ಒಟ್ಟು 23 ಕಡೆಗಳಲ್ಲಿ , 6 ದಾಸರು , 23 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದನೆ ಪಾಲಿಸೆನಗೆ ದೇವ ಸುದಯದೇನುಕೊಟ್ಟರು ಒಲ್ಲೆ ಪ ಸದಾ ಎಡೆಬಿಡದೆ ನಿಮ್ಮ ಸದಮಲ ನಾಮೆನ್ನೊದನಕೆ ಅ.ಪ ಹಲವು ಚಿಂತನೆಯೊಳಗಿರಲಿ ನಲಿಯುತಿರಲು ಮಲಗಿರಲಿ ಚಲಿಸದೆ ತವ ಚೆಲುವಮೂರ್ತೆ ನ್ನೊಳನೇತ್ರದ್ಹೊಳೆಯುತಿರಲಿ 1 ಘನತರದ ದುಃಖದೊಳಗೆ ಅನುಪಮ ಆನಂದದೊಳಗೆ ಕನಸುಮನಸಿನೊಳಗೆ ನಿಮ್ಮ ನೆನವು ಕ್ಷಣ ಮರೆಯದಂತೆ 2 ಕ್ಷೇತ್ರದಿರಲಿ ಯಾತ್ರದಿರಲಿ ಧಾತ್ರಿ ತಿರುಗುತ್ತಿರಲಿ ಜಗ ತ್ಸೂತ್ರ ಶ್ರೀರಾಮ ನಿಮ್ಮ ಪಾದ ಮಾತ್ರೆನ್ನ ಮಂಡೆಮೇಲೆ ಇರಲಿ 3
--------------
ರಾಮದಾಸರು
ಇಂದು ನಮ್ಮಮನಿಲ್ಯಾನಂದ ಇಂದಿರೇಶನೆ ಬಂದ ಸಂದಲ್ಯಾಗೇದ ಸ್ವಾನಂದ ಸಂದಿಸಿ ತುಂಬೇದ ಸುಖ ಸಾಂದ್ರ ಧ್ರುವ ಅತಿಶಯಾನಂದ ಕಂದ ಪತಿತಪಾವನ ಮುಕುಂದ ಹಿತದೋರಲಿಕ್ಕೆ ಬಂದ ಸತತ ಸುದಯದಿಂದ 1 ಪುಣ್ಯದಿರಿಟ್ಟತು ಈಗ ಎನ್ನೊಡಿಯ ಬಂದಾಗ ಧನ್ಯಗೈಸಿದೆನಗೆ ಚೆನ್ನಾಗಿ ಬಂದು ಮನೆಗೆ 2 ಮನಮಂದಿರಕೆ ಬಂದ ಅನುಕೂಲವಾಗಿ ಗೋವಿಂದ ಘನಗುರು ಕೃಪೆಯಿಂದ 3 ಬಾಹ್ಯಾಂತ್ರ ಭಾಸುವ ಕ್ರಮ ಮಹಾಗುರುವಿನ ಧರ್ಮ ಮಹಿಪತಿಯ ಸಂಭ್ರಮ ಇಹಪರಾನಂದೋಬ್ರಹ್ಮ 4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುರುಜ್ಞಾನದ ಗುಟ್ಟು ಬ್ಯಾರದೆ ಕೇಳಿ ಕಿವಿಗೊಟ್ಟು ಧ್ರುವ ತನ್ನೊಳು ಪರಿಪೂರ್ಣ ಒಳಹೊರಗಾನಂದ ಘನ ಹೊಳವದು ಗುರುಕರುಣ1 ಪ್ರೀಯಾಗುದು ಸಾಧನ ಅನುಭವಕಿದೆ ನಿಧಾನ ಙÁ್ಞನದ ಸುಜ್ಞಾನ 2 ಮಹಿಪತಿ ಸದ್ಗುರು ಚರಣ ಪಡಿಯೊ ಸುದಯ ಕರುಣ ಬಿಡುವಂತೆ ಮನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯವ ಪಾಲಿಸಿ ಸಲಹೆ ಜನನಿ ಜಯಲಕ್ಷ್ಮಿ ಜಯಂಕರಿ ಪ ಭಯವಿಮೋಚನೆ ಭಜಿಪೆ ನಿನ್ನ ಜಯವ ವೊಂದಿಸಿ ಭವದಿ ಎನ್ನ ದಯದಿ ಬೆಂಬಲಿರ್ದು ಬಿಡದೆ ಕೈಯ ಪಿಡಿದು ಕಾಯೌ ಸುದಯೆ 1 ಜ್ಞಾನಜ್ಯೋತಿ ಸುಪ್ರಕಾಶ ಮಾಣದಿತ್ತು ಮಮತೆಯಿಂದ ಹಾನಿತಾರದೆ ಪೊರೆಯೆ ಸತತ 2 ಕಾಮಿತಾರ್ಥ ಪೂರ್ಣೆ ಸುತಗೆ ಭೂಮಿಯಾತ್ರೆ ವಿಜಯನೀಡು ಶಾಮಸುಂದರ ಸ್ವಾಮಿ ಶ್ರೀ ರಾಮನ ಪಟ್ಟದರಾಣಿ ಕರುಣಿ 3
--------------
ರಾಮದಾಸರು
ಪರಮಪಾವನ ಸಂಸಾರದ ಘನ ಅ.ಪ ಕರಿಯಪಾಲನ ಕರುಣ ಕಡುಕಮಲನಯನ ಖರೆಯ ಸುಖಕೆ ತೊರಪಿಟ್ಟೆನ್ನ ಕೊರಗಿಪ್ಪ ಕಿರಿಕಿರಿಯ ತರಿದು1 ಜನಕಜಾವರ ಜನಕ ಜಗದ ಜಯ ಸುಖಕರ ಜನುಜನಮದಿ ಜನಿಸಿ ಬರುವ ಜಡರನಳಿದು ಜಯವ ನೀಡಿ 2 ಸುಜನ ಜೀವನ ಸುಖಶರಧಿ ಸುಮನರೊಂದನ ಶುಭಕೆ ಶುಭವೆನಿಸುವ ಸುಮುಕ್ತಿ ಸುದಯದಿತ್ತು ಸಲಹು ಶ್ರೀರಾಮ 3
--------------
ರಾಮದಾಸರು
ಬಿಡಬೇಡೆಲೆ ಮನಸೆ ಶ್ರೀಹರಿಪಾದ ಹಿಡಿ ಬಿಗಿಯಲೆ ಮನಸೇ ಪ ಹಿಡಕೋ ಕಡಕಿಂ ಕಡಲಕಡಿದಮರರ ಪಾದ ಅ.ಪ ಅನುದಿನ ಸಿರಿಯರೊತ್ತುವ ಪಾದ ಪರತರ ಭಕುತಿಯಿಂ ಸುರರುಪೂಜಿಪ ಪಾದ ನೆರೆದು ಋಷಿಸ್ತೋಮರರಸಿನಲಿಯುವ ಪಾದ ಪರಮನಾರದ ತುಂಬುರರು ಪಾಡುವ ಪಾದ ಪಾದ 1 ನೀಲಬಣ್ಣದಪಾದ ಪಿಡಿದೆತ್ತಿ ಮೂಲೋಕಾಳುವ ಪಾದ ತಾಳಿ ವಿಲಸಿತರೂಪ ಖೂಳನ ಎದೆಮೆಟ್ಟಿ ಸೀಳಿ ಉದರಮಂ ಬಾಲನ್ನಪ್ಪಿಕೊಂಡು ಪಾಲಿಸಿದಂಥ ಮಹ ಮೇಲಾದಮಿತಪಾದ ಸುಜನ ತಲೆಮೇಲೆ ಹೊತ್ತಪಾದ 2 ಬಲಿಯತುಳಿದಪಾದ ಮುನಿಯಾಗ ಒಲಿದು ಕಾಯ್ದಪಾದ ಶಿಲೆಯನೊದೆದಪಾದ ವನಕೆ ಪೋದಪಾದ ಖಳರಥಳಿಸಿ ಮುನಿಕುಲವ ಸಲಹಿದಪಾದ ಜಲಧಿದಾಂಟಿ ಸ್ಥಿರಪಟ್ಟ ಭಕ್ತನಿಗೆ ಸುಲಭದೊದಗಿಕೊಟ್ಟ ಚೆಲುವ ಸುದಯಪಾದ 3 ಪಾದ ಬಹು ಜರಮರಣ ನಿವಾರ ಪಾದ ತರಳಗೆ ಸ್ಥಿರವರ ಕರುಣದಿತ್ತ ಪಾದ ಭರದಿಗರಡನೇರಿ ಸರಸಿಗಿಳಿದ ಪಾದ ತರುಣಿಮಣಿಯರವ್ರತ ಹರಣಗೈದ ಪಾದ ಸಿರಿ ಪಾದ 4 ಪಾದ ಭಕುತರ ಮೊರೆಯ ಕೇಳ್ವ ಪಾದ ದುರುಳ ಕುರುಪನ ಗರುವಕಂಡ ಬುವಿ ವಿಶ್ವ ಪಾದ ಪರಮ ತುರಗವೇರಿ ಮೆರೆವ ವಿಮಲ ಪಾದ ಪಾದ 5
--------------
ರಾಮದಾಸರು
ಬೇಡಿಕೊಂಬೆನೊ ಶ್ರೀಹರಿಯೆ ನಿಮ್ಮ ಅಡಿಯ ಮರೆಯೆನೊ ಪ ಬೇಡಿಕೊಂಬೆನಯ್ಯ ನಿಮ್ಮ ಅಡಿಯಪಿಡಿದು ಬಿಡದೆ ನಾನು ಗಡನೆ ಎನ್ನ ಕಡುದಾರಿದ್ರ್ಯ ಕಡಿದು ಬಯಲು ಮಾಡಿ ಹರಿಯೇ ಅ.ಪ ದೈತ್ಯಶಿಕ್ಷಕ ಚಿತ್ತಜತಾತ ಭಕ್ತರಕ್ಷಕ ಅ ನಾಥ ಪ್ರೀತ ಮುಕ್ತಿದಾಯಕ ಸತ್ಯಸಂಧನನ್ನು ಮಾಡಿ ಮತ್ರ್ಯಭೋಗದಾಸೆಬಿಡಿಸಿ ನಿತ್ಯನಿರ್ಮಲಾತ್ಮ ನಿಮ್ಮ ಭಕ್ತಿಯಿತ್ತು ಸಲಹೊ ಹರಿಯೆ 1 ಶ್ಯಾಮಸುಂದರ ಸ್ವಾಮಿ ಭಕ್ತಪ್ರೇಮ ಮಂದಿರ ರಮಾ ಸತ್ಯಭಾಮಾ ಮನೋಹರ ಪಾಮರತ್ವ ತಾಮಸ ದುಷ್ಕಾಮಿತಂಗಳ್ಹರಿಸಿ ನಿಮ್ಮ ನಾಮಜಪವು ತಪದೊಳಿರಿಸಿ ಪ್ರೇಮದಿಂದ ಸಲಹೊ ಹರಿಯೆ2 ಪದುಮನಾಭನೆ ಸದಮಲಾಂಗ ಒದಗುಬೇಗನೆ ಈ ವಿಧದಿ ಬೇಡ್ವೆ ಸುದಯವಂತನೆ ಸುದತಿ ಮಾಡಿದಂಥ ಪದದ ಕೃಪೆಯನಿತ್ತು ಎನ್ನ ಮುದದಿ ಸಲಹು ಸಿರಿಯರಾಮ 3
--------------
ರಾಮದಾಸರು
ಭೋಕ್ತಸದ್ಗೈಸೋ ಅವಧೂತ ಧ್ರುವ ಅನುಭವ ಬೀರೋ ನಿಧಾನ ಅನುದಿನ ಕಾಯೋ ಕರುಣ 1 ಅತಿಹರುಷದಲಿಡೋ ತಂದೆ ಸುಖದಾಯಕ ನೀನೆಂದೆ 2 ಅರುಹು ಕುರುಹು ಆಗುವ ಮನೆಮೂರ್ತಿದೋರೋ ಶ್ರೀಗುರುವರಮೂರ್ತಿ ನಿಮ್ಮ ಕೀರ್ತಿ 3 ಹಿಡಿಯಲವನಿವನೆಂದು ಸುಗುಣ ನೋಡದಿರೆನ್ನವಗುಣ ಮಾಡಲಿಕ್ಕೆನ್ನ ಪುನೀತನ ಒಡಯನಹುದೋ ನೀ ಪೂರ್ಣ 4 ಬಾಲಕ ನಿಜ ನಿಮ್ಮಿಂದ ಮಹಿಪತಿಯ ಪಾಲಿಸಬೇಕು ಸುದಯಾ ಸಲಹೊ ಸದ್ಗುರು ನಮ್ಮಯ್ಯ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮೊರೆ ಕೇಳು ನೀನೆನ್ನ ಕರುಣದಿ ತವಪಾದ ಪರಮಭಕ್ತಗಗೊಲಿಸದಿರು ದೇವ ಚರಣದಾಸರ ಕಾವ ಸಿರಿಯ ಸಖಜೀವ ಪ ಕ್ಷಿತಿಯೊಳು ಸತಿಸುತರತಿ ಮೋಹರತಿಯೊಳು ಮತಿಶೂನ್ಯನೆನಿಸಧೋಗತಿಗೆಳೆಸದೆ ಪತಿತಪಾವನ ನಿಮ್ಮ ಶ್ರುತಿಭೋದ್ವ್ಯಾಕ್ಯದಭಿ ರತಿಯನೆನ್ನೊಡಲೊಳು ನೆಲೆಸೀಶಾ ಹತಕಂಸ ಸುರತೋಷಾದ್ವಿತಿ ಪಂಚಶಿರ ನಾಶ 1 ವಿಷಯ ವಾಸನದೇಳಸ್ವಿಷಮ ಸಂಸಾರವೆಂಬ ಮುಸುಕಿದ ಮಡುವಿನೊಳ್ಮುಳುಗಿಸಿದೆ ವಸುಧೆಯೊಳಸೆವ ಆ ಅಸಮಹಿಮನ ಪಾದ ದಾಸರ ಸಂಗ ನೀಡ್ವಿಮಲಾಂಗ ಭಂಗ ಕುಸುಮಾಕ್ಷ ಕೃಪಾಂಗ 2 ಮದನಕದನದಿ ಮುದಸುಖವಿಧಿಸಗ ಲ್ಹೋದ ಸುದತಿಯಳ ನೆನೆವಂತೆ ಪಾದ ಸದುಭಕ್ತಿ ಹಂಬಲ ಅಗ ಲದಿರಿಸು ರಘುಕುಲಸೋಮ ಸದುಭಕ್ತರ ಪ್ರೇಮ ಸುದಯನೆ ಶ್ರೀರಾಮ3
--------------
ರಾಮದಾಸರು
ಶ್ರೀ ಮಹಾದೇವರು ಅಂಬಿಕಾಪತಿ ಶಂಭು ರಕ್ಷಿಸೆನ್ನಶಂಬರಾರಿ ಹರನೆ ನಂಬಿದೆನೊ ನಿನ್ನ ಪ ಭವ ಭ್ರಕುಟ ಭವಹರನೆ ನೀಎನ್ನಅವಗುಣಗಳೆಣಿಸದಿರು ಕವಿಗೇಯನೆ ||ಅವನಿಯೊಳು ಎನಗೀಗ ಸುವಿವೇಕಿಗಳ ಸಂಗಜವದಿ ಪಾಲಿಸು ಮುದದಿ ಜವನಾರಿ ಶಿವನೆ 1 ವಿನುತ ಇಳೆವರೂಥನೆ ನಿರುತತಲೆವಾಗಿ ಬೇಡುವೆನು ಸಲಹೆಂದು ನಾಎಲರುಣಿ ಭೂಷಣೆನೆ ಒಲಿದು ಪಾಲಿಸುದಯದಿಛಳಿಗಿರೀಶನ ಅಳಿಯ ನಳಿನಾರಿ ಧರನೆ 2 ಸಿರಿರಮಣ ಶಾಮಸುಂದರ ವಿಠಲ ಸಖನೆಮೊರೆ ಹೊಕ್ಕೆ ಮರೆಯದಿರು ಗರಗೊರಳನೆಕರುಣದಿಂದಲಿ ನಿನ್ನ ಚರಣ ಸೇವೆಯನಿತ್ತುಕರವಿಡಿದು ಕಾಪಾಡೊ ಕರಿಚರ್ಮಧರನೆ 3
--------------
ಶಾಮಸುಂದರ ವಿಠಲ
ಸದ್ಗುರುವಿನ ಕೈಯ ಸದ್ಗೈಸಿಕೊಂಡವಗೆ ಜಯ ಧ್ರುವ ಭಾವ ಬಲಿದು ಶುದ್ಧ ಪವಿತ್ರವಾದ ಪ್ರಬುದ್ಧ ಅವ ನೋಡಿ ತಾ ಸ್ವತ:ಸಿದ್ಧ ಭವದಾಟಿದ್ದ 1 ಸದ್ಗುರು ಸುದಯದೀಕ್ಷ ಸಾಧಿಸಿತವಗೆ ಲಕ್ಷ ಮೇದಿನಿಯೋಳಗೆ ಸುಭಿಕ್ಷ ಬೋಧಕ ಸುಪಕ್ಷ 2 ಸದ್ಗತಿ ಸುಖಸ್ವಾದ ಸಾಧಿಸಿ ಮಹಿಪತಿ ಬೋಧ ಹೊಂದಿ ತೋರಿತು ಸೌಖ್ಯದ ಸದ್ಗುರು ಪ್ರಸಾದ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸರಸ್ವತಿಮಾತೆ ಪರತರಚರಿತೆ ವರ ಪುಣ್ಯನಾಮಳೆ ಪ ಕರುಣಿಸಿವರವ ಕರುಣಾಕರಳೆ ಕರುಣದಿ ಕಾಯೆ ಅ.ಪ ಪದುಮಾಸನನ ಸುವದನ ನಿವಾಸೇ ತ್ರಿಭುವನಾರ್ಚಿತೆ ಸತತವಾಗಿ ಸುದಯೆ ಹೃದಯೆ ಸ್ಥಿರ ಸದುಮತಿ ಪಾಲಿಸೆ ಪರಮದಯದಿ ಪದುಳಂಗೆ ದಯದಿ 1 ವೀಣಾಧರಿ ಸುವಾಣಿ ಕಲ್ಯಾಣಿ ಮಾನಿನಿ ಬ್ರಹ್ಮನ ಜನನಿಯೆ ಜಗದಜಾಣೆ ಸುತ್ರಾಣೆ ನಿಜ ಜ್ಞಾನಾಧಿಕಾರಿ ಜ್ಞಾನವ ನೀಡೆ ಮಾಣದೆ ಎನಗೆ 2 ಪಾಮರತನ ನಿವಾರಣೆಗೊಳಿಸೆ ಪ್ರೇಮದೆನಗೆ ಸುಜಾಣೆ ನುಡಿಗಲಿಸಿ ವಿಮಲೆ ಅಮಲಸುಖ ಗಮಕದಿ ನೀಡ್ವೆ ಭುವಿಜಪತಿ ಶ್ರೀರಾಮನ ಸೊಸೆಯೆ 3
--------------
ರಾಮದಾಸರು
ಸರ್ವ ಸಹಕಾರಿ ಶ್ರೀಹರಿ ಸರ್ವ ಸಹಕಾರಿ ಧ್ರುವ ಸುರಜನ ಪಾಲ ಸಕಲಕಾಧಾರಿ ಪರಮ ಪುರುಷ ಪೀತಾಂಬರಧಾರಿ 1 ಶರಣ ರಕ್ಷಕ ಸುದಯದಲ್ಯುದಾರಿ ವಾಹನ ಮುಕುಂದ ಮುರಾರಿ2 ತೋರುವ ನಿತ್ಯಾನಂದದ ಲಹರಿ ಬೀರುವ ಸುಖ ಸಾಧನೆ ಪರೋಪರಿ 3 ಕರುಣದಾಕ ಮಹಿಪತಿ ಸಹಕಾರಿ ಸಿರಿಯನಾಳುವ ಸ್ವಾಮಿಯು ನರಹರಿ4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸುದಯನೆ ಮಲಗಿದ್ಯಾ ತಂದೆ ಗೋವಿಂದ ಇದು ಏನು ಮಾಡಿದ್ಯೋ ಭಕುತರಾನಂದ ಪ ಗಳಿಗೆಬಿಡದೆ ಹೊನ್ನು ಅಳೆದಳೆದು ಬೇಸತ್ತು ಮಲಗಿದಿ ಸುಮ್ಮನೆ ಕಲಿಜನರ ಗತಿಯೇನು 1 ಮಹಂತರ ಅಧಿಕಾರ ಭ್ರಾಂತರೊಶಕೆ ನೀಡಿ ಚಿಂತೆ ಪರಹಿತ ಮರೆದು ಸಂತಸದ್ಹಾವಿನ ಮೇಲೆ 2 ಪ್ರತಿ ವರುಷದುತ್ಸವಕೆ ಅತಿಭಕುತಲಿ ಬರುವ ಸುತರೊಳು ದಯತಪ್ಪಿ ಅತಿ ಆನಂದದಲಿ 3 ರೂಢಿಯ ಮೇಲೆ ಗಾಢನಿದ್ರೆಯೊಳು 4 ಕಾಮಿತಜನರ ಸುರಕಾಮಧೇನಲ್ಲವೆ ನೀನು ಭೂಮಿಪಾಲಿಸು ಏಳು ಸ್ವಾಮಿ ಶ್ರೀರಾಮಯ್ಯ 5
--------------
ರಾಮದಾಸರು
ಸ್ವಾಮಿ ಕ್ಷೇಮೇಂದ್ರರ ಪ್ರೇಮ ಭಜಕ ಶ್ಯಾಮಸುಂದರ ಪ ಅಷ್ಟಭೋಗ ಪಟ್ಟಾರೋಹಣ ನಿಷ್ಟಜನರ ಕಷ್ಟಹರಣ ಸೃಷ್ಟಿ ಈರೇಳು ಇಟ್ಟು ಹೃದಯದಿ ಮುಟ್ಟಿರಕ್ಷಿಪ ಅಷ್ಟಮೂರುತಿ 1 ಕಮಲನಾಭ ಕಮಲವದನ ಕಮಲಪಾಣಿ ವಿಮಲಚರಿತ ಕಮಲಪೀಠನಯ್ಯ ಸುದಯ ಕಮಲನೇತ್ರ ಕಮಲಪ್ರಿಯಾ2 ಭಕ್ತಜನರ ಪ್ರಾಣಧವ ನಿತ್ಯ ನಿರ್ಮಲ ಮುಕ್ತಿಪದವ ಭಕ್ತಗಿತ್ತು ನೀಡು ಕ್ಷೇಮ ನಿತ್ಯ ನಿರ್ಮಲಾತ್ಮ ಶ್ರೀರಾಮ 3
--------------
ರಾಮದಾಸರು