ದಾಸ ಸಂಚಯ

ಇಂದಿನ ಕೀರ್ತನೆ

ಕುಶಲಿಯಾಗಿರೈ ಯಶವಪೊಂದಿರೈ ಪ.
ಕುಶಿಕತನುಜ ಯಾಗಪಾಲಕನೊಲವ ಪಡೆಯಿರೈ ಅ.ಪ.
ಕಾಂತಾಪುತ್ರರಿಂ ಅನಂತ ಭಾಗ್ಯಮಂ
ಶಾಂತಚಿತ್ತಮಾಂತುಧರೆಯೊಳನಂತ ಕಾಲಮುಂ 1
ವಂಶದೀಪನುಂ ಪ್ರಶಂಸನೀಯನುಂ
ಕಂಸದಮನ ಭಕ್ತನುಂ ಎನಿಸಿ ಸಂತತಂ2
ಶೇಷಗಿರಿವರಂ ಪೋಷಿಸಲ್ಕೆ ತಾಂ
ದೇಶಭಕ್ತರಾಗಿ ಬಾಳಿ ವಾಸಿಪಂಥದಿಂ 3

--- ನಂಜನಗೂಡು ತಿರುಮಲಾಂಬಾ