿ ಇದೊಂದನ | ಇತ್ತು ಪಾಲಿಸು ಶೇಷ 4 ಕಾಳೀಯ ಮಡುವಿಗೆ ಹಾರ್ದನ | ಮತ್ತೆಕಾಳೀಯ ನೆಡೆಯಲಿ ಕುಣಿದನಾ ||ಕಾಳಿರಮಣ ಗುರು | ಗೋವಿಂದ ವಿಠಲನಭಾಳ ತುತಿಪ ಮನ | ಪಾಲಿಸೊ ಶೇಷ ಗುರು 5
--------------
ಗುರುಗೋವಿಂದವಿಠಲರು
ಚಂಚಲಿಸಲು ಕೊಡದಿರು ನೀನೆನ್ನ ಮನಕೆ ಶ್ರೀಹರಿಯೇ ಪ ವಂಚಿಸುತಿಹುದೀ ಮನವು ಸ್ಥಿರಗೊಳಿಸಲರಿಯೇ ಅ.ಪ. ನಿನ್ನ ಪದದಿ ಏನಿರಿಸೆ ಇನ್ನು ಭಜಿಸಬೇಕೆಂದರೆಭಿನ್ನ ದೆಸೆಗೆ ಓಡಿಸದೆ ಅನ್ಯವನ್ನೆ ಚಿಂತಿಸುವುದು 1 ಕಡಲ ಕಡಿಯುವಾಗ ಗಿರಿಯು ನಡುಗದಂತೆ ಗಟ್ಟಿ ನಿಂತುಹಿಡಿದ ತೆರದೊಳಡಲ ಹೊಕ್ಕು ಜಡಿದು ಎನ್ನ ಮನದಿ ನಿಂದು 2 ಸದಾ ಭಜಿಸುವಂತೆ ಮಾಡೋ ಗದುಗು ವೀರನಾರಾಯಣ 3
--------------
ವೀರನಾರಾಯಣ
ಚಂಡನಾಡಿದ ರಘುಕುಲ ನಂದನಾಶ್ರಿತವತ್ಸಲ ಪ ಇಂದುಮುಖಿ ಸೀತಾದೇವಿ ಸುಂದರ ಕರಕಮಲಾರ್ಪಿತಮಾದ ಅ.ಪ. ಸೇವಂತಿ ಪರಿಚಿತಮಾದ ಮಾಲ ವಿರಚಿತ ಮಾದ 1 ಪಂಕಜನೇತ್ರಿಯು ಶಂಕಿಸದಿರಲು ಪೊಗಳಲು ಚಂಪಕ ದರಳಿÀನ 2 ಸುರಜಾಲ ಜಯ ಜಯವೆನ್ನಲು ಧೇನುನಗರ ಶ್ರೀ ರಾಮನು ಮುದದಿ 3
--------------
ಬೇಟೆರಾಯ ದೀಕ್ಷಿತರು
ಚಂಡನಾಡಿದ ಹರಿ ಚಂಡನಾಡಿದ ಪ ಪುಂಡರೀಕ ಕುಸುಮಮಯದ ಅ.ಪ. ಸಾರ ಸೊಬಗಿನಿಂದ ನೋಡಿ ಕರವ ನೀಡಿ ಪಾರಿಜಾತ ಕುಸುಮಮಯದ 1 ಸೊಂಪಿನಿಂದ ಮಂದಹಾಸ ಪೆಂಪುದೋರೆ ಸಿರಿಯಮ್ಮೆ ಗಂಪಿನಿಂದ ರಮೆಯು ಸಹಿತ ಚಂಪಕದ ಕುಸುಮಮಯದ 2 ಪುಲ್ಲನಯನ ಪರಿಮಳವ ಚೆಲ್ವ ಚಂದ್ರ ಕಿರಣದಂತೆ ಚೆಲ್ವನಾಂತ ಸರಸಮಾನ ಮಲ್ಲಿಗೆಯ ಕುಸುಮಮಯದ 3 ದಿವ್ಯ ಮಾಧುಪ ಝೇಂಕೃತಿಯು ಭವ್ಯಮಾಗೆ ದಿವಿಜರೆಲ್ಲ ದಿವ್ಯಮೆಂದು ಪೊಗಳೆ ಸುಖದಿ ನವ್ಯ ಜಾಜಿ ಕುಸುಮಮಯದ 4 ಶ್ರೀನಿವಾಸ ಸಕಲ ಹೃದಯ ಶ್ರೀನಿವಾಸ ಧೇನುನಗರಶ್ರೀನಿವಾಸ ವೆಂಕಟೇಶ ಶ್ರೀನಿವಾಸ ಕುಸುಮಮಯದ 5
--------------
ಬೇಟೆರಾಯ ದೀಕ್ಷಿತರು
ಚಂಡನಾಡಿದನು ಶ್ರೀರಘುವರ ಪ ಪುಂಡರೀಕಾಕ್ಷನು ಭೂಮಿ ಸುತೆಯ ಸಹಿತ ಅ.ಪ ಸರಸಿಜ ದಳದಂತೆ ಮೆರೆಯುವ ಹಸ್ತದಿ ಪರಿಪರಿ ಪುಷ್ಪಗಳ ಪಿಡಿದು ಸಂಭ್ರಮದಿಂದ 1 ವರರತ್ನ ಮುಕ್ತ ಭಾಸುರ ಪುಷ್ಪಮಯವಾದ 2 ಕಾಮ ಕೋಟಿ ಲಾವಣ್ಯ ಕಾಂತೆಯೊಡನೆ ಬಲು ಪ್ರೇಮದಿಂದಲಿ ಗುರುರಾಮವಿಠಲ ತಾನು 3
--------------
ಗುರುರಾಮವಿಠಲ
ಚಂಡನಾಡುವ ಬಾರೆಲೈ ಪ್ರಾಣೇಶ್ವರ ಪ. ಮಲ್ಲೆ ಜಾಜಿ ಸಂಪಿಗೆ ಮೇಣ್ ಮಲ್ಲಿಗೆ ಇರುವಂತಿಗೆ ಚಲ್ವ ಪಾರಿಜಾತದಿಂದ ಚೆಲ್ವನಾಂತು ಮೆರೆಯುತಿರ್ಪ 1 ಪರಿಮಳಾನ್ವಿತ ಪಾಟಲೀ ಸುರಗಿ ಸೇವಂತಿಗೇ ಸುರಭಿಳÀ ಕರಮಾಗಿ ಯೆಸವಪರಿಯನೋಡಿ ನಲಿಯುತಾವು 2 ವಿಮಲಶೇಷಶೈಲವಾಸ ಕಮಲಬಾಂಧವ ಸದೃಶಭಾಸ ಕಮಲನಾಭ ಭಕ್ತಪಾಲ ರಮಣ ನಿನ್ನ ಕಮಲಪಾಣಿಯಿಂ3
--------------
ನಂಜನಗೂಡು ತಿರುಮಲಾಂಬಾ
ಚತುರ್ದಶಿಯ ದಿನ (ಹನುಮಂತನನ್ನು ಕುರಿತು) ರಂಭೆ : ಇವನ್ಯಾರೆ ದೂರದಿ ಬರುವವ ಇವನ್ಯಾರೆಪ. ಇವನ್ಯಾರೆ ಮಹಾಶಿವನಂದದಿ ಮಾ- ಧವನ ಪೆಗಲೊಳಾಂತು ತವಕದಿ ಬರುವವ1 ದಾಡೆದಂತಮಸಗೀಡಿರುವದು ಮಹಾ ಕೋಡಗದಂತೆ ಸಗಾಢದಿ ಬರುವವ2 ಕಡಲೊಡೆಯನು ಮೃದುವಡಿಯಡರಿಸಿ ಬಿಡ ದಡಿಗಡಿಗಾಶ್ರೀತರೊಡಗೂಡಿ ಬರುವವ3 ಊರ್ವಶಿ :ನಾರಿ ಕೇಳೆಲೆಗೆ ವೈಯಾರಿ ನೀ ಮುದದಿ ನಾರಾಯಣನಿಗೀತ ಬಂಟನಾದಾದರಿದಿ ವೀರ ರಾಮವತಾರದಿ ಹಿಂದೆ ಹರಿಯ ಚಾರಕನಾಗಿ ಸೇವೆಯ ಗೈದ ಪರಿಯ ಕ್ರೂರ ದಶಾಸ್ಯನ ಗಾರುಗೆಡಿಸಿ ನೃಪ ವೀರನ ಪೆಗಲಿನೊಳೇರಿಸಿ ದೈತ್ಯರ ಭೂರಿವಧೆಗೆ ತಾ ಸಾರಥಿಯಾದವ ಕಾರುಣೀಕ ಮಹಾವೀರ್ಹನುಮಂತ1 ಆಮೇಲೆ ವೀರಾವೇಶದಿ ವಾರಿಧಿಯನು ರಾಮನಪ್ಪಣೆಯಿಂದ ದಾಟಿದನಿವನು ಭೂಮಿಜೆಗುಂಗುರ ಕೊಟ್ಟ ನಂತರದಿ ಕಾಮುಕರನು ಸದೆಬಡಿದನಾ ಕ್ಷಣದಿ ಹೇಮಖಚಿತ ಲಂಕಾಮಹಾನಗರವ ಹೋಮವ ಗೈದು ಸುತ್ರಾಮಾರಿಗಳ ನಿ- ರ್ನಾಮಿಸಿ ಸೀತೆಗೆ ತಾ ಮಣಿಯುತ ಚೂ- ಡಾಮಣಿ ತಂದ ಮಹಾಮಹಿಮನು ಇವ2 ವಾರಿಮುಖಿ ನೀ ಕೇಳಿದರಿಂದ ಬಂದ ವೀರ ಹನುಮಂತನನೇರಿ ಗೋವಿಂದ ಸ್ವಾರಿಗೆ ಪೊರಟ ಚಾತುರ್ದಶಿ ದಿವಸ ಆರತಿಯನು ಕೈಕೊಳ್ಳುವ ಶ್ರೀನಿವಾಸ ಭೇರಿ ಮೃದಂಗ ಮಹಾರವದಿಂದ ಸ- ರೋರುಹನಾಭ ಮುರಾರಿ ಶರಣರು ದ್ಧಾರಣಗೈಯುವ ಕಾರಣದಿಂದ ಪಾ- ದಾರವಿಂದಗಳ ತೋರಿಸಿ ಕೊಡುವ3 ಬಳಿಕ ಪಲ್ಲಂಕಿ ಏರಿದ ಕಾಣೆ ನಾರಿ ನಲವಿಂದ ವೇದಘೋಷವ ಕೇಳ್ವ ಶೌರಿ ಜಲಜಭವಾದಿ ನಿರ್ಜರರಿಗಸಾಧ್ಯ ಸುಲಭನಾದನು ಭಕ್ತಜನಕಿದು ಚೋದ್ಯ ಸುಲಲಿತ ಮಂಟಪದೊಳೊ ನೆಲಸುತ ನಿ- ಶ್ಚಲಿತಾನಂದ ಮಂಗಲದ ಮಹೋತ್ಸವ ಗಳನೆಲ್ಲವ ಕೈಕೊಳುತಲಿ ಭಕ್ತರ ಸಲಹುವ ನಿರುತದಿ ಮಲಯಜಗಂಧಿನಿ4 ಶ್ರೀಕಾಂತ ಬಳಿಕ ಭಕ್ತರ ಒಡಗೂಡಿ ಏಕಾಂತ ಸೇವೆಯಗೊಂಡ ಕೃಪೆಮಾಡಿ ಸಾಕಾರವಾಗಿ ತೋರುವ ಕಾಣೆ ನಮಗೆ ಬೇಕಾದ ಇಷ್ಟವ ಕೊಡುವ ಭಕ್ತರಿಗೆ ಶ್ರೀಕರ ನಾರಾಯಣ ಶ್ರೀನಿವಾಸ ಕೃ- ಪಾಕರ ವಿಬುಧಾನೇಕಾರ್ಚಿತ ರ- ತ್ನಾಕರಶಯನ ಸುಖಾಕರ ಕೋಟಿ ವಿ- ಚಾರಕ ಭಾಸತ್ರಿಲೋಕಾಧಿಪನಿವ5
--------------
ತುಪಾಕಿ ವೆಂಕಟರಮಣಾಚಾರ್ಯ