ದಾಸ ಸಂಚಯ

ಇಂದಿನ ಕೀರ್ತನೆ

ಅಂಕಿತ-ತಾತ ಮಹಿಪತಿ
ದಯಾಕರಾ |
ಶ್ರೀಕರಾ |

ಭಯ ಪರಿಹಾರಾ |
ಜಗದೋದ್ಧಾರಾ ಪ
ವನಜನಯನ ಪಾವನ ಕೃತಲೀಲಾ |

ವನ ನಿಧಿ ಶಯನ ಸುವನ ಜಾಲೋಲಾ |

ವನಜ ಸುಚರಣಾ ವನನರಪಾಲಾ |

ವನಜ ಭವಾರ್ಚಿತ ವನಶುಭ ಮಾಲಾ1
ಹರಿಕೇಶವ ನರಹರಿ ಸರ್ವೇಶಾ |

ಕರಿ ಹರಮುನಿ ಪೋಷಾ |

ಹರಿಕುಲ ತಿಲಕ ವಿಹರಿಜಿತ ಭಾಸಾ |

ಹರಿಚರರಿಪು ಸಂಹರ ಜಗದೀಶಾ2
ಗಿರಿಧರ ವಾಮನ ಗಿರಿರಿಪು ತಾತಾ |

ಗಿರಿಧರ ಪರಿಶತ ಗಿರಿವರ ಪ್ರೀತಾ |

ಗಿರಿಧರ ತನುಭವ ಗುರುವಿಖ್ಯಾತಾ |

ಗಿರಿಮಾ ವೆಂಕಟ ಗಿರಿಧರ ದಾತಾ 3
ಅಂಕಿತ-ವೆಂಕಟ ಗಿರಿಧರ (?)

--- ಕಾಖಂಡಕಿ ಶ್ರೀ ಕೃಷ್ಣದಾಸರು