ಒಟ್ಟು 1868 ಕಡೆಗಳಲ್ಲಿ , 112 ದಾಸರು , 1531 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಸೆನೀಗೋ ಹೇಸಿಮನವೆ ಕೇಶವನಂಘ್ರಿ ದಾಸನಾಗೊ ಪ ಸಕಲಭೋಗಭಾಗ್ಯ ಬರುವ ಅಖಿಲ ಸುಖದು:ಖಂಗಳೆಲ್ಲ ಭಕುತಿದಾರ್ಯಗರ್ಪಿಸಿ ಹರಿ ಭಕುತಿಯಿಂದಪಮೃತ್ಯು ಗೆಲಿಯೊ 1 ವಂದನೆ ಸ್ತುತಿ ಮಾನ ಮನ್ನಣೆ ಬಂದು ಕುಂದು ನಿಂದೆಯೆಲ್ಲ ಮಂದರಾದ್ರಿಯ ನಿಲಯಗೆಂದಾ ನಂದದಿಂ ಭವಬಂಧ ಗೆಲಿಯೊ 2 ಪೊಡವಿಸುಖಕೆ ಮೋಹಿಸದೆ ನೀ ಕೆಡುವಕಾಯಮೋಹ ತೊಡೆದು ಒಡೆಯ ಶ್ರೀರಾಮನಂಘ್ರಿ ಕಮಲ ಧೃಢದಿ ಭಜಿಸಿ ಮುಕ್ತಿ ಪಿಡಿಯೊ 3
--------------
ರಾಮದಾಸರು
ಆಳ್ವಾರಾಚಾರ್ಯಸ್ತುತಿಗಳು 1. ಶ್ರೀ ಆಂಜನೇಯ ಸ್ತುತಿಗಳು 155 ನಮೋಸ್ತು ಹನುಮಾನ್ ನಮೋಸ್ತು ಹನುಮಾನ್ ನಮೋಸ್ತು ಹನುಮಾನ್ ನಮೋ ನಮೋ ಪ ನಮೋಸ್ತು ಧೃತಿಮಾನ್ ನಮೋಸ್ತು ಧೃತಿಮಾನ್ ನಮೋಸ್ತು ಧೃತಿಮಾನ್ ನಮೋ ನಮೋ ಅ.ಪ ನಮೋಸ್ತು ಶ್ರೀಮಾನ್ ನಮೋಸ್ತು ಧೀಮಾನ್ ನಮೋಸ್ತು ಮರುತಾತ್ಮಜ ಹನುಮಾನ್ ನಮೋಸ್ತು ಬಲವಾನ್ ನಮೋಸ್ತು ವೀರ್ಯವಾನ್ ನಮೋಸ್ತು ಪಂಚಾನನ ರೂಪಾ 1 ನಮೋ ಸಮೀರಾಂಜನಾಕುಮಾರಾ ನಮೋ ದಿವಾಕರ ಭಯಂಕರಾ ವಿಧಿ ವರಪ್ರಸಾದಿತ ನಮೋ ನಮೋ 2 ನಮೋ ನಮೋ ವಾನರೇಂದ್ರ ಸಚಿವಾ ನಮೋ ಜಿತೇಂದ್ರಿಯ ಗದಾಧರಾ ಸನ್ನುತ ನಮೋಸ್ತು ಸಕಲಕಲಾಧರ 3 ವಸುಂಧರಾಪ್ರಿಯ ತನೂಭವಾನ್ಯೇ ವಸುಗಣೋತ್ಸುಕಾ ಶುಭದಾಯಕಾ ಹಸನ್ಮುಖಾ ಶ್ರೀರಘೋತ್ತಮ ಪ್ರಿಯಾ ಯ [ಸಖ] ಖಗೇಂದ್ರಸಮ ಕಪಿನಾಯಕಾ 4 ಜನಕಸುತಾ ಸುದರ್ಶನ ಹರ್ಷಿತ ವನಭಂಗಕರಾಕರಣಧೀರಾ ಲಂಕಾನಗರ ಭಯಂಕರಾ 5 ಸೀತಾರಾಮಾನಂದ ವರ್ಧಕಾ ಲಕ್ಷ್ಮಣ ಪ್ರತಾಪವಾನ್ ದೂತಕಾರ್ಯ ವಿಜಯೋತ್ಸುಕ ವಾನರ ಪತಿಸಂಪೂಜ್ಯ ಪ್ರದೀಪ್ತವಾನ್ 6 ರಾಮಾಲಿಂಗಿತ ದಿವ್ಯಶರೀರಾ ರಾವಣದರ್ಪ ವಿನಾಶಕರಾ ಭೀಮಪರಾಕ್ರಮ ಸಂಜೀವನಧರ ದಾನವತಿಮಿರ ವಿಭಾಕರ 7 ಗಂಭೀರಶರಧಿ ವಿಲಂಘನಧೀರಾ ಮೈನಾಕಾರ್ಚಿತ ಪರಮೋದಾರಾ ವಿಭೀಷಣ ಪ್ರಿಯ ಸಖಾಭಿವಂದಿತ ರಘುಪತಿಸೇವಾ ಧುರಂಧರಾ 8 ತಾರಕ ಮಂತ್ರೋಪಾಸಕ ಹನುಮಾನ್ ಶೂರಭವಿಷ್ಯ ಚತುರ್ಮುಖಾ ಧೀರೋದಾತ್ತ ಕೃಪಾಕರ ಮಾಂಗಿರಿರಂಗ ನೀಕೇತನ ಬಹಿರ್ಮುಖ 9
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಇಕ್ಕೊ ಇಲ್ಲೆ ಹಾನೆ ಸಕಲ ಪಾಲಕ ತಾನೆ ಭಕುತಿ ನಿಜವಾಗಲಿಕೆ ಪ್ರಕಟವಾಗತಾನೆ ಧ್ರುವ ಒಡನೆ ತನ್ನೊಳು ನೋಡಲಿಕ್ಕೆ ಜಯಜಯವೆನ್ನಿ 1 ಪಡೆದುಕೊಳ್ಳಿ ಖೂನವಿಡಿದು ಗುರುಙÁ್ಞನ ಬಿಡದೆ ಭಾಸುತಾನೆ ಒಡಿಯ ನೋಡಿ ನಿಜಸ್ಥಾನ 2 ಹಿಡಿಯಬೇಕು ಬ್ಯಾಗ ಜಡಿದು ಮನಯೋಗ ಕುಡುವಾ ಮಹಿಪತಿ ಗುರು ಸ್ವಾನುಭವಭೋಗ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಕ್ಕೊ ನಮ್ಮಸ್ವಾಮಿ ಸಕಲಾಂತರ್ಯಾಮಿ ಪ್ರಕಟ ಸಹಸ್ರನಾಮಿ ಭಕ್ತಜನ ಪ್ರೇಮಿ ಧ್ರುವ ಒಳಗೆ ನೋಡಿ ನಿಮ್ಮ ಹೊಳೆವ ಪರಬ್ರಹ್ಮ ತಿಳಿಯಲಿಕ್ಕೆ ನೋಡಿವರ್ಮ ಅಳಿಯಬೇಕು ಹಮ್ಮ 1 ಸ್ವಸ್ತ ಮನಮಾಡಿ ವಸ್ತು ಇದೇ ನೋಡಿ ಅಸ್ತವ್ಯಸ್ತ ಬ್ಯಾಡಿ ಸಾಭ್ಯಸ್ತ ನಿಜಗೂಡಿ 2 ಬಿಟ್ಟು ನಿಜಖೂನ ಕೆಟ್ಟು ಹೋಗುದೇನ ಗುಟ್ಟು ಮಹಿಪತಿಗಿದೆ ಮುಟ್ಟಿ ಗುರುಙÁ್ಞನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಟ್ಹಾಂಗಿರಬೇಕು ಮಾಂ ಇಟ್ಹಾಂಗಿರಬೇಕು ಸೃಷ್ಟೀಶ ನಮ್ಮ ಧ್ರುವ ಸಕಳವೆಲ್ಲ ಹರಿ ಸೂತ್ರವು ಇರಲಿಕ್ಕೆ | ವಿಕಳಿತಗೊಂಬುವದ್ಯಾಕೆ ಮಾಂ | ಅಖಿಳ ಭುವನಕೆಲ್ಲ ಸಾಕಿ ಸ - | ಹಕಾರ ನೊಬ್ಬ ಶ್ರೀಪತಿಯ ಮಾಂ | 1 ಯಂತ್ರಜೀವ ತಂತ್ರ ಶಿವ ಇರಲಿಕ್ಕೆ ಸ್ವ | ತಂತ್ರವೆ ನಾನೆಂಬುದ್ಯಾತಕೆ ಮಾಂ | ಚಿತ್ರ ವಿಚಿತ್ರವು ದೋರುವ ಸೂತ್ರವು | ಕರ್ತು ಸದ್ಗುರು ಸುತಂತ್ರವು ಮಾಂ 2 ಅಂತ್ರ ಬಾಹ್ಯ ವ್ಯಾಪಕನಾಗಿರಲಿಕ್ಕೆ | ತಂತ್ರ ಮಂತ್ರಗಳ್ಯಾತಕೆ ಮಾಂ | ಜಂತ್ರ ಮಾಡಿ ಜನ್ಮ ಮರಣದ ತಿರಿಹುವಾ | ಗಂತ್ರವು ಎಂದಿಗೆ ತಿಳಿಯದು ಮಾಂ 3 ಇಟ್ಹಾಂಗ ಇರಬೇಕು ಕೊಟ್ಹಾಂಗ ಕೊಂಡಿನ್ನು | ತುಟ್ಟಿಲೆ ಮಿಸುಕದೆ ಗುಟ್ಟಿಲೆ ಮಾಂ | ಹೊಟ್ಟಿಗಾಗಿ ಅಷ್ಟು ಸಾಯಾಸ | ಬಟ್ಟರೆ ಸಾರುಸದೇ ಅಟ್ಟಿಸುವದು ಮಾಂ 4 ಇಟ್ಹಾಂಗ ಇರೋ ಮಹಿಪತಿ ಸೃಷ್ಟಿಯೊಳಿನ್ನು | ಘಟ್ಟಿಗೊಂಡ ಗುರುಪಾದವು ಮಾಂ | ಮುಟ್ಟಿ ಮುದ್ರಿಸಿ ಕೃಪಾದೃಷ್ಟಿಲೆ ಹೊರೆವನು | ಕೊಟ್ಟು ನಿನಗೆ ಸ್ವಾನುಭವವು ಮಾಂ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದನೆ ಪಾಲಿಸು ಜನ್ಮ ಜನ್ಮಗಳಲಿ ಪ ಮಧುಸೂದನನೆ ನಿನ್ನ ಸ್ಮರಣೆ ದಾಸರ ಸಂಗ ಅ ಪುಣ್ಯಪಾಪ ಜಯಾಪಜಯ ಕೀರ್ತಿ ಅಪಕೀರ್ತಿ ಮನ್ಯುಮೋಹಾಸಕ್ತಿ ಕಾಮಲೋಭಾ ನಿನ್ನಾಧೀನವು ಎನ್ನದಲ್ಲವೆಂದಿಗು ಪ್ರಕೃತಿ ಜನ್ಮ ಗುಣಕಾರ್ಯವೆಂಬುವ ಜ್ಞಾನವೇ ಸತತ 1 ಗುಣಕರ್ಮ ಕಾಲಗಳ ಮನಮಾಡಿ ಜೀವರಿಗೆ ಉಣಿಸುತಿಹೆ ಸುಖದುಃಖ ಘನ ಮಹಿಮನೆ ಗುಣಗಳಭಿಮಾನಿ ಶ್ರೀವನಿತಾರಮಣ ಪ್ರಯೋ ಜನವಿಲ್ಲದಲೆ ಮಾಡಿ ಜನರ ಮೋಹಿಪಿಯೆಂಬೋ 2 ಈಶ ನೀನಾದ ಕಾರಣದಿಂದ ಸುಖದುಃಖ ಲೇಶವಿಲ್ಲವು ಸರ್ವಕಾಲಗಳಲಿ ಕೇಶವ ಜಗನ್ನಾಥ ವಿಠ್ಠಲನೆ ಭಕ್ತರ ಪ್ರ ಯಾಸವಿಲ್ಲದೆ ಕಾಯ್ವಿಯೆಂಬ ಸ್ಮರಣೆ ನಿರುತ 3
--------------
ಜಗನ್ನಾಥದಾಸರು
ಇಂದಿಗೆ ಕಡೆಮಾಡು ಎನ್ನ ಮಂದಬುದ್ದಿ ತಂದೆ ಕೇಳಿ ಮರೆಬಿದ್ದೆ ನಿನ್ನವರ ಸುದ್ದಿ ಪ ಒಪ್ಪಿಡ್ಯವಲಕ್ಕಿಗೆ ಒಪ್ಪಿ ಘನ ಬಡತನವ ಕಪ್ಪುಕುಲದವನಿಂಗೆ ತುಪ್ಪ ಸಕ್ಕರೆಯನ್ನು ಗಪ್ಪತ್ತಿಲುಂಡು ಮುಕ್ತಿ ಸಂಪದ1 ವಿದುರನರ್ಧಾಂಗಿಯ ಸದಮಲದ ತವಪಾದ ಸದನಕೈಯಲು ಪದುಮವದನೆ ಮೈ ಮರೆದು ಕದಳಿಫಲ ಮೇಲ್ಭಾಗ ವದನದಿಕ್ಕಲು ಸವಿದು ಸದುಯಾಂಬುಧೊಲಿದಸಮಪದವಿ ದಯಮಾಡ್ದಿ2 ಅಧಮಾಧಮಾಗಿ ದುರ್ಮದದಿಂದ ಮತಿಗೆಟ್ಟು ಸದಮಲ ಕುಲಪದ್ಧತಿ ವಿಧಿಯನ್ನು ಮರೆತು ಅಧಮಕುಲಜಳಿಗೊಲಿದು ಮದುವ್ಯಾದ ಅಜಮಿಳಗೆ ಒದಗಿ ಬಂದಂತ್ಯಕೆ ನಿಜಪದವಿ ಕರುಣಿಸಿದಿ3 ವರಧರ್ಮ ಹಿತಭಕ್ತ ನರನಿವರ ಲೆಕ್ಕಿಸದೆ ಕರುಣದ್ವಿದುರನ ಮನೆಗೆ ಭರದಿ ಬಂದಿಳಿದಿ ಪರಮಪಾವನ ನಿಮ್ಮ ಚರಣಭಕ್ತ್ಯೊಂದೆನಗೆ ಕರುಣಿಸು ಮತ್ತಾವ ಸಿರಿಯ ನಾನೊಲ್ಲೆ 4 ನಿನ್ನ ಎಂಜಲು ಉಣಿಸಿ ನಿನ್ನವರೊಳಾಡಿಸಿ ನಿನ್ನ ಉನ್ನತ ಧ್ಯಾನವನ್ನೆ ದಯಮಾಡಿ ಮನ್ನಿಸಿ ಸಲಹಯ್ಯ ನಿನ್ನ ದಾಸನೆಂದೆನಿಸಿ ಎನ್ನಯ್ಯ ಶ್ರೀರಾಮ ನಿನ್ಹ್ನೊರತನ್ಯರಿಯೆ 5
--------------
ರಾಮದಾಸರು
ಇಂದಿರಾ ರಮಣ ಗೋವಿಂದನಾ ಜ್ಞೆಯ ಪಡೆದು ಬಂದಿರುವ ದಾಸರಿವರು ಪ ಇಂದು ಧರ್ಮದಿ ಹರಿಯ ಬಾಂಧವರ ಗೃಹ ಸ್ವರ್ಣ ಮಂದಿರವಾಗುವುದೆಂದು ಸಂದೇಶ ಕಳಿಸಿರುವ ಅ.ಪ ಸತ್ವ ರಜ ತಮ ಭೇದವಿಹುದು ದಾನಗಳಲ್ಲಿ ಕರ್ತವ್ಯವೆಂದರಿತು ಭಕ್ತಿಯಿಂದ ಉತ್ತಮೋತ್ತಮ ದೇಶ ಪಾತ್ರ ಕಾಲಗಳರಿತು ಪ್ರತ್ಯುಪಕೃತಿಯ ಗಣಿಸದಿತ್ತ ದಾನವೇ ಶ್ರೇಷ್ಠ 1 ಶ್ರಾವಣದ ಶನಿವಾರ ಶ್ರೀ ವ್ಯಾಸರಾಜರ ಮಾಧವ ದೇಶಕಾಲ ಪಾತ್ರ ಈ ವಿಧದ ಯೋಗವಿನ್ಯಾವ ಜನಗಳಿಗುಂಟು ನೀವು ನೀಡುವ ದಾನ ಕಾವುದಾಪತ್ತಿನಲಿ 2 ಒಂದು ಹಿಡಿಯವಲಕ್ಕಿ ತಂದಿತಾ ಬ್ರಾಹ್ಮಣಗೆ ಎಂದೂ ಕೇಳದ ಸಕಲ ಸೌಭಾಗ್ಯವ ಇಂದು ನೀಡಿರಿ ಮಿತ್ರ ಬಾಂಧವರೆ ದೇವಕಿಯ ಕಂದನ ಪ್ರಸನ್ನತೆಯ ಬಂದು ಪಡೆಯಲಿಬಹುದು 3
--------------
ವಿದ್ಯಾಪ್ರಸನ್ನತೀರ್ಥರು
ಇದು ಏನೆ ಯಶೋದೆ ಇದು ಏನೆ ಯಶೋದೆ ದಧಿಯ ದಾಮೋದರ ಹೆದರಿಕಿಲ್ಲದೆ ಕುಡಿದೋಡಿ ತಾ ಪೋದ ಪ ಕೊಳಲನೂದುತಲೆ ಆಕಳನೆ ಕಾಯುತಲ್ಹೋಗಿ ಕಳಲ ಗಡಿಗೆಸುತ್ತ ಕುಣಿದಾಡುವುದು 1 ವತ್ಸಕಾಯುತ ವನದೊಳಗೆ ಆಡೆಂದರೆ ಕಿಚ್ಚುನುಂಗಿ ಸರ್ಪವ ತುಳಿಯುವುದು 2 ಚೆಂಡನಾಡುತ ತುರುವ್ಹಿಂಡು ಕಾಯೆಂದರೆ ಗಂಡನುಳ್ಳವರ್ಹಿಂದ್ಹಿಂದೆ ತಿರುಗುವುದು 3 ವಛ(ತ್ಸ?) ನಂದದಲಿ ಬಾಯ್ ಹಚ್ಚ ಗೋವಿನ ಕ್ಷೀರ ಅಷ್ಟು ಕುಡಿದನಾಶ್ಚರ್ಯ ನೋಡಮ್ಮ 4 ಇಂದೆನ್ನ ಮನೆಯಲ್ಲೊಂದಿಷ್ಟು ಕ್ಷೀರಗಳಿಲ್ಲ ಗಂಡ(ಅ?) ತಿ ದುಷ್ಟೆನ್ನ ಕೊಲ್ಲುವನಮ್ಮ 5 ಮೌನಗೌರಿಯ ನೋತು ನೀರೊಳಗಿದ್ದೆವೆ ಮಾನಹೀನರ ಮಾಡಿ ಮರವನೇರುವುದು 6 ಬಟ್ಟೆ ನೀಡೆಂದಾಲ್ಪರಿಯಲು ಜೋಡಿಸಿ ನಿಮ್ಹಸ್ತ ಮುಗಿ(ಯಿ) ರೆಂದಾಡುವುದು7 ಬುದ್ಧಿಹೇಳೆಂದರೆ ಮುದ್ದು ಮಾಡುವರೇನೊ ಕದ್ದು ಬಂದರೆ ಕಾಲು ಕಟ್ಟಿ ಹಾಕಮ್ಮ 8 ದಧಿ ಬೆಣ್ಣೆ ಚಂದ್ರನಂತ್ಹೊಕ್ಕು ತಾ ತಿಂದ ನೋಡಮ್ಮ 9 ಕೇರಿ ಮಕ್ಕಳ ನೋಡೊ ಮಹರಾಯ ಬಲರಾಮ ದೊಡ್ಡಮಗನು ಎಲ್ಲೆ ದೊರಕಿದನಮ್ಮ 10 ಮೀಸಲ್ಹಾಕಿದ ಬೆಣ್ಣೆ ನೀ ಸವಿದೀಯೆಂದು ಲೇಸಾಗಿ ಹೇಳೆ ಭೀಮೇಶಕೃಷ್ಣನಿಗೆ11
--------------
ಹರಪನಹಳ್ಳಿಭೀಮವ್ವ
ಇಂದು ಕಂಡೆ ನಾ ಇಂದಿರಾಪತಿ ತಂದೆ ತಾಯಿ ಗೋವಿಂದನ ಬಂಧು ಬಳಗೆನಗೆಂದು ನಾ ನಂದ ಕಂದ ಮುಕುಂದನ 1 ಕಾಮಪೂರಿತ ಕಂಜಲೋಚನ ಸ್ವಾಮಿ ಕಾವನೈಯನ ಸಾಮಗಾಯನ ಪ್ರಿಯನ ಸೋಮಶೇಖರ ಧ್ಯೇಯನ 2 ಸಾನುಕೂಲ ಸಕಲಕ ಸಾಧನ ಭಾನುಕೋಟಿ ಪ್ರಕಾಶನ ಜ್ಞಾನಗಮ್ಯ ವಿನಾಶನ ದೀನ ಮಹಿಪತಿ ಈಶನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಂದು ಕಂಡೆನು ಹರಿಯ | ಭವಹಾರಿಯ ಇಂದು ಕಂಡೆನು ಕಂಬದಿಂದಲಿ ಪ ಬಂದು ದೈತ್ಯನ ಕೊಂದು ಕಂದನಿ- ಗಂದು ಒಲಿದಾನಂದ ಸಾಂದ್ರನ ಇಂದಿರಾ ಮಂದಿರನ ವಂದ್ಯನ ಅ.ಪ. ಎಂದಿನಂದದಿ ಬರುತ | ಮನದಲಿ ಶ್ರೀ ಮು- ಕುಂದ ನಾಮವ ನೆನೆಯುತ ಮುಂದು ಮುಂದಕೆ ನಡೆಯುತ | ಆ- ನಂದದಿ ಹೋಗುತಲಿರೆ ಸುಂದರಿ ಶ್ರೀ ತುಲಸಿಗೊಲಿದು ಬೃಂದೆಯನು ಕರವಿಡಿದು ಪೊಳೆದು ಬಂದು ಗಂಡಕಿಯಿಂದ ಭಕ್ತರ ವೃಂದ ಪೊರೆಯಲು ಪಥದಿ ನಿಂದನ1 ಸುಕೃತ | ಬಂದೊದಗಿತೊ ಶ್ರೀಶನೆನಗೆ ದೊರೆತ | ಪ್ರಭಾವದೆ ದುರಿತ | ರಾಶಿಯು ಇನ್ನು ದಾಸರಾಯರ ಕುಲದಿ ಜನಿಸಿದ ಕೂಸೆನುತ ದೇಸಿಗರ ಸೇವೆಗೆ ಮೀಸಲಾಗಿಸಲೋಸುಗೆನ್ನ ಮ- ಹಾಶಯವ ಲೇಸೆನಿಸಿ ಬಂದವ 2 ವಿಕಳ ತತಿಗೆ ಬಾಧಕ | ಈತನ ನಾಮ ಪ್ರಕಟಿಸಲಿನ್ನು ಸುಖ | ಪಾಲಿಸುವನು ಯುಕುತಿಗೆಂದಿಗು ನಿಲುಕ | ಸುಕೃತರಿಂದ ಭಕುತಿ ಸೇವೆಯನೊಂದೆ ಕೊಳ್ಳುವ ಭಕುತಿ ಮುಕುತಿಗಳನ್ನು ಕೊಡುವ ಸಕಲ ಕಾಲದಿ ನಿಂತು ಸಲಹುವ ಲಕುಮಿಕಾಂತನ ಸರ್ವ ಶಕ್ತನ 3
--------------
ಲಕ್ಷ್ಮೀನಾರಯಣರಾಯರು
ಇಂದು ದಯದಿ ಸಂದರ್ಶನವಿತ್ತೆಯಾ ಇಂದಿರಾಧವಾ ದೇವಾ ಪ ಸುಂದರಾಂಗ ರಂಗ ಮುಂದೆ ಬಂದುನಿಂದೆ ಬೆಳಕಿನೊಳ್ ನಭದೆ ಅ.ಪ ವಿಭವದಿರ ರಥದಿ ಹಿತದಿ ಶುಭದ ಶ್ರೀಭೂನೀಳಾಸಹಿತ ಆಭಯವ ನೀಯುತಾ ನಾಥಾ 1 ಭಕ್ತ ಬೃಂದ ಗೈವ ಸೇವೆಯಾ ಸಕ್ತಿಯಂ ಪಡೆದು ದೃಢದಿ ನಿತ್ಯಗಾರುಡ ಸೂರ್ಯಮಂಡಲ ಡೊಲೊತ್ಸವದಿ2 ಮುದಗೆರೆರಂಗ ವೊರಿದಗೆನಗೆ ಮಹಿಮೆತೋರುತಾ ನಿರುತ ಪೊರೆವುದು ಜಾಜೀನಾಥ 3
--------------
ಶಾಮಶರ್ಮರು
ಇಂದು ಪರಮಾನಂದ|ನಮಗ ಮುಕುಂದನ ಕೃಪೆಯಿಂದಾ| ಕಮಲ ಮಕ| ಭ್ರಮರ ಸಂಗ ಛಂದದಲಾಯಿತು 1 ವೇಗದಿಂದಲಿ ನೋಡೀ|ಸಕಲರು|ಭಾಗವತರು ಕೂಡಿ| ಭಾಗಿರಥೀ ಪಡೆದ ನಾಗಶಾಯಿಯ| ನಿಗ ಮಾಗ ಮಯುಕ್ತದಿ|ಈಗ ಪಾಡಿದೆವೆಂದು 2 ಸಂದಿದ ದೋಷಾದಿಗಳು ಚೂಕಿ| ಕುಂದಿ ತೊಲಗಿದವು ತಂದೆ ಮಹಿಪತಿ| ನಂದನ ಪ್ರಿಯನಾನಂದ ಕರುಣದೀ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇದೇ ಇದೇ ಬ್ರಹ್ಮಮಯ ಸದಮಲಾನಂದೋದಯ ಉದಯಾಸ್ತಮಾನವಿಲ್ಲದೆ ಸದೋದಿತ ಭಾಸುತಿದೆ ಧ್ರುವ ವಸ್ತುವಿದೆ ನಿತ್ಯವಾದ ಅತ್ತ್ಯೋತ್ತಮಾನಂದಬೋಧ ಎತ್ತ ನೋಡಿದರತ್ತ ಹತ್ತಿಲೆ ಸೂಸುತಲ್ಯದೆ 1 ಸತ್ಯಸದಾನಂದೋಬ್ರಹ್ಮ ನಿತ್ಯತೃಪ್ತ ನಿರುಪಮ ಅತ್ತಿತ್ತಲಾಗದೆ ಪೂರ್ಣಮತ್ತವಾಗ್ಯೆನ್ನೊಳಗದೆ 2 ಗುಪಿತ ನಿಜ ಸಕಲಾಗಮ ಪೂರಿತ ಶುಕಾದಿಗಳೂ ಸೇವಿತ 3 ಸರ್ವಸಾಕ್ಷಿ ಸರ್ವಾಧಾರ ಸರ್ವರೊಳು ಸರ್ವೇಶ್ವರ ಸರ್ವಮಿದÀಂ ಖಲುಬ್ರಹ್ಮವೆಂದು ಶ್ರುತಿ ಸಾರುತಿದೆ 4 ಇಹಪರ ಪರಿಪೂರ್ಣ ಮಹಾಗುರು ನಿರಂಜನ ಮಹಿಪತಿ ಬಾಹ್ಯಾಂತ್ರದೊಳು ಸಹಕಾರ ಸಾಕ್ಷಾತ್ಮವಿದೆ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದೇ ನೋಡಿರೋ ಸ್ವಯಂಪಾಕ ಸದಮಲಾನಂದಸುಖ ದ್ರುವ ಶುದ್ಧ ಮಾಡಿ ಹೃದಯಸ್ಥಳ ಇದು ಏಕಾಗ್ರ ನಿರ್ಮಳಾ ಸಾಧ್ಯಗೊಂಡು ಮನಾನುಕೂಲ ಸಿದ್ಧಿ ಇದೇವೇ ಸುಶೀಲಾ 1 ಭಕ್ತಿವೈರಾಗ್ಯೊಲಿಹೂಡಿ ನಿತ್ಯಙÁ್ಞನಾಗ್ನಿ ಒಡಗೂಡಿ ತತ್ವ ಪಂಚಪಾತ್ರೆಯಮಾಡಿ ಸತ್ಯಸಂಕಲ್ಪ ಇದೇ ನೋಡಿ2 ಸಕಲ ಸಾಮುಗ್ರಿಯ ಸಂಚಿತಾ ಪಕ್ವಆಯಿತು ಆಯಿತು ಮುಖ್ಯಮಹಿಪತಿಗಿದೆ ಸ್ವಹಿತಾ ಸುಖದೋರಿದ ಗುರುನಾಥಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು