ಒಟ್ಟು 70 ಕಡೆಗಳಲ್ಲಿ , 27 ದಾಸರು , 50 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

1. ಗಜೇಂದ್ರಮೋಕ್ಷ ನಾರಾಯಣ ಎನ್ನಿರೊ ನಾರಾಯಣ ಎನ್ನಿ ನಾರದಾದ್ಯಖಿಳ ಮುನಿವಿನುತಾಯ ಪಾಹಿಮಾಂ ಘೋರ ಭವದುಃಖ ಸಂಹಾರಾಯ ಪ ಪಾಂಡುದೇಶದೊಳು ಇಂದ್ರದ್ಯುಮ್ನನೆಂಬ ಭೂ ಮಂಡಲಾಧಿಪನು ವೈರಾಗ್ಯದಲಿ ಹರಿಪಾದ ಪುಂಡರೀಕಧ್ಯಾನಪರನಾಗಿತಪಸಿಲಿರೆಚಂಡತಾಪಸನಗಸ್ತ್ಯಾ ಹಿಂಡು ಶಿಷ್ಯರ ಬೆರೆಸಿ ಬರಲು ಸತ್ಕರಿಸದಿರೆ ಕಂಡು ಗಜಯೋನಿಯೊಳು ಜನಿಸು ಪೋಗೆಂದು ಉ- ತಾ ಶುಂಡಾಲನಾದನರಸ 1 ಕ್ಷೀರಸಾಗರ ತಡದೊಳೈವತ್ತು ಯೋಜನ ವಿ- ಸ್ತಾರದಿಂದಿರುವ ತ್ರಿಕೂಟಾದ್ರಿ ಶೃಂಗತ್ರಯದಿ ರಾರಾಜಿತ ತಾಮ್ರರಚಿತ ಕಾಂಚನದಿಂದ ಮೇರುಸಮ ಗಂಭೀರದಿ ಪಾರಿಜಾತಾಂಭೋಜ ತುಳಸಿ ಮಲ್ಲಿಗೆ ಜಾಜಿ ಸೌರಭಗಳಶ್ವತ್ಥ ಚೂತ ಪುನ್ನಾಗ ಜಂ ವಾರಣೀಂದ್ರನು ಮೆರೆದನು 2 ಆನೆ ಹೆಣ್ಣಾನೆ ಮರಿಯಾನೆಗಳ ಸಹಿತಲಾ ಕಾನನವು ತೊಳಲುತ್ತ ಬೇಸಿಗೆಯ ಬಿಸಲಿನಲಿ ಕಂಡಿತು ಪಾನಾಭಿಲಾಷೆಯಿಂದ ನಾನಾ ಪ್ರಕಾರದಿಂ ಜಲಕ್ರೀಡೆಯಾಡುತಿರೆ ಏನಿದೆತ್ತಣ ರಭಸವೆಂದುಗ್ರಕೋಪದಿಂ ನೆಗಳು ಏನೆಂಬೆನಾಕ್ಷಣದೊಳು 3 ಒತ್ತಿ ಹಿಡಿದೆಳೆವುತಿರೆ ಇದೆತ್ತಣಯದೆನುತ ಮತ್ತೆ ಇಭರಾಜನೌಡೆತ್ತಿ ಫೀಳಿಡುತ ಎಳೆ ಸೆಳೆದುದು ಬಿಡದೆ ನೆಗಳವು ಇತ್ತಂಡವಿತ್ತು ಕಾದಿತ್ತು ಸಾವಿರ ವರುಷ ಪೊತ್ತರಿಸಿತ್ತೇನೆಂಬೆ ಮತ್ತಾ ಗಜೇಂದ್ರಂಗೆ ಚಿಂತಿಸುತ ಮತ್ತ್ಯಾರು ತನಗೆನುತಲಿ 4 ಬಂದುದಾ ಸಮಯದಲಿ ಹಿಂದೆ ಮಾಡಿದ ಪುಣ್ಯ ದಿಂ ದಿವ್ಯಜ್ಞಾನದಿಂ ಕಣ್ತೆರೆದು ಕೈಮುಗಿದು ಮುಕುಂದ ಮುನಿವೃಂದವಂದ್ಯಾ ಇಂದಿರಾರಮಣ ಗೋವಿಂದ ಕೃಷ್ಣ ಭಕ್ತರ ಬಂಧು ಕರುಣಾಸಿಂಧು ತಂದೆ ಸಲಹೆನ್ನ ನಾ ಮಾಯಾಪ್ರಬಂಧದಿ ನೆಗಳಿನಿಂ 5 ಪರಮಾತ್ಮ ಪರಮೇಶ ಪರಿಪೂರ್ಣ ಪರಾತ್ಪರ ಉರುತರ ಪರಂಜ್ಯೋತಿ ಪರಮಪಾವನ ಮೂರ್ತಿ ಪರಮೇಷ್ಠಿ ಪರಮಪುರುಷಾ ನಿರುಪಮ ನಿಜಾನಂದ ನಿರ್ಭಯ ನಿರಾವರಣ ನಿರಂಜನ ನಿರಾಧಾರ ನಿರವೇದ್ಯ ನಿಶ್ಯಂಕ ನಿತ್ಯನೈಮಿತ್ಯಕಾ ನೀ ಸಲಹೆನ್ನನೆಂದಾನೆ 6 ಗುಪಿತ ಕಂಠಧ್ವನಿಯೊ ಳಂತರಾತ್ಮಕನ ನೆನೆವುತ್ತಳುತ್ತಿರಲಿತ್ತ ಕರುಣದಿಂದಾಕ್ಷಣದೊಳನಂತಶಯನದೊಳೆದ್ದನು ಸಂತವಿಸಿ ಸಿರಿಮುಡಿಯ ಗರುಡವಾಹನನಾಗಿ ಚಿಂತೆಬೇಡವೆನುತ ಅಭಯ ಹಸ್ತ ಕೊಡುತ ಶ್ರೀ ದಂತಿವದನನ ನೆಗಹಿದಾ 7 ನೆಗಳ ಬಾಯನು ಚಕ್ರದಲಿ ಸೀಳಿ ಕರಿವರನ ಉಗುವ ಕರುಣದಿಂ ಮೈದಡಹಲ್ಕೆ ಗಜಜನ್ಮ ಕುಂಡಲದಿಂದ ಮಿಗೆ ಶೋಭಿಸುತಲೆಸೆದನು ವಿಗಡ ದೇವಲ ಋಷಿಯ ಶಾಪದಲಿ ಬಿದ್ದಿಳೆಗೆ ಮಿಗೆನಕ್ರನಾಗಿ ಹೂಹೂ ಎಂಬ ಗಂಧರ್ವ ಅಮರರೊಲುಮೆಗೆ ನೆರೆದನೋಲೈಸುತ 8 ಮಣಿಮಯ ಕಿರೀಟಕುಂಡಲ ಹಾರ ಪದಕ ಕಂ ಕಣ ಕೌಸ್ತುಭೋಜ್ವಲ ಸುಗಂಧ ಭೂಷಣ ಹಸ್ತ ಪಾಣಿಯಾ ಶಂಖಚಕ್ರಾಬ್ಜಧ್ವಜ ಕಸ್ತೂರಿ ತಿಲಕ ಪ್ರಣವ ತಾಕಿದನು [ಝಣ ಝಣಿತನೂ]ಪುರ[ದ] ದಂತ ಪಂಕ್ತಿಯ ಕೃಪೆ ಸಿರಿ ಮೊಗದ ಪೀತಾಂಬರದಾಲಂಕೃತದ ಸುರಸಿದ್ಧ ಸಾಧ್ಯ ಸಂದಣಿಯೊಳಗೆ ಮೆರೆದನು 9 ಹರಿಯನುತಿಗೈದಂಘ್ರಿಗೆರಗಲಾಕ್ಷಣದಲಿ ಭರದಿಂದಲೆತ್ತಿ ಕೇಳ್ಮಗನೆನ್ನನೀ ಶರಧಿ ಗಿರಿಶೃಂಗತ್ರಯ ಸಪ್ತದ್ವೀಪದಲಿ [ಧರಣಿದೇವಿ] ವರಲಕ್ಷ್ಮಿಯೊಳು ಗರುಡ ಶೇಷ ನಾರದ ಪ್ರಹ್ಲಾದ ಧ್ರುವ ರೊಲು ಸಿರಿವತ್ಸ ಶಂಖ ಚಕ್ರಾವತಾರದಲಿ ಸ್ಮರಿಸುವವರ ಕಾಯ್ವೆನೆಂದಾ 10 ಆವನಿದನುದಯ ಕಾಲದೊಳೆದ್ದು ಭಕ್ತಿಯಿಂ ಭಾವಶುದ್ಧಿಯಲಿ ಭಜನೆಯ ಮಾಳ್ಪ ಜನರಿಗ ಫಾವಳಿಯ ಪರಿಹರಿಸಿ ನರಜನ್ಮವನು ಕಳೆದು ಪರಿಶುದ್ಧರಾದಹರೆಂ- ದಾ ವಾಸುದೇವನಾಜ್ಞಾಪಿಸಿದ ಗಜೇಂದ್ರ ಸಹಿ ತಾ ವಿಹಂಗಾಧಿಪನನೇರಿ ಬಿಜಯಂಗೈದ ಆ ವೈಕುಂಠಪತಿಯ ನಂಬಿದ ಸೇವಕರಿಗೇನಿದು ಚೋದ್ಯವೇ11
--------------
ಬೇಲೂರು ವೈಕುಂಠದಾಸರು
ಅಕ್ಷವಿದ್ಯಾನಿಪುಣ ಅಕ್ಷಯಾತ್ಮಕ ಸುಗುಣ ಅಕ್ಷಯತರ ಸುವಚನ ಲಸಿತವದನ ದ್ಯೂತೋದ್ಯೋಗತರ ಖ್ಯಾತ ಸುಗುಣೋಪೇತ ದೈತ್ಯ ಸಂಕುಲಘಾತ ಪ್ರಾಣನಾಥ ಸುರಸಿದ್ಧ ಸಂಪ್ರೀತ ಮಾರತಾತ ಗೋಪಾಲ ಕುಲರತ್ನದೀಪ ಗೋಕುಲ ಶರಣ ಗೋಪಿಕಾಜನಮನದ ತಾಪಶಮನ ಲೀಲಾ ವಿಭೂತಿಯುಗನಿರತ ಸುಹಿತ ನೀಲಾಂಬರಾವರಜ ರಾಜರಾಜ ಕಾಲಾಂಬುದಾಕಾರ ಖಲಕುಠಾರ ಪಾಹಿಮಾಂ ಶ್ರೀಶೇಷಗಿರಿವಿವಿಭಾಕ್ಷ
--------------
ನಂಜನಗೂಡು ತಿರುಮಲಾಂಬಾ
ಚನ್ನಕೇಶವ ಚನ್ನಕೇಶವ ಚನ್ನಕೇಶವ ತ್ರಾಹಿಮಾಂ ಪ ಮನ್ನಿಸೆನ್ನನು ರಕ್ಷಿಸೆನ್ನನು ಸನ್ನುತಾಂಗನೆ ಪಾಹಿಮಾಂ ಅ.ಪ. ಭವದಿ ನೊಂದೆನು ಸವೆದು ಬೆಂದೆನು ಜವದಿ ಬಂದೆನು ತ್ರಾಹಿಮಾಂ ಭವಣೆಯನು ಪರಿಹರಿಸಿ ದೇವನೆ ಭವ ವಿದೂರನೆ ಪಾಹಿಮಾಂ1 ನಾನು ಏನನು ನಿನ್ನ ಮರತೆನು ನಾನು ಬಡವನು ತ್ರಾಹಿಮಾಂ ಗಾನ ಲೋಲನೆ ಬಿಡದೆ ಭಜಿಸುವೆ ದೀನ ವತ್ಸಲ ಪಾಹಿಮಾಂ 2 ಭಕ್ತವತ್ಸಲ ಭಕ್ತದಾಯಕ ಭಕ್ತಿಯರಿಯೆನು ತ್ರಾಹಿಮಾಂ ಮುಕ್ತಿದಾಯಕ ಶಕ್ತಿ ಮೂರುತಿ ಮುಕ್ತಿ ಪಾಲಿಸಿ ಪಾಹಿಮಾಂ3
--------------
ಕರ್ಕಿ ಕೇಶವದಾಸ
ಜಗನ್ನಾಯಕ ಗುರುಪಾಹಿಮಾಂ | ಅಘನಾಶಕ ವರದಾಯಕಾ | ಪ ವರಮಾನವಿ ಪುರ ಮಂದಿರ ಕರುಣ ಭರಣ ಶಾಂತ ಮೂರುತಿ1 ನಿರುತ ನಿನ್ನಯ ಚರಣನಂಬಿದೆ ದುರಿತ ತರಿದು ತೋರೋ ಸತ್ವಥ 2 ಭೂಮಿಜಾವರ ಶಾಮಸುಂದರ ನಾಮಗರಿಯೋ ಪ್ರೇಮಸಾಗ 3
--------------
ಶಾಮಸುಂದರ ವಿಠಲ
ಪರಮ ಪುರುಷ ರಘುವೀರ ಪ ಪಾಹಿಮಾಂ ದಶರಥ ಸುಕುಮಾರ ಅ.ಪ ಅಗಣಿತ ಸುಗುಣ ಗಂಭೀರ 1 ರವಿಸುತಮಿತ್ರ ರಾಜೀವನೇತ್ರ ಪ್ರವಿಮಲ ಭವ್ಯಚಾರಿತ್ರ 2 ಗುರುರಾಮವಿಠ್ಠಲ ಸುರಮುನಿಪಾಲ ತುಲಸೀಶೋಭಿತ ವನಮಾಲ 3
--------------
ಗುರುರಾಮವಿಠಲ
ಪರಾತ್ಪರಾ ಕೃಪಾ ಸಮುದ್ರ ಪಾಹಿಮಾಂ ಸದಾ ಪ ಸುಜನ ಸೌಖ್ಯದಾ ಅ.ಪ ಅಪ್ರಮೇಯ ಆದಿಕಾರಣಾ ಸನಂದನಾದಿ ಮೌನಿಸೇವ್ಯ ಜಗನ್ಮೋಹನಾ 1 ಭಂಜನ ನವ ಕಂಜ ಲೋಚನಾ ಸರಿಸೃಪಾಧಿಪಶಯನ ಶಿವ ಚಾಪಖಂಡನಾ 2 ಧರಾತ್ಮಜಾ ಮನೋಹರ ನಿಜ ದಾಸ ಪೋಷಕಾ ಗುರುರಾಮ ವಿಠಲ ಕುಶಿಕಪುತ್ರ ಯಾಗ ರಕ್ಷಕಾ 3
--------------
ಗುರುರಾಮವಿಠಲ
ಪಾಹಿಮಾಂ ಕಾರ್ತಿಕೇಯಾ | ಪಾರ್ವತಿಯ ಕುವರಾ ಪಾಹಿಮಾಂ ಕಾರ್ತಿಕೇಯಾ ಪ ಪಾಹಿ ಕರುಣಿಯೆ ಸುಬ್ರಹ್ಮಣ್ಯ ಅ ಸುಗುಣಾಭರಿತ ಶರಜಾ ಸಚ್ಚಿದಾನಂದ ಅಗಜೆಯ ಪ್ರಿಯ ತನುಜ ನಿಗಮ- ನಿತ್ಯ ಜಗೆದೊಡೆಯ ಪರಿಶುದ್ಧ ಪಾವನ ಮೃಗಧರನ ಸುತ ಸುಬ್ರಹ್ಮಣ್ಯ | ಪಾಹಿ | 1 ಬಾಲಾರ್ಕ ಕೋಟಿ ತೇಜ ನಿತ್ಯಾನಂದ ನೀಲಗ್ರೀವನ ಸುಧ್ವಜ ಖೂಳ ತಾರಕನೆಂಬ ಕಾಲ ಸುರಾಳಿಯಂಬುಧಿ ಚಂದ್ರ ವರಮುನಿ ಜಾಲವಂದಿತ ಸುಬ್ರಹ್ಮಣ್ಯ 2 ಭೂಸುರ ಪ್ರಿಯ ಸುಬ್ರಹ್ಮಣ್ಯ 3
--------------
ಬೆಳ್ಳೆ ದಾಸಪ್ಪಯ್ಯ
ಪಾಹಿಮಾಂ ಜಗದೀಶ ಭಕ್ತವಿಲಾಸ ಶ್ರೀ ಶ್ರೀನಿವಾಸನೆ ಹೇಳಲೊಶವಲ್ಲ ದೇವನೆ ಪ ಚಂಡಶಾಸಕ ಬಿರುದುವುಳ್ಳ ಪ್ರಚಂಡ ದೇವೋತ್ತುಂಗನೆ ಮದನ ಜನಕ ಕೋದಂಡಧರ ಶ್ರೀರಾಮನೆ 1 ವಿಕಟದಾನವ ಮೂಲ ಚ್ಛೇದನ ವಿಶ್ವರೂಪ ವಿನೋದನೆ 2 ಅಮಿತ ಮಹಿಮಾನಂದ ಹರನುತ ಕಮಲಸಂಭವ ನಯ್ಯನೆ ಸುಮನರಾದ ಸುಜನರಾ ಹೃದಯ ಕಮಲದಲಿ ನೀ ವಾಸನೆ 3 ಮಂಗಳಾಂಗ ವಿಹಂಗವಾಹನ ಮಾರಕೋಟಿ ಲಾವಣ್ಯನೆ ಅಂಗನಾಮಣಿ ಲಕುಮಿಪುರದಲಿ ಅಡಗಿಸಿಪ್ಪ ಶ್ರೀ ಲೋಲನೆ 4 ಶೌರಿ ಮಹಾಗುಣ ಶಾಂತನೆ ಕರುಣೆಸೆನ್ನನು ಕಾಯೊ ಬೇಗನೆ ವರದ `ಹೆನ್ನ ವಿಠ್ಠಲನೆ' 5
--------------
ಹೆನ್ನೆರಂಗದಾಸರು
ಪಾಹಿಮಾಂ ತೀರ್ಥಧಾಮಾ | ಪಾಹಿಮಾಂತ್ರಿಜಗಾದಿ | ಪಾಹಿಮಾಂ ತನುಜಧವ | ಹೇಹಿಮರಾಚೂಡ | ದೇಹಿ ಮನೋಭೀಷ್ಮ | ಮಹೀಶಾಯಿಸುಖ ಆಕಾಶ | ವಾಹಿನಿ ಧರಾ | ಮೋಹನ ಚರಿತ ರಜತಗೇಹ ಸಾಂಬಾ ಪ ಈಶ ಅಘನಾಶ ಸರ್ವೇಶ ಸುರಕೋಶ ಮುನಿ | ತೋಷಗಜಾಸುರ ವಿನಾಶ ಭವಪಾಶ ಹರ | ವಾಸವಾದ್ಯನುತ ನಿರ್ದೋಷ ಶ್ರೀ ಭಸಿಶಿತ | ವಿ ಭೂಷಿತ ವಿನಾಶ ರಾಮೇಶ ಶಿವಶಂಭೋ 1 ವೀರ ರಣಧೀರ ಗಂಭೀರ ಸಾಕಾರವರ | ಪ್ರಾರ ಸಂಹಾರ ಭಯ ಪೂರಿತ ಪುರಾರಿ | ಮೌ ದಾರ ಚಿರಚಿರಂಡ ಜಾರಿವಿಹಾರಿ | ಶ್ರೀ ಹೇರಂಬ ತಾತದಯ ಪಾರಾವಾರ ಶಂಭೋ 2 ದುರಿತ | ಕಾಲಹರ ಗೋಗಮನ ಭಾಲನಯನಾರ್ತಜನ | ಪಾಲ ವಿಶಾಲಾ ತ್ರಿಶೂಲಧೃತನಿರುತ ಶುಭ ಲೀಲ ಶ್ರೀ ಗುರುಕೃಷ್ಣ ಬಾಲಕ ಪ್ರಭು ಶಂಭೋ3 ಅಂಕಿತ-ಶ್ರೀಗುರುಕೃಷ್ಣ
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪಾಹಿಮಾಂ ಪರಮೇಶ ಪಾಹಿಪನ್ನಗಭೂಷ ಪಾಹಿಕೈಲಾಸವಾಸ ಪ ಸ್ವಾಮಿ ಗಿರಿಜಾನಾಥ ಸಮರ ವಿಜಯ ತ್ರಿಣೇತ್ರ ಸುಜನ ವಿನುತ ಕಾಮಿತಾರ್ಥ ಪ್ರದಾತ ಕ್ಷೇಮತರ ಸುಚರಿತ್ರ ಸಾಮಗಜ ವದನ ತಾತರಾಮೇಶ ಕೇಶಪುನೀತ ಪ್ರಖ್ಯಾತ 1 ಕಾಲ ಭಾಳಾಕ್ಷಭಯ ಸಂಹಾರ ಜನಸಾರ ಶೂಲಧರ ಕರುಣಾಕರ ಶೀಲವರಗುಣ ಸುಂದರ ಹರಪಾಶ ಭಯವಶಂಕರ ಓಂಕಾರ 2 ಬಲಸಾಕಾರತ ವಿಶಾಲ ಏಕಮಯ ತ್ರಿಗುಣದಿಂದ ಖಿಲಲೋಕ ವಿಸೂತ್ರ ಜಾಲ ಸಾಕೆನ್ನ ಭವದಳಲ ಶೋಕವನು ನೀಕೇಳದೇಕೆ ಈ ಚೇಷ್ಟೆಬಹಳ ಕಾಲ ಮೂಕಾಂಬಿಕಾಂಬಲೋಲ3 ನಾಗವಾಹನ ನಮಿತನೆ ಯೋಗಮಾಯಾತೀತನೆ ಸಾಗರಾಂಬರದೊಡೆಯನೆ ಭಾಗವತ ಭಾಗಚಂದಿರಧರನೆ ಹರನೆ 4 ಧರಣಿಯೊಳಗೆ ವಿಶೇಷತರ ಗೌಜದೊಳುವಾಸ ವರಋಷಿ ಸ್ಥಾಪನೇಶ ಸರಸಕೀರ್ತಿ ವಿಲಾಸ ಸ್ಮರಹರ ಸುರಾಧ್ಯಕ್ಷ ದುರಳ ದಾನವ ವಿನಾಶ ದುರಿತಹರ ನಿರ್ದೋಶ ಧರಣಿ ಸುರಜನರಕ್ಷ ಕರಿಚರ್ಮಧರಮಹೇಶ ಉರಗರಾಜ ವಿಭೂಷವರ ಗುರು ವಿರೂಪಾಕ್ಷ ಪುರಮಥನ ಗೌತಮೇಶ 5
--------------
ಕವಿ ಪರಮದೇವದಾಸರು
ಪಾಹಿಮಾಂ ರಾಮಚಂದ್ರ ಅಚಲಾಂ ಭಕ್ತಿಂ ದೇಹಿ ಕಲ್ಯಾಣಸಾಂದ್ರ ಪ. ಶ್ರೀಹರಿ ನಾಗಾರಿವಾಹನ ಶ್ಯಾಮಲ- ದೇಹ ರಾಕ್ಷಸ ಸಮೂಹ ವಿದಾರಕ ಅ.ಪ. ಸಜ್ಜನ ಕಲ್ಪವೃಕ್ಷ ಪಾಪಾಂಕುರ- ಭರ್ಜನ ವಿಬುಧಪಕ್ಷ ಧೂರ್ಜಟಿಸಖ ದೂಷಣಾರಿ ದ್ಯುಮಣಿಕೋಟಿ- ಪ್ರಜ್ವಲಿಪ ಪರಮ ಜಗಜ್ಜೀವನಧಾಮ ಪೂರ್ಣಬ್ರಹ್ಮ ರಘುವಂ- ಜಯಾಕಾಂತ ಪ್ರಭುವೆ 1 ವರಾಹ ಪ್ರ- ಹ್ಲಾದವರದ ಗುಣಧಾಮ ಸಾಧುವಟುವೇಷವಿನೋದ ಭಾರ್ಗವ ಬಹು ಕ್ರೋಧಿ ಕ್ಷತ್ರಿಯಕುಲ ಭೇದಿ ರಾವಣಾಂತಕ ಕುವಾದಿಜನದುರ್ಬೋಧಬದ್ಧವಿ- ಶ್ರೀಧರ ರಮಾಮೋದಮಾನಸ 2 ಕಾಶಿಮಠಸ್ಥ ಯತಿ ಪರಂಪರ್ಯ- ಭೂಷಣ ಶುದ್ಧಮತಿ ಶ್ರೀ ಸುಕೃತೇಂದ್ರ ಸನ್ಯಾಸಿ ಪೂಜಿತಪಾದ ವಾಸುದೇವ ತವ ದಾಸ್ಯವ ಪಾಲಿಸು ಸುಭದ್ರ ಶ್ರವಣ ಪ- ಭವ ರುಗ್ಭೇಷಜನೆ ನರಕೇಸರಿಯೆ ಶ್ರೀ ವ್ಯಾಸ ರಘುಪತಿ 3 ಪಾರಗಾಣರು ನಿನ್ನಯ ಬ್ರಹ್ಮಾದ್ಯರು ಭೂರಿಗುಣದ ಮಹಿಮೆಯ ಸೂರಿಜನಪ್ರೀತ ಸೀತಾನಯನ ಚ- ಕೋರಚಂದ್ರನು ಮಹೋದಾರ ಶಾಙ್ರ್ಗಧರ ಮೀರಣಾತ್ಮಜವರದ ನತಮಂದಾರ ಕೈರವಶ್ಯಾಮ ರಾಮನ 4 ಪ್ರಣವರೂಪ ನಿರ್ಲೇಪ ನಿತ್ಯಾತ್ಮದು- ರ್ಜನವನೋದ್ದಹನೋದ್ದೀಪ ಮನುಕುಲಮಣಿ ಮುನಿಗಣ ಸಮಾಹಿತ ಜನಾ- ರ್ದನ ಬ್ರಹ್ಮಾದ್ಯಖಿಳ ಚೇತನರು ನಿನ್ನಾಧೀನ ಚಿದಾನಂದೈಕ ದೇಹನೆ ಭಕುತಿ ಭಾಗ್ಯವನು ಪಾಲಿಸು 5
--------------
ತುಪಾಕಿ ವೆಂಕಟರಮಣಾಚಾರ್ಯ
ಭಕ್ತ ಮಂದಾರಿಣಿ ಭವಭಯನಿವಾರಿಣಿ ಭಕ್ತಿಮುಕ್ತಿ ಪ್ರದಾಯಿನಿ ತ್ರಿಭುವನೈಕ ಜನನಿ ಪ. ಭುವನತ್ರಯಮೋಹಿನಿ ಭಾನುಕೋಟಿಪ್ರಕಾಶಿನಿ ಭೂರಿಭೂಭುಜ ಸೌಭಾಗ್ಯದಾಯಿನಿ ಪಾಹಿಮಾಂ ಜನನಿ ಅ.ಪ. ಸಾಮಜಾಧಿಪಗಾಮಿನಿ ಕಾಮಿತಾರ್ಥಪ್ರದಾಯಿನಿ ರಾಮಣೀಯ ಸ್ವರೂಪಿಣಿ ಕಾಮಜನನಿ ಕಲುಷವಿಭಂಜಿನಿ 1 ಕನಕವಸನೆ ಕವಿಮನೊಲ್ಲಾಸಿನಿ ಸುಮನಸವರ ಪರಿತೋಷಿಣಿ ಕೋಮಲತರ ಕೋಕಿಲ ಮೃದುಭಾಷಿಣಿ 2 ಕಮಲ ಬಾಂಧವ ವಂಶ ಸಂಭವ ರಾಮಚಂದ್ರ ಸುಪ್ರೇಮಾಕಾಂಕ್ಷಿಣಿ 3 ವನಜ ಸಂಭವ ಸನ್ನುತೆ ಕನಕಭೂಷಣ ಭೂಷಿತೆ ಅನಿಲನಂದನ ಸೇವಿತೇ ಘನಕರುಣಾರಸಾನ್ವಿತೇ 4 ಅನಘ ಸದ್ಗುಣಭೂಷಿತೆ ಅನಿಮಿಷಾಧಿಪ ಪೂಜಿತೆ ಜನಕ ಭೂಪತಿ ಪೋಷಿತೇ ಘನಶೇಷಾದ್ರೀಶ ದಯಿತೆ5
--------------
ನಂಜನಗೂಡು ತಿರುಮಲಾಂಬಾ
ಭೀಮ ಶೈನನೆ ಸತ್ಯಭಾಮಾ ಪ್ರಿಯನ ಪರಮ ಪ್ರೇಮ ಪಾತ್ರನೆ ಪಾಹಿಮಾಂ ಪ ಭೂಮಿಯೊಳು ಶೇವಿಸುವರಿಗೆ ಸುರ ಭೂಮಿರುಹ ವೆಂದೆನಿಸಿ ಪೊರೆಯಲು ಗ್ರಾಮ ಮೋತಂಪಲ್ಲಿ ಕ್ಷೇತ್ರ ಸುಧಾಮರಿಪುಕುಲ ಭೀಮನೆನಿಸಿದ ಅ.ಪ ರಾಮಕಾರ್ಯವನು ನಿಷ್ಕಾಮದಿ ಸಾಧಿಸಿ ಧಾಮ ಕಿಂಪುರುಷದಲ್ಲಿ ಭೂಮಿಜಾವಲ್ಲಭನ ಶುಭಗುಣ ಸ್ತೋಮಗಾನದಿ ರಮಿಸುತಿರೆ ಬಡ ಭೂಮಿದೇವನ ಪ್ರಾರ್ಥನದಿ ಬಂದೀ ಮಹಾ ಶಿಲೆ ಯೊಳಗೆ ನೆಲಸಿಹ 1 ರಾಜಕುಲಜ ಪಾಂಡುರಾಜ ನಾತ್ಮಜ ಧರ್ಮರಾಜನನುಜನೆನಿಸಿ ರಾಜ ಸೂಯಾಗವನೆ ಮಾಡಿಸಿ ಪೂಜಿಸಿದಿ ಸಿರಿಕೃಷ್ಣನಂಘ್ರಿಯ ರಾಜ ಕೌರವ ಬಲವ ಮದಿಸಿ ವಿರಾಜಿಸಿದ ಸುರರಾಜ ನಮೋ ನಮೋ 2 ಪುಟ್ಟಿಮೇದಿನಿ ಸುರಸದ್ಮದಿ ಗಜ ಪಂಚಾಸ್ಯನೆನಿಸಿಸು ಜನಕತಿ ಮೋದನೀಡಿದ 3 ಗಣಕೆ ಗಂಧವಾಹನನೆನಸಿ ಶೇಷ ಗಿರೀಂದ್ರಯಾತ್ರೆಗೆ ವೃಂದ ಸಲಹುವಿ 4 ಶೇರಿದವನೆ ಧನ್ಯನೋ ಭಜಿಸಿ ವಿಮುಕ್ತನಾದನು ಸುರಋಷಿಯ ಪದವನು 5 ಸುವಿಶಾಲ ಮಂಟಪ ಮಧ್ಯದಿ ಕೈಕೊಳುತ ಭಕುತರ ಗುರುವರ ಪಾಲಿಸೆನ್ನನು 6 ಬಂಗಾರದಾಭರಣಂಗಳಿಂದೊಪ್ಪುತ ಶೃಂಗಾರದಿಂ ಶೋಭಿತ ಸರ್ವೇಷ್ಟದಾಯಕ ಪ್ರಥಮಾಂಗನೆನಿಸಿದ 7
--------------
ಕಾರ್ಪರ ನರಹರಿದಾಸರು
ಮಂಗಳಾಂಬಕೀ ವರಲಕ್ಷ್ಮೀ ಮಂಗಳಂ ಜಯ ಪ ಅಂಗಜಾದಿ ಪ್ರೇಮಜನನಿ ಭೃಂಗವೇಣಿಯೆ ಜಯ ಅ.ಪ. ಬಿಂಬರದನವಸನ ಭೂಷ್ಯೆ ಅಂಬುಜಾಂಬಕಿ ಅಂಬ ಪಾಹಿಮಾಂ ಜಯ 1 ಕುಂಕುಮಾಕ್ತ ಫಾಲಶೋಭೆ ಕಿಂಕಿಣೀರವೆ ಪಂಕಜಾತ ಶೋಭಮಾನ ಹಸ್ತಪಲ್ಲವೆ ಜಯ 2 ರತ್ನನಿಚಯ ಭಾಸಮಾನ ರತ್ನಕಿಂಕಿಣೀ ರತ್ನರಾಜಪುತ್ರಿ ಕಮಲೆ ಭಕ್ತವತ್ಸಲೆ ಜಯ 3 ನಿತ್ಯ ನಿನ್ನನು ಯತ್ನದಿಂದ ಧೇನುನಗರ ವಾಸೆ ಪಾಲಿಸು 4
--------------
ಬೇಟೆರಾಯ ದೀಕ್ಷಿತರು
ಮಹಾಲಕ್ಷ್ಮೀ ಅಷ್ಟಕಂ ಪಂಕಜ ಮಾಲಿನಿಪಾಹಿಮಾಂ ಕರವೀರವಾಸಿನಿ ಪಾಹಿ ರಾಘವ ಕಾಮಿನಿ ಪ ಚಂದ್ರಮಂಡಲ ಹಾಸ ಸನ್ಮುಖ ಮಂದಹಾಸ ಸುಶೋಭಿತೆಸಿಂಧುರೇಂದ್ರ ಕರಾಮೃತೌಘ ಸುಗಂಧ ಬಿಂದು ನಿಷೇಚಿತೆಕುಂದರೋಜ್ವಲ ಇಂದ್ರನೀಲ ಮಣೀಂದ್ರಹಾರ ವಿಲಾಸಿತೇಬಂದ್ರಿರಾಜಸುತೇವ ಸೂನುಮನಾದಿ ಬಂಧ ವಿವರ್ಜಿತೇ 1 ಸಾಂಬ ಸುಶಾಂತಿ ಕಾಂತಿ ಸಹೋದ್ಭವೆ 2 ಚಾರು ಸುರಾಳಿ ಮೌಳಿಗ ಹಸ್ತತೇ 3 ತಪ್ತಕಾಂಚನ ನೂಪುರೋಜ್ವಲ ರಕ್ತಪಾಲ ಸರೋರಹೆಚಿತ್ರಪೇಟ ಪಟೋಲ್ಲ ಸತ್ಕಟೆ ರತ್ನ ಕಾಂಚಿ ಗುಣೋದ್ಭವೇನಿತ್ಯತೃಪ್ತ ನಿರಂಜನೈಸುರ ಮೃತ್ಯುಮೋಹನ ವಿಗ್ರಹೆತತ್‍ಕೃಪೈವಪು ಮೃತ್ಯುಸಾಧನ ಸಪ್ತ ಮೋಡಿಹ ವಿದ್ಮಹೆ 4 ಅಂಬಜಾವಕ ಲಕ್ಷ್ಮೀ ಮೇಷ ಕದಂಬಿನೀನಿಲಯಸ್ಥಿತೆಕಂಬುಕಂಜರ ತಾರಿಬೇಟ ಕರಾಂಬು ಸಂಭವ ಸೇವಿತೆಶಂಭರಾರಿ ಸುತಾಂಘ್ರಿಪಂಕಜೆ ಬಿಂಬರಾಹಿ ಭೂಸುತೆಸಾಂಬಹೀಂಬ ನಿಹಾ ಸುದರ್ಶಯ ಜಂಜವೈರಿನಿ ಸೇವಿತೆ 5 ತಲ್ಪ ಮಂದ ಸೌಭಗ ಶಾಲನಂವಂದ್ಯ ಮಾನ ವಿದೇಂದ್ರ ದೈವತ ವೃಂದ ವೈಭವದಾಯಿನಂಸುಂದರಾಂಗಿಣಿ - ನಿವೇದಗೇಹ ಭವಾಂಧಿ ಪೋಪನೀ ಶೋರ್ಪಣಂ 6 ಜೀವವರ್ಗ ಹೃದಾಲಯ ಸ್ಥಿತ ಭೂವರಾಹಸಹಾನನೇಪಾವನೀತಾಹೇ ವಸೇದ್ರುಮ ಹಾನು ಭಾವ ಶಿಖಾಮಣಿಹಾವಭಾವ ವಿಲಾಸಿನಾಕಿ ಸುವಾಸಿನಿನುತ ಸದ್ಗುಣಿಸೇವಕೇಯ ವಿಭಾವಿತಾಖಿಲ ಭಾವಕಾಯದ ಶಿಕ್ಷಣಿ 7 ಇಂದಿರೇಶ ಸತೀಂದುಮೌಳಿ ಕರಾರವಿಂದ ನಿಷೇವಣೇಚಂದ್ರಮಾರುತರೇಂದು ಸೈಂದವವೀಂದ್ರ ಪೂರ್ವಸು ವಾಹನೇಅಂಧಕೂಪ ಸಮಾನ ದುರ್ಭವ ಬಂಧ ಸೇಘನೀ ಪೋಷಿಣಿನಂದನಂದನ ಮಾಸುದರ್ಶಯ ಬಂಧುರಾಮೃತ ಭಾಷಿಣಿ 8
--------------
ಇಂದಿರೇಶರು