ಒಟ್ಟು 851 ಕಡೆಗಳಲ್ಲಿ , 98 ದಾಸರು , 647 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಂಗಾಧರ ಸ್ಮರತ್ರಿಪುರಹರ ದೇವಪ ಅಂಗಜಹರ ಭಸಿತಾಂಗ ಮಹಾಲಿಂಗ ತುಂಗಮಹಿಮ ಮೃಗಾಂಶಮೌಳಿ ಶಿವ ಅ.ಪ ಭೂತೇಶ ಸದ್ಯೋಜಾತ ಪ್ರದ್ಯುಮ್ನಸುತೆಯಸುತ ಮತಿಯ ಪ್ರದಾತ ಸದಮಲಮೂರುತಿ ಹೃದಯಸದನದೊಳು ವಿಧಿಪಿತನಂಘ್ರಿಯ ಸ್ಮರಣೆಯ ಕರುಣಿಸು 1 ಪ್ರಮಥಶ್ರೇಷ್ಠರ ಸಂಸೇವಿತ ಸುಮನಸರ ಪ್ರೀತ ಹೈಮವತಿಯ ಪ್ರೀತಾ ರಮಾರಮಣಗೆ ಅತಿಭಕುತಾ ನೀ ಮನೋಭಿಮಾನಿಯೆ ಖ್ಯಾತಾ ತಾಮಸರೊಳು ತಮಸಾಧನ ಮಾಡಿಸಿ ನೀ ಮೋಹಿಪ ದೇವ ಶೂಲಿ ಕಪಾಲಿ 2 ಶುಕದೂರ್ವಾಸಸ್ವರೂಪ ಜೈಗೀಷರೂಪ ವೈಕಾರಿಕಾದಿ ತ್ರೈರೂಪ ಲೋಕನಾಥÀ ಶ್ರೀವೆಂಕಟೇಶನ ಹೃತ್ಕಮಲದಿ ನಲಿಸುವ ಫಾಲನೇತ್ರ ಶಿವ 3
--------------
ಉರಗಾದ್ರಿವಾಸವಿಠಲದಾಸರು
ಗಂಗಾನದಿ ಮಂಗಳಂ ಜಯತು ಭಾಗೀರಥಿಗೆ ಜಯ ಮಂಗಳಂ ಯಮುನೆ ಸರಸ್ವತಿಗೆ ಪ ವಾಮನರೂಪಿಲಿ ದಾನವ ಬೇಡಿ ಪ್ರೇಮದಿಂ ಪಾದವ ಮೇಲಕ್ಕೆ ನೀಡಲು ನೇಮದಿಂ ತಡೆದು ಬ್ರಹ್ಮಾಂಡದಿಂದ ಸುಮ್ಮಾನದಿಂ ಪೊರಟು ಬಂದ ದೇವಿಗೆ 1 ಹರಿಯ ಪಾದದಲಿ ಉದ್ಭವಿಸಿದ ಗಂಗೆಗೆ ಹರನ ಶಿರದಲ್ಲಿ ವಾಸವಾದವಳಿಗೆ ಧರಿಣಿಗೆ ಇಳಿದು ಬಂದ ದೇವಿಗೆ 2 ಭಾಗೀರಥಿ ಎಂಬೊ ಪೆಸರು ಪೊತ್ತು ಅವನ ಭಾಗಿಗಳಿಗೆ ಮೋಕ್ಷವನಿತ್ತು ಹರುಷದಿ ಯೋಗಿಗಳು ಸ್ತುತಿಪ ಗಂಗಾದೇವಿಗೆ 3 ಜಾಹ್ನವಿ ಎನಿಸಿದೆ ಜಗದೊಳಗೆ ಜನರಿಗೆ ಜನನ ಮರಣ ಕೊಡದೆ ಬಿಡಿಸಿ ಜಾಣತನದಿ ಮುಕ್ತಿ ಕೊಡುವವಳಿಗೆ 4 [ದೃಡದಿ ] ಬಲಭಾಗದಿ ಭಗೀರಥಿ ಬರುತಿರೆ ಯೆಡದ ಭಾಗದಲಿಯಮುನೆ ಬರುತಿರಲು ನಡುವೆ ಸರಸ್ವತಿ ತ್ರಿವೇಣಿಯೆಂದೆನಿಸಿ ಪೊಡವಿಗಧಿಕವಾಗಿ ಮೆರೆಯುವ ದೇವಿಗೆ 5 ಬಂದು ಭಾಗೀರಥಿಗೆ ವಂದನೆಗಳ ಮಾಡಿ ತಂದು ಪುಷ್ಪವ ತುಳಸಿ ಕ್ಷೀರವನು ಚಂದದಿಂ ಪೂಜೆಮಾಡಿ ವೇಣಿಮಾಧವಗೆ ಅಂದು ವಂದಿಸಿದವರಿಗೆ 6 ಸೃಷ್ಟಿಯ ಮೇಲುಳ್ಳ ಜನರೆಲ್ಲರು ಬಂದು ಇಷ್ಟಾರ್ಥಗಳನು ಕೊಡುವೆನೆಂದೆನುತಲೆ ಪಾದ ತೋರಿಸುವಳು 7
--------------
ಯದುಗಿರಿಯಮ್ಮ
ಗಂಗೆ ಗೆಲಿಸಮ್ಮ ನಮ್ಮ ಪಂಥವ ಶ್ರೀರಂಗನ ರಾಣಿಯರ ಸೋಲಿಸುವೆ ಪ. ಭಾರ ವಹಿಸಿದ 1 ಸಗರನ ಮಕ್ಕಳ ಅಘದೂರವಾಗಲೆಂದುಭಗೀರಥ ಭಾಳ ತಪಮಾಡಿಭಗೀರಥ ಭಾಳ ತಪಮಾಡಲು ವ್ಯಾಜ್ಯದಿಜಗವ ನುದ್ಧರಿಸಿದ ಜಾಹ್ನವಿ2 ನಾಗಶಯನನ ಮಗಳು ಸಾಗರನ ನಿಜರಾಣಿಈಗ ನೀ ನಮ್ಮ ಗೆಲಿಸೆಂದುಈಗ ನೀ ನಮ್ಮ ಗೆಲಿಸೆಂದು ಸುಭದ್ರೆಬೇಗನೆ ಕೈಯ ಮುಗಿದಳು3 ಪ್ರಯಾಗ ರಾಜನ ಮುಂದೆ ವೇಗದಿ ಹರಿದಳುಹೋಗಿ ಸರಸ್ವತಿಯ ನೆರೆದಳುಹೋಗಿ ಸರಸ್ವತಿಯ ನೆರೆದು ಯಮುನೆಯ ಸೇರಿಸಾಗಿಹಳು ಕಾಶಿಪುರಕಾಗ 4 ಕಂಚಿ ಕಾಶಿ ಮುಂದೆ ಪಂಚಗಂಗೆಯೆನಿಸಿಅಂಚು ಅಂಚಿಗೆ ಮೆರೆಯೋಳುಅಂಚು ಅಂಚಿಗೆ ಮೆರೆಯುವರಾಮೇಶನ ಪಂಚಪ್ರಾಣಳ ಬಲಗೊಂಬೆ 5
--------------
ಗಲಗಲಿಅವ್ವನವರು
ಗಂಗೆ ನಿನಗೋಸ್ಕರ ನಾನು ನಮೋ ಎಂಬೆತುಂಗೆ ಎನ್ನ ಪಂಥವ ಕೇಳಿ ಗೆಲಿಸೆಂಬೆ ಪ. ಅಚ್ಯುತನ ನಖತಾಕಿ ಬಿಚ್ಚಿ ಬ್ರಹ್ಮಾಂಡವುಸ್ವಚ್ಚಜಲವಾಗಸುರಿದಾವುಸ್ವಚ್ಚ ಜಲವಾಗ ಸುರಿದಾವುಅಜನೋಡಿ ಉತ್ಸಾಹದಿ ನುತಿಸಿದ1 ತಂದೆಯ ನಖದಿಂದ ಬಂದ ಜಲಕಂಡು ಮಂದಜಾಸನು ಸ್ತುತಿಸಿದಮಂದಜಾಸನು ಸ್ತುತಿಸಿದ ಸರಸ್ವತಿಬಂದು ಆರುತಿಯ ಬೆಳಗೋಳು 2 ತುಂಬಿ ಭೂಮಂಡಲ ಪತಿಯ ಚರಣವಭೂಮಂಡಲ ಪತಿಯ ಚರಣವ ತೊಳೆಯಲುಕೊಂಡಾಡಿ ಹರನು ಧರಿಸಿದ 3 ರೇಣು ರೇಣು ಹರಿದಿಲ್ಲಿ ಬಂತೆಂದುಸುರರು ಸಂತೋಷಪಡುತಲಿ4 ವಿಷ್ಣುಪದಿಯೆಂದು ಇಟ್ಟರು ನಾಮವಧಿಟ್ಟ ರಾಮೇಶನ ಮಗಳಿಗೆ ಧಿಟ್ಟ ರಾಮೇಶನ ಮಗಳಿಗೆ ಧೃವರಾಯಎಷ್ಟು ಭಕ್ತಿಂದ ಸ್ತುತಿಸಿದ 5
--------------
ಗಲಗಲಿಅವ್ವನವರು
ಗಜಚರ್ಮಾಂಬರ ಗಂಗಾಧರನೇಗಜಮುಖಜನಕ ಗೌರಿಯ ರಮಣ ಓ ತ್ರಿಜಗದೊಂದಿತನೆ ಸಾಂಬಶಿವ ಮಹಾದೇವ ಪಫಾಲನೇತ್ರನೆ ರುಂಡಮಾಲಾಧರನೆನೀಲಕಂಠನೇ ನಿತ್ಯಾನಂದ ಓಕಾಲಾಂತಕನೆ ಸಾಂಬಶಿವ ಮಹಾದೇವ 1ಮದನ ಹರನೆ ಶಿವ ಕಂಬುಕಂಧರನೆಪದ್ಮಾಕ್ಷನಯನ ಪಾರ್ವತಿ ರಮಣ ಓಬುಧಜನಪ್ರಿಯನೆ ಸಾಂಬಶಿವ ಮಹಾದೇವ 2ಭೂತಿಭೂಷಣನೆ ಸರ್ವ ಭೂತಾತ್ಮಕಪಾತಕಹರ ಪಾರ್ವತಿ ರಮಣ ಓಅನಾಥ ರಕ್ಷನೆ ಸಾಂಬಶಿವ ಮಹಾದೇವ 3ಇಂದ್ರವಂದಿತ ಭುಜಗೇಂದ್ರ ಭೂಷಣನೆತಂದೆ ಏಳುಗಿರಿ ವೆಂಕಟಸಖನೇ ಓಚಂದ್ರಶೇಖರ ಸಾಂಬಶಿವ ಮಹಾದೇವ 4
--------------
ತಿಮ್ಮಪ್ಪದಾಸರು
ಗಜಾನನಾ ಗಜಾನನಾ ಸ್ವಾಮಿ ನಿನ್ನವನಾ ಪಾರ್ವತಿ ನಂದನಪೂರ್ವ ಚರಿತ ಘನ ನಿರ್ವಿಘ್ನ ದಾಯಕ ಗಜಾನನಾ ಮೂಷಕವಾಹನ ದೋಷಕರಿಪುಕುಲ ನಾಶಿಕ ವಿಗ್ರಹಗಜಾನನಾ ಮದನಾರಿ ಮನೋಭವ ರದಸಾಮಲೇಕದಂತದಯ ಸದನಾ ಲಂಬೊದರ ಗಜಾನನಾ ಕರುಣಾಪೂರಿತ ಸರ್ವಾ ಭರಣಾ ಭೂಷಿತ ಭಯ ಹರಣಾ ತ್ರಿ ಜಗನುತ ಗಜಾನನಾ ಹೊಂದಿದ ಶರಣರಿಗೆಂದೆಂದು ವಿದ್ಯಗಳ ತಂದಿದಿರಿಡುತಿಹ ಗಜಾನನಾ ತಂದೆ ಮಹಿಪತಿ ನಂದÀನ ಸಾರಥಿ ಇಂದೆನ್ನನುದ್ಧರಿಸು ಗಜಾನನಾ.
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗಣಪತೇ - ಪಾಹಿ - ಗಣಪತೇ ಪ ಗಣಪತಿ ಪಾರ್ವತಿ ತನಯಾ | ಭಕ್ತಜನಕೆ ಕೊಡುವುದು ವಿನಯಾ | ಆಹಮನದೊಳು ನೀನಿಂತು | ಅನುಗಾಲ ಹರಿಗುಣಗಣಗಳ ಪೊಗಳುವ | ಮನವ ನೀ ಪಾಲಿಸೋ ಅ.ಪ. ಬಾಲೇಂದು ಮೌಳಿಯ ತನುಜ | ವರಶೈಲಜೆ ಶರೀರ ಮಲಜಾ | ಪುಟ್ಟಿಶ್ರೀಲೋಲ ಕೃಷ್ಣ ರುಕ್ಮಿಣಿಜ | ನೆಂದುಪೇಳುವರು ಮಾರನನುಜಾ | ಆಹಕಾಳಗದೊಳು ಬಲು | ಅಸುರರ ಅಸುಗಳಕೀಲಿಸುತಲಿ ಬಹು | ಭೂಭಾರ ನಿಳುಹಿದ 1 ಸುಜ್ಞ ಭಕ್ತಾಧೀನ ಗಣಪಾ | ಬಂದವಿಘ್ನಗಳ್ಹರಿಸುವೆ ಭೂಪ | ನೀನುಭಗ್ನ ಗೈಸೋ ಮನಸ್ತಾಪಾ | ಇಂಗಿತಜ್ಞ ಬೇಡುವೆ ತವ ಕೃಪಾ | ಆಹಮಗ್ನ ಮಾಡಿಸು ಮನ | ಮೊದಲಾದ ಕರುಣವಯಜ್ಞೇಶ ಶ್ರೀಹರಿ | ಪದದ್ವಯ ವನಜದಿ 2 ಸಿಂಧುರಾಸ್ಯನೆ ಬಹು ಗುಣ | ಪೂರ್ಣಮಂದರೋದ್ಧಾರಿಯೆ ಕರುಣ | ಪಾತ್ರನೆಂದು ಹೊಕ್ಕನೊ ತವ ಚರಣ | ಕಂದನೆಂದು ಕಾಯೆಲೊ ಬಹು ಕರುಣ | ಆಹನಂದ ನಂದನ ಗುರು | ಗೋವಿಂದ ವಿಠಲನಬಂಧುರ ಚರಣವಾ | ನಂದದಿ ತುತಿಪಂತೆ 3
--------------
ಗುರುಗೋವಿಂದವಿಠಲರು
ಗಣೇಶ ಪ್ರಾರ್ಥನೆ ಕರಿವರದನೆ ನಿನ್ನ ವರಗಳ ಬೇಡುವೆ ವರ ಮತಿ ಪಾಲಿಸೆನ್ನ ಕಾಪಾಡು ಪ. ಅಂಬಾಸುತ ನಿನ್ನ ನಂಬಿದವರಿಗಿನ್ನು ಸಂಭ್ರಮ ದೊರಕದಿಹುದೆ ಪಾದ ಶ್ವೇತಾಂಬರೆ ಮೊಮ್ಮಗನೆ ಕಂಬುಕಂಠಸುತನೆ ಸಂಭ್ರಮದಲಿ ಬಾ 1 ಕಾಲ್ಗೆಜ್ಜೆ ಪೈಝಣ ಘಲ್ಲುಘಿಲ್ಲೆನುತಲಿ ನಿಷ್ಕಾಮದನೆ ಬಾ ನಗುತ ಪ್ರೇಮದ ಪಾರ್ವತಿ ಸುತ ನೀನಲ್ಲವೆ ಕಾಮಿಸಿ ನಿನ ಪದ ಭ್ರಮಿಸಿ ಪ್ರಾರ್ಧಿಸುವೆ 2 ಕಾಯಿಸಿ ಹಾಲುತುಪ್ಪ ಸಕ್ಕರೆಯೀವೆನೊ ಮೂಷಕವಾಹನನೆ ಸೋಸಿಲಿ ಚಿಗುಳಿ ತಂಬಿಟ್ಟು ತೆಂಗಿನಕಾಯಿ ಶ್ರೀಶ ಶ್ರೀಶ್ರೀನಿವಾಸ ಭಕ್ತನಿಗರ್ಪಿಸುವೆ 3
--------------
ಸರಸ್ವತಿ ಬಾಯಿ
ಗಣೇಶ ಪ್ರಾರ್ಥನೆ ನಮ್ಮಮ್ಮ ಶಾರದೆ ಉಮಾ ಮಹೇಶ್ವರಿನಿಮ್ಮೊಳಗಿಹನ್ಯಾರಮ್ಮ ಪ ಕಮ್ಮಗೋಲನ ವೈರಿಸುತನಾದ ಸೊಂಡಿಲಹೆಮ್ಮೈಯ್ಯ ಗಣನಾಥನೆ ಅಮ್ಮಯ್ಯ ಅ ಮೋರೆ ಕಪ್ಪಿನ ಭಾವ ಮೊರದಗಲ ಕಿವಿಯುಳ್ಳಕೋರೆ ದಾಡೆಯವನ್ಯಾರಮ್ಮಮೂರು ಕಣ್ಣನ ಸುತ ಮುರಿದಿಟ್ಟ ಚಂದ್ರನಧೀರ ತಾ ಗಣನಾಥನೆ ಅಮ್ಮಯ್ಯ 1 ಉಟ್ಟ ದಟ್ಟಿಯು ಮತ್ತೆ ಬಿಗಿದುಟ್ಟ ಚಲ್ಲಣದದಿಟ್ಟ ತಾನಿವನ್ಯಾರಮ್ಮಪಟ್ಟದ ರಾಣಿ ಪಾರ್ವತಿಯ ಕುಮಾರಹೊಟ್ಟೆಯ ಗಣನಾಥನೆ ಅಮ್ಮಯ್ಯ2 ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲಭಾಷಿಗನಿವನ್ಯಾರಮ್ಮಲೇಸಾಗಿ ಸುಜನರ ಸಲಹುವ ನೆಲೆಯಾದಿಕೇಶವನ ದಾಸ ಕಾಣೆ ಅಮ್ಮಯ್ಯ 3
--------------
ಕನಕದಾಸ
ಗಣೇಶ ಸ್ತೋತ್ರ ಗಣಪತೇ ಎನ್ನ ಪಾಲಿಸೋ - ಗಂಭೀರಾ ಪ ಪಾರ್ವತಿ ನಂದನ ಸುಂದರ ವದನಶರ್ವಾದಿ ಸುರವಂದ್ಯ ಶಿರಬಾಗುವೆನು 1 ಮೋದ ಭಕುತರಿಗಿತ್ತುಮಾಧವನಲಿ ಮನ ಸದಾ ನಿಲಿಸು ನೀ 2 ಪಂಕಜ ನಯನ ವೆಂಕಟ ವಿಠಲನಕಿಂಕಿರನೆನಿಸೆನ್ನ ಶಂಕರ ತನಯನೆ 3
--------------
ವೆಂಕಟೇಶವಿಟ್ಠಲ
ಗರುಡನೇರುವ ಕೃಷ್ಣ ಹೊರಡುವನೀಗ ಸಖಿನೋಡೋಣ ನಾವೆಲ್ಲ ಈಗ ಬಾರೆ ನೀರೆ ಪ. ಗಗನದಿ ಬೆಳಗುವ ಹಗಲು ಬತ್ತಿಗÀಳೆಷ್ಟುಹಗಲು ಬತ್ತಿಗಳೆಷ್ಟು ಮುಗಿಲಿಗೆ ಮುಟ್ಟೋಬಿರಸೆಷ್ಟ ಬಹುಶ್ರೇಷ್ಠಮುಟ್ಟೋ ಮಿಂಚಿನಂತೆ ಹೊಡೆವೊ ಬಾಣಗಳು ಕಡಿಯಿಲ್ಲ ನಲ್ಲೆ 1 ಎಡಬಲ ಭಾವೆ ರುಕ್ಮಿಣಿ ಮಡದಿಯರೊಪ್ಪುವ ಮಡದಿಯ ಹಿಂದೊಪ್ಪುವ ಬೆಡಗು ವರ್ಣಿಸಲು ವಶವಲ್ಲ ನಲ್ಲೆಬೆಡಗು ವರ್ಣಿಸುವೊ ಅವರಾರೆ ಚತುರ್ಮುಖನು ಖಡಿಸೋತು ಕೈಯ ಮುಗಿದಾನೆ ತಾನೆ2 ಕೃಷ್ಣನರಸಿಯರುಉಟ್ಟ ಪಟ್ಟಾವಳಿಯ ಬೆಳಕು ಅಷ್ಟು ಇಷ್ಟೆಂಬ ಮಿತಿ ಇಲ್ಲ ನಲ್ಲೆ ಅಷ್ಟು ಇಷ್ಟೆಂಬ ಮಿತಿ ಇಲ್ಲ ಸೂರ್ಯನಾಚಿಬಿಟ್ಹೋದ ತಮ್ಮ ಮನೆತನಕ ಸುಜನಕೆ 3 ಮದನ ತಾ ನಾಚಿ ಮನೆಗ್ಹೋದ ಅಗಾಧ4 ಕಡಗ ಸರಪಳಿ ಗೆಜ್ಜಿ ನಡುವಿನೊಡ್ಯಾಣ ಪದಕ ನಡುವಿನೊಡ್ಯಾಣ ಪದಕ ಇಡವೊಕುಂಡಲದ ಮುಕುಟವೆ ಚಂದವುಮುಕುಟದ ಕಾಂತಿಗೆ ಅಡಗಿವೆ ತಾರೆ ಗಗನದಿ ಮುದದಿ 5 ಫುಲ್ಲ ನಯನೆಯರ ಮುತ್ತಿನ ಝಲ್ಲೆ ವಸ್ತದ ಬೆಳಕುಎಲ್ಲೆಲ್ಲು ಇಲ್ಲ ಜಗದೊಳು ಕೇಳುಎಲ್ಲೆಲ್ಲೂ ಇಲ್ಲ ಜಗದೊಳು ಚಂದ್ರನಾಚಿಖಡಿ ಸೋತು ಕೈಯ ಮುಗಿದಾನೆÉ ತಾನೆ6 ಕೌಸ್ತುಭ ವೈಜಯಂತಿ ಹಾರ ಶೋಭಿಸುವ ಬೆಳಕೆಷ್ಟು ಬಹುಶ್ರೇಷ್ಠ7 ಮಂದಗಮನೆಯರು ಹರಿಯ ಗಂಧ ಕಸ್ತೂರಿ ಸೊಬಗುಛಂದ ವರ್ಣಿಸುವವರ್ಯಾರ ತೋರೆಛಂದ ವರ್ಣಿಸುವ ಅವರ್ಯಾರೆ ಚತುರ್ಮುಖನ ಛಂದಾಗಿ ನಾಚಿ ಕೈ ಮುಗಿದ ಸುಕರ 8 ನಲ್ಲೆಯರು ರಮೆ ಅರಸು ಮಲ್ಲಿಗೆ ಮುಡಿದ ಚಂದ ಮಲ್ಲಿಗೆ ಮುಡಿದ ಚಂದ ಎಲ್ಲೆಲ್ಲೂ ಇಲ್ಲಧsರೆ ಮ್ಯಾಲೆ ಎಲ್ಲೆಲ್ಲೂ ಇಲ್ಲ ಧರೆ ಮ್ಯಾಲೆ ಸರಸ್ವತಿಯುಚಲ್ವಿ ತಾ ನಾಚಿ ನಡೆದಾಳೆ ಕೇಳೆ 9
--------------
ಗಲಗಲಿಅವ್ವನವರು
ಗಿರಿರಾಜಕುಮಾರಿ ದೇವಿಪರಮ ಮಂಗಳಗೌರಿಪರಮ ಪಾವನೆ ಶ್ರೀಹರಿ ಸೋದರಿಸುರರಿಪು ಮಧುಕೈಟಭ ಸಂಹಾರಿಶ್ರೀಕರಿ ಗೌರಿ ಹಸೆಗೇಳು ಹಸೆಗೇಳು 1 ಕುಂಭಸಂಭವವಿನುತೆ ದೇವೀಶಾಂಭವಿ ಶುಭಚರಿತೆಜಂಭಭೇದಿ ಮುಖ ಸುರವರಪೂಜಿತೆಕಂಬುಕಂಠಿ ಶುಭಗುಣಗಣ ಶೋಭಿತೆಲೋಕೈಕಮಾತೆಹಸೆ2 ಸರಸಿಜದಳನಯನೆ ದೇವಿಸರಸಕುಂದರದನೆಸರ್ವಮಂಗಳೆ ಸರ್ವಾಭರಣೆಸುರಮುನಿ ಪರಿಭಾವಿತೆ ಶುಭಚರಣೆಕರಿರಾಜಗಮನೆ ಹಸೆ 3 ನಿರ್ಜರ ಪರಿವಾರೆಮಣಿಮಯಹಾರೆ ಹಸೆ4 ಪನ್ನಗನಾಭವೇಣಿ ದೇವಿಸುನ್ನತೆ ರುದ್ರಾಣಿ ಕನ್ನಡಿಗದಪಿನ ಶಿವೆ ಶರ್ವಾಣಿಲೋಕೈಕ ಜನನಿ ಹಸೆ 5 ಶುಭ ಲೀಲೆಮೃಗಮದ ತಿಲಕ ವಿರಾಜಿತೆ ಪಾಲೆಕುಂಕುಮನಿಟಿಲೆ ಹಸೆ 6 ಪಂಕಜ ಸಮಪಾಣಿ ಶ್ರೀ ಹರಿ-ಣಾಂಕವದನೆ ವಾಣಿಅಂಕಿತಮಣಿಗಣ ಭೂಷಣ ಭೂಷಣಿಶಂಕರೀ ಕೆಳದಿಪುರವಾಸಿನಿಪಾರ್ವತಿ ಕಲ್ಯಾಣಿ ಹಸೆ 7
--------------
ಕೆಳದಿ ವೆಂಕಣ್ಣ ಕವಿ
ಗಿರಿರಾಜತನೂಜಾತೆವೇದ ವಿಖ್ಯಾತೆಪರಮಂಗಳದಾತೆ ಪದ್ಮಜಮುಖಿ ಸುರಗಣ ಪರಿಪೂಜಿತೆಶಂಕರಪ್ರೀತೆಧುರದಿ ಮಧುಕೈಟಭರ ವಧಿಸಿ ವಿ-ಸ್ತರದ ಜಲದೊಳು ಸ್ಥಿರಮೆನಲು ಭಾ-ಸುರ ಧರಿತ್ರಿಯ ನಿಲಿಸಿ ಸರ್ವಾಮರರಪೊರೆದಮರೇಂದ್ರಸನ್ನುತೆಲೋಕೈಕಮಾತೆ 1 ನಾರದಗಾನಲೋಲೆಶ್ರೀಚಕ್ರಸಂಚಾರಿಣಿ ಶುಭಲೀಲೆದಿವ್ಯಮೌಕ್ತಿಕಹಾರೆ ಕುಂಕುಮನಿಟಿಲೆಮುಕುರಕಪೋಲೆಧೀರಸುರಪತಿಮುಖ್ಯಸುರಪರಿವಾರ ಜಯವೆಂದಾರುತಿರೆ ಜುಝೂರ (?) ಮಹಿಷಾಸುರನ ಮರ್ಧಿನಿಮೂರು ಲೋಕವ ಪೊರೆವ ಮಂಗಲೆಕಸ್ತೂರಿಫಾಲೆ 2 ಎಸಳುಗಂಗಳ ನೀರೆಪರಾತ್ಪರೆಮಿಸುಪ ಕಂಕಣಹಾರೆಬಂದುಗೆಯ ಹೂವಿನಂತೆಸೆವಸುಶೋಣಾಧರೆಬಿಸಜಬಾಣನ ಪೊಸಮಸೆಯ ಕೂರಸಿಯೆನಲು ಮಿಸುಮಿಸುಪ ಕಂಗಡೆಎಸವ ಪೊಸವೆಳಗಿಂದ ದೆಸೆಗಳವಿಸರವನು ಪಸರಿಸುವ ಶ್ರೀಕರೇಮೋಹನಾಕಾರೇ3 ಸುಲಲಿತ ಮಧುರವಾಣಿಮೋಹನಕರಜಲರುಹ ಸದೃಶಪಾಣಿಮಂಗಲಸೂತ್ರೋ-ಜ್ವಲೆ ಹರಿ ನೀಲವೇಣಿಸಿಂಹವಾಹಿನಿನಳನಳಿಪ ನಳಿತೋಳ ಥಳ ಥಳಥಳಿಸುವಳಿಕುಂತಳದದರಸಮಗಳದತಿಲಸುಮನಾಸಿಕದಅರಗಿಳಿನುಡಿಯರುದ್ರಾಣಿ ಗುಣಮಣಿಪರಮಕಲ್ಯಾಣಿ4 ಸರಸಿಜದಳನಯನೆಸಾಮಜಯಾನೆ ಸರಸಮಂಗಲಸದನೆಶಂಕರಿಪೂರ್ಣೆಶರದಿಂದುನಿಭವದನೆಕೋಕಿಲಗಾನೆಪರಮಪಾವನತರ ಸು-ವರದಾನದಿಯ ತೀರದಿ ಮೆರವ ಕೆಳದಿಯಪುರದ ರಾಮೇಶ್ವರನ ವಲ್ಲಭೆಯೆನಿಸಿ ಭ-ಕ್ತರ ಪೊರೆವ ಪಾರ್ವತಿಕಲಹಂಸಗಮನೆ ಪರಮರುದ್ರಾಣಿ5
--------------
ಕೆಳದಿ ವೆಂಕಣ್ಣ ಕವಿ
ಗುಣಾತೀತ ಸದ್ಗುರು ಗಣನಾಥ ಘನಸುಖದಾಯಕ ಸದೋದಿತ ಧ್ರುವ ಅನುದಿನ ಮಾಡುವೆ ಮನೋಹರ ಅಣುರೇಣುದೊಳು ನೀ ಸಾಕ್ಷಾತ್ಕಾರ ಮುನಿಜನರಿಗಾಗುವಿ ಸಹಕಾರ ನೀನಹುದೋಭಕ್ತರ ವಿಘ್ನಹರ 1 ನಿಮ್ಮ ಭೋಧಗುಣವೆ ಸರಸ್ವತಿ ಸಮ್ಯಜ್ಞಾನ ಬೀರುವ ನಿಜಸ್ಥಿತಿ ಬ್ರಹ್ಮಾದಿಗಳೊಂದಿತ ನಿಜಖ್ಯಾತಿ ಬ್ರಹ್ಮಾನಂದ ದೋರುವ ಫಲಶ್ರುತಿ 2 ಬೇಡಿಕೊಂಬೆ ನಿಮಗೆ ಅನುದಿನ ಕುಡುವವರಿಗೆ ನೀ ನಿಧಾನ ಮೂಢ ಮಹಿಪತಿ ಒಡೆಯ ನೀ ಪೂರ್ಣ ಮಾಡುತಿಹ ನಿತ್ಯವು ನಾ ನಮನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುರುಸುಶೀಲೇಂದ್ರ | ಚರಣವಾರಿಜ ಯುಗ್ಮ ಸ್ಮರಿಸುವ ನರರು ಶ್ರೀಹರಿದಾಸರು ಪ ಹರಿವರ ಸುಮಚಾಬ್ಧಿ | ಹರಿಣಾಂಕರೆನಿಸಿದ ವರಸುವೃತೀಂದ್ರರ ತೀರ್ಥರ ಕರಕಮಲಜ ಅ.ಪ ಮಾಸ ತ್ರಯದಿ ಸಡಗರದಲಿ ಮಹ ಸಭೆ ನಿರ್ಮಿಸಿ ಪೊಡವಿಯೊಳಿದ್ದ ಭೂಸರರಾಜ್ಞ ಪತ್ರ ಬರಮಾಡಿ ವಿದ್ವಾಂಸರ ಒಡಗೂಡಿ | ಮಧ್ವಾಗಮನವನು ನೋಡಿ ಬೆಲೆಯುಳ್ಳವೆಗ್ಗಳ ಒಡವೆ ಉಡುಪಗಳನು ಕರುಣಿಸಿ ಮೃಷ್ಟಾನ್ನ ದ್ವಿಜರಿಗೆ ಕಡು ಸುಪ್ರೇಮದಿ ಸಲಿಸಿ | ಮುದ ಬಡಿಸಿ ಜಡಕುಮಾಯ್ಗಳ | ಗಡಣ ಜಡಧಿಗೆ ವಡೆಯ ತಾನೆನಿಸಿ ಕ್ರೋಢ ಜಾಸ್ಥಿತ | ಒಡೆಯ ಶ್ರೀಗುರು ರಾಘವೇಂದ್ರರ ಅಡಿಗಳಾಬ್ಜಕಾ ರಡಿಯಂತೊಪ್ಪುತ | ಬಿಡದೆ ಸಂತತ ಧೃಢದಿ ಸೇವಿಸಿ ಜಡಜ ಜಾಂಡದಿ ಮೆರೆದ ಅಸ್ಮದ್ 1 ತರಣಿ ಕುಲೇಂದ್ರನ ಕರುಣವೆಷ್ಟಿವರೊಳು ಅರುಹಲಾರೆ ವರಕಾಪ್ಯಾಸನ ಪುರಕೆ ಎರಡಾರು ಯತಿಗಳ ವತಿಯಿಂದ ತಮ್ಮಯ ಶಿಷ್ಯ ತತಿಯಿಂದ ಬಹುವಿಧ ಬಿರುದಾವಳಿಯಿಂದ ತೆರಳಿ ಶಶಿರವಿವರ ಸುವಾದ್ಯಧ್ವಾನ ಮೊಳಗಿಸುತ ‌ಘನ ಭಕ್ತಿ ಪರವಶರಾಗಿ ಸುರಚಿರ ಕನಕಮಣಿ ಧನ ತನುಮನ ತ್ವರಿತ ತೃಣ ಬಗೆಯ ದೇವಕಿ ತರಳ ರುಕ್ಮಿಣಿ ವರ ಮುರಾಂತಕÀ ಚರಣಗರ್ಪಿಸುತ | ಆನಂದಪಡುತ ಸರ್ವಮುನಿ ಜನಗಳಿಗೆ ಬಲು ಉಪಚರಿಸಿ | ಮನ್ನಣೆ ಧರಿಸಿ ಹರುಷದಿ ವರ ಸುಧೀಂದ್ರರ ಕರಜರನು ನೆರೆಸ್ಥಾಪಿಸಿ ಆಶ್ಚÀರ್ಯ ಚರಿತ 2 ಪತಿ ಶೃತಿ ಶಾಸ್ತ್ರಾರ್ಥ ಚತುರ ತನದಿ ಪಡೆದು ವಿತತ ಮಹಿಮನಾದ ಪತಿತ ಪಾವನ ಶಾಮಸುಂದರನ ಸ್ತುತಿಸುತಲಯ ಚಿಂತನೆ ಗೈಯುತ ಶ್ರೀಯುತ ಸಂಸ್ಥಾನಮತಿ ವಿಶಾರದರಾದವರ ಸುವೃತೀಂದ್ರ ತೀರ್ಥರಿಗೆ ಹಿತದಿಂದ ಒಪ್ಪಿಸಿ | ಯತಿ ಧೀರೇಂದ್ರರ ಚಾರುಸ್ಥಳದೊಳಗೆ ತನುವಿತ್ತು | ಹರಿಪುರಪಥವ ಪಿಡಿದೈದಿದರು ಚನ್ನಾಗಿ | ಸೇವಿಪ ಜನರಿಗೆ ಅತಿದಯದಿ ಮನೋರಥವ ನೀಡುತ ಸತತ ಮಾಣದೆ ಪರಮ ಭಕುತಿಲಿ ಪೃಥ್ವಿ ಸುರಕರ ಶತಪತ್ರಗಳಿಂದ ನುತಿಸಿಕೊಳುತಲರ್ಚನೆಗೊಂಬ 3
--------------
ಶಾಮಸುಂದರ ವಿಠಲ