ಒಟ್ಟು 119 ಕಡೆಗಳಲ್ಲಿ , 8 ದಾಸರು , 112 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾತುಮಾತಿಗೆ ಮರೆಯಬೇಡ ಸೀತಾರಾಮನ ಪ ಮಾತರಿಶ್ವನಾಥನು ಪ್ರೀತನಾಗುವ ಅ.ಪ. ಹನುಮ ತಾನು ಭಕ್ತಿಯಿಂದ ನೆನೆದು ಸುಖಿಸುತ ವನಜ ಸಂಭವ ಪದವಿ ಪೊಂದಿದ ಘನತರನ ಮಾತ 1 ಅಬಲೆಯನ್ನು ಕುಲಕೆ ತಂದ ಪ್ರಬಲನ ಮಾತ ಶಬರಿಯೆಂಬ ಭಕ್ತಳಿಗೆ ಅಭಯವಿತ್ತನ ಮಾತ 2 ಅಂಗಜವೈರಿ ಶ್ರೀ ಶಿವನು ಹಿಂಗದೆ ಭಜಿಪ ರಂಗೇಶವಿಠಲನೆಂಬುವ ಮಂಗಳನ ಮಾತ 3
--------------
ರಂಗೇಶವಿಠಲದಾಸರು
Àಥವನೇರಿ ಬರುವ ರಂಗನಾಥನ ನೋಡಿ ಪ ಅತಿಶಯವಾದಂಥ ಪರಗತಿಯನು ಪಡೆಯಿರೊ ಅ.ಪ. ಹಸ್ತಿಗಳು ಚಾಮರ ಹಾಕುತಲಿರೆ ಸ್ವಸ್ತಿವಾಚನಗಳನು ದ್ವಿಜರು ಪೇಳುತಲಿರೆ ಸ್ವಸ್ತಿಲಿ ವಿವಿಧ ವಾದ್ಯತತಿ ಸೂಳೈಸುತಲಿರೆ ಮಸ್ತಕಾಂಜಲಿಪುಟದಿ ಹರಿದಾಸರು ಪೊಗಳುತಿರೆ 1 ಸಾಲು ಪಂಜಿನ ದೀವಟಿಗೆಗಳು ಮೆರೆಯೆ ನಾಲ್ಕು ದಿಕ್ಕಲಿ ಜನರು ನಿಂತು ನೋಡುತ ನಲಿಯೆ ಲೀಲೆಯ ತೋರುತ ಶ್ರೀ ಭೂದೇವಿಯರಿಂದ ಲೋಲುಪ ತಾನಾಗಿ ಬಹು ಸಂಭ್ರಮದಿಂದ 2 ನಭದೊಳು ಸಕಲ ದಿವಿಜರೊಡಗೂಡಿ ತಾ ನಭುಜಭವನು ನಿಂತು ನೋಡಿ ಹಿಗ್ಗುತಿರೆ ಇಭರಾಜವರದ ಶ್ರೀ ರಂಗೇಶವಿಠಲನು ತ್ರಿಭುವನ ಪಾವನ ಮಾಡಿ ಸೊಬಗು ತೋರುತ 3
--------------
ರಂಗೇಶವಿಠಲದಾಸರು
ಅನ್ಯ ದೇವರ ನಾನರಿಯೆ ಸಿರಿಹರಿಯೆ ಪ ಎನ್ನ ಬಿನ್ನಪ ಕೇಳಯ್ಯ ದೊರೆಯೆ ಅ.ಪ ಹರಬೊಮ್ಮಾದಿಗಳಿಂದ ವರಪಡೆದ ರಾವಣ ಸರುವ ಲೋಕಂಗಳನೆಲ್ಲ ಗೆಲಿದು ಬಂದು ಸಿರಿರಮಣನೆ ನಿನ್ನೊಳು ದ್ವೇಷವನೆ ಮಾಡಿ ತರು ಮೃಗಗಳಿಂದಪರಾಜಿತನಾದನಯ್ಯಾ 1 ದೃಷ್ಟಾಂತಗಳನ್ನೆಷ್ಟು ತೋರಲಿ ನಾನು ದುಷ್ಟ ಜನರೆಲ್ಲ ಪಟ್ಟ ಬವಣೆಗಳಿಗೆ ಶ್ರಿಷ್ಟಿಗೊಡೆಯನೆ ನಾ ಮನಮುಟ್ಟಿ ನುತಿಸುವೆ ಶಿಷ್ಟ ಜನರ ಸಂಗದೊಳಿಟ್ಟೆನ್ನ ಸಲಹಯ್ಯಾ 2 ಮೂರು ಕರಣಗಳಿಂದ ನಾ ನಿನ್ನ ನಂಬಿಹೆನು ಮಾರುತೀಶನೆ ನಿನ್ನ ಚರಣವ ತೋರಿ ಗಾರು ಮಾಡದೆ ನೀ ಸಲಹಬೇಕೆಂಬೆನು ಕಾರುಣ್ಯದಿಂದಲಿ ಶ್ರೀ ರಂಗೇಶವಿಠಲ 3
--------------
ರಂಗೇಶವಿಠಲದಾಸರು
ಅಲ್ಲೇನು ಇಲ್ಲವೋ ಪ ಸಿರಿಯು ಇರುವದೆಂದು ನೀನು ಗರುವದಿಂದ ಹರಿಯ ಮರೆತು ಉರುಳಿ ಪೋಪ ತನುವ ಪೋಷಿಸುತಲಿ ಬಹುತೋಷಿಸೂತಲಿ 1 ಮತಿಯ ತೊರೆದು ಪತಿತನಾಗಿ ಬಾಳ ಬೇಡೆಲೊ ಗತಿತೋರರವರೆಲೊ 2 ಧರಣಿಗೊಡೆಯನಾದ ನಿನ್ನ ಭರದಿ ಯಮನ ಚರರು ಕರೆಯೆ ನೀ ತಿಳಿದು ನೋಡಲೆ 3 ಬನ್ನ ಬಿಟ್ಟು ಲಜ್ಜೆ ಬಿಟ್ಟು ಬಲು ನೀಚನಾದೆಲೊ 4 ಮಂದಮತಿಯೆ ಕೇಳು ನೀನು ಮುಂದೆ ಹಿರಿದು ಬಳಲಬೇಡ ಪೊಂದಿ ಭಜಿಸೊ ರಂಗೇಶವಿಠಲನ ಸುಖವೀವ ದೊರೆಯನ 5
--------------
ರಂಗೇಶವಿಠಲದಾಸರು
ಆದಿಯಲಿ ಮಧುಕೈಟಬರನು ಸಂಹರಿಸಿದಂಥ ಶೂರನೆ ವೇದವನು ಕದ್ದೊಯ್ದ ದಾನವನೊಳು ಕಾದಿಗೆದ್ದ ಧೀರನೆ 1 ಹದಿನಾರು ಸಾವಿರ ಗೋಪಿಯನಾಳಿದಾಮಿತ ಬಲವಂತನೆ ಕದನಕೊದಗಿದಸುರರನ್ನು ಸದೆ ಬಡಿದ ಪ್ರಖ್ಯಾತನೆ 2 ಸಾಧು ಸಜ್ಜನರ ಸಂತಾಪ ಕಳೆದಾಮೋದ ತೀರ್ಥಾರಾಧ್ಯನೆ ಆದಿದೈವಿಕಾದಿ ಈತಿ ಬಾಧೆ ಕಳೆಯೊ ರಂಗೇಶವಿಠಲನೆ 3
--------------
ರಂಗೇಶವಿಠಲದಾಸರು
ಆರತಿ ಮಾಡಿರೆ ನೀರೆಯರೆಲ್ಲರು ಮಾರಮಣನಾದ ಶ್ರೀರಂಗರಾಜನಿಗೆ ಪ ಭಾರ ಬೆನ್ನಲಿ ಪೊತ್ತು ಕೋರೆಯೆ ತೋರಿದ ನಾರಸಿಂಹನಿಗೆ 1 ಪೋರ ರೂಪನಾದ ಧೀರ ಪರಶುಧರಗೆ ಶ್ರೀ ರಘುರಾಮನೆಂಬ ಚೋರ ಶಿಖಾಮಣಿಗೆ 2 ಚಾರು ಬೌದ್ಧನಿಗೆ ವೀರ ರಾಹುತಗೆ ನೀರಜನಾಭನಾದ ಶ್ರೀ ರಂಗೇಶವಿಠಲಗೆ 3
--------------
ರಂಗೇಶವಿಠಲದಾಸರು
ಇಷ್ಟುದಿನ ಭೂವೈಕುಂಠ ಎಷ್ಟುದೂರವೆನುತಿದ್ದೆದೃಷ್ಟಿಯಿಂದಲಿ ನಿಮ್ಮ ಕಂಡೆ ಸೃಷ್ಟಿಪತಿ ಶ್ರೀರಂಗೇಶ ಪ. ಚಿತ್ರಬೀದಿ ವಿರಾಜಿತ ಚಾರುನೂಪುರ ಶೋಭಿತಸಪ್ತ ಪ್ರಕಾರ ಸಂಪೃಷ್ಠ ಉತ್ತಮ ಶ್ರೀರಂಗಶಾಯಿ1 ಹೇಮ ಸೋಪಾನಗಳಲ್ಲಿಹೇಮಕಟಾಂಜನದಿಂದ ಗುಣಶೋಭಿತ ಶ್ರೀರಂಗೇಶ2 ಚತುರ ವೇದಗಳಲ್ಲಿ ಚತುರಮೂರ್ತಿವೀರ್ಯದಲ್ಲಿಚತುರ ದಿಕ್ಕುಗಳಲ್ಲಿ ಚದುರ ಶ್ರೀರಾಮ ರಂಗಶಾಯಿ 3 ಪಂಕಜನಾಭನೆ ಏಸು ಪಾವನವೊ ನಿಮ್ಮ ದಿವ್ಯಕುಂಕುಮಾಂಕಿತ ಚರಣ ಪಂಕಜಾಕ್ಷ ಶ್ರೀರಂಗೇಶ 4 ಪುಣ್ಯ ವಿದ್ಯಾ ದಯಾನಿಧೆ ಪನ್ನಗಶಾಯಿ ಶೋಭಿತ ಧನ್ಯ ಚಂದ್ರಪುಷ್ಕರಣ ಉನ್ನಂತ ಶ್ರೀ ಹಯವದನ 5
--------------
ವಾದಿರಾಜ
ಈ ಸಂಸಾರ ಸುಖವು ಬೇಸರಾಯ್ತೆನಗೆ ವಾಸವಾನಜ ಲಾಲಿಸೊ ಪ ಏಸು ಜನುಮದ ಪಾಪವೊ ಈ ಸಂಸಾರ ಬಂಧನವೊ ಅ.ಪ ತಂದೆ ತಾಯಿ ಎಂಬುದದು ಒಂದು ಚಿಂತೆ ಬಂಧು ಬಳಗವು ಎಂಬುದದು ಬೇರೆ ಚಿಂತೆ ಸತಿ ಸುತರೆಂಬದದು ದೊಡ್ಡ ಚಿಂತೆ ಕಂದನಿಲ್ಲದಿರಲದು ಘೋರ ಚಿಂತೆ 1 ಹಿಂದೆ ಮಾಡಿದ ಪಾಪಕೀಸು ಭವಣೆಯು ಸಾಕು ಮುಂದೆ ಬೇಡವೊ ಸ್ವಾಮಿ ಈ ತೆರದ ತಾಪ ಇಂದು ಮಾಡಿದ ಪಾಪ ಒಂದುಳುಹದಂತೆ ತಂದೆ ಕರುಣದಿ ಸುಟ್ಟು ಸಲಹೆನ್ನ ದೊರೆಯೆ 2 ಪಾದ ಸರೋಜದಲಿ ಮಂದಮತಿಯ ಮನ ಚಲಿಸದೆ ನಿಲುವಂತೆ ಒಂದು ಬೇಡುವೆನೊ ದೇವ ಬೇರೊಂದ ನಾನೊಲ್ಲೆ ಮಂದರೋದ್ಧಾರ ಶ್ರೀ ರಂಗೇಶವಿಠಲ 3
--------------
ರಂಗೇಶವಿಠಲದಾಸರು
ಉಗಾಭೋಗ ಏನೇನು ಪಾಟು ಬಿದ್ದರು ಮುನ್ನ ಕರ್ಮ ಬೆಂಬಿಡದಿರೆ ಶ್ರೀನಿವಾಸನÉ ನಿನ್ನಲನುಗಾಲ ಧ್ಯಾನಿಸಲೇಕೊ ಸ್ವಾಮಿ ನೀನೊಲಿದ ಮೇಲೆ ಪೂರ್ವಾಜಿತ ಕರ್ಮ ವೇನು ಮಾಡಬಲ್ಲದು ಹೀನ ಮಾನವರಿದನರಿಯದೆ ನಾನಾ ಪ್ರಕಾರದಿ ತೊಳಲುವರು ಶ್ವಾನನಂದದಿ ಭವದೊಳಗೆ ನಿನ್ನ ಮರೆದು ಏನು ಕಷ್ಟ ಬಂದರೂ ಬರಲಿ ನಾ ನಿನ್ನ ಮರೆಯೆನೊ ದೇವರದೇವ ಸಾನುರಾಗದಿ ಸಲಹೆನ್ನ ಶ್ರೀನಿಧಿ ರಂಗೇಶವಿಠಲ
--------------
ರಂಗೇಶವಿಠಲದಾಸರು
ಉಗಾಭೋಗ ಕಮಲಮಾರ್ಗಣಪಿತ ನಿನ್ನ ಸಮವಾದ ದೈವಗಳ ನಾ ಕಾಣೆ ಕಮಲಜಾಂಡದೊಳಗೆ ಜಗಕೆ ಗುರುವೆನಿಪ ಕಮಲಭವನ ನೀ ಪೆತ್ತೆ ಜಗನ್ಮಾತೆಯಾ ಕಮಲಾಲಯೆಗೆ ನೀ ಪತಿಯಾದೆ ಕಮಲಸಖ ಕೋಟಿತೇಜ ನಿನ್ನ ಪಾದ ಕಮಲವನೆನ್ನ ಹೃತ್ಕಮಲದೊಳು ತೋರಿ ಸಲಹೊ ಕಮಲಾಕ್ಷ ಶ್ರೀ ರಂಗೇಶವಿಠಲ
--------------
ರಂಗೇಶವಿಠಲದಾಸರು
ಉಗಾಭೋಗ ಚಿಕ್ಕ ಮಗುವಾದ ಪ್ರಹ್ಲಾದ ದೇವನನು ರಕ್ಕಸನು ಪಿಡಿದತಿ ಹಿಂಸೆಪಡಿಸುವದ ನೋಡಿ ಉಕ್ಕಿಬರುತಿಹ ಕೋಪದಿಂ ಕಿಡಿಕಿಡಿಯಾಗಿ ಉಕ್ಕಿನ ಕಂಬದಿಂ ಉರಿಯ ಕಾರುತ ಬಂದು ಪಕ್ಕಿದೇರನು ಹಿರಣ್ಯಕಶಿಪನ ಪಿಡಿದು ತಾ ಉರ ಬಗೆದು ಕರುಳ ಮಾಲೆಯ ಗಕ್ಕನೆ ಗಳಕಿಕ್ಕಿಕೊಂಡು ಆರ್ಭಟಿಸಿದಂದು ಲಕ್ಕುಮಿಯಾದಿಯಾಗಿ ಮುಕ್ಕೋಟಿ ದೇವತೆಗಳು ಬೆದರಿ ದಿಕ್ಕೆಟ್ಟು ಗಡ ಗಡ ನಡುಗುತಿರಲಾಗ ಅಕ್ಕರದ ಭಕುತ ಪ್ರಹ್ಲಾದ ಬರೆ ಬಿಗಿಯಪ್ಪಿ ತಕ್ಕೈಸಿ ಮುಂಡಾಡಿ ಪ್ರಸನ್ನನಾದನು ತನ್ನ ಭಕ್ತರೊಳಿನ್ನೆಷ್ಟು ಪ್ರೀತಿಯೋ ರಂಗೇಶವಿಠಲಗೆ
--------------
ರಂಗೇಶವಿಠಲದಾಸರು
ಉಗಾಭೋಗ ಮಾಡಿದೆ ಯಾಕೆ ಫಲಗಳ ಮೆದ್ದೆಯಾಕೆ ಒಕ್ಕುಡಿತೆ ಪಾಲ ಕುಡಿದೆಯಾಕೆ ಅವಲ ಮೆದ್ದೆಯಾಕೆ ಕುರೂಪಿ ಕುಬುಜೆಗೆ ಮನಸೋತೆಯಾಕೆ ಅಖಿಲಾಂಡಕೋಟಿ ಬ್ರಹ್ಮಾಂಡನಾಯಕನಾದವ ಪಾಂಡವರೋಲೆಕಾರನಾದೆಯಾಕೆ ನಿನಗಾಗಿ ನೀನು ಬವಣೆಪಡಲಿಲ್ಲವೊ ದೇವ ನಿನ್ನ ಭಕುತರ ಪೊರೆಯಲೋಸುಗವೆಂಬುದ ನಾ ಬಲ್ಲೆ ನಿನ್ನ ದಯಕೆಣೆಯುಂಟೆ ಎನ್ನಪ್ಪ ರಂಗೇಶವಿಠಲ
--------------
ರಂಗೇಶವಿಠಲದಾಸರು
ಉಮಾ ಹಿಮಗಿರಿ ಸಮಸ್ತ ಸಮಾನ ಸುಗುಣವಂದ್ಯೆ ಪ ಕಮಲಾಕ್ಷನÀ ಭಗಿನಿಯೆನ್ನಮಲನ ಮಾಡಿ ವಿಮ¯ ಮನಸು ಶಮದಮಗಳ ನೀಡಮ್ಮ ಅ.ಪ. ತ್ರಿಪುರ ಸುಂದರಿ ನಿನ್ನ ಅಪಾರ ರೂಪಕೆ ತ್ರಿಪುರಾರಿ ಮರುಳಾದನಮ್ಮ ಶಫರಾಕ್ಷಿ ಕೇಳೆನ್ನ ಬಿನ್ನಪವನು ಮನ ಚಪಲಾಕೆರಗದಂತೆ ಕೃಪೆ ಮಾಡಬೇಕಮ್ಮ 1 ಜಪವ ನಾನರಿಯೆನು ತಪವ ನಾನರಿಯೆನು ಎ ನ್ನಪರ ಬುದ್ಧಿಯ ಬಿಡಿಸಮ್ಮ ಕೃಪಣ ವತ್ಸಲೆ ಎನ್ನ ಕುಪಥಾವ ತಪ್ಪಿಸಿ ಅಪವರ್ಗ ಸೇರುವ ಸುಪಥವ ತೋರಮ್ಮ 2 ಅಪ್ಪ ರಂಗೇಶವಿಠಲ ಒಪ್ಪುವ ರೀತಿಲಿ ತಪ್ಪದೆ ಮತಿ ಪ್ರೇರಿಸಮ್ಮ ತಪ್ಪು ಒಪ್ಪುಗಳೆಲ್ಲ ಸರ್ಪಶಯನಗೆಅರ್ಪಿಸಿ ಎನ್ನ ನಿರ್ಲಿಪ್ತನ ಮಾಡಿಸಮ್ಮ 3
--------------
ರಂಗೇಶವಿಠಲದಾಸರು
ಎಂದಿಗೆ ಕಾಂಬುವೆ ನಿನ್ನ ಚರಣವ ಪತಿ ಘನ್ನ ಪ ಪರಧನ ಪರಸತಿಯರನು ನಾ ಬಯಸುತ ಸಿರಿಯರಸ ನಿನ್ನ ಮರೆದು ಪರಮ ನೀಚನೆಂದೆನಿಸಿರುವೆ1 ಅರಿತು ಅರಿಯದಂತೆ ದುರಿತಗಳನು ಮಾಡಿ ಗುರು ಹಿರಿಯರನು ನಿಂದಿಸಿ ಗರುವದಿಂದಲಿ ಚರಿಸುತಿರುವೆ 2 ಸರುವಂತರ್ಯಾಮಿ ಕರುಣಾಕರನಾದ ಸಿರಿ ರಂಗೇಶವಿಠಲ ನಿನ್ನ ಅರೆಕ್ಷಣ ಸ್ಮರಿಸದಿರುತಿರುವೆ 3
--------------
ರಂಗೇಶವಿಠಲದಾಸರು
ಎನಗೆಲ್ಲಿಯ ಕೊರತೆ ನಿನ ನಂಬಿದ ಮೇಲೆ ಮನಸಿಜನೈಯ್ಯಾ ಶ್ರೀ ರಂಗೇಶವಿಠಲ ಪ ಕೊಡುವ ಕರ್ತನು ನೀನು ಎಡಬಿಡದಿರುವಾಗ ಬಡತನವೆನಗ್ಯಾಕೆ ರಂಗೇಶವಿಠಲ 1 ಸತಿಯು ಸುತರು ಎನಗೆ ಹಿತವ ಬಯಸಲಿಲ್ಲ ಗತಿಯು ಎನಗೆ ನೀನೆ ರಂಗೇಶವಿಠಲ 2 ಮಂದಮತಿಯು ನಾನು ಸಿಂಧುಶಯನ ನಿನ್ನ ಕಂದನೆಂದು ತಿಳಿಯೊ ರಂಗೇಶವಿಠಲ 3
--------------
ರಂಗೇಶವಿಠಲದಾಸರು